ಡಿಜಿಟಲ್‌ ಜಾನಪದದ ಮೂಲಕ ಮುಕ್ತಜ್ಞಾನ ಸಂಗ್ರಹಕ್ಕೆ ಬಂದ ಪರಂಪರೆಯ ಜಾನಪದ ಸಂಗ್ರಹಗಳು!

ಅಂತೂ ಎರಡೂವರೆ ವರ್ಷಗಳ ಶ್ರಮ ಒಂದು ತಾರ್ಕಿಕ ಕೊನೆ ತಲುಪುತ್ತಿದೆ. ಇಂದು ಜಾನಪದ ಸಂಗ್ರಹಕಾರ, ನಮ್ಮ ನಾಡು ಕಂಡ ಮಹಾನ್‌ ಚೇತನ ಡಾ. ಎಲ್‌ ಆರ್‌ ಹೆಗಡೆಯವರ ಪುಣ್ಯತಿಥಿಯ ದಿನ (೧೫ ಸೆಪ್ಟೆಂಬರ್‌). ಅವರ ಆರು ಅಪ್ರಕಟಿತ ಜಾನಪದ ಸಂಗ್ರಹಗಳನ್ನು ಸೆ. ೧೯ ರಂದು ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸೌಧದದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ್ದಾರೆ. ಮಿತ್ರಮಾಧ್ಯಮ ಟ್ರಸ್ಟ್‌ ವತಿಯಿಂದ ಮುಕ್ತಜ್ಞಾನದ ಅಭಿಯಾನವಾಗಿ ನಡೆದ ಈ ಸಂಗ್ರಹಗಳ ಡಿಜಿಟಲ್‌ ಪ್ರತಿಗಳನ್ನು ಕರ್ನಾಟಕ ಸರ್ಕಾರದ ಕಣಜ ಜಾಲತಾಣ ಹಾಗೂ ಭಾರತ ಸರ್ಕಾರದ ಭಾರತವಾಣಿ ಜಾಲತಾಣದಲ್ಲಿ ಶೀಘ್ರವೇ ಪ್ರಕಟಿಸಲಾಗುವುದು. ಈಗ ಇಲ್ಲಿಯೂ ಸಾರ್ವಜನಿಕರಿಗಾಗಿ ಪುಸ್ತಕಗಳನ್ನು ನೀಡಲಾಗಿದೆ. ಈ ಸಂಗ್ರಹಗಳನ್ನು (ಹಾಗೂ…

"ಡಿಜಿಟಲ್‌ ಜಾನಪದದ ಮೂಲಕ ಮುಕ್ತಜ್ಞಾನ ಸಂಗ್ರಹಕ್ಕೆ ಬಂದ ಪರಂಪರೆಯ ಜಾನಪದ ಸಂಗ್ರಹಗಳು!"

ಕ್ಯಾಪ್ಸಿಕಂ ಮಸಾಲಾ: ಕಥಾ ಸಂಕಲನ [ಬೇಳೂರು ಸುದರ್ಶನ]

ನನ್ನ ಕಥೆಯ ಕಥೆ ನಾನು ಕಥೆಗಾರನಾಗಿದ್ದು ೧೯೮೨ರಲ್ಲಿ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದಾಗ ಕಾಲೇಜು ಕಥಾಸ್ಪರ್ಧೆಯಲ್ಲಿ ಡಿಗ್ರಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಥಮ ಬಹುಮಾನ ಪಡೆದ ಕಥೆ: ಪಲಾಯನ. ಎಲ್ಲ ನೆನಪುಗಳನ್ನೂ ಗಳಹಿದಂತೆ ಇದ್ದ ಈ ಕಥೆಯು `ಕನ್ನಡಪ್ರಭ`ದಲ್ಲಿ ೧೯೮೪ರ ಫೆಬ್ರುವರಿಯಲ್ಲಿ ಪ್ರಕಟವಾಯಿತು. ೨೦ ರೂ. ಸಂಭಾವನೆಯೂ ಮನಿಯಾರ್ಡರ್ ಮೂಲಕ ಬಂತು.

"ಕ್ಯಾಪ್ಸಿಕಂ ಮಸಾಲಾ: ಕಥಾ ಸಂಕಲನ [ಬೇಳೂರು ಸುದರ್ಶನ]"

ಹಿಮದೊಡಲ ತಳಮಳ: ೩೩ ವರ್ಷಗಳ ಚೀನೀ ಸೆರೆಮನೆವಾಸದ ಕಥನ ಉಚಿತವಾಗಿ ಓದಿ!

ತಳಮಳದ ಅರಿವಿನ ಹಿಂದೆ…. (ಅನುವಾದಕನ ಮಾತುಗಳು) ಒಂದು ದಿನ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಒಂದು ತುಂಡು ಹಾಳೆಯಲ್ಲಿ ಈ ಪುಸ್ತಕದ ವಿಮರ್ಶೆಯನ್ನು ಓದಿದೆ. ತುಂಬಾ ಪ್ರಯತ್ನಿಸಿ ಪುಸ್ತಕವನ್ನು ಖರೀದಿಸಿದೆ. ಓದಿದ ಮೇಲೆ ಇದನ್ನು ಕನ್ನಡಕ್ಕೆ ತರುವ ಮನಸ್ಸಾಯಿತು. ಆ ಕಾಲದಲ್ಲಿ ಈಮೈಲ್ ಶುರುವಾಗಿತ್ತಷ್ಟೆ. ನಾನು ಈ ಪುಸ್ತಕದ ಹಕ್ಕುಸ್ವಾಮ್ಯ ಹೊಂದಿರುವ ಪ್ರಕಾಶಕರನ್ನು ಸಂಪರ್ಕಿಸಿದೆ. ಎಂದಿನಂತೆ ಪಾಶ್ಚಾತ್ಯ ಪ್ರಕಾಶಕರ ಒರಟುತನ ಪ್ರಕಟವಾಯಿತು. ಕೊನೆಗೆ ಟಿಬೆಟನ್ ಸರ್ಕಾರದ ಬೆಂಗಳೂರು ಕಚೇರಿಯಲ್ಲಿ ಶೂಫೆಲ್ ತುಪ್ತೆನ್ ಎಂಬ ಅಧಿಕಾರಿಯ ಗೆಳೆತನ ಮಾಡಿ ಅವರ ಮೂಲಕ ಯತ್ನಗಳನ್ನು ಆರಂಭಿಸಿದೆ. ಅವರು ಲಂಡನ್ನಿನಲ್ಲಿರುವ ಟಿಬೆಟನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ನನಗೆ ಅನುವಾದದ ಮತ್ತು ಧಾರಾವಾಹಿ ಪ್ರಕಟಣೆಯ ಹಕ್ಕುಗಳನ್ನು ಅಧಿಕೃತವಾಗಿ ಕೊಡಿಸಿದರು. ಆ ಪತ್ರವು ಈಗಲೂ…

"ಹಿಮದೊಡಲ ತಳಮಳ: ೩೩ ವರ್ಷಗಳ ಚೀನೀ ಸೆರೆಮನೆವಾಸದ ಕಥನ ಉಚಿತವಾಗಿ ಓದಿ!"

`ಹುಲ್ಲಿನ ಸಾರು’: ಆನ್‌ಲೈನ್‌ನ ಮುಕ್ತ ಆವೃತ್ತಿ ಇಲ್ಲಿದೆ, ಓದಿ!

ಹುಲ್ಲಿನ ಸಾರನ್ನು ಎರಡನೇ ಸಲ ಕುಡಿಯುವ ಮುನ್ನ…. ೨೦೦೨ರಲ್ಲಿ ಅನುವಾದಿಸಿದ್ದ `ಹುಲ್ಲಿನ ಸಾರು’ ಪುಸ್ತಕವನ್ನು ಈಗ, ೧0 ವರ್ಷಗಳ ನಂತರ ನಿಮ್ಮೆದುರಿಗೆ ಇಡಲು ಸಂತೋಷ- ದುಃಖ ಎರಡೂ ಆಗುತ್ತಿದೆ. ಇಂಥದ್ದೊಂದು ಪುಸ್ತಕವನ್ನು ನಿಮಗೆ ಓದಲು ಉಚಿತವಾಗಿ ಕೊಡುವ ಸಂತೋಷ. ಆದರೆ ಈ ಪುಸ್ತಕದ ಮೂಲ ಲೇಖಕ ಇನ್ನಿಲ್ಲ ಎಂಬ ದುಃಖ.

"`ಹುಲ್ಲಿನ ಸಾರು’: ಆನ್‌ಲೈನ್‌ನ ಮುಕ್ತ ಆವೃತ್ತಿ ಇಲ್ಲಿದೆ, ಓದಿ!"

ದಶಕದ ಹಿಂದಿನ ಡಿಜಿಟಲ್ ಕಾವ್ಯ

ನಾನು ಎಂದೋ ಬರೆದ ಕವನಗಳಿವು. `ಗೂಗಲ್ ಎಂಬ ಸರ್ಚ್ ಇಂಜಿನ್ ಕವನ `ಭಾವನಾ’ದ ವಿಶೇಷಾಂಕದ ಪ್ರಕಟವಾಗಿತ್ತು. ಈ ಕವನ ಎಲ್ಲಿದೆ ಎಂದು ಆನ್‌ಲೈನ್‌ನಲ್ಲಿ ಯಾರೋ ಹುಡುಕುತ್ತಿದ್ದರು ಎಂದೂ ಇತ್ತೀಚೆಗೆ ಗಮನಿಸಿದೆ. ಇಂಟರ್‌ನೆಟ್ ಅದೇ ತಾನೆ ನಮ್ಮ ದೇಹವನ್ನೆಲ್ಲ ಆವರಿಸಿಕೊಳ್ಳುತ್ತಿದ್ದ ಸಮಯ. ಆಗ ಬರೆದ ಈ ಕವನಗಳನ್ನು ಈಗ ನೋಡಿದರೆ ತಮಾಷೆ ಎನಿಸುತ್ತದೆಯೇನೋ. ಹೊಸಬಗೆಯ ಕಾವ್ಯವನ್ನು ಕೆತ್ತಿಬಿಡಬೇಕೆಂಬ ಧಾವಂತವೂ ಅಲ್ಲಿತ್ತು.

"ದಶಕದ ಹಿಂದಿನ ಡಿಜಿಟಲ್ ಕಾವ್ಯ"

ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!

ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!

"ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!"