ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ..ಅಂದರೆ ಅಡಾಪ್ಟೇಷನ್ ಸಂದರ್ಭದಲ್ಲಿ ಹೇಗೆ ಎಂಬುದನ್ನು ಕಾದಂಬರಿ, ಡಾಕ್ಯುಮೆಂಟರಿ ಹಾಗೂ ಸಿನಿಮಾ ನೋಡಿ ವಿಶ್ಲೇಷಿಸಿದೆ.
"A Beautiful mind : ಬೆಟ್ಟದಂಥ ಕಥೆ ; ಇಲಿಯಂತ ಸಿನಿಮಾ"Category: Reviews
ಒಂದು ಮಾತು ಹೇಳ್ತೇನೆ: ಬೆಂಗಳೂರಿನಲ್ಲಿ ಹುಟ್ಟಿ, ಕೋಲ್ಕೊತಾದಲ್ಲಿ ಓದಿ ಮೆರೈನ್ ಇಂಜಿನಿಯರ್ ಆಗಿದ್ದ ಜಾರ್ಜ್ ಫಿಲಿಪೋಸ್ ಬರೆದ ‘ದಿ ಮೆನ್ ಇನ್ಸೈಡ್’ ಪುಸ್ತಕ ನಿಜಕ್ಕೂ ಅನ್ಪುಟ್ಡೌನಬಲ್. ಯಾವುದೋ ಖಿನ್ನತೆಯ ಕಷಣದಲ್ಲಿ ಜಯನಗರದ ಪುಸ್ತಕದಂಗಡಿ ಹೊಕ್ಕಾಗ ಕಂಡ ಈ ಪುಸ್ತಕವನ್ನು ಕುತೂಹಲದಿಂದ ಖರೀದಿಸಿ ಓದಿದೆ. ಅರೆ, ಖಿನ್ನತೆಯೂ ಇಂಥ ಅದೃಷ್ಟಕ್ಕೆ ಕಾರಣವಾಯಿತಲ್ಲ ಎಂದು ಖುಷಿಯಾಗುತ್ತಿದೆ!
"ಫಿಲಿಪೋಸ್ ಬರೆದ ಹಡಗಿನ ಕಥನಗಳು : ಜಸ್ಟ್ ಅನ್ಪುಟ್ಡೌನಬಲ್ !"