ನಿಮ್ಮ ಗಣಕ ಮತ್ತು ನೀವೇ ಬರಮಾಡಿಕೊಂಡ ವೈರಸ್ !
ಗೆಳೆಯನೊಬ್ಬ ಕಚೇರಿಗೆ ಬಂದಿದ್ದಾನೆ. ಅವನ ಲ್ಯಾಪ್‌ಟಾಪನ್ನು ಮುಂದಿಟ್ಟಿದ್ದಾನೆ. ಅದರ ಕಸದ ಬುಟ್ಟಿ (ಇದನ್ನು ಅತ್ಯಂತ ಸಾಹಿತ್ಯಕವಾಗಿ ರಿಸೈಕಲ್ ಬಿನ್ ಎಂದು ಬಿಲ್ ಗೇಟ್ಸ್ ಕರೆದಿದ್ದಾನೆ)ಗೆ ಎಸೆದ ನೂರಾರು ಕಡತಗಳನ್ನು ಖಾಯಮ್ಮಾಗಿ ಎಸೆಯಲು ಅವನಿಗೆ ಅಗುತ್ತಿಲ್ಲ. ಏನು ಮಾಡಿದರೂ ಕಸದ ಬುಟ್ಟಿಯಲ್ಲಿ ಈ ಕಡತಗಳು ಭದ್ರವಾಗಿ ಕೂತಿವೆ. `ಎಂಪ್ಟಿ ರಿಸೈಕಲ್ ಬಿನ್ ಎಂದು ಎಷ್ಟೆಲ್ಲ ಆದೇಶಗಳನ್ನು ನೀಡಿದರೂ ಗಣಕ ಕೇಳುತ್ತಿಲ್ಲ.
ಇನ್ನೊಬ್ಬ ಗೆಳೆಯರ ಮನೆಯಲ್ಲಿ ಗಣಕದ ಟಾಸ್ಕ್ ಮ್ಯಾನೇಜರ್ ಕೆಲಸ ಮಾಡುತ್ತಿಲ್ಲ. ಕಂಟ್ರೋಲ್ ಆಲ್ಟ್ ಡಿಲಿಟ್ ಗುಂಡಿಗಳನ್ನು ಒಟ್ಟಿಗೆ ಒತ್ತಿ ನಮಗೆ ಬೇಡವಾದ, ಕಡ್ಡಾಯವಾಗಿ ಕೊನೆಗೊಳಿಸಬೇಕಾದ ಕಂಪ್ಯೂಟರ್ ಕಾರ್ಯಕ್ರಮಗಳನ್ನು ನಿಲ್ಲಿಸಲು, ಮುಕ್ತಾಯಗೊಳಿಸಲು ಈ ಟಾಸ್ಕ್ ಮ್ಯಾನೇಜರ್ ತುಂಬಾ ಉಪಯುಕ್ತ. ಅಲ್ಲದೆ, ಗಣಕದಲ್ಲಿ ಬೇರಾವುದೇ ವೈರಸ್‌ಗಳು ಕೆಲಸ ಮಾಡುತ್ತ ಗಣಕದ ರ್‍ಯಾಮ್ (ತಕ್ಷಣದ ಕೆಲಸಗಳನ್ನು ಮಾಡಲು ಗಣಕದಲ್ಲಿ ಸ್ಥಾಪಿಸಲಾಗಿರುವ ಸ್ಮರಣೆಬಿಲ್ಲೆ, ರ್‍ಯಾಂಡಮ್ ಎಕ್ಸೆಸ್ ಮೆಮೊರಿ)ನ ಸಾಮರ್ಥ್ಯವನ್ನು ಕುಗ್ಗಿಸುತ್ತಿವೆಯೆ ಎಂಬುದನ್ನೂ ಈ ಟಾಸ್ಕ್ ಮ್ಯಾನೇಜರ್‌ನಿಂದ ಸಾಮಾನ್ಯವಾಗಿ ತಿಳಿಯಬಹುದು. ಇಲ್ಲ, ನಿಮ್ಮ ಟಾಸ್ಕ್ ಮ್ಯಾನೇಜರ್‌ನ್ನು ಈ ಗಣಕದ ಅಡ್ಮಿನಿಸ್ಟ್ರೇಟರ್ ನಿಷ್ಕ್ರಿಯಗೊಳಿಸಿದ್ದಾರೆ ಎಂಬ ಸಂದೇಶ ಗಣಕದ ಪರದೆಯ ಮೇಲೆ ಮೂಡುತ್ತಿದೆ.
ಮತ್ತೊಬ್ಬ ಗೆಳೆಯನ ಮನೆಯಲ್ಲಿ ಕಂಪ್ಯೂಟರಿನ ಫ್ಲಾಪಿ ಡಿಸ್ಕೆಟ್ ಡ್ರೈವನ್ನು ಪ್ರತೀ ಮೂವತ್ತು ಸೆಕೆಂಡಿಗೊಮ್ಮೆ ಗಣಕವು ಓದುತ್ತಿದೆ. ಕರ ಕರ ಶಬ್ದ ಬರುತ್ತಲೇ ಇದೆ. ಆದರೆ ಇದು ಗಣಕದ ಕೆಲಸವಲ್ಲ. ಗಣಕದ ಒಳಗೆ ಕೂತಿದ್ದು ಯಾವಾಗಲಾದರೂ ಫ್ಲಾಪಿ ಡಿಸ್ಕ್ ಹಾಕಿದಾಗ ಅದಕ್ಕೆ ಹಾರಲು ಕಾಯುತ್ತಿರುವ ವೈರಸ್‌ನ ಕಾರ್ಯಾಚರಣೆ ಇದು!
ಇನ್ನೊಂದು ಕಚೇರಿಯ ಗಣಕದಲ್ಲಿ ನೀವು ಇಂಟರ್‌ನೆಟ್ ಬಳಸಲೆಂದು ಮೊಝಿಲ್ಲಾ ಫೈರ್‌ಫಾಕ್ಸ್ ಎಂಬ ಇಂಟರ್
&#
3240;ೆಟ್ ವಿಹಾರಿಕೆಯನ್ನು (ಬ್ರೌಸರ್) ಬಳಸಲು ಹೋದರೆ ಅದು ಆರಂಭವಾಗುವುದೇ ಇಲ್ಲ. ಬದಲಿಗೆ ನೀವು ಮೊಝಿಲ್ಲಾ ಬಳಸಬೇಡಿ!! ಎಂಬ ಎಚ್ಚರಿಕೆ ಪರದೆಯಲ್ಲಿ ಮೂಡುತ್ತದೆ.
ಯಾಕೆ ಹೀಗಾಗುತ್ತದೆ? ಇದನ್ನು ಕಂಪ್ಯೂಟರ್ ಮಾರಿದವರು ಸರಿ ಮಾಡುವುದಿಲ್ಲವಲ್ಲ, ಇನ್ನಾರು ರಿಪೇರಿ ಮಾಡುತ್ತಾರೆ ಎಂದು ಕೇಳುವವರೇ ಹೆಚ್ಚು. ಕಂಪ್ಯೂಟರ್ ನಿಮ್ಮ ಆಫೀಸಿನದಿರಲಿ, ಮನೆಯದಿರಲಿ, ಡೆಸ್ಕ್‌ಟಾಪ್ ಇರಲಿ, ಲ್ಯಾಪ್‌ಟಾಪ್ ಇರಲಿ – ಸಮಸ್ಯೆಗಳು ಮರುಕಳಿಸುತ್ತಲೇ ಇರುತ್ತವೆ, ನೋಡಲು ಚಿಕ್ಕ ಸಮಸ್ಯೆ. ಆದರೆ ಪರಿಹರಿಸಲು ಸಾಮಾನ್ಯ ಬಳಕೆದಾರರಿಗೆ ಬರುವುದಿಲ್ಲ. ಕಂಪ್ಯೂಟರ್ ಮಾರಿದವರು ಬಂದರೂ ಅವರು ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸುವುದೇ ಜಾಸ್ತಿ. ಯಾಕೆಂದರೆ ಅವರಲ್ಲಿ ಈ ಎಲ್ಲ ಸಮಸ್ಯೆಗಳಿಗೂ ಇರುವ ಪರಿಹಾರ ಸಾಮಾನ್ಯವಾಗಿ ಒಂದೇ: ಗಣಕದಲ್ಲಿ ಆಪರೇಟಿಂಗ್ ವ್ಯವಸ್ಥೆಯನ್ನು ಮರುಸ್ಥಾಪಿಸುವುದು! ಇದಕ್ಕಾಗಿ ಮತ್ತೆ ಮತ್ತೆ ನಿಮ್ಮ ಗಣಕದ ಸಿ ಡ್ರೈವನ್ನು ಫಾರ್ಮಾಟ್ ಮಾಡುವುದು!! ಅಂದರೆ ಮತ್ತೆ ಮತ್ತೆ ನಿಮ್ಮ ಹಾರ್ಡ್‌ಡಿಸ್ಕನ್ನು ತಿಕ್ಕಿ ತಿಕ್ಕಿ ತೊಳೆಯುವುದು.
ಇದರ ಪರಿಣಾಮ ?
ನಿಮ್ಮ ಗಣಕದಲ್ಲಿ ಸ್ಥಾಪಿಸಿದ ನಿಮ್ಮದೇ ಆದ ಹಲವು ಕಾರ್ಯಕ್ರಮಗಳನ್ನು ಮತ್ತೆ ಮತ್ತೆ ಸ್ಥಾಪಿಸಬೇಕಾಗುತ್ತದೆ.
ಸಾಕಷ್ಟು ಸಲ ನೀವು ಸಿ ಹಾರ್ಡ್ ಡಿಸ್ಕ್ ಡ್ರೈವ್‌ನಲ್ಲೇ ನಿಮ್ಮೆಲ್ಲ ದಾಖಲೆಗಳನ್ನು, ಕಡತಗಳನ್ನು ಸೇವ್ ಮಾಡಿ ಇಟ್ಟಿರುವುದರಿಂದ ಅವುಗಳನ್ನು ಸುರಕ್ಷಿತವಾಗಿ ಬೇರೆಡೆಗೆ ವರ್ಗಾಯಿಸದಿದ್ದರೆ (ಬ್ಯಾಕಪ್ ಮಾಡದೇ ಇದ್ದರೆ) ಆ ದಾಖಲೆಗಳೆಲ್ಲವೂ ಕಣ್ಮರೆಯಾಗುವ ಸಾಧ್ಯತೆಗಳಿವೆ.
ಮತ್ತೆ ಮತ್ತೆ ಫಾರ್ಮಾಟ್ ಮಾಡುವುದು ಒಳ್ಳೆಯದಲ್ಲ, ಅದರಿಂದ ಗಣಕದ ಹಾರ್ಡ್ ಡಿಸ್ಕ್ ಹಾಳಾಗುತ್ತದೆ ಎಂದು ನಿಮಗೆ ಕಂಪ್ಯೂಟರ್ ಮಾರಿದವರೇ ಹೇಳುತ್ತಾರೆ; ಆದರೂ ಅವರು ಸಾಮಾನ್ಯವಾಗಿ ಸಮಸ್ಯೆಗಳನ್ನು ನಿವಾರಿಸಲು ಬಳಸುವುದು ಈ ವಿಧಾನವನ್ನೇ.
ಹಾಗಾದರೆ ಬೇರೆ ಪರಿಹಾರ ಇದೆಯೆ ಎಂದು ನೀವು ಕೇಳುತ್ತೀರಿ. ಇದೆ ಎನ್ನಬಹುದು:
ನಿಮ್ಮ ಗಣಕದ&am
p;#3
250;್ಲಿ ಈ ಹಿಂದೆಯೇ ಹೇಳಿದಂತೆ ಒಂದು ಒಳ್ಳೆಯ ವೈರಸ್‌ನಾಶಕ ತಂತ್ರಾಂಶವನ್ನು ಸ್ಥಾಪಿಸಿಕೊಳ್ಳಿ.
ಆದರೆ ಈ ವೈರಸ್‌ನಾಶಕಗಳೂ ಕೆಲವು ವಿಚಿತ್ರ ವೈರಸ್‌ಗಳನ್ನು ನಾಶ ಮಾಡಲಾರವು ಎಂಬುದನ್ನು ಮರೆಯದಿರಿ.
ಮೇಲೆ ಉದಾಹರಿಸಿದ ವಿಶಿಷ್ಟ ಸಮಸ್ಯೆಗಳಿಗೆ ವಿಶಿಷ್ಟ ತಂತ್ರಾಂಶಗಳನ್ನು ಬಳಸಬೇಕಾಗುತ್ತದೆ. ರಿಸೈಕಲ್ ಬಿನ್ ಖಾಲಿ ಮಾಡಲು ಸಿಕ್ಲೀನರ್ ಎಂಬ ಪುಟ್ಟ ತಂತ್ರಾಂಶವನ್ನು ಬಳಸಬೇಕು. ಫ್ಲಾಪಿ ಡಿಸ್ಕ್‌ಗೆ ಹಾರಲು ಕಾಯುತ್ತಿರುವ ವೈರಸಿನ ನಿರ್ನಾಮ ಮಾಡಲು ಮಒದಲು ಈ ವೈರಸ್ ಯಾವುದು ಎಂದು ತಿಳಿದುಕೊಂಡು ಅದಕ್ಕೆ ತಕ್ಕ ಅಸ್ತ್ರ ಬಳಸಬೇಕು. ಮೊಝಿಲ್ಲಾ ಬ್ರೌಸರನ್ನು ತಡೆಯುವ ವೈರಸನ್ನು ಕೀಳಲು ಗಣಕದ ರಿಜಿಸ್ಟ್ರಿಯಲ್ಲಿ (ಇದನ್ನು ಕೊಂಚ ಗಣಕ ಗೊತ್ತಿದ್ದವರಿಂದಲೇ ಮಾಡಿಸಬೇಕು ಎಂಬ ಎಚ್ಚರಿಕೆ ಇರಲಿ) ಕೆಲವು ತಿದ್ದುಪಡಿಗಳನ್ನು ಮಾಡಬೇಕಲ್ಲದೆ, ಸಿ ಡ್ರೈವ್‌ನಲ್ಲಿ ಸ್ವಯಂ ರೂಪುಗೊಂಡಿರುವ ಒಂದು ಫೋಲ್ಡರನ್ನು ಕಿತ್ತುಹಾಕಬೇಕು. ಟಾಸ್ಕ್ ಮ್ಯಾನೇಜರನ್ನು ಮತ್ತೆ ಸಕ್ರಿಯಗೊಳಿಸಲು ರಿಸ್ಟ್ರಿಕ್ಷನ್ ರಿಕವರಿ ಸಾಫ್ಟ್‌ವೇರ್ ಎಂಬ ತಂತ್ರಾಂಶವನ್ನು ಸ್ಥಾಪಿಸಿ ಗಣಕವನ್ನು ಸರಿಮಾಡಬೇಕು. ಇಷ್ಟೆಲ್ಲ ಹೇಳಿದ್ದರ ಅರ್ಥ ಇಷ್ಟೆ: ಕೇವಲ ಒಂದು ವೈರಸ್ ನಾಶಕ ತಂತ್ರಾಂಶ ಇದೆ ಎಂದ ಮಾತ್ರಕ್ಕೆ ಎಲ್ಲವೂ ಸರಿಯಾಗಿರುತ್ತದೆ ಎಂಬ ಭ್ರಮೆ ಬೇಡ.
ಇಂಟರ್‌ನೆಟ್ ಬಳಸುವಾಗ ಅನುಮಾನಾಸ್ಪದ ಕಡತಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಡಿ. ಉದಾಹರಣೆಗೆ ೩೦ ೪೦ ೭೦ ಕಿಲೋಬೈಟ್ ಗಾತ್ರದ ಕಡತಗಳು ಸಾಮಾನ್ಯವಾಗಿ ವೈರಸ್ ಆಗಿರುತ್ತವೆ. ಅವುಗಳನ್ನು ಡೌನ್‌ಲೋಡ್ ಮಾಡಿದ ಮೇಲೆ ವೈರಸ್‌ನಾಶಕ ತಂತ್ರಾಂಶಗಳಿಂದ ತಪಾಸಣೆ ಮಾಡಿಯೇ ಬಳಸಿ. ಅದಕ್ಕಿಂತ ಮುಖ್ಯವಾಗಿ ಇವು .exe ಎಂದು ಕೊನೆಗೊಂಡಿದ್ದರೆ ನಿಸ್ಸಂಶಯವಾಗಿ ಅದು ವೈರಸ್ ಎಂಬ ತೀರ್ಮಾನಕ್ಕೆ ಬರಬಹುದು. ಅಥವಾ ಈ ಕಡತಗಳು ವಿನ್‌ಝಿಪ್ ಫಾರ್ಮಾಟಿನಲ್ಲಿ (ಕಡತಗಳನ್ನು ಕಂಪ್ರೆಸ್ ಮಾಡುವ ತಂತ್ರಾಂಶ) ಬಂದರೆ ಖಂಡಿತ ವಿನ್‌ಝಿಪ್ ಮೂಲಕ ಅದರ ಒಳಗೆ ಇರುವ ಕಡತಗಳನ್ನು ಒಮ್ಮೆ
ಪರಿಶೀಲಿಸಿ.
ಒಡೆತನದ / ಪ್ರೊಪ್ರೈಟರಿ ತಂತ್ರಾಂಶಗಳ ಕೀಲಿಗಳನ್ನು, ರಿಜಿಸ್ಟ್ರೇಶನ್ ಸಂಖ್ಯೆಗಳನ್ನು ಕದಿಯುವ ತರಾತುರಿಯಲ್ಲಿ (ಕಂಪ್ಯೂಟರನ್ನು ಕೊಂಚ ಕಲಿತವರು ಈ ಜಾಣತನವನ್ನು ಹೊಂದಿರುತ್ತಾರೆ), ಹುಸಿ ಕಡತಗಳನ್ನು ಡೌನ್‌ಲೋಡ್ ಮಾಡಿಕೊಂಡು ಫಜೀತಿಗೆ ಬೀಳಬೇಡಿ.
ಪ್ರತಿದಿನವೂ ವೈರಸ್ ನಾಶಕ ತಂತ್ರಾಂಶವನ್ನು ಇಂಟರ್‌ನೆಟ್ ಮೂಲಕ ಅಪ್‌ಡೇಟ್ ಮಾಡಿಕೊಳ್ಳಿ. ಕಾಲಕಾಲಕ್ಕೆ ಈ ತಂತ್ರಾಂಶಗಳ ಹೊಸ ಪೀಳಿಗೆಯ ಕಡತಗಳು (ನ್ಯೂ ವರ್ಶನ್) ಬಿಡುಗಡೆಯಾದರೆ ಅವುಗಳನ್ನು ಸ್ಥಾಪಿಸಿಕೊಳ್ಳಲು ಮರೆಯಬೇಡಿ.
ಪ್ರತಿದಿನ ಗಣಕವನ್ನು ಆನ್ ಮಾಡಿದ ಮೇಲೆ ಅದರ ಫ್ಲಾಪಿ ಡಿಸ್ಕ್‌ನ್ನು ಗಮನಿಸಿ; ಅಲ್ಲಿ ನಿಮಿಷಕ್ಕೊಮ್ಮೆ ರೀಡ್ ಆಗುತ್ತಿದೆಯೆ ಎಂಬುದನ್ನು ಗಮನಿಸಿ; ಇಂಥ ವೈರಸ್‌ಗಳು ಕೊನೆಗೆ ತೀರಾ ಕಿರಿಕಿರಿ ಉಂಟುಮಾಡುತ್ತವೆ. ಹಾಗೆಯೇ ಗಣಕವನ್ನು ಆರಂಭಿಸಿದ ಮೇಲೆ ಅಕಸ್ಮಾತ್ ಕೆಲವು ವಿಚಿತ್ರ ಸಂದೇಶಗಳು ಬಂದರೆ ಅವುಗಳನ್ನೂ ದಾಖಲಿಸಿಕೊಳ್ಳಿ. ಸಮಸ್ಯೆಗಳನ್ನು ವಿವರಿಸಲು ಇದು ತುಂಬಾ ಉಪಯುಕ್ತ,
ಗಣಕದಲ್ಲಿ ಮೇಲೆ ಹೇಳಿದ ಯಾವುದೇ ವಿಚಿತ್ರ ಸಮಸ್ಯೆ ಬಂದಾಗಲೂ, ಗಣಕದಲ್ಲಿ ಮೂಡುವ ಸಂದೇಶ ಯಾವುದು ಎಂದು ಬರೆದಿಟ್ಟುಕೊಳ್ಳಿ. ಆಮೇಲೆ ಗೂಗಲ್ ಜಾಲತಾಣದಲ್ಲಿ ಇದೇ ಪದಗುಚ್ಛವನ್ನು ಹಾಕಿ ಕೊನೆಯಲ್ಲಿ ಡಿemovಚಿಟ ಎಂಬ ಪದವನ್ನು ಜೋಡಿಸಿ ಸರ್ಚ್ ಮಾಡಿ. ಸಾಮಾನ್ಯವಾಗಿ ಇಂಥ ಸಮಸ್ಯೆಗಳನ್ನು ಈ ಹಿಂದೆ ಎದುರಿಸಿದವರು ಈ ಬಗ್ಗೆ ಎಲ್ಲೋ ಚರ್ಚೆ ಮಾಡಿ ಅದಕ್ಕೆ ಕೆಲವು ಉದಾರಿ ಮಹಾಶಯರು ಉತ್ತರ, ಪರಿಹಾರ ನೀಡಿರುತ್ತಾರೆ. ಇದು ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಇರುವ ಅತ್ಯುತ್ತಮ ಪರಿಹಾರ.
ಇಂಥ ತಂತ್ರಾಂಶಗಳನ್ನು ಒಂದು ನಿರ್ದಿಷ್ಟ ಫೋಲ್ಡರಿನಲ್ಲಿ ಉಳಿಸಿಕೊಳ್ಳಿ. ನಿಮ್ಮ ಸ್ನೇಹಿತರಿಗೆ ಇಂತದ್ದೇ ಸಮಸ್ಯೆ ಬಂದಾಗ ಅವರಿಗೆ ಇದನ್ನು ಕೊಡಬಹುದು.
ಹೊರಗಿನಿಂದ ತಂದ ಯಾವುದೇ ಫ್ಲಾಪಿ, ಕಾಂಪಾಕ್ಟ್ ಡಿಸ್ಕ್ (ಸಿಡಿ) ಅಥವಾ ಕಡತಗಳುಳ್ಳು ಡಿವಿಡಿಯನ್ನು ವೈರಸ್‌ನಾಶಕ ತಂತ್ರಾಂಶದಿಂದ ತಪಾಸಣೆ ಮಾಡಿಯೇ ಬಳಸಿ.
ವೈರಸ್
ಗಳು ನಿಮ್ಮ ಗಣಕದಲ್ಲಿ ಇದ್ದಷ್ಟೂ ಸಮಸ್ಯೆಗಳು ಹೆಚ್ಚು. ಅದರಿಂದ ನಿಮ್ಮ ಗಣಕದ ವೇಗ ತಗ್ಗುತ್ತದೆ. ನಿಮಗೆ ಬೇರಾವುದೇ ಕೆಲಸ ಮಾಡಲೂ ಆಗುವುದಿಲ್ಲ. ನಿಮ್ಮಿಂದ ನಿಮ್ಮ ಸುತ್ತಮುತ್ತಲ ಕಂಪ್ಯೂಟರುಗಳಿಗೂ ಅದು ಹಬ್ಬುತ್ತದೆ.
ಮನೆಗಳಲ್ಲಿ, ಕಚೇರಿಗಳಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಇಂಥ ವಿಷಯಗಳ ಕುರಿತು ಬಂದಿರುವ ಬೇರೆ ಬೇರೆ ಲೇಖನಗಳನ್ನು ಓದುವುದೂ ಒಂದು ಒಳ್ಳೆಯ ಅಭ್ಯಾಸ.
ನೆನಪಿಡಿ: ವೈರಸ್‌ಗಳು ನಿಮ್ಮ ಅನುಮತಿಯನ್ನು ಪಡೆದೇ, ಎಲ್ಲೋ ಒಂದು ಸಲ ನಿಮ್ಮಿಂದ ಮೌಸ್‌ನಲ್ಲಿ ಕ್ಲಿಕ್ ಎನ್ನಿಸಿಕೊಂಡೇ ಗಣಕದ ಒಳಕ್ಕೆ ಬರುತ್ತವೆಯೇ ವಿನಃ, ಸಾಮಾನ್ಯವಾಗಿ ತನ್ನಿಂತಾನೇ ಬಂದು ಸ್ಥಾಪಿತವಾಗುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆದ್ದರಿಂದ ನಿಮ್ಮ ಗಣಕದಲ್ಲಿ ಇರುವ ವೈರಸ್‌ಗೆ ನೀವೇ ಕಾರಣೀಭೂತರು! ಗೊತ್ತಿಲ್ಲದ ಕಡತವು (ಇಂಟರ್‌ನೆಟ್‌ನ ವೆಬ್‌ಸೈಟ್ ಮೂಲಕವೋ, ಅಥವಾ ಹೊರಗಣ ಫ್ಲಾಪಿ/ಸಿಡಿಯಿಂದಲೋ) ಬಂದು ಓಕೆ ಎಂಬ ಕಿಟಕಿಯನ್ನು ನಿಮ್ಮ ಮುಂದಿಟ್ಟಾಗ ಅದನ್ನು ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಿದರೆ ಸಾಕಷ್ಟು ವೈರಸ್‌ಗಳು ತಲೆತಗ್ಗಿಸಿಕೊಂಡು ಹೋಗುತ್ತವೆ.