ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ

ದಿ ಗಾರ್ಡಿಯನ್‌ ಪತ್ರಿಕೆಯು ಹವಾಗುಣ ಬದಲಾವಣೆ ಕುರಿತಂತೆ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದ ಸುದ್ದಿಗಳನ್ನು ಕೊಡಲಿದೆ ಎಂದು ಪ್ರಕಟಿಸಿದೆ. ಪತ್ರಿಕೆಯ ಸಂಪಾದಕ ಅಲೆನ್‌ ರಸ್‌ಬ್ರಿಡ್ಜರ್‌ ನಿನ್ನೆ (೬ ಮಾರ್ಚ್‌ ೨೦೧೫) ಒಂದು ದೀರ್ಘ ಲೇಖನ ಬರೆದು ಈ ನಿರ್ಧಾರದ ಹಿಂದಿರುವ ಕಾರಣಗಳನ್ನು ವಿವರಿಸಿದ್ದಾರೆ. ಇನ್ನುಮೇಲೆ ಯಾವಾಗಲೂ ಪೆಟ್ರೋಲ್‌ ಡೀಸೆಲ್‌ ಬಗ್ಗೆಯೇ ಚರ್ಚೆ ನಡೆಯುತ್ತಿರುತ್ತದೆ (ನನ್ನ ಕವನ ಪೆಟ್ರೋಲ್‌ ಡೀಸೆಲ್‌ ಎಷ್ಟು ದಿನ? ಓದಿ) ಎಂದು ನಾನು ಅಂದುಕೊಳ್ಳುತ್ತಿರುವ ಈ ದಿನಗಳಲ್ಲಿ ಅಲೆನ್‌ ನನ್ನ ಚಿಂತನೆಗೆ ಕಾರ್ಯರೂಪ ಕೊಟ್ಟಿದ್ದಾರೆ. ಬಹುಶಃ ಜಾಗತಿಕ ಖ್ಯಾತಿಯ ಮುಖ್ಯವಾಹಿನಿ ಪತ್ರಿಕೆಯೊಂದು ಹವಾಗುಣ ಬದಲಾವಣೆಯ ಅಪಾಯಗಳ ಬಗ್ಗೆ ಪೂರ್ಣ ಪ್ರಮಾಣದ ಗಂಭೀರ ಅಭಿಯಾನ ಆರಂಭಿಸಿದ್ದು ಇದೇ ಮೊದಲು. ಈ ಪತ್ರಿಕೆಗೆ ನನ್ನ ಹೃತ್ಪೂರ್ವಕ…

"ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ"

ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ

೨೦೧೫ರ ಮಾರ್ಚ್‌ ೩ರ ಮುಂಜಾನೆ ಎದ್ದರೆ ಹೊರಗೆಲ್ಲ ಮಳೆಯ ವಾತಾವರಣ. ಹಿಂದಿನ ದಿನದ ಮಧ್ಯರಾತ್ರಿಯೂ ಅತ್ಯಂತ ಒಣಹವೆಯಲ್ಲೇ ನಿದ್ದೆಗೆ ಜಾರಿದ್ದ ನನಗೆ ಅಚ್ಚರಿಯಾಯಿತು. ನಾನು ನನ್ನ ಇನ್‌ಬಾಕ್ಸ್‌ ನೋಡಿದರೆ ಯಮುನಾ ಜೀಯೇ ಅಭಿಯಾನದ ಮನೋಜ್‌ ಮಿಶ್ರಾರ ಒಂದು ಪತ್ರ ಬಂದಿತ್ತು. ಭಾರತ ಹವಾಮಾನ ಇಲಾಖೆ ಮತ್ತು ಆಕ್ಯುವೆದರ್‌ ಜಾಲತಾಣಗಳ ಕೊಂಡಿಗಳನ್ನೂ ಅವರು ಕೊಟ್ಟಿದ್ದರು. ಅಲ್ಲಿನ ವರದಿ ಸ್ಪಷ್ಟವಾಗಿಯೇ ಇತ್ತು: `ಮಾರ್ಚ್‌ ಆರಂಭವಾಗುತ್ತಿದ್ದಂತೆ ಒಂದು ಪ್ರಬಲ ಬಿರುಗಾಳಿಯು ಬೀಸಿ ಭಾರತ ಮತ್ತು ಪಾಖಿಸ್ತಾನದ ಪ್ರದೇಶಗಳಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಹಿಮಪಾತಕ್ಕೆ ಕಾರಣವಾಗುತ್ತದೆ.’ ಅದರಲ್ಲೂ ವಾಯುವ್ಯ ಭಾರತ ಮತ್ತು ಉತ್ತರ ಪಾಕಿಸ್ತಾನಗಳು ಈ ಬಿರುಗಾಳಿಯ ಗರಿಷ್ಠ ಪ್ರಬಾವಕ್ಕೆ ಒಳಗಾಗಲಿವೆ ಎಂದು ವರದಿ ಹೇಳಿತ್ತು. ಕರ್ನಾಟಕದವರೆಗೂ ಇದರ ಪರಿಣಾಮ…

"ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ"

ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ

ಇಂದು (ಫೆಬ್ರುವರಿ ೭, ಶನಿವಾರ) ನಯನ ಸಭಾಂಗಣದಲ್ಲಿ ನಡೆದ ಕನ್ನಡ ಓಸಿಆರ್‍ ಪ್ರಾತ್ಯಕ್ಷಿಕೆ ಸಭೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕನ್ನಡ ಐಟಿ ತಜ್ಞರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಗೊಳಿಸಿದ್ದಾರೆ. ಅವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಸಭೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಓಸಿಆರ್‌ನ್ನು ಪ್ರೊ. ಎ ಜಿ ರಾಮಕೃಷ್ಣನ್‌, ಕಲೈಡೋ ಸಾಫ್ಟ್‌ವೇರ್‌ನ ಓಸಿಆರ್‌ನ್ನು ಶ್ರೀ ಪ್ರಕಾಶ್‌, ಟಾಕ್ಯಾನ್‌ ಸಂಸ್ಥೆಯ ತಂತ್ರಾಂಶವನ್ನು ಶ್ರೀ ರಾಮಪ್ರಕಾಶ್‌ ಮತ್ತು ಶ್ರೀರಂಗ ಸಂಸ್ಥೆಯ ತಂತ್ರಾಂಶವನ್ನು ಡಾ|| ಸಿ ಎಸ್‌ ಯೋಗಾನಂದರವರು ಪ್ರದರ್ಶಿಸಿದರು. ಇವುಗಳೆಲ್ಲವೂ ಸಾಕಷ್ಟು ಉತ್ತಮವಾಗಿ ಕೆಲಸ ಮಾಡುತ್ತಿರುವುದನ್ನು ಸಭಿಕರು ಗಮನಿಸಿದರು.

"ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ"

ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ಓಸಿಆರ್‌  (ಆಪ್ಟಿಕಲ್‌ ಕ್ಯಾರೆಕ್ಟರ್‌ ರೆಕಗ್ನಿಶನ್‌: ಅಚ್ಚಾಗಿರುವ ಪಠ್ಯದ ಪುಟಗಳನ್ನು ಗಣಕದಲ್ಲಿ ಯುನಿಕೋಡ್‌ ಪಠ್ಯವಾಗಿ   ಪರಿವರ್ತಿಸುವ ತಂತ್ರಜ್ಞಾನ ಎಂದು ಸರಳವಾಗಿ ವಿವರಸಿಬಹುದು) ತಯಾರಕರ ಪ್ರಾತ್ಯಕ್ಷಿಕೆ, ಅಭಿಪ್ರಾಯ ಸಂಗ್ರಹ ಮತ್ತು ಸಂಬಂಧಿತ ತಂತ್ರಜ್ಞಾನ ಸಂಗತಿಗಳ  ಕುರಿತು ಒಂದು ಮಹತ್ವದ ಸಮುದಾಯ ಸಭೆಯು ೨೦೧೫ರ ಫೆಬ್ರುವರಿ ೭ರಂದು ಬೆ ಳಗ್ಗೆ ೧೧.೦೦ ಗಂಟೆಗೆ ಜಯಚಾಮರಾಜೇಂದ್ರ ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಗೆ ಕನ್ನಡದ ಯುವ ತಂತ್ರಜ್ಞರು ಬಂದು ಸರ್ಕಾರಕ್ಕೆ ಸಮುದಾಯದ ಬೆಂಬಲ, ಸಹಾಯ, ತಾಂತ್ರಿಕ ನೆರವು,  ಎಲ್ಲವೂ ಇದೆ ಎಂಬುದನ್ನು ಪ್ರಕಟಿಸಲು ಕೋರುತ್ತಿದ್ದೇವೆ. ದಯವಿಟ್ಟು ಈ ನೋಂದಣಿ ಅರ್ಜಿಯನ್ನು ತುಂಬಿ; ಫೆಬ್ರುವರಿ ೭ರ ಸಭೆಗೆ…

"ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!"

1987ರ ಲೇಖನ: ಚಿರಂತನ ಶಕ್ತಿ

(೧೯೮೭ ನವೆಂಬರ್ ಉತ್ಥಾನ ಪತ್ರಿಕೆಯಲ್ಲಿ ಪ್ರಕಟಿತ  ಈ ಲೇಖನವನ್ನು ತಮಾಶೆಗಾಗಿ ಪ್ರಕಟಿಸುತ್ತಿದ್ದೇನೆ. ೨೮ ವರ್ಷಗಳ ಹಿಂದೆಯೂ ನಾನು ಇಂಧನದ ಬಗ್ಗೆಯೇ ನನ್ನ ಆಸಕ್ತಿ ಬೆಳೆಸಿಕೊಂಡಿದ್ದೆ ಎನ್ನುವುದು ಅಚ್ಚರಿಯ ವಿಷಯ! ಇದರಲ್ಲಿ ಇರಬಹುದಾದ ಬಾಲಿಶತನಕ್ಕೆ, ಲೋಪಗಳಿಗೆ ನಾನೇ ಹೊಣೆ.)  ಅದೊಂದು ಶತಮಾನಗಳ ಕನಸು. ಮನುಷ್ಯ ಚಿರಂತನ ಶಕ್ತಿಯನ್ನು ಪಡೆಯಲು ಶ್ರಮಿಸಿದ ಕಥೆ – ವ್ಯಥೆಗಳು ಇತಿಹಾಸದಲ್ಲಿನ ವೀರಗಾಥೆಗಳು . ಎಲ್ಲೋ ಯಾರೋ ನಿರಂತರವಾಗಿ ಶಕ್ತಿಯನ್ನು ‘ಹುಟ್ಟಿಸುವ’ ಪ್ರಯತ್ನದಲ್ಲಿ ಯಶ ಪಡೆದರೆಂಬ ಸುದ್ದಿಗಳು. ಆದರೆ ಯಾವುದೂ ಈಗ ಲಭ್ಯವಿಲ್ಲ, ಚಿಂತೆಯಿಲ್ಲ.

"1987ರ ಲೇಖನ: ಚಿರಂತನ ಶಕ್ತಿ"

Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool

3rd January 2015 Shri AnanthKumar Hon’ble Union Minister for Chemicals & Fertilisers Government of India & Member of Loksabha, Bengaluru South Bengaluru Respected Sir Subject: Appeal to release Kannada OCR (Optical Character Recognition) developed by MILE LAB, IISc, Bengaluru to the usage of general public as a open software tool. Kannada OCR, developed by MILE LAB, Bengaluru is primarily developed for the visually challenged. Many such users have opined that the tool is definitely a…

"Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool"

IT revolution and Regional Newspapers: Let’s harness it!

The regional print media in India has a responsible role in the society. Being in the midst of local issues and developments, they have a huge responsibility to play a nationalistic role. This puts them on an interesting platform, differentiating them from English print media. The ongoing information technology (IT) revolution is bringing sweeping changes at lightning speed. So, the regional media has to adapt to the challenges and harness the advantages. On one side,…

"IT revolution and Regional Newspapers: Let’s harness it!"

ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!

ಮಿತ್ರಮಾಧ್ಯಮವು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಕುರಿತು ಒಂದು ಸಮೀಕ್ಷೆಯನ್ನು ಕೈಗೊಂಡಿದೆ. ತಾವೆಲ್ಲರೂ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ವಿನಂತಿ.

"ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!"

(ಪೊಳಲಿಯಲ್ಲಿ ಇತ್ತೀಚೆಗೆ ನಡೆದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮೆಲ್ಲರ ಹೆಮ್ಮೆ, ಕನ್ನಡ ಕಂಪ್ಯೂಟಿಂಗ್‌ನ ಪಿತಾಮಹ, ಶ್ರೀ ಕೆ ಪಿ ರಾವ್‌ ಮಾಡಿದ ಭಾಷಣದ ಪೂರ್ಣಪಾಠ. ಈ ಭಾಷಣವು ನಿಮ್ಮಲ್ಲಿ ಭಾಷೆ-ಸಂಸ್ಕೃತಿಯ ಬಗ್ಗೆ ಚಿಂತನೆಗೆ ಹಚ್ಚಲಿ ಎಂದು ಆಶಿಸುತ್ತೇನೆ – ಬೇಳೂರು ಸುದರ್ಶನ. ಪಠ್ಯವನ್ನು ನೀಡಿದ ಶ್ರೀ ಕೆ ಪಿ ರಾವ್‌ರಿಗೆ ನನ್ನ ಹೃತ್ಪೂರ್ವಕ ವಂದನೆಗಳು)

ಪೊಳಲಿಯ ಈ ಪವಿತ್ರ ಪರಿಸರದಲ್ಲಿ ನಾವೆಲ್ಲ ಸೇರಿಕೊಂಡಿರುವುದಕ್ಕೆ ಎಲ್ಲಕ್ಕಿಂತ ಹೆಚ್ಚಾಗಿ ಕಾರಣರೆಂದರೆ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಯೋಜಕರು. ಇವರ ಧೈರ್ಯವನ್ನು ನಾವು ನಿಜವಾಗಿ ಮೆಚ್ಚಿಕೊಳ್ಳಬೇಕು. ಯಾಕೆಂದರೆ ಒಬ್ಬ ಸಾಹಿತಿಯಲ್ಲದ ನನ್ನಂತಹ ಸಾಮಾನ್ಯನನ್ನು ಇದಕ್ಕೆ ಅಧ್ಯಕ್ಷನನ್ನಾಗಿ ಆರಿಸಿದ್ದರ ಧೈರ್ಯಕ್ಕೆ ಅವರನ್ನು ಮೆಚ್ಚಿಕೊಳ್ಳಲೇಬೇಕು. ನನ್ನ ಕನಸು ನನ್ನ ಪೂರ್ವಪುಣ್ಯವೋ ಎಂಬಂತೆ ಸಾಕಾರವಾಗಿರುವುದಕ್ಕೆ ಸಂತೋಷಪದುತ್ತೇನೆ. ನನ್ನನ್ನು ಈ ವಿಶೇಷ ಗೌರವಕ್ಕೆ ಆರಿಸಿಕೊಂಡಿರುವುದರ ಮುಖ್ಯ ಕಾರಣ ನಾನು ಪೊಳಲಿಗೆ ಹೆಚ್ಚು ದೂರದವನಲ್ಲ, ಕಿನ್ನಿಕಂಬಳದವನು ಎಂಬುದಿರಬಹುದು. ಪೊಳಲಿಗೂ ನನಗೂ ಒಂದು ೬೦-೭೦ ವರ್ಷದ ಸಂಬಂಧ, ಸಾಹಿತ್ಯಲೋಕಕ್ಕೆ ನನ್ನ ಸಂಬಂಧ ಒಂದು ರೀತಿಯಲ್ಲಿ ಬಹಳ ದೂರ. (more…)

ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ

ಸಾಲುಮರದ ತಿಮ್ಮಕ್ಕ ಯಾರಿಗೆ ಗೊತ್ತಿಲ್ಲ? ಆವರ ಮರಗಳ ಮೇಲಿನ ಅಮರ ಪ್ರೀತಿ ಯಾರಿಗೆ ಗೊತ್ತಿಲ್ಲ? ತಾನಳಿದರೂ, ತನ್ನ ಮರಗಳ ನೆರಳು ಪೀಳಿಗೆಗಳ ಕಾಲ ಹಬ್ಬುವಂತೆ ಮಾಡಿದ ತಿಮ್ಮಕ್ಕಂಗೇ ಸರಿಯಾದ ನೆರಳಿಲ್ಲ. ಊರಿಗೆ ಆಸ್ಪತ್ರೆಯಿಲ್ಲ.

"ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ"