ಕೆಲ ದಿನಗಳ ಹಿಂದೆ ನನ್ನ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ದೃಷ್ಟಿ ಸವಾಲುಳ್ಳ ನನ್ನ ಒಬ್ಬ ಸ್ನೇಹಿತರು ಕನ್ನಡ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಸಹಾ ಈಸ್ಪೀಕ್ ಕನ್ನಡ ತಂತ್ರಾಂಶವನ್ನು ದಿನ ನಿತ್ಯದ ಕೆಲಸಗಳಿಗೆ ಅಂದರೆ ಅವರ ಶೈಕ್ಷಣಿಕ ಹಾಗು ಜ್ಞಾನಾಭಿವೃದ್ಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನನ್ನನ್ನು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರಕ್ಕೆ ಆಹ್ವಾನಿಸಿದ್ದರು. ಅಲ್ಲಿ ನನಗೆ ಭಾಷಾವಿಜ್ಞಾನಿ ಡಾ|| ಪಂಡಿತಾರಾಧ್ಯ ಅವರನ್ನು ಬೇಟಿ ಮಾಡಿಸಿದರು. ಅವರೊಟ್ಟಿಗೆ ಕೆಲ ಹೊತ್ತು ಕಳೆಯುವ ಅವಕಾಶ ನನಗೆ ಸಿಕ್ಕಿತು. ಅವರೊಟ್ಟಿಗೆ ಕನ್ನಡದ ಕುರಿತು ಹಾಗೇ ಸುಮ್ಮನೆ ಮಾತನಾಡುತ್ತಿದ್ದೆ. ನಮ್ಮ ಮಾತುಗಳಲ್ಲಿ ಆಂಡ್ರಾಯ್ಡ್ ಟ್ಯಾಬ್ಲೆಟ್ಟಿನಿಂದ ಹಿಡಿದು ಇನ್ನು ಕೆಲವು ತಂತ್ರಜ್ಞಾನಗಳಲ್ಲಿ ಕನ್ನಡದ…
"ಒಳಗಣ್ಣು: ‘ವಿಕಲಚೇತನ’ ಪದದ ಬಳಕೆ ಎಷ್ಟು ಸರಿ….."Category: ಒಳಗಣ್ಣು (ಟಿ ಎಸ್ ಶ್ರೀಧರ ಅಂಕಣ)
ಸಂಸತ್ತಿನಲ್ಲಿ ಅಂಗೀಕೃತವಾದ ಹಕ್ಕುಸ್ವಾಮ್ಯ ಕಾಯ್ದೆಯಲ್ಲಿ ಮುದ್ರಣ ಸಾಹಿತ್ಯ ವಂಚಿತರಿಗೆ ಇರುವ ಅನುಕೂಲಗಳೇನು? ಮಿತ್ರಮಾಧ್ಯಮದ ಅಂಕಣಕಾರ ಶ್ರೀ ಟಿ ಎಸ್ ಶ್ರೀಧರ ಈ ಬಗ್ಗೆ ಜೇವಿಯೆರ್ಸ್ ರಿಸೋರ್ಸ್ ಸೆಂಟರ್ ಫಾರ್ ದಿ ವಿಜುಯಲಿ ಚಾಲೆಂಜಡ್ ಸಂಸ್ಥೆಯ ನಿರ್ದೇಶಕ ಡಾ. ಸ್ಯಾಮ್ ತಾರಾಪೋರ್ವಾಲಾ ಕಳಿಸಿದ ಮಿಂಚಂಚೆಯನ್ನು ಮಿತ್ರಮಾಧ್ಯಮದ ಓದುಗರಿಗಾಗಿ ಕಳಿಸಿಕೊಟ್ಟಿದ್ದಾರೆ:
"Copyright Law Amendments: what it gives and what it does not give print impaired persons"ನಮಸ್ಕಾರ ಸ್ನೇಹಿತರೇ, ಬಹಳ ದಿನಗಳ ನಂತರ ಮತ್ತೆ ಇಲ್ಲಿ ಬರೆಯುತ್ತಿದ್ದೇನೆ. ಇದು ೨೦೧೧ ರ ನನ್ನ ಕೊನೆಯ ಬರಹ! ಎಷ್ಟು ಬೇಗ ೨೦೧೧ ಕಳೆದು ಹೋಯಿತು? ಕಾಲಗರ್ಬದಲ್ಲಿ ಸದ್ದಿಲ್ಲದೇ ಸೇರಿ ಹೋಗುತ್ತಿರುವ ಈ ವರ್ಷಕ್ಕೆ ನಮ್ಮದೂ ಒಂದು ವಿದಾಯ ಹೇಳಬೇಕಲ್ಲವೇ? ಅದಕ್ಕೆ ಮುಂಚೆ ನನ್ನ ಜೀವನದಲ್ಲಿ ಈ ವರ್ಷ ನಡೆದ ಕೆಲವು ಘಟನೆಗಳನ್ನು ಮೆಲುಕು ಹಾಕುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ.
"ಒಳಗಣ್ಣು: ೨೦೧೧ ರ ನನ್ನ ಹಿನ್ನೋಟ"ಯುವ ತಂತ್ರಜ್ಞ, ದೃಷ್ಟಿಸವಾಲನ್ನು ಎದುರಿಸಿ ಬದುಕನ್ನು ದಿಟ್ಟವಾಗಿ ಎದುರಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಅಬಸಿ ಗ್ರಾಮದ ಶ್ರೀ ಟಿ ಎಸ್ ಶ್ರೀಧರರು ಮಿತ್ರಮಾಧ್ಯಮಕ್ಕಾಗಿ ಅಂಕಣ ಬರೆದುಕೊಡಲು ಮುಂದೆ ಬಂದಿದ್ದಾರೆ. ಅವರದು ತೀರ ಸಂಕೋಚದ ಸ್ವಭಾವ. ಜೊತೆಗೆ ಸಮಾಜಕ್ಕೆ ತನ್ನದೇನಾದರೂ ಕೊಡುಗೆ ಇರಬೇಕೆಂದೇ ತವಕಿಸುವ ಜೀವ; ಹೊರತು ಸಮಾಜವು ತನಗೆ ಕೊಡುವುದೇನೂ ಇಲ್ಲ ಎಂಬ ನಮ್ರ ಭಾವ.
"ಒಳಗಣ್ಣು: ಮಿತ್ರಮಾಧ್ಯಮದಲ್ಲಿ ಟಿ ಎಸ್ ಶ್ರೀಧರ್ ಅಂಕಣ ಆರಂಭ"