Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
ಕಲಿ ಯುಗ

ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 26, 2008Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ನಮ್ಮಲ್ಲಿ ಡೆಸ್ಕ್‌ಟಾಪ್ ಪಬ್ಲಿಶಿಂಗ್ (ಡಿಟಿಪಿ) ಬಂದು ಸುಮಾರು ಇಪ್ಪತ್ತು ವರ್ಷಗಳಾದವು. ಆಗಿನಿಂದಲೂ ಪುಸ್ತಕಗಳ ಪುಟವಿನ್ಯಾಸ ಮಾಡಲು ಪೇಜ್‌ಮೇಕರ್ ಎಂಬ ತಂತ್ರಾಂಶವನ್ನು ಬಳಸುತ್ತಲೇ ಇದ್ದೇವೆ. ಇದರೊಂದಿಗೇ ಇನ್ನಷ್ಟು ತಂತ್ರಾಂಶಗಳನ್ನೂ ನಾವು ಬಳಸಿಕೊಳ್ಳಬಹುದು. ನನ್ನ ಅನುಭವದಲ್ಲಿ ಕಂಡ ಕೆಲವು ತಂತ್ರಾಂಶಗಳನ್ನು ಇಲ್ಲಿ ನಮೂದಿಸುತ್ತಿದ್ದೇನೆ. ಪೇಜ್‌ಮೇಕರ್ ಬಿಟ್ಟರೆ ಉಳಿದೆಲ್ಲವೂ ಹೆಚ್ಚು ಬಳಕೆಯಲ್ಲಿ ಇಲ್ಲ. ದಿನಪತ್ರಿಕೆಗಳು ಸಾಮಾನ್ಯವಾಗಿ ಕ್ವಾರ್ಕ್ ಎಕ್ಸ್‌ಪ್ರೆಸ್ ಮತ್ತು ಅಡೋಬ್ ಇನ್‌ಡಿಸೈನ್ ತಂತ್ರಾಂಶವನ್ನು ಹೆಚ್ಚಾಗಿ ಬಳಸುತ್ತವೆ.

ಪೇಜ್‌ಮೇಕರ್
ಅಡೋಬ್ ಸಂಸ್ಥೆಯ ಈ  ತಂತ್ರಾಂಶವು ಈಗ ಕರ್ನಾಟಕದಲ್ಲಿ ಬಹುವಾಗಿ ಬಳಕೆಯಾಗುತ್ತಿರುವ ಪೇಜಿನೇಟಿಂಗ್ ತಂತ್ರಾಶ. ಈ ತಂತ್ರಾಂಶದ ಜೊತೆಗೇ ಅಡೋಬ್ ಟೇಬಲ್ ತಂತ್ರಾಂಶವೂ ಸ್ಥಾಪಿತವಾಗಿರುತ್ತದೆ.
ಪೇಜ್‌ಮೇಕರ್‌ನ ಹಲವು ಅನುಕೂಲಗಳು ಹೀಗಿವೆ:
ಇಲ್ಲಿ ಒಂದು ಪುಟದಲ್ಲಿ ಯಾವುದೇ ನಕ್ಷೆಯನ್ನು ನೀವು ಕೈಯಿಂದಲೇ (ಮೌಸ್ ಬಳಸಿ) ಬಿಡಿಸಬೇಕು. ಗೆರೆ, ಚೌಕಗಳು, ಆಯತಾಕಾರಗಳು, ವೃತ್ತಗಳು, ಎಲ್ಲವನ್ನೂ ಬರೆಯುವುದಕ್ಕೆ ಬೇಕಾದ ಟೂಲ್ ಬಾಕ್ಸ್‌ನ್ನು ನೀವು ಬಳಸಬಹುದು.
ಯಾವುದೇ ಚಿತ್ರಕ್ಕೆ ಒಳಗೆ ಅಥವಾ ಅದರ ಚೌಕಟ್ಟಿಗೆ ವಿವಿಧ ಬಣ್ಣಗಳನ್ನು ಹಾಕಬಹುದು.
ವಿವಿಧ ಚಿತ್ರಗಳು  ಅಲುಗಾಡದಂತೆ, ಪರಸ್ಪರ ಹೊಂದಿಕೊಂಡಿರುವಂತೆ ಮಾಡಲು ಗ್ರೂಪ್ ಮಾಡುವ ಸೌಲಭ್ಯವಿದೆ.
ಕಂಪ್ಯೂಟರಿನಲ್ಲಿ ಉಳಿಸಿಕೊಂಡ ಯಾವುದೇ ಛಾಯಾಚಿತ್ರವನ್ನು, ಕ್ಲಿಪ್ ಆರ್ಟ್‌ನ್ನು  ನೀವು ಪೇಜ್‌ಮೇಕರ್ ಫೈಲಿನಲ್ಲಿ ಪ್ಲೇಸ್ ಆಯ್ಕೆಯ ಮೂಲಕ ತಂದು ಹಾಕಬಹುದು. ಅವುಗಳ ಗಾತ್ರವನ್ನು ಹೆಚ್ಚು ಕಡಿಮೆ ಮಾಡಬಹುದು.
ಒಂದು ಪುಟದಲ್ಲಿ ಹಾಕಿದ ಯಾವುದೇ ಚಿತ್ರವನ್ನು ಇನ್ನೊಂದು ಪುಟಕ್ಕೆ ಸಾಗಿಸುವಾಗ ಅದನ್ನು ಪುಟದ ಬದಿಯಲ್ಲಿ ಇರಿಸಿಕೊಳ್ಳುವ ಸಾಧ್ಯತೆ ಪೇಜ್‌ಮೇಕರಿನಲ್ಲಿದೆ. ಆದರೆ ಈ ಸೌಲಭ್ಯವು ವರ್ಡ್‌ನಲ್ಲಿ ಇಲ್ಲ. ಇದು ಈ ಎರಡೂ ತಂತ್ರಾಂಶಗಳ ನಡುವೆ ಇರುವಪ್ರಮುಖವಾದ ವ್ಯತ್ಯಾಸ.
ಇಲ್ಲಿ ಪುಟಗಳು ಒಂದರ ಪಕ್ಕ ಒಂದರಂತೆ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಪ್ರತಿಯೊಂದು ಪುಟವೂ ಪ್ರತ್ಯೇಕವಾಗಿ ಕಾಣಿಸುತ್ತದೆ. ವರ್ಡ್‌ನಲ್ಲಿ ಎಲ್ಲಾ ಪುಟಗಳೂ ಒಂದರ ಕೆಳಗೆ ಒಂದರಂತೆ ಜೋಡಣೆಯಾಗಿರುತ್ತವೆ.
ಪೇಜ್‌ಮೇಕರಿನಲ್ಲಿ ಒಂದು ಪ್ಯಾರಾ ಅಥವಾ ಹಲವು ಪ್ಯಾರಾಗಳನ್ನು ಒಂದು ಫ್ರೇಮ್ ರೂಪದಲ್ಲಿ ಉಳಿಸಿಕೊಂಡು ಅವುಗಳನ್ನು ಎಲ್ಲಿದ ಎಲ್ಲಿಗೆ ಬೇಕಾದರೂ ಸ್ಥಳಾಂತರಿಸಬಹುದು. ಆದರೆ ವರ್ಡ್‌ನಲ್ಲಿ ಈ ಸಾಧ್ಯತೆ ಇಲ್ಲ. ನೀವು ಪಠ್ಯವನ್ನೇ ಸೆಲೆಕ್ಟ್ ಮಾಡಿಕೊಂಡು ಕಟ್ ಮಾಡಿ ಬೇಕಾದ ಸ್ಥಳದಲ್ಲಿ ಪೇಸ್ಟ್ ಮಾಡಬೇಕಷ್ಟೆ.
ಕ್ವಾರ್ಕ್ ಎಕ್ಸ್‌ಪ್ರೆಸ್
ಈ ತಂತ್ರಾಂಶವು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೆ ಪೇಜಿನೇಶನ್ / ಪುಟ ವಿನ್ಯಾಸ ಮಾಡಲು ತುಂಬಾ ಅನುಕೂಲಗಳಿರುವ ತಂತ್ರಾಂಶವಿದು. ಪೇಜ್‌ಮೇಕರ್‌ನಂತೆಯೇ ಕಾಣುವ ಈ ತಂತ್ರಾಂಶದಲ್ಲಿ ಪೇಜ್‌ಮೇಕರ್‌ಗಿಂತ ಹೆಚ್ಚಿನ ಅನುಕೂಲಗಳು ಇವೆ. ಉದಾಹರಣೆಗೆ ಆಟೋ ಸೇವ್ ಅನುಕೂಲ. ಅಂದರೆ ನೀವು ಅಕ್ಷರ ವಿನ್ಯಾಸ ಮಾಡುತ್ತಿದ್ದಂತೆ ಅದು ಸ್ವಯಂ ಚಾಲಿತವಾಗಿ ನಿಮ್ಮ ಫೈಲನ್ನು ಸೇವ್ ಮಾಡಿಕೊಳ್ಳುತ್ತದೆ.
ಅಲ್ಲದೆ ನೀವು ನಿಮ್ಮ ಫೈಲಿನ ಬ್ಯಾಕಪ್ ಪ್ರತಿಯನ್ನೂ ಸ್ವಯಂಚಾಲಿತವಾಗಿ ಮಾಡಿಟ್ಟುಕೊಳ್ಳಬಹುದು.
ಇದಲ್ಲದೆ ಈ ತಂತ್ರಾಂಶದಲ್ಲಿ ಒಂದು ಪಠ್ಯವನ್ನು  ಬೇಕಾದ ಸಂಖ್ಯೆಯ ಕಾಲಂಗಳಿಗೆ  ಹಾಳೆಯ ಮೇಲೆ ಮೂಡಿಸಬಹುದು. ನೀವು ಹೇಗೆ ಎಳೆದರೂ ಅದು ನೀವು ಸೂಚಿಸಿದ ಕಾಲಂಗಳಲ್ಲೇ ಬದಲಾಗುತ್ತದೆಯೇ ಹೊರತು  ಬೇರಾವ ಸಂಖ್ಯೆಯ ಕಾಲಂಗಳಿಗೂ ಬದಲಾಗುವುದಿಲ್ಲ. ಈ ಅನುಕೂಲವು ಪೇಜ್‌ಮೇಕರಿನಲ್ಲಿ ಇಲ್ಲ. ಅಲ್ಲಿ ನೀವು ಸ್ವತಃ ಕಾಲಂಗಳಲ್ಲಿ ಪಠ್ಯವನ್ನು ಹಾಕಬೇಕು. ಪೇಜ್‌ಮೇಕರಿನಲ್ಲಿ ಅಳತೆಯನ್ನು ಬದಲಾಯಿಸುವುದೂ ನಿಮ್ಮಿಂದಲೇ ಆಗಬೇಕು.
ಅಡೋಬ್ ಇನ್ ಡಿಸೈನ್
ಅಡೋಬ್ ಸಂಸ್ಥೆಯದೇ ಆದ ಈ ಇನ್ನೊಂದು ತಂತ್ರಾಂಶವು ಮೂಲತಃ ಹೆಚ್ಚು ಚಿತ್ರಗಳಿರುವ ದಾಖಲೆಗಳನ್ನು ರೂಪಿಸಲು ಬಳಕೆಯಾಗುತ್ತದೆ.
ಇದು ಮತ್ತು ಕೆಳಗೆ ಪಟ್ಟಿ ಮಾಡಿದ ಕೋರೆಲ್‌ಡ್ರಾ ತಂತ್ರಾಂಶಗಳ ವಿಶೇಷ ಎಂದರೆ ಇವುಗಳನ್ನು ಪಠ್ಯ ಹಾಗೂ ಚಿತ್ರಗಳನ್ನು ಬೇಕಾದ ಹಾಗೆ ಬದಲಿ ಹಾಕಲು ಬಳಸಬಹುದು.
ಪೇಜ್‌ಮೇಕರ್ ಅಥವಾ ಕ್ವಾರ್ಕ್‌ನಲ್ಲಿ  ಚಿತ್ರಗಳನ್ನು ನಿಮಗೆ ಬೇಕಾದ ಹಾಗೆ ಬದಲಿಸಲು, ಜೋಡಿಸಲು, ತಿದ್ದಲು ಅವಕಾಶಗಳು ತುಂಬಾ  ಸೀಮಿತ ಎಂಬುದನ್ನು ನೀವು ಮರೆಯಬಾರದು.
ಕೋರೆಲ್ ಡ್ರಾ
ಕೋರೆಲ್ ಡ್ರಾವನ್ನು  ವೆಕ್ಟರ್ ಬೇಸ್ಡ್ ತಂತ್ರಾಂಶ ಎಂದು ಕರೆಯುತ್ತಾರೆ. ವೆಕ್ಟರ್ ಎಂದರೆ ದಿಕ್ಸೂಚಿ. ಒಂದು ಉದಾಹರಣೆಯೊಂದಿಗೆ ಈ ಬಗ್ಗೆ ವಿವರಣೆ ನೀಡಿದರೆ ಚೆನ್ನಾಗಿ ಅರ್ಥವಾಗುತ್ತದೆ.
ಕೋರೆಲ್ ಡ್ರಾದಲ್ಲಿ ಒಂದು ಅಕ್ಷರವನ್ನು  ಟೈಪ್ ಮಾಡಲಾಗಿದೆ ಎಂದುಕೊಳ್ಳೋಣ. ಈ ಅಕ್ಷರವನ್ನು ದೊಡ್ಡದು ಮಾಡಬೇಕು ಎಂದಾದರೆ ಸಾಮಾನ್ಯ ತಂತ್ರಾಂಶಗಳಲ್ಲಿ ಅದನ್ನು ಆಯ್ಕೆ ಮಾಡಿಕೊಂಡು ಗಾತ್ರವನ್ನು ಹಿಗ್ಗಿಸುವ ಆಯ್ಕೆಯನ್ನು ತೆರೆದು ಬೇಕಾದ ಗಾತ್ರವನ್ನು ನಮೂದಿಸಬೇಕು. ಆದರೆ ಕೋರೆಲ್ ಡ್ರಾದಲ್ಲಿ ಇದೆಲ್ಲ ತೀರಾ ಸುಲಭ. ಬಾಣದ ಗುರುತಿನ ಸಾಧನವನ್ನು ಆಯ್ಕೆ ಮಾಡಿಕೊಂಡು ಅಕ್ಷರವನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಆಗ ಅಕ್ಷರದ ನಾಲ್ಕೂ ತುದಿಗಳು ಕಾಣಿಸುತ್ತವೆ. ಇವುಗಳಲ್ಲಿ ಯಾವುದಾದರೂ ಒಂದು ತುದಿಯನ್ನು ಹಿಡಿದು ಎಳೆದರೆ ಅಕ್ಷರವು ಹಿಗ್ಗುತ್ತದೆ. ಅದು ಸಮ ಪ್ರಮಾಣದಲ್ಲಿ ಹಿಗ್ಗಬೇಕು ಎಂದಾದರೆ ಶಿಫ್ಟ್ ಕೀಲಿಯನ್ನು ಎಡಗೈಯಿಂದ ಹಿಡಿದುಕೊಂಡಿದ್ದರೆ ಸಾಕು.
ಕೋರೆಲ್ ಡ್ರಾದಲ್ಲಿ ಚಿತ್ರಗಳನ್ನು ಮತ್ತು ಪಠ್ಯಗಳನ್ನು ಒಟ್ಟೊಟ್ಟಿಗೆ ಜೋಡಿಸುವುದು ಸುಲಭ. ಆದ್ದರಿಂದ ಜಾಹೀರಾತು ಸಂಸ್ಥೆಗಳಲ್ಲಿ, ವಿವಿಧ  ಬಗೆಯ ಚಿತ್ರ – ಪಠ್ಯ ಹೊಂದಿರುವ  ಜಾಹೀರಾತುಗಳನ್ನು ರೂಪಿಸಲು ಕೋರೆಲ್‌ಡ್ರಾವನ್ನೇ ಹೆಚ್ಚಾಗಿ ಬಳಸುತ್ತಾರೆ.
ಕೋರೆಲ್ ವೆಂಚುರಾ
ಇದು ಅಡೋಬ್ ಸಂಸ್ಥೆಯ ಇನ್ ಡಿಸೈನ್ ತಂತ್ರಾಂಶವನ್ನು ಹೋಲುವ ಪಠ್ಯವೇ ಮುಖ್ಯವಾಗಿರುವ ತಂತ್ರಾಂಶ. ಆದರೆ ಇತ್ತೀಚೆಗೆ ಈ ತಂತ್ರಾಂಶವು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ.
ಇದು ಕೇವಲ ಒಂದು ದಿಕ್ಸೂಚಿ ಬರಹ. ನೀವು ಒಮ್ಮೆ ಈ ತಂತ್ರಾಂಶಗಳನ್ನು ಬಳಸಿದರೆ ಇವುಗಳ ಹತ್ತು ಹಲವು ವಿಶೇಷಗಳು ತಿಳಿಯುತ್ತವೆ. ಒಮ್ಮೆ ಬಳಸಿ ನೋಡಿ.
ಇವೆಲ್ಲ ಯಜಮಾನಿಕೆ ತಂತ್ರಾಂಶಗಳು. ಒಂದೋ ಇವನ್ನೆಲ್ಲ ಕದಿಯಬೇಕು. ಅಥವಾ ಇದಕ್ಕಾಗಿ ಹಣ ಕಕ್ಕಬೇಕು. ಇವಲ್ಲದೆ ವಿಂಡೋಸ್ ಆಪರೇಟಿಂಗ್ ತಂತ್ರಾಂಶದ ಮೇಲೆ ಕೆಲಸ ಮಾಡುವ ಮುಕ್ತ ತಂತ್ರಾಂಶಗಳೂ ಇವೆ. ಪೇಜ್‌ಮೇಕರ್ ಬದಲಿಗೆ ಸ್ಕ್ರೈಬಸ್ ಇದೆ. ಕೋರೆಲ್‌ಡ್ರಾ ಬದಲಿಗೆ ಇಂಕ್‌ಸ್ಕೇಪ್ ಇದೆ.
ಚಿತ್ರಗಳನ್ನು ಸಂಪಾದಿಸಲು ಫೋಟೋಶಾಪ್ ಎಂಬ ಅತಿಶ್ರೇಷ್ಠ ತಂತ್ರಾಂಶವಿದೆ. ಇದನ್ನು ಪಡೆಯಲಾಗದಿದ್ದರೆ ನೀವು ಗಿಂಪ್ ಎಂಬ ತಂತ್ರಾಂಶವನ್ನು ಉಚಿತವಾಗಿ ಪಡೆಯಬಹುದು.
ಡೆಸ್ಕ್‌ಟಾಪ್ ತಂತ್ರಾಂಶಗಳನ್ನು ಬಳಸುವುದು ನಿಜಕ್ಕೂ ಒಂದು ತಮಾಶೆಯ ಮತ್ತು ಕುತೂಹಲದ ಕಲಿಕೆ.ನೀವು ಊಹಿಸಿಕೊಂಡ ಎಲ್ಲ ವಿನ್ಯಾಸಗಳನ್ನೂ ಇಲ್ಲಿ ಮಾಡುವ ಅವಕಾಶವಿದೆ.
ಬಾರ್ಬೀ ಗರ್ಲ್ ಹಾಡಿನಲ್ಲಿ ಹೇಳುವಂತೆ ನಿಮ್ಮದೇ ಇಮ್ಯಾಜಿನೇಶನ್!

Share. Facebook Twitter Pinterest LinkedIn Tumblr Email
Previous Articleರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
Next Article ಕದಿಯೋಣು ಬಾರಾ, ಕಲಿಯೋಣು ಬಾ !
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ಬ್ಯಾಲಾಳು ಮತ್ತು ಬಿಳಲು

December 1, 2008

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

Comments are closed.

ಕಲಿ ಯುಗ
  • Try these essential Desktop tools!
  • ಬ್ಯಾಲಾಳು ಮತ್ತು ಬಿಳಲು
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ವರ್ತಮಾನದ ಹೊಸ ವಾರ್ತೆಗಳು
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • Ayahuasca: Your future was known much ealrier!
  • New dimensions of the media
  • This journalist disrespects even the Supreme Court
  • Blogging and hanging
  • Your PC and the virus that you let in
  • Sunday Supplements and development of Literature
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • A slow Tsunami called civilization
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
  • The policy of my column
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.