Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಉಚಿತ ಪುಸ್ತಕ ಸಂಸ್ಕೃತಿ»ಡಿಜಿಟಲ್‌ ಜಾನಪದದ ಮೂಲಕ ಮುಕ್ತಜ್ಞಾನ ಸಂಗ್ರಹಕ್ಕೆ ಬಂದ ಪರಂಪರೆಯ ಜಾನಪದ ಸಂಗ್ರಹಗಳು!
ಉಚಿತ ಪುಸ್ತಕ ಸಂಸ್ಕೃತಿ

ಡಿಜಿಟಲ್‌ ಜಾನಪದದ ಮೂಲಕ ಮುಕ್ತಜ್ಞಾನ ಸಂಗ್ರಹಕ್ಕೆ ಬಂದ ಪರಂಪರೆಯ ಜಾನಪದ ಸಂಗ್ರಹಗಳು!

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 19, 2020Updated:May 19, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
ಅಂತೂ ಎರಡೂವರೆ ವರ್ಷಗಳ ಶ್ರಮ ಒಂದು ತಾರ್ಕಿಕ ಕೊನೆ ತಲುಪುತ್ತಿದೆ. ಇಂದು ಜಾನಪದ ಸಂಗ್ರಹಕಾರ, ನಮ್ಮ ನಾಡು ಕಂಡ ಮಹಾನ್‌ ಚೇತನ ಡಾ. ಎಲ್‌ ಆರ್‌ ಹೆಗಡೆಯವರ ಪುಣ್ಯತಿಥಿಯ ದಿನ (೧೫ ಸೆಪ್ಟೆಂಬರ್‌). ಅವರ ಆರು ಅಪ್ರಕಟಿತ ಜಾನಪದ ಸಂಗ್ರಹಗಳನ್ನು ಸೆ. ೧೯ ರಂದು ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸೌಧದದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ಮಿತ್ರಮಾಧ್ಯಮ ಟ್ರಸ್ಟ್‌ ವತಿಯಿಂದ ಮುಕ್ತಜ್ಞಾನದ ಅಭಿಯಾನವಾಗಿ ನಡೆದ ಈ ಸಂಗ್ರಹಗಳ ಡಿಜಿಟಲ್‌ ಪ್ರತಿಗಳನ್ನು ಕರ್ನಾಟಕ ಸರ್ಕಾರದ ಕಣಜ ಜಾಲತಾಣ ಹಾಗೂ ಭಾರತ ಸರ್ಕಾರದ ಭಾರತವಾಣಿ ಜಾಲತಾಣದಲ್ಲಿ ಶೀಘ್ರವೇ ಪ್ರಕಟಿಸಲಾಗುವುದು. ಈಗ ಇಲ್ಲಿಯೂ ಸಾರ್ವಜನಿಕರಿಗಾಗಿ ಪುಸ್ತಕಗಳನ್ನು ನೀಡಲಾಗಿದೆ.
ಈ ಸಂಗ್ರಹಗಳನ್ನು (ಹಾಗೂ ಇನ್ನೂ ಸಾಕಷ್ಟು ಪ್ರಮಾಣದ ಸಂಗ್ರಹಗಳನ್ನು) ವರ್ಷಗಳಿಂದ ಕಾಪಿಟ್ಟುಕೊಂಡು ಬಂದು ಈ ಪ್ರಕಟಣೆಗೆ ಮೂಲಕಾರಣವಾದ ಡಾ. ಎಲ್‌ ಆರ್‌ ಹೆಗಡೆಯವರ ಪುತ್ರಿ ಶ್ರೀಮತಿ ರೇಣುಕಾ ರಾಮಕೃಷ್ಣ ಭಟ್ಟ ಅವರನ್ನು ನಾನು ಈ ಮೂಲಕ ಅತ್ಯಂತ ಗೌರವಪೂರ್ವಕ ವಂದಿಸುತ್ತೇನೆ.
ಡಾ. ಎಲ್‌ ಆರ್‌ ಹೆಗಡೆಯವರ ಕಿರು ಪರಿಚಯ (ಮೂಲ: ಕಣಜ ತಾಲತಾಣ)
ನಾಡವರು, ಸಿಧ್ಧಿಯರು, ಹಸಲರು, ಹಾಲಕ್ಕಿ ಒಕ್ಕಲಿಗರು ಮುಂತಾದ ಜನಾಂಗಗಳಲ್ಲಿನ ಜಾನಪದ ಸಿರಿಯನ್ನು ಸಂಗ್ರಹಿಸಿ ಹೊಸ ಪ್ರಪಂಚಕ್ಕೆ ತೆರೆದಿಟ್ಟವರಲ್ಲಿ ಪ್ರಮುಖರಾದವರೆಂದರೆ ಲಕ್ಷ್ಮೀನಾರಾಯಣ ಹೆಗಡೆಯವರು. ಉತ್ತರ ಕನ್ನಡ ಜಿಲ್ಲೆಯು ಜಾನಪದ ಹಾಗೂ ಯಕ್ಷಗಾನ ಪ್ರಕಾರಗಳಿಗೆ ತೌರುಮನೆಯಿದ್ದಂತೆ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೊಲನಗದ್ದೆ ಎಂಬಲ್ಲಿ. ತಂದೆ ರಾಮಕೃಷ್ಣ ಹೆಗಡೆಯವರು ಕುಮಟಾದ ಗಿಬ್ಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ತಾಯಿ ಮಹಾಲಕ್ಷ್ಮಿ. ಪ್ರಾರಂಭಿಕ ಶಿಕ್ಷಣ ಹೊಲನಗದ್ದೆ ಹಾಗೂ ಗುಡೆ ಅಂಗಡಿಗಳಲ್ಲಿ. ಪ್ರೌಢಶಾಲೆಗೆ ಸೇರಿದ್ದು ತಂದೆಯೇ ಅಧ್ಯಾಪಕರಾಗಿದ್ದ ಗಿಬ್ಸ್ ಹೈಸ್ಕೂಲಿಗೆ. ಬಿ.ಎ. ಪದವಿ ಪಡೆದದ್ದು ಬೆಳಗಾವಿಯ ಲಿಂಗರಾಜು ಕಾಲೇಜು ಹಾಗೂ ಸಾಂಗ್ಲಿಯ ವಿಲಿಂಗ್ಡನ್ ಕಾಲೇಜಿನಿಂದ ಬಿ.ಟಿ. ಪದವಿ. ಪೂನಾ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪ್ರಥಮ ವರ್ಗದಲ್ಲಿ ತೇರ್ಗಡೆಯಾಗಿ ಪಡೆದರು. ‘ಕುಮಾರವ್ಯಾಸನ ಪಾತ್ರ ಸೃಷ್ಟಿ’ ಎಂಬ ಪ್ರೌಢ ಪ್ರಬಂಧವನ್ನು ಡಾ.ಆರ್.ಸಿ. ಹಿರೇಮಠರವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಡೆದ ಡಾಕ್ಟರೇಟ್ ಪದವಿ. ಬೋಧಕರಾಗಿ ಕಾರವಾರದ ಸರಕಾರಿ ಹೈಸ್ಕೂಲಿನಲ್ಲಿ ಉದ್ಯೋಗ ಪ್ರಾರಂಭಿಸಿ ಹೊನ್ನಾವರದ ನ್ಯೂ ಇಂಗ್ಲಿಷ್ ಹೈಸ್ಕೂಲಿನಲ್ಲಿಯೂ ಕೆಲಕಾಲ ಸೇವೆ ಸಲ್ಲಿಸಿದ ನಂತರ ಕುಮಟಾದ ಕೆನರಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿ ರೀಡರ್ ಆಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ೧೯೭೮ರಲ್ಲಿ ನಿವೃತ್ತಿ ಹೊಂದಿದರು.
ಸಾಹಿತ್ಯಕ್ಕಾಗಿ ಎಲ್.ಆರ್.ಹೆಗಡೆಯವರು ನೀಡಿದ ಕೊಡುಗೆ ಬಹಳ ವೈವಿಧ್ಯಮಯ. ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ಪ್ರಕಟಿಸಿರುವ ಪ್ರಮುಖ ಕೃತಿಗಳೆಂದರೆ ಮುಕ್ತಿ ಹೊಲೆಯರ ಪದಗಳು. ಕುವರಿ ಮರಾಠಿ ಕಥೆಗಳು, ಗುಮಟೆಯ ಪದಗಳು, ಕರಾವಳಿಯ ಜನಪದ ಕಥೆಗಳು ಮುಂತಾದವುಗಳು. ಇವಲ್ಲದೆ ಇವರ ಇತರ ಜಾನಪದ ಕೃತಿಗಳೆಂದರೆ ತಿಮ್ಮಕ್ಕನ ಪದಗಳು ಪರಮೇಶ್ವರಿಯ ಪದಗಳು, ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು, ಮೂಢನಂಬಿಕೆಗಳು, ಹಾಲಿನ ತೆನೆ, ಹಾಡಲುಂಟೇ ನಿನ್ನ ಮಡಿಲಲ್ಲಿ, ಜಾನಪದ ಸಾಹಿತ್ಯದಲ್ಲಿ ಮದುವೆ ಮುಂತಾದವುಗಳು. ಜಾನಪದ ಗೀತೆ, ಕಥನ ಗೀತೆ ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಗೈದಿದ್ದಾರೆ. ಸೃಜನಶೀಲ ಸಾಹಿತ್ಯಕ್ಕೂ ಇವರು ನೀಡಿರುವ ಕೊಡುಗೆಯು ಬಹಳ ದೊಡ್ಡದೆ. ಕಾವ್ಯ, ನಾಟಕ, ಕಥೆ,ಲಘು-ಬರಹ, ವ್ಯಕ್ತಿ ಚಿತ್ರ, ಹೀಗೆ ನಾನಾ ಪ್ರಕಾರಗಳಲ್ಲಿ ಕೃತಿ ರಚಿಸಿದ್ದು ಒಟ್ಟು ಇವರ ಕೃತಿಗಳ ಸಂಖ್ಯೆಯು 80ಕ್ಕೂ ಹೆಚ್ಚು. ಇವರ ಮತ್ತೊಂದು ಆಸಕ್ತಿ ಕ್ಷೇತ್ರವೆಂದರೆ ಆಯುರ್ವೇದ, ಹೋಮಿಯೋಪತಿ ಹಾಗೂ ಜಾನಪದ ವೈದ್ಯ ಕ್ಷೇತ್ರ. ಅನುಭವ ಚಿಕಿತ್ಸೆ, ಆರೋಗ್ಯವೇ ಭಾಗ್ಯ, ಗಾಂವರಿ ಚಿಕೆತ್ಸೆ, ಜನಪದ ವೈದ್ಯ, ನಾಡಮದ್ದು, ಹೋಮಿಯೋಪತಿ ಚಿಕಿತ್ಸೆ ಮುಂತಾದ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕದ ವಿವಿಧ ಪತ್ರಿಕೆಗಳಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬರೆದ ಲೇಖನಗಳೇ ನೂರಾರು. ಜಾನಪದ ಕ್ಷೇತ್ರಕ್ಕಾಗಿ ಇವರು ನೀಡಿದ ಕೊಡುಗೆಗಾಗಿ ಸಂದ ಪ್ರಶಸ್ತಿ ಗೌರವಗಳು ಹಲವಾರು.
೧೯೮೧ರಲ್ಲಿ ಕರ್ನಾಟಕದ ವಿಶ್ವವಿದ್ಯಾಲಯದ ವತಿಯಿಂದ ಅಂಕೋಲದಲ್ಲಿ ಜರುಗಿದ ಎಂಟನೆಯ ಜನಪದ ಸಾಹಿತ್ಯ ಸಮ್ಮೇಳನ ಮತ್ತು ರಾಯಚೂರಿನಲ್ಲಿ ನಡೆದ ಕರ್ನಾಟಕ ಜನಪದ ವಿದ್ವಾಂಸರ ಮಹಾಧಿವೇಶನದಲ್ಲಿ ಗೋಷ್ಠಿಯೊಂದರ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾಗಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಸೇವೆ ಸಲ್ಲಸಿದ್ದಲ್ಲದೆ ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು ನಡೆಸಿದ ಜಾನಪದ ಗೋಷ್ಠಿ, ಚರ್ಮವಾದ್ಯ ಗೋಷ್ಠಿ, ಜಾನಪದ ಮೌಲ್ಯ ಮಾಪನ ಗೋಷ್ಠಿ ಮತ್ತು ಮಲೆನಾಡು ಜಾನಪದ ಗೋಷ್ಠಿ ಮುಂತಾದವುಗಳ ಅಧ್ಯಕ್ಷತೆಯ ಗೌರವವನ್ನು ಪಡೆದಿದ್ದಾರೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯು ೧೯೮೬ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಹೀಗೆ ಜಾನಪದ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ ಎಲ್.ಆರ್. ಹೆಗಡೆಯವರು ಜಾನಪದ ಲೋಕದಿಂದ ನಿರ್ಗಮಿಸಿದ್ದು ೨೦೦೫ರಲ್ಲಿ.
ಈಗ ಪ್ರಕಟವಾಗುತ್ತಿರುವ ಪುಸ್ತಕಗಳ ಅಕ್ಷರ ಜೋಡಣೆ ಮತ್ತು ಮುಖಪುಟ ರಚನೆಯಲ್ಲಿ ನೆರವಾದವರ ಹೆಸರುಗಳು ಹೀಗಿವೆ. ಇವೆರೆಲ್ಲರೂ ಫೇಸ್‌ಬುಕ್‌ ಮೂಲಕವೇ ನೆರವಿಗೆ ಬಂದ ಡಿಜಿಟಲ್‌ ಜಾನಪದರು!!
ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಲು ಮುಖಚಿತ್ರವನ್ನು ಒತ್ತಿ, ಪಿಡಿಎಫ್‌ ಪ್ರತಿಗಳನ್ನು ಪಡೆಯಿರಿ. 
೧) ನಾಮಧಾರಿಗಳ ಆಡುಭಾಷೆಯ ಕಥೆಗಳು
ಈ ಪುಸ್ತಕದ ಉಚಿತ ಅಕ್ಷರ ಜೋಡಣೆ ಮಾಡಿ ಸಹಕರಿಸಿದವರು

ಶ್ರೀಮತಿ ಸಂಧ್ಯಾಶಾಸ್ತ್ರಿ

ಶ್ರೀ ರುದ್ರೇಶ್ವರ ರಾಮನಗರ
ಶ್ರೀ ವೇಣುಗೋಪಾಲ ಗಾಂವ್ಕರ್
ಮುಖಪುಟ ರಚನೆ: ಶ್ರೀ ಕೋಟೆಗದ್ದೆ ಎಸ್ ರವಿ
೨) ಆಯ್ದ ನಾಮಧಾರಿ ಕಥನಗೀತೆಗಳು
ಈ ಪುಸ್ತಕದ ಉಚಿತ ಅಕ್ಷರ ಜೋಡಣೆ ಮಾಡಿ ಸಹಕರಿಸಿದವರು

ಕು. ಸುಷ್ಮಾ ಮೂಡಬಿದ್ರಿ

ಶ್ರೀ ಕೋಟೆಗದ್ದೆ ಎಸ್ ರವಿ
ಮುಖಪುಟ ರಚನೆ: ಶ್ರೀ ಕೋಟೆಗದ್ದೆ ಎಸ್ ರವಿ
೩) ಹಾಲಕ್ಕಿ ಕಥೆಗಳು
ಈ ಪುಸ್ತಕದ ಉಚಿತ ಅಕ್ಷರ ಜೋಡಣೆ ಮಾಡಿ ಸಹಕರಿಸಿದವರು
ಶ್ರೀ ರವಿಕುಮಾರ್

ಶ್ರೀಮತಿ ಶಶಿದೀಪ್‌

ಕುಮಾರಿ ಅನಘಾ ನಾಗಭೂಷಣ
ಮುಖಪುಟ ರಚನೆ: ಶ್ರೀ ಮುರಳೀಧರ
೪) ಶುದ್ಧ ಭಾಷೆಯ ಕಥೆಗಳು
ಈ ಪುಸ್ತಕದ ಉಚಿತ ಅಕ್ಷರ ಜೋಡಣೆ ಮಾಡಿ ಸಹಕರಿಸಿದವರು

ಶ್ರೀಮತಿ ಶೋಭಾ

ಶ್ರೀಮತಿ ನಾಗಮಣಿ ರಾಮಸ್ವಾಮಿ
ಮುಖಪುಟ ರಚನೆ: ಶ್ರೀ ಪ್ರಭಾಕರ್‌
೫) ಕೋಲಾಟದ ಪದಗಳು
ಈ ಪುಸ್ತಕದ ಉಚಿತ ಅಕ್ಷರ ಜೋಡಣೆ ಮಾಡಿ ಸಹಕರಿಸಿದವರು
ಶ್ರೀಮತಿ ಸಂಧ್ಯಾಶಾಸ್ತ್ರಿ
ಶ್ರೀ ರುದ್ರೇಶ್ವರ ರಾಮನಗರ
ಶ್ರೀ ವೇಣುಗೋಪಾಲ ಗಾಂವ್ಕರ್
ಮುಖಪುಟ ರಚನೆ: ಶ್ರೀ ಪ್ರಭಾಕರ್‌
೬) ಆಯ್ಕೆ ಮಾಡಿದ ಜನಪದ ಕಥೆಗಳು
ಈ ಪುಸ್ತಕದ ಉಚಿತ ಅಕ್ಷರ ಜೋಡಣೆ ಮಾಡಿ ಸಹಕರಿಸಿದವರು
ಕುಮಾರಿ ಅನಘಾ ನಾಗಭೂಷಣ
ಮುಖಪುಟ ರಚನೆ: ಶ್ರೀ ಪ್ರಭಾಕರ್‌
ಈ ಪ್ರಯೋಗವನ್ನು ಸಾಧ್ಯವಾಗಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.
ಮುಕ್ತಜ್ಞಾನವೆಂದರೆ ಕೇವಲ ಮುದ್ರಿತ ಪುಸ್ತಕಗಳಲ್ಲ, ಮುದ್ರಣವಾಗದೇ ಇನ್ನೂ ಕಾಯುತ್ತಿರುವ ನಮ್ಮ ದೇಸಿ ಪರಂಪರೆಯ ಅಪಾರ ಜ್ಞಾನಭಂಡಾರವೂ ಹೌದು ಎಂಬುದನ್ನು ಗಮನಕ್ಕೆ ತೆಗೆದುಕೊಂಡರೆ ನಮ್ಮ ಮುಕ್ತಜ್ಞಾನದ ಕಾರ್ಯ ಎಷ್ಟು ದೊಡ್ಡ ಸವಾಲು ಎಂಬುದು ಅರಿವಾಗುತ್ತದೆ. ಮರೆಯಾಗುವ ಮುನ್ನ ಇಂತಹ ಎಲ್ಲ ಜ್ಞಾನವನ್ನು ಸಂಗ್ರಹಿಸಿಡುವ ಕೆಲಸವನ್ನು ಸರ್ಕಾರ ಮತ್ತು ಸಮುದಾಯಗಳು ಮಾಡಬೇಕಿವೆ.
ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳಲ್ಲಿ ನೆರವಾಗುವವರು ಸಂಪರ್ಕಿಸಿ! ದಶಕ ಮುಗಿದರೂ ಮುಗಿಯದಷ್ಟು ಕೆಲಸ ಖಂಡಿತ ಇದೆ.
Share. Facebook Twitter Pinterest LinkedIn Tumblr Email
Previous Articlewww.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
Next Article ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !
ಬೇಳೂರು ಸುದರ್ಶನ
  • Website

Related Posts

ಜೀವನದಿ ದೇವಕಿ

September 23, 2025

ಹುಲ್ಲಿನ ಸಾರು (ಚೀನಿ ಮೂಲ: ಶಾಂಗ್‌ ಶಾನ್‌ಲಿಯಾಂಗ್, ಇಂಗ್ಲಿಶಿಗೆ: ಮಾರ್ಥಾ ಅವೇರಿ, ಕನ್ನಡಕ್ಕೆ: ಬೇಳೂರು ಸುದರ್ಶನ)

June 6, 2024

ಕ್ಯಾಪ್ಸಿಕಂ ಮಸಾಲಾ: ಕಥಾ ಸಂಕಲನ [ಬೇಳೂರು ಸುದರ್ಶನ]

February 24, 2015

Comments are closed.

ಉಚಿತ ಪುಸ್ತಕ ಸಂಸ್ಕೃತಿ
  • ಜೀವನದಿ ದೇವಕಿ
  • ಹುಲ್ಲಿನ ಸಾರು (ಚೀನಿ ಮೂಲ: ಶಾಂಗ್‌ ಶಾನ್‌ಲಿಯಾಂಗ್, ಇಂಗ್ಲಿಶಿಗೆ: ಮಾರ್ಥಾ ಅವೇರಿ, ಕನ್ನಡಕ್ಕೆ: ಬೇಳೂರು ಸುದರ್ಶನ)
  • ಕ್ಯಾಪ್ಸಿಕಂ ಮಸಾಲಾ: ಕಥಾ ಸಂಕಲನ [ಬೇಳೂರು ಸುದರ್ಶನ]
  • ಹಿಮದೊಡಲ ತಳಮಳ: ೩೩ ವರ್ಷಗಳ ಚೀನೀ ಸೆರೆಮನೆವಾಸದ ಕಥನ ಉಚಿತವಾಗಿ ಓದಿ!
  • ದಶಕದ ಹಿಂದಿನ ಡಿಜಿಟಲ್ ಕಾವ್ಯ
  • ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!
ಹುಡುಕಿ!
ವಿಭಾಗಗಳು
  • ಉಚಿತ ಪುಸ್ತಕ ಸಂಸ್ಕೃತಿ (7)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (2)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (264)
  • ವಿಮರ್ಶೆ (48)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.