www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

ಎಲ್ಲರಿಗೂ ಇದ್ದ ಕನಸಿನ ಹಾಗೆ ನನಗೂ ಒಂದು ಕನಸಿತ್ತು: ಕನ್ನಡದ ಯು ಆರ್‌ ಎಲ್‌ ನಲ್ಲಿ ನನ್ನ ಜಾಲತಾಣ ಇರಬೇಕು! ಅದೀಗ ಇಂದು ನಿಜವಾಗಿದೆ. ಇನ್ನುಮುಂದೆ ನೀವು ನನ್ನ ಲೇಖನಗಳನ್ನು www.ಬೇಳೂರುಸುದರ್ಶನ.ಭಾರತ ಇಲ್ಲಿ ಓದಬಹುದು.

"www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ"

ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ

ನನಗಾಗ 23 ವರ್ಷ ವಯಸ್ಸು. ಕಾಟನ್‌ಪೇಟೆಯ ಎಬಿವಿಪಿ ಆಫೀಸಿನಲ್ಲಿ ವಾಸ. ವಿದ್ಯಾರ್ಥಿ ಪಥ ಮ್ಯಾಗಜಿನ್‌ ನೋಡಿಕೊಳ್ಳುತ್ತಲೇ ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ವೇದಿಯಲ್ಲಿ ಕೆಲಸ. ಆಗ ನಾನು ಮತ್ತು ಉತ್ಥಾನದ (ಈಗಲೂ ಅಲ್ಲಿ ಇದ್ದಾರೆ) ಶ್ರೀ ಕೇಶವ ಭಟ್‌ ಕಾಕುಂಜೆ ಐಡಿಯಾ ಮಾಡಿ ಶುರು ಮಾಡಿದ್ದು ಪೆನ್‌ಫ್ರೆಂಡ್‌. ಯುವ ಲೇಖಕರ ಬಳಗ. ವಾರಕ್ಕೊಮ್ಮೆ ಸಭೆ. ಎಲ್ಲ ಲೇಖಕರ ಲೇಖನಗಳನ್ನೂ ಚೆನ್ನಾಗಿ ಮಾಡಲು ಎಲ್ಲರಿಂದ ಸಲಹೆ ಸ್ವೀಕಾರ. ಅವುಗಳನ್ನು ತಿದ್ದಿ ಮ್ಯಾಗಜಿನ್‌ಗಳಿಗೆ ಕಳಿಸುವ, ಪ್ರಕಟಣೆಯಾಗುವಂತೆ ನೋಡಿಕೊಳ್ಳುವ ಹೊಣೆ ನನ್ನದು.

"ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ"

ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!

ಬೆಂಗಳೂರಿಗೆ ಭಾರತದ ಸಿಲಿಕಾನ್ ಸಿಟಿ ಎಂಬ ಹೆಸರು ಬರಲು ಕಾರಣರಾದ ಹಲವರಲ್ಲಿ ನನ್ನ ಹಿರಿಯ ಮಿತ್ರ ಶ್ರೀ ಮಂಜಪ್ಪ ಪ್ರೇಮ್ ಕುಮಾರ್ – ಎಂ ಪಿ ಕುಮಾರ್ ಪ್ರಮುಖರು. ಗ್ಲೋಬಲ್ಎಡ್ಜ್ ಸಾಫ್ಟ್‌ವೇರ್‌ ಸಂಸ್ಥೆಯನ್ನು (https://www.globaledgesoft.com)ಕಟ್ಟಿ ಬೆಳೆಸಿದ ಶ್ರೀ ಎಂ ಪಿ ಕುಮಾರ್ ಈಗ ಅಧಿಕೃತವಾಗಿ ಸಂಸ್ಥೆಗೆ ವಿದಾಯ ಹೇಳಿದ್ದಾರೆ. ಸದ್ಯಕ್ಕೆ ಅವರು ಸಂಸ್ಥೆಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ವಾರ ಅವರ ಕಡೆಯ ದಿನದಂದು ಸಂಸ್ಥೆಯ ಸಿಬ್ಬಂದಿ ವರ್ಗವು ಅವರನ್ನು ಬೀಳ್ಕೊಟ್ಟ ವಿಡಿಯೋ ಇಲ್ಲಿದೆ. ಅದಾದ ಕೆಲವೇ ದಿನಗಳಲ್ಲಿ (ನಿನ್ನೆ!) ೩ ಗುರುಕುಲಗಳಿಗೆ ಒಟ್ಟು ೬ ಕೋಟಿ ರೂ.ಗಳನ್ನು ಅವರು ದಾನ ಮಾಡಿದ ಚಿತ್ರವೂ ಇಲ್ಲಿದೆ. ಎಂಪಿಕೆ ಎಂದೇ ನಮಗೆಲ್ಲ ಪರಿಚಿತರಾಗಿರುವ ಎಂ ಪಿ ಕುಮಾರ್…

"ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!"

Solar water pumps can help India surpass 100 GW target through Kisan Urja Suraksha Utthaan Maha Abhiyan

The Government of India has recently announced a scheme for solar water pumps known as Kisan Urja Suraksha Utthaan Maha Abhiyan (KUSUM). One of the key features of this scheme is that it provides for grid-connected solar pumps. For a long time, solar pumps were considered to be standalone systems, that is to be deployed in those places where the grid had not reached. Solar pumps were seen as the second best solution to grid…

"Solar water pumps can help India surpass 100 GW target through Kisan Urja Suraksha Utthaan Maha Abhiyan"

ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )

ಕರ್ನಾಟಕ ಸರ್ಕಾರದ ಜಾಲತಾಣಗಳು ಕನ್ನಡದಲ್ಲಿ ದೊರಕಬೇಕು, ಸುಲಭವಾಗಿ ಬಳಸುವಂತಿರಬೇಕು ಎಂಬ ಒತ್ತಾಸೆ ನನ್ನಲ್ಲಿ ಹಲವು ವರ್ಷಗಳಿಂದ ಇದೆ. ಇದಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರು ಈ ಮಾನದಂಡವನ್ನು ರೂಪಿಸಲು ನನಗೆ ಸೂಚಿಸಿದರು. ಅತ್ಯಂತ ಸಂತೋಷದಿಂದ ಈ ಕೆಲಸವನ್ನು ನನ್ನ ತಿಳಿವಿನ ಮಟ್ಟಿಗೆ ಮಾಡಿಕೊಟ್ಟಿದ್ದೇನೆ. ಸಾರ್ವಜನಿಕರು ಈ ವರದಿಯನ್ನು ಬೆಂಬಲಿಸಿ ಇದನ್ನು ಹೆಚ್ಚು ಬಲಪಡಿಸುವ ದೃಷ್ಟಿಯಿಂದ ಸಲಹೆಗಳನ್ನು ಕೊಡಲು ವಿನಂತಿ.  ಈ ವರದಿಯನ್ನು ರಚಿಸಿ ಕೊಡಲು ನನಗೆ ಸಂಪೂರ್ಣ ಬೆಂಬಲ ಕೊಟ್ಟ ಪ್ರಾಧಿಕಾರದ ಅಧ್ಯಕ್ಷ ಶ್ರೀ ಎಸ್ ಜಿ ಸಿದ್ಧರಾಮಯ್ಯನವರಿಗೆ, ಕಾರ್ಯದರ್ಶಿ ಶ್ರೀ ಮುರಳೀಧರ, ಈ-ಆಡಳಿತ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಕೆ ನಾಗರಾಜ ಇವರಿಗೆ ನನ್ನ ಕೃತಜ್ಞತೆಗಳು.

"ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )"

ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿನಲ್ಲಿ ಹೊಸ ಜೇಡ ಪ್ರಭೇದವೊಂದು ಪತ್ತೆಯಾಗಿ ಇಡೀ ಜಗತ್ತಿನ ಗಮನ ಸೆಳೆದಿದೆ. ಹಗಲು ಹೊತ್ತಿನಲ್ಲಿ ಎಲೆಗಳ ಹಿಂದೆ ಮರೆಯಾಗಿ, ಸೂರ್ಯ ಮುಳುಗುತ್ತಿದ್ದಂತೆ ಹೊರಗೆ ಬಂದು ಆಹಾರದ ಬೇಟೆಗೆ ತೊಡಗುವ ಈ ಚಿಕ್ಕ ಜೇಡ ಸಿಕ್ಕ ಸುದ್ದಿ ಕನ್ನಡ ಪತ್ರಿಕೆಗಳಿಗೂ ಬೇಡವೇನೋ! ಸುದ್ದಿಗಾಗಿ ಹುಡುಕಾಡುತ್ತ ಸಿಕ್ಕಿದ ಈ ಸುದ್ದಿಯ ಜಾಡು ಹಿಡಿದೆ; ಜೇಡವನ್ನೇ ಹುಡುಕಿದವರನ್ನು ಹುಡುಕಿ ಇನ್ನಷ್ಟು ಮಾಹಿತಿ ಹೊರತೆಗೆದೆ; ಈ ಬ್ಲಾಗ್‌ ಬರೆದೆ!!

"ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   "

`ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?

ಯಾವ್ಯಾವುದೋ ಹಳೆಯ ಕಡತಗಳನ್ನೆಲ್ಲ ತೆರೆತೆರೆದು ನೋಡುತ್ತಿದ್ದಾಗ ಜೀತ ವ್ಯವಸ್ಥೆಯ ಕುರಿತು ಸಾಕ್ಷ್ಯಚಿತ್ರ ಮಾಡಲೆಂದು ಬಂದ ಅಮೆರಿಕಾದ ತಂಡದ ಛಾಯಾಗ್ರಾಹಕ ರಾಬಿನ್‌ ರೊಮಾನೋ ತೆಗೆದ ಚಿತ್ರಗಳು ಕಂಡವು. ನನ್ನ `ಜೀತ’  ಕಥೆಯು ಒಂಥರ ಈ ಸಾಕ್ಷ್ಯಚಿತ್ರದ ಸಾಕ್ಷ್ಯಕಥೆಯೇ ಆಗಿದೆ. ಅದರಲ್ಲಿ ಬರೋ ರಾಬಿನ್‌, ಈತ ಇಬ್ಬರೂ ಒಂದೇ. ಐದೂ ದಿನಗಳ ಕಾಲ ಛಾಯಾಗ್ರಹಣ, ವಿಡಿಯೋಗ್ರಫಿಯಲ್ಲಿ ಮುಳುಗಿ ಏನೊಂದೂ ಸುದ್ದಿ ಹೇಳದ ರಾಬಿನ್‌ ಆ ರಾತ್ರಿ ಚಾಮರಾಜನಗರದಿಂದ ಬೆಂಗಳೂರಿಗೆ ಮರಳುವಾಗ ಕತ್ತಲಿನಲ್ಲೇ ಎಷ್ಟೆಲ್ಲ ಮಾತನಾಡಿದ. ಕೊನೆಗೆ `ನನ್ನ ಅಮ್ಮನಿಗೆ ಹುಷಾರಿಲ್ಲ; ಅವಳು ಹುಚ್ಚು ಹಿಡಿದಂತೆ ಇರ್‍ತಾಳೆ. ಅದಕ್ಕೇ ನಾನು ಅರ್ಜೆಂಟಾಗಿ ಮರಳಬೇಕಿದೆ’ ಎಂದು ಒಂದೇ ವಾಕ್ಯ ಹೇಳಿ ನನ್ನನ್ನು ನಡುಗಿಸಿದ್ದ. ಸಾವಿರಾರು ಮೈಲಿಗಳ ದೂರದಲ್ಲಿ ಕೆಲಸ ಮುಗಿಸಿದ ಮೇಲೆ…

"`ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?"

ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!

ನನ್ನ ಮಗ, ಸುಧಾಂಶು ಮಿತ್ರನಿಗೆ ಈಗ ೨೩ರ ಹರೆಯ. ಅವನು ಎರಡು ವರ್ಷಗಳ ಹಿಂದಷ್ಟೆ ಇಂಜಿನಿಯರಿಂಗ್‌ ಪದವಿ ಶಿಕ್ಷಣ ಮುಗಿಸಿದ. ಝಿಂಗಾ ಎಂಬ ಹೊಸ ಕಾಲದ ಕಂಪನಿ ಸೇರಿದ. ಅಲ್ಲಿ ಎರಡು ವರ್ಷಗಳನ್ನು ಕಳೆದ ಮೇಲೆ ಯಾವುದೇ ಆತಂಕವಿಲ್ಲದೆ ಮತ್ತು ಹೆಚ್ಚಿನ ಸಂಬಳದ ಆಕರ್ಷಣೆಯೂ ಇಲ್ಲದೆ ರಾಜೀನಾಮೆ ಕೊಟ್ಟ. ಈಗ ಹರ್‍ಯಾನಾದ ಸೋನಿಪತ್‌ನಲ್ಲಿರುವ ಅಶೋಕ ಯೂನಿವರ್ಸಿಟಿಯಲ್ಲಿ ಒಂದು ವರ್ಷದ `ಲಿಬರಲ್‌ ಸ್ಟಡೀಸ್‌’ ಸ್ನಾತಕೋತ್ತರ  ಕೋರ್ಸಿಗೆ ಸೇರಿದ್ದಾನೆ. ಜುಲೈ ೧೫ರಿಂದ ಅವನ ಕಲಿಕೆ ಆರಂಭ. ಈ ಕೋರ್ಸಿಗೆ ಯಂಗ್‌ ಇಂಡಿಯಾ ಫೆಲೋಶಿಪ್‌ ಎಂದೂ ಕರೆಯುತ್ತಾರೆ.

"ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!"

ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ

ಕೇಂದ್ರ ಸರ್ಕಾರವು ಜೂನ್‌ ೯ರಂದು ಜೈವಿಕ ಇಂಧನ ಕಾರ್ಯಕ್ರಮ ಜಾರಿಗಾಗಿ ಕಾರ್ಯತಂಡವನ್ನು ರಚಿಸಿದ್ದು ಈ ಹಿಂದೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಶ್ರೀ ವೈ ಬಿ ರಾಮಕೃಷ್ಣ ಅವರನ್ನು ಕಾರ್ಯತಂಡದ ಅಧ್ಯಕ್ಷರನ್ನಾಗಿ ನೇಮಿಸಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಇಲಾಖೆಯು ಈ ಕುರಿತು ಆದೇಶವನ್ನು ಹೊರಡಿಸಿದ್ದು ದೇಶದಾದ್ಯಂತ ಜೈವಿಕ ಇಂಧನ ಕಾರ್ಯಕ್ರಮವನ್ನು ಬಲಪಡಿಸುವ ಹಿನ್ನೆಲೆಯಲ್ಲಿ ಈ ನೇಮಕಾತಿ ಮಾಡಿದೆ ಎಂದು ತಿಳಿಸಿದೆ. ಭಾರತ್‌ ಪೆಟ್ರೋಲಿಯಂ ಕಂಪೆನಿಯ ಕಾರ್ಯಪಾಲಕ ನಿರ್ದೇಶಕರು (ಜೈವಿಕ ಇಂಧನ) ಈ ಸಮಿತಿಯ ಕಾರ್ಯದರ್ಶಿಯಾಗಿದ್ದು ಭಾರತದ ಎಲ್ಲ ಸಾರ್ವಜನಿಕ ರಂಗದ ಪೆಟ್ರೋಲಿಯಂ ಸಂಸ್ಥೆಗಳ ಮುಖ್ಯಸ್ಥರು ಈ ಸಮಿತಿಯ ಸದಸ್ಯರಾಗಿದ್ದಾರೆ.

"ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ"

ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!

೨೦೧೫ರ ವರ್ಷದ ವಿಶ್ವ ಪರಿಸರ ದಿನದ ಲಾಂಛನವನ್ನು ರೂಪಿಸಿದವರು ಭಾರತೀಯ, ಕೇರಳದ ಶಿಬಿನ್‌! ವೃತ್ತಿಯಲ್ಲಿ ಕೇರಳ ಸರ್ಕಾರದಲ್ಲಿ ಕಂಪ್ಯೂಟರ್‌ ವಿಜ್ಞಾನದ ಶಿಕ್ಷಕರಾಗಿರುವ ಶಿಬಿನ್‌ ವಿಶೇಷ ಸಂದರ್ಶನದಲ್ಲಿ ಲಾಂಛನದ ಬಗ್ಗೆ, ತಮ್ಮ ಬಗ್ಗೆ ಹಲವು ಅಪರೂಪದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

"ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!"