ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?

ಹಸಿರುಕ್ರಾಂತಿಯ ಜಾಗತಿಕ ಕೇಂದ್ರವಾದ ಪಂಜಾಬ್ ಈಗ ಸಾಲದ ಶೂಲಕ್ಕೆ ಸಿಕ್ಕಿಕೊಂಡಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ವರದಿಯ ಪ್ರಕಾರ ಈಗ ಪಂಜಾಬಿನ  ಸಾಲದ ಮೊತ್ತ ೬೭,೭೨೧ ರೂ. ಈ ಋಣವನ್ನು ತೀರಿಸುವ ಬಗ್ಗೆ ಉಂಟಾದ ರಾಜಕೀಯದ ಫಲವಾಗಿ ಪಂಜಾಬಿನ ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್ ಸಂಪುಟದಿಂದ ವಜಾ ಆಗಿದ್ದಾರೆ. ಅವರನ್ನು ಶಿರೋಮಣಿ ಅಕಾಲಿದಳದಿಂದ ಅಮಾನತು ಮಾಡಲಾಗಿದೆ. ಅಕ್ಟೋಬರ್ ೧೫ರ ರಾತ್ರಿ ಮನ್‌ಪ್ರೀತ್ ಬಾದಲ್ ಕಾರ್ಯ ನಿರ್ವಹಿಸುತ್ತಿದ್ದ ಬಹುಭದ್ರತೆಯ ಐದನೇ ಮಹಡಿ ಕಚೇರಿಗೆ ರಾಜಕೀಯ ದುಷ್ಕರ್ಮಿಗಳು ನುಗ್ಗಿ ದಾಖಲೆಗಳನ್ನು ಚೆಲ್ಲಾಡಿದ್ದಾರೆ; ಕಂಪ್ಯೂಟರನ್ನು ಜಾಲಾಡಿದ್ದಾರೆ. ಸಬ್ಸಿಡಿ ಕಡಿಮೆ ಮಾಡಿ, ಸಂಪನ್ಮೂಲ ಕ್ರೋಡೀಕರಣ ಹೆಚ್ಚಿಸಿ ಎಂದ ಮನ್‌ಪ್ರೀತ್ ಈಗ ಸರ್ಕಾರದಿಂದ ಹೊರಬೀಳಬೇಕಾಗಿದೆ. ಸುಮ್ಮನೆ ನೋಡಿದರೆ ಏನೋ ಹಣಕಾಸು ಸಮಸ್ಯೆ ಎಂದು ಭಾವಿಸಬಹುದಾದ…

"ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?"

“BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”

Launching a scathing critique on the “Inter-Academy Report on GM Crops” and making a shocking revelation, the Coalition for GM Free India pointed out that the report has plagiarized sections from the article of a GM crop developer in a GM-promoter’s newsletter and termed the report which recommended Bt Brinjal for commercial cultivation propaganda material rather than a scientific review.

"“BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”"

ಇದೇ ಗುರುವಾರ ಪ್ರಜಾವಾಣಿಯಲ್ಲಿ ಶ್ರೀ ನಾಗೇಶ ಹೆಗಡೆಯವರು ಬರೆದ ವಿದ್ಯುತ್ ಕುರಿತ ಲೇಖನವನ್ನು ನೀವು ಓದಿರುತ್ತೀರಿ. ಈಗ ಇಂಧನ ಬಡತನದ ಕುರಿತ ಜಾಗತಿಕ ವರದಿ(ವಿಶ್ವ ಇಂಧನ ಮುನ್ನೋಟ, ವರ್ಲ್ಡ್ ಎನರ್ಜಿ ಔಟ್‌ಲುಕ್) ಯನ್ನು ಓದಿ!

ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರು ರಶ್ಯಾಗೆ ಹೋಗಿ, ನೀರು ಕ್ರಾಂತಿ ಮಾಡುತ್ತಿರುವೆ ಎಂದು ಸ್ವಯಂಘೋಷಣೆ ಮಾಡಿಕೊಂಡಿರುವ ವಿಕ್ಟರ್ ಪೆಟ್ರಿಕ್ ಭೇಟಿಗೆ ಹೋಗಿದ್ದರಲ್ಲ ಆಮೇಲೇನಾಯ್ತು?

"ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?"

ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?

ನೆನಪಿನ ಚಿತ್ರಗಳು ಚಕಚಕನೆ ಓಡುತ್ತಿವೆ. ಹತ್ತು ವರ್ಷಗಳ ಹಿಂದಿನ ಒಂದು ದಿನ. ಬಿಸಿಲಿಗೂ ಲೆಕ್ಕಿಸದೆ ನಾನು ಅದೇ ಮೆಟ್ಟಿಲುಗಳ ಮೇಲೆ ನಿಂತಿದ್ದೆ. ಈ ಮನೋಹರ ಮಸ್ಕಿ ಎಂಬಾತ ಪಕ್ಕದಲ್ಲಿಯೇ ನಿಂತು ಚಡಪಡಿಸುತ್ತಿದ್ದ. ಹಲವಾರು ಸಲ ನನ್ನ ಸೀಮೆನ್ಸ್ ಎಸ್ ೬ ಎಂಬ ಇಟ್ಟಿಗೆ ಗಾತ್ರದ ಮೊಬೈಲ್ ಪಡೆದು ಎಲ್ಲೆಲ್ಲಿಗೋ ಮಾತನಾಡುತ್ತಿದ್ದ. ಅವತ್ತು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಚುನಾವಣೆ ನಡೆಯುವುದಿತ್ತು. ಕೊನೆಗೆ ಎಲ್ಲವೂ ಸಮಾಧಾನದಿಂದಲೇ ಮುಗಿಯಿತು. ಎಚ್. ಕೆ. ಪಾಟೀಲರ ಮುಕ್ತ ಆಹ್ವಾನ ಅವನಿಗೆ ಬಂದಿತ್ತು. ಮಂಡಳಿಯ ಒಬ್ಬ ನಿರ್ದೇಶಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ.

"ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?"

ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !

ಪುಣೆ ಮೂಲದ ಅಬ್ಬೀಫಿಲ್ ಎಂಬ ಶಂಕಾಸ್ಪದ ಸಂಸ್ಥೆಯ ಜೊತೆ ಸೇರಿಕೊಂಡು, ತನ್ನ ಹೆಂಡತಿ ಮಗನ ಹೆಸರಿನಲ್ಲಿ ಎಲೈಟ್ ಎಂಟರ್‌ಪ್ರೈಸಸ್ ಅನ್ನೋ ಪಾರ್ಟನರ್‌ಶಿಪ್ (ತಾಯಿ ಮಗನ ನಡುವೆ ಬ್ಯುಸಿನೆಸ್ ಪಾರ್ಟ್‌ನರ್‌ಶಿಪ್!) ಸಂಸ್ಥೆಗೆ ಗುಣಮಟ್ಟ ಖಾತ್ರಿಯಿಲ್ಲದ ಕಂಪ್ಯೂಟರ್ ಪ್ರಿಂಟರ್ ರಿಫಿಲ್ ಕಾರ್ಟ್‌ರಿಜ್‌ಗಳ ರಾಜ್ಯವ್ಯಾಪ್ತಿಯ ಮಾಸ್ಟರ್ ಫ್ರಾಂಚೈಸ್ ಪಡೆದುಕೊಂಡಿದ್ದ ಮನೋಹರ ಮಸ್ಕಿ ಈಗ ಈ ಸುದ್ದಿ ಕೇಳಿ ಏನು ಕ್ರಮ ತೆಗೆದುಕೊಳ್ಳುತ್ತಾನೆ ಎಂಬುದು ಕುತೂಹಲಕರವಾಗಿದೆ.

"ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !"

ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?

ಮಂತ್ರಿ ಸ್ವ್ಕೇರ್ ಬಗ್ಗೆ ನಾನು ಬರೆದ ಲೇಖನವನ್ನು ಓದಿದ್ದೀರಿ. ಧನ್ಯವಾದಗಳು. ಈ ಮಂತ್ರಿ ಸ್ಕ್ವೇರ್‌ನ ಮಾಲೀಕ ಸುಶೀಲ್ ಮಂತ್ರಿ ಯಾರು ಎಂದು ಇಂಟರ್‌ನೆಟ್‌ನಲ್ಲಿ ಸ್ವಲ್ಪ ಹುಡುಕಿದಾಗ ಈ ಕಾನೂನಾತ್ಮಕ ವಿಷಯಗಳು ಸಿಕ್ಕವು. ಸುಶೀಲ್ ಬಗ್ಗೆ ಬೇಕಾದಷ್ಟು ಒಳ್ಳೆಯ ವರದಿಗಳೂ ಬಂದಿವೆ. ಆದರೆ ಅಧಿಕೃತ , ಸಾಂಸ್ಥಿಕ ದಾಖಲೆಗಳನ್ನು ನೋಡಿದರೆ, ಈ ವ್ಯಕ್ತಿ ಮತ್ತು ಇತರೆ ಹಲವು ವ್ಯಕ್ತಿಗಳು ಸೇರಿ ಹೂಡಿಕೆ ವ್ಯವಹಾರದಲ್ಲಿ ಸಾಕಷ್ಟು ಅಕ್ರಮವನ್ನು ಮಾಡಿದ ಆರೋಪಗಳಿಗೆ, ದಂಡಕ್ಕೆ ತುತ್ತಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.

"ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?"