ಬ್ಯಾಲಾಳು ಮತ್ತು ಬಿಳಲು

  ಎಲ್ಲದಕ್ಕೂ ಒಂದು ಕೊನೆ ಇರಲೇಬೇಕು ಅಲ್ವೆ? ಕಲಿ-ಯುಗ ಅಂಕಣಕ್ಕೂ ಇಂದೇ ಕೊನೆ! ’ಉದಯವಾಣಿ’ಯಲ್ಲಿ ಕಳೆದ ಒಂದೂಕಾಲು ವರ್ಷದಿಂದ ಮೂಡಿದ ಕಲಿ-ಯುಗ ಅಂಕಣವನ್ನು ಖುಷಿಯಿಂದಲೇ ನಿಲ್ಲಿಸುತ್ತಿದ್ದೇನೆ. ಕೆಲಸ ಬಿಡುವಾಗ ಖುಷಿಪಡಿ ಎಂದ ನಾನು ನನ್ನ ಅಂಕಣ ನಿಲ್ಲಿಸುವಾಗ ಬೇಜಾರಾಗೋದು ಪಾಸಿಟಿವ್ ಬದುಕಿನ ಲಕ್ಷಣವಲ್ಲ ಅಲ್ವೆ?  ಉದಯವಾಣಿಯಲ್ಲಿ ಬಂದ ನನ್ನ ಲೇಖನಗಳನ್ನು ಓದಿದ ಹಲವರು ನನ್ನನ್ನು ಈಗಲೂ ಬೇರೆ ಬೇರೆ ಸಂದರ್ಭಗಳಲ್ಲಿ ಸಂಪರ್ಕಿಸುತ್ತಿದ್ದಾರೆ; ಮಾಹಿತಿ ಕೇಳುತ್ತಿದ್ದಾರೆ. ಎರಡು ವಾರದ ಹಿಂದೆ ಬಂದ ನಡಹಳ್ಳಿ ಅನಂತಜ್ಜನ ಬಹುಮುಖ ಪ್ರತಿಭೆಯ ಲೇಖನವನ್ನು ಓದಿದ ಅವರ ಮಗನೇ ನನಗೆ ಫೋನ್ ಮಾಡಿ ಖುಷಿಪಟ್ಟಿದ್ದಾರೆ (ಸದ್ಯ ತಪ್ಪೇನೂ ಬರೆದಿಲ್ಲವಲ್ಲ ಎಂದು ನನಗೂ ಸಮಾಧಾನವಾಯ್ತು!). ನನ್ನ ಕಂಪ್ಯೂಟರ್ ಕಡತ ಹಂಚಿಕೆ (ಪಿ೨ಪಿ) ಲೇಖನವಂತೂ ಹಲವರಿಗೆ…

"ಬ್ಯಾಲಾಳು ಮತ್ತು ಬಿಳಲು"

ನಾರುಟೋ ಉಝಿಮಾಕಿ, ದತ್ತೆಬಯೋ!

“Art is something that endures the test of time beautifully a nd gracefully. True art is eternal beauty” “Eternal beauty? Master I respect you as a fellow artist, but art is something blossoms for an instant before withering away. “ “Deidara, apparently you don’t understand what true art is.” “That would be you master” “Eternal beauty is the only true art” “That’s absurd! Art is beauty that lasts for just a moment. To me the…

"ನಾರುಟೋ ಉಝಿಮಾಕಿ, ದತ್ತೆಬಯೋ!"

ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ

ಎಂಟು ವರ್ಷಗಳ ಹಿಂದಿನ ಮಾತು. ಸ್ಯಾನ್‌ಫ್ರಾನ್ಸಿಸ್ಕೋ ನಗರದ ವೈದ್ಯೆ ಡಾ. ಜೇನ್ ಹೈಟವರ್ ಎಂಬ ವೈದ್ಯೆಯ ಬಳಿ ಒಬ್ಬ ರೋಗಿ ಬಂದಳು. ತುಂಬಾ ಹೊಟ್ಟೆನೋವು ಎಂದಳು. ಜೊತೆಗೆ ವಾಂತಿ, ವಿಪರೀತ ಸುಸ್ತು, ಏಕಾಗ್ರತೆಯೇ ಇಲ್ಲ. ಆಕೆಗೆ ಏನು ಮಾಡಿದರೂ ನೋವಿನ ಮೂಲ ತಿಳಿಯಲಾಗಲಿಲ್ಲ.  ಆದೇ ವಾರ ಇನ್ನೂ ಹಲವು ರೋಗಿಗಳು ಇಂಥದ್ದೇ ಸಮಸ್ಯೆ ಹೊತ್ತು ಬಂದರು. ಎಲ್ಲರನ್ನೂ ವಿಚಾರಿಸೋ ಹೊತ್ತಿಗೆ ಡಾ. ಜೇನ್‌ಗೆ ಒಂದು ಅಂಶ ಸ್ಪಷ್ಟವಾಯಿತು: ಎಲ್ಲರೂ ಒಂದು ನಿರ್ದಿಷ್ಟ ಮೀನಿನ ರುಚಿಗೆ ಮನಸೋತವರು. ಆ ಮೀನನ್ನು ಸದಾ ಚಪ್ಪರಿಸಿಕೊಂಡು ತಿನ್ನುತ್ತಿದ್ದವರು.  ಸರಿ, ಈ ಮೀನು ತಿನ್ನೋದನ್ನು ಬಿಡಿ ಎಂದಾಕೆ ರೋಗಿಗಳಿಗೆ ಸಲಹೆ ಮಾಡಿದಳು. ಅದನ್ನು ಪಾಲಿಸಿದ್ದೇ ತಡ, ಎಲ್ಲ ಸಮಸ್ಯೆಗಳೂ ಹಠಾತ್ತನೆ ಮಾಯವಾದವು.…

"ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ"

ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರ ಪೈಕಿ ಕಾಂಗ್ರೆಸ್ ಪಕ್ಷದ ಧುರೀಣ, ಮಾಜಿ ಸಚಿವ ಎಚ್. ಕೆ. ಪಾಟೀಲರೂ (ಎಚ್‌ಕೆಪಿ)ಒಬ್ಬರು. ಆನಂತರ ನಡೆದ ವಿಧಾನಪರಿಷತ್ ಚುನಾವಣೆಯಲ್ಲೂ ಅವರು ಸೋತರು. ಹಲವು ಪತ್ರಿಕೆಗಳಲ್ಲಿ ಅವರ ಈ ಜೋಡಿ ಸೋಲಿನ ಬಗ್ಗೆ ವಿಮರ್ಶೆಗಳು ಪ್ರಕಟವಾದವು. ಎರಡೂ ಸೋಲಿನಿಂದ ಎಚ್‌ಕೆಪಿ ಕಂಗೆಟ್ಟುಹೋದರು ಎಂದು ಭಾವಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಎಚ್‌ಕೆಪಿ ಸುಮ್ಮನೆ ಕೂಡಲಿಲ್ಲ. ಚುನಾವಣೆ ಮುಗಿದಂತೆಯೇ ಮುಂಗಾರು ಮಳೆಯೂ ಕೈಕೊಟ್ಟ ಸುದ್ದಿ ಬಂತು. ಕೂಡಲೇ ಎಚ್‌ಕೆಪಿ ತಮ್ಮದೇ ಸಂಪನ್ಮೂಲ ಬಳಸಿ ಮೋಡಬಿತ್ತನೆಯ ಮೂಲಕ ಮಳೆ ಬರಿಸಲು ಮುಂದಾದರು. ಹಲವು ತಾಲೂಕುಗಳಲ್ಲಿ ಈ ಯತ್ನ ಗಂಭೀರವಾಗಿ ನಡೆಯಿತು. ಹಿಂದೆ ಕೃಷಿ ಸಚಿವರಾಗಿದ್ದಾಗ ಮಾಡಿದ್ದ ಈ ಸಮಾಧಾನಕರ ಪ್ರಯೋಗ ಇಲ್ಲಿ ಪ್ರಯೋಜನಕ್ಕೆ ಬಂತು. ಅಷ್ಟುಹೊತ್ತಿಗೆ…

"ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು"

ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!

  ವಿಶ್ವನಾಥನ್ ಆನಂದ್ ಮತ್ತೊಮ್ಮೆ ವಿಶ್ವ ಚದುರಂಗ (ಚೆಸ್) ಚಾಂಪಿಯನ್ ಆಗಿದ್ದಾರೆ. ಭಾರತೀಯರೇ ರೂಪಿಸಿದ ಆಟದಲ್ಲಿ ಭಾರತೀಯ ಆನಂದ್ ಮತ್ತೆ ಗೆದ್ದಿದ್ದಾರೆ, ಅದೂ ಈವರೆಗೆ ಮಹಾನ್ ಆಟಗಾರ ಎಂದೇ ಖ್ಯಾತಿ ಪಡೆದಿದ್ದ ಕ್ರಾಮ್ನಿಕ್ ಎದುರು! ಮ್ಯಾಚ್ ಪ್ಲೇ – ಅಂದರೆ ’ಪಂದ್ಯಾವಳಿಯಲ್ಲಿ ಕ್ರಾಮ್ನಿಕ್‌ನನ್ನು  ಆನಂದ್ ಎಂದೂ ಸೋಲಿಸಿಲ್ಲವಲ್ಲ?’ ಎಂಬ ಕಪ್ಪು ಚುಕ್ಕೆಯೊಂದನ್ನು ರಶಿಯಾ ಆಟಗಾರರು, ವಿದೇಶಿ ಕ್ರೀಡಾಳುಗಳು ಎತ್ತಿ ತೋರಿಸುತ್ತಿದ್ದರು. ಈಗ ಈ ಆರೋಪವೂ ಹುರುಳಿಲ್ಲದಂತಾಗಿದೆ.  ಕ್ರಿಕೆಟ್ಟಿನಲ್ಲಿ ಗೆದ್ದಾಗ ಸಾವಿರಾರು ಪಟಾಕಿ ಹಚ್ಚುವ ನಾವು ಚದುರಂಗದಲ್ಲಿ ಹತ್ತಾರು ವರ್ಷಗಳಿಂದ ಗೆಲ್ಲುತ್ತ ಬಂದಿರುವ ಆನಂದ್‌ಗೆ ಜಿಂದಾಬಾದ್ ಹೇಳುವುದನ್ನೇ ಮರೆತುಬಿಡುತ್ತೇವೆ. ಪತ್ರಿಕೆಗಳಲ್ಲಿ ಒಂದಷ್ಟು ವರದಿಗಳು ಬಂದವು, ಟಿವಿ ವಾಹಿನಿಗಳು ಸುದ್ದಿಯನ್ನು ಬಿತ್ತರಿಸಿದವು ಎಂಬುದು ಬಿಟ್ಟರೆ ಅಂಥ ಸಡಗರವೇನೂ ಕಂಡುಬರಲಿಲ್ಲ.…

"ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!"

ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ

ಶಿಲ್ಪಶ್ರೀ, ಬ್ಲಾಗಿಂಗ್ ಬಗ್ಗೆ ಸ್ನಾತಕೋತ್ತರ ಪ್ರಬಂಧ ಬರೆಯಬೇಕಂದ್ರೆ ಶಿವಮೊಗ್ಗ ಶಂಕರಘಟ್ಟ ಅಂಥ ಒಳ್ಳೆಯ ಜಾಗವೇನಲ್ಲ. ಬ್ಲಾಗಿಂಗ್‌ನಂಥ ಇಂಟರ್‌ನೆಟ್ ಆಧಾರಿತ ವಿಷಯಾಭ್ಯಾಸ ಮಾಡಬೇಕಂದ್ರೆ ಬೆಂಗಳೂರಿನ ಸಂಪರ್ಕ ಇರಲೇಬೇಕು. ಕಲಿಯುವ ಜಾಗಕ್ಕೂ, ವಿಷಯಕ್ಕೂ ಸಂಬಂಧವೇ ಇರದಂಥ ಕಡೆಯಲ್ಲಿ ಇದ್ದ ನೀನು ಬ್ಲಾಗಿಂಗ್ ಬಗ್ಗೆ ಬರೆಯೋದಕ್ಕೆ ಹಒರಟು ನನಗೆ ಫೋನ್ ಮಾಡಿದಾಗ ನನಗೆ ಇನ್ನಿಲ್ಲದ ಅಚ್ಚರಿ; ಸಂತೋಷ. ಬೆಂಗಳೂರಿನ ಒಂದಷ್ಟು ಪರಿಣತರು ಬಂದು ಬ್ಲಾಗಿಂಗ್ ಬಗ್ಗೆ ಮಣಗಟ್ಟಳೆ ಭಾಷಣ ಮಾಡಿದ್ದರೂ ನಿನಗೆ ಬ್ಲಾಗಿಂಗ್ ಅರ್ಥವಾಗಿರಲಿಲ್ಲ ಎಂದು ನನಗೆ ನಿನ್ನ ಮಾತಿನ ಮೂಲಕ ಗೊತ್ತಾಯ್ತು. ಅದಕ್ಕೇ ನಾನು ಫೋನಿನಲ್ಲೇ ಅರ್ಧ ಗಂಟೆ ಬ್ಲಾಗಿಂಗ್ ಅಂದ್ರೆ ಏನು ಎಂದು ವಿವರಿಸಿದೆ. ನಿನಗೆ ಬೋರ್ ಆಯ್ತೋ ಏನೋ ಗೊತ್ತಾಗಲಿಲ್ಲ. ಆದರೆ ಇಂಥ ಸಾಹಸ ಮಾಡಹೊರಟ…

"ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ"

ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ

ಕಳೆದ ವಾರ ಇದೇ ಅಂಕಣದಲ್ಲಿ ತದಡಿ ಯೋಜನೆಯ ಬಗ್ಗೆ ಲೇಖನ ಬಂದ ದಿನವೇ ನಾನು ತದಡಿಯಲ್ಲಿದ್ದೆ. ಅದಾಗಲೇ ತದಡಿಯ ಬಗೆಗಿನ ಎಲ್ಲ ಮಾಹಿತಿಯನ್ನೂ ಅಂತರಜಾಲದಲ್ಲಿ ಪಾತಾಳಗರಡಿ ಹಾಕಿ ಹುಡುಕಿ ತೆಗೆದು ಓದಿದ್ದೆ. ತದಡಿಯಲ್ಲಿ ಯೋಜನೆಯ ಪರ, ವಿರೋಧ ಇರುವ ಕೆಲವರನ್ನು ಭೇಟಿಯಾದೆ. ಪತ್ರಕರ್ತ ಮಿತ್ರರ ಜೊತೆ ಚರ್ಚಿಸಿದೆ. ಮುಖ್ಯವಾಗಿ ತದಡಿಯ ಈಗಿನ ವಿವಾದಿತ ಅಭಿವೃದ್ಧಿ ಮೀಸಲು ಜಾಗವನ್ನೂ ನೋಡಿದೆ. ಅದರ ಮೇಲೆ ಓಡಾಡಲಾಗಲಿಲ್ಲ; ಯಾಕೆಂದರೆ ಅದೆಲ್ಲವೂ ಗಜನಿ ಭೂಮಿ. ನೀರು ಏರುತ್ತ, ಇಳಿಯುತ್ತ ಹೋಗುತ್ತದೆ. ನುಸಿಕೋಟೆಯ ಜನರು ನಮ್ಮ ಜೊತೆ ಮಾತಾಡುವಾಗಲೇ ನೀರು ದಡ ಹತ್ತಿದ್ದು ಕಾಣಿಸಿತು. ದೂರದಲ್ಲಿ ಕೆಲವು ದೋಣಿಗಳಲ್ಲಿ ಚಿಪ್ಪು ಸಂಗ್ರಹಿಸುತ್ತಿದ್ದವರು ನಮ್ಮನ್ನು ಅಲ್ಲಿಂದಲೇ ಅಳೆದು ಸರಸರ ಹುಟ್ಟುಹಾಕಿ ದೂರವಾದರು. ಆಮೇಲೆ ಅವರ…

"ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ"

ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!

`ನಮ್ಮ ಬಳಿ ಡಾಟಾ ಇಲ್ಲ. ಈ ಬಗ್ಗೆ ಒಂದು ವಿಶ್ವಸ್ತರದ ಸಂಸ್ಥೆಯ ಮೂಲಕ ಅಧ್ಯಯನ ಮಾಡಿಸುತ್ತೇವೆ’ ವಿಕಾಸಸೌಧದ ಆ ಸುಸಜ್ಜಿತ ಕೋಣೆಯಲ್ಲಿ ಕುಳಿತ ರಾಜ್ಯ ಸರ್ಕಾರದ ಇಂಧನ ಇಲಾಖೆಯ ಕಾರ್ಯದರ್ಶಿಯವರು ಖಚಿತವಾಗಿ ಹೇಳಿದರು. `ಹಾಗೆ ಅಧ್ಯಯನ ಮಾಡುವ ಅಗತ್ಯವಿಲ್ಲ. ಸುಮ್ಮನೆ ಅದಕ್ಕೆ ಯಾಕೆ ಹಣ ಖರ್ಚು ಮಾಡುತ್ತೀರಿ…. ನಾವಂತೂ ತದಡಿಗೆ ಇಂಥ ಯಾವುದೇ ಯೋಜನೆ ಬರುವುದಕ್ಕೆ ಬಿಡುವುದಿಲ್ಲ’ ಎಂದು ತದಡಿಯಿಂದ ಬಂದಿದ್ದ ಹಿರಿಯರೊಬ್ಬರು ನಸುನಗುತ್ತ ನುಡಿದರು.

"ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!"

ವರ್ತಮಾನದ ಹೊಸ ವಾರ್ತೆಗಳು

ಕಲಿಯುಗ ಅಂಕಣ ಶುರುವಾಗಿ ಒಂದು ವರ್ಷ ಕಳೆದೇ ಹೋಗಿದೆ! ನನ್ನ ಅಂಕಣದ ನೀತಿಯನ್ನೇ ಮೊದಲ ಲೇಖನವಾಗಿ ಬರೆದಿದ್ದೆ. ಬಹುಶಃ ಅವೆಲ್ಲವನ್ನೂ ಪೂರೈಸಲು ಸಾಧ್ಯವಾಗಿಲ್ಲದಿರಬಹುದು; ಆದರೆ ಹಲವು ಬಾರಿ ರಾಜಕೀಯ ಮತ್ತು ವಿವಾದಾಸ್ಪದ ವಿಷಯಗಳ ಬಗ್ಗೆ ಬರೆಯುವ ಒತ್ತಡ ಒಳಗೊಳಗೇ ಮೂಡಿದ್ದರೂ, ಅವುಗಳನ್ನು ಮೀರಿ ನನ್ನ ಅಂಕಣದ ನೀತಿಯನ್ನು ಪಾಲಿಸಿದ್ದೇನೆ ಎಂಬ ಸಮಾಧಾನ ನನಗಿದೆ. ಈ ವರ್ಷ ಬರೆದ ಹಲವು ಲೇಖನಗಳು ಸಾಧಾರಣ ಮಟ್ಟದವು, ಕೆಲವು ಮಾತ್ರ ಹೆಚ್ಚು ಮಾಹಿತಿಪೂರ್ಣವಾಗಿದ್ದವು ಎಂಬ ಅರಿವೂ ನನಗಿದೆ. ಏನೇ ಇರಲಿ, ಓದುಗರಿಗೆ, ನನ್ನ ಅಂಕಣದ ಮೊದಲ ವರ್ಷದ ಶುಭಾಶಯಗಳು. ಇನ್ನೊಂದು ಸಂತಸದ ವಿಷಯ: ಈಗ `ಕಲಿಯುಗ’ ಓದಿ ಈ ಮೈಲ್ ಮೂಲಕ ಪ್ರತಿಕ್ರಿಯೆ ಕಳಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇವರಲ್ಲಿ ಸಹಾಯ…

"ವರ್ತಮಾನದ ಹೊಸ ವಾರ್ತೆಗಳು"