ತಪ್ಪು ಸುದ್ದಿಯಲ್ಲಿ ಸರ್ವೋಚ್ಚ ನ್ಯಾಯಾಲಯವೂ ಅಷ್ಟಕ್ಕಷ್ಟೆ !
ಕಳೆದ ವಾರ ರಾಜ್ಯದ ಪ್ರಮುಖ ಆಂಗ್ಲ ದಿನಪತ್ರಿಕೆಯಲ್ಲಿ ಒಂದು ಸುದ್ದಿ ಬಂದಿತ್ತು: ೨೦೦೭ರ ಫೆಬ್ರುವರಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ಒಂದು ತೀರ್ಪಿನಲ್ಲಿ ಅಪಘಾತದ ಗಾಯಾಳುಗಳಿಗೆ ಯಾವುದೇ ವಿಳಂಬವನ್ನೂ ಮಾಡದೆಯೇ, ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಳ್ಳದೆಯೇ ಚಿಕಿತ್ಸೆ ಡಬೇಕು ಎಂದು ನ್ಯಾಯಾಶರು ಹೇಳಿದ್ದಾರೆ. ಆದ್ದರಿಂದ ಇಂಥ ಸಂದರ್ಭದಲ್ಲಿ ಈ ತೀರ್ಪು ಉಪಯೋಗಕ್ಕ ಬರುತ್ತದೆ ಎಂದು ಬಳಕೆ ಪತ್ರಿಕೋದ್ಯಮದ (ಯುಟಿಲಿಟಿ ಜರ್ನಲಿಸಮ್) ಆ ಪತ್ರಕರ್ತೆ ಬರೆದಿದ್ದರು.
ಅರೆ, ಈ ಸುದ್ದಿ ಎಲ್ಲೋ ಮುಂಚೆಯೇ ನನಗೆ ಗೊತ್ತಿದೆ ಎಂದೆನಿಸಿ ನನ್ನ ಗೂಗಲ್ ಅಂಚೆಪೆಟ್ಟಿಗೆಯನ್ನು ಹುಡುಕಿದೆ. ಹೌದು!
ಎಷ್ಟೋ ತಿಂಗಳುಗಳ ಹಿಂದೆ ಒಬ್ಬರು ನನಗೆ ಈ ಅಂಚೆಯನ್ನು ಕಳಿಸಿದ್ದರು. ಆಗ ನಾನು ಈ ತೀರ್ಪಿನ ಪೂರ್ಣ ಪಾಠ ಸಿಗುತ್ತದೆಯೇ ಎಂದು ಹುಡುಕಿದ್ದೆ. ಆಗ ದೊರೆತ ತೀರ್ಪಿನ ಪಠ್ಯದಲ್ಲಿ ಅಪಘಾತ, ಗಾಯಾಳು, ಆಸ್ಪತ್ರೆ, ವೈದ್ಯರ ಕರ್ತವ್ಯ – ಇಂಥ ಯಾವ ಮಾತುಗಳೂ ಇರಲಿಲ್ಲ. ನಾನು ಸಹಜವಾಗಿಯೇ ಪತ್ರ ಬರೆದವರಿಗೆ ಈ ಮಾಹಿತಿ ನೀಡಿ ಅವರು ಇನ್ನಷ್ಟು ಪರಿಚಿತರಿಗೆ ಈ ಮಾಹಿತಿ ದಾಟಿಸದಂತೆ ತಡೆ ಹಿಡಿದಿದ್ದೆ.
ಸರಿ, ಈ ಪತ್ರಕರ್ತೆಗೂ ಈ ಮಾಹಿತಿ ಕೊಡೋಣ ಎಂದು ಪತ್ರ ಬರೆದೆ. ಸುದ್ದಿಯ ಕೊನೆಯಲ್ಲಿ ಆಕೆಯ ಈ ಮೈಲ್ ವಿಳಾಸವೂ ಇದ್ದಿದ್ದರಿಂದ ಸಮಸ್ಯೆ ಇರಲಿಲ್ಲ!
ಸಮಸ್ಯೆ ಶುರುವಾಗಿದ್ದು ಅಲ್ಲಿಂದ: ಪತ್ರಿಕೆಯಲ್ಲಿ ಬಂದ ಮಾಹಿತಿ ಸರಿಯಲ್ಲ, ಲಕ್ಷಾಂತರ ಓದುಗರಿಗೆ ವು ತಪ್ಪು ಮಾಹಿತಿ ಕೊಟ್ಟಿದ್ದೀರಿ, ದಯವಿಟ್ಟು ಈ ಕುರಿತು ಕೂಡಲೇ ತಿದ್ದುಪಡಿ ಪ್ರಕಟಿಸಿ ಎಂದು ಆಕೆಗೆ ವಿನಂತಿಸಿದೆ. ಜೊತೆಗೆ ಅವರು ಉಲ್ಲೇಖಿಸಿದ ತೀರ್ಪಿನ ಪ್ರತಿಯನ್ನೂ ಕಳಿಸಿದೆ.
ಆಕೆಯಿಂದ ಬಂದ ಉತ್ತರ ಹೀಗಿತ್ತು: ನೋಡಿ, ನೀವು ಹೇಳಿದ್ದು ಸರಿ, ಈ ತೀರ್ಪು ಬಂದಿದ್ದು ೨೦೦೭ರ ಫೆಬ್ರುವರಿಯಲ್ಲಲ್ಲ, ೯೦ರ ದಶಕದ ಮಧ್ಯಭಾಗದಲ್ಲಿ. ನನ್ನ ಹೋಮ್‌ವರ್ಕ್ ಸರಿಯಾಗಿದೆ. ಬೇಕಾದರೆ ನ
;&
#3264;ವು ಖಚಿತಪಡಿಸಿಕೊಳ್ಳಿ, ಗುಡ್‌ಲಕ್ ಎಂದಾಕೆ ಸುಂದರ ವಾಕ್ಯಗಳಲ್ಲಿ ಬರೆದಿದ್ದರು. ಆದರೆ ಅವರು ಈಗ ಹುಡುಕಿದ ಎರಡನೇ ತೀರ್ಪಿನ ಪ್ರತಿಯನ್ನೇನೂ ಅವರು ಕಳಿಸಿಕೊಡಲಿಲ್ಲ.
ಬೇಕಾದರೆ ಹುಡುಕಿಕೊಳ್ಳಿ ಎಂದು ಬರೆದದ್ದು ನನ್ನನ್ನು ಕೆಣಕಿತು. ನಾನು ಮತ್ತೆ ಹುಡುಕಿದೆ. ತೀರ್ಪಿನ ಪ್ರತಿ ಸಿಕ್ಕಿತು! ಆದರೆ ಅದು ೯೦ರ ದಶಕದ ಮಧ್ಯಭಾಗದ್ದಾಗಿರಲಿಲ್ಲ; ೧೯೮೯ರ ತೀರ್ಪಾಗಿತ್ತು. ಸರಿ, ಆಕೆಗೆ ಪತ್ರಿಸಿದೆ: ಮ್ಮ ಹಾರೈಕೆಯಂತೆ ನಾನು ಹುಡುಕಿದೆ. ಆದರೆ ಮ್ಮ ಎರಡನೆಯ ಸ್ಪಷ್ಟನೆಯೂ ತಪ್ಪಾಗಿದೆ. ತೀರ್ಪು ೯೦ರ ಮಧ್ಯಭಾಗದಲ್ಲಿರಲಿ, ೯೦ದ ಇಡೀ ದಶಕದಲ್ಲೇ ಬಂದಿಲ್ಲ; ಈ ಬಾರಿ ನಾನು ಈ ಸರಿಯಾದ ತೀರ್ಪಿನ ಪ್ರತಿಯನ್ನು ನಿಮಗೆ ಕಳಿಸುವುದಿಲ್ಲ; ಯಾಕೆಂದರೆ ತಪ್ಪು ಉಲ್ಲೇಖಿತ ತೀರ್ಪನ್ನು ನಿಮಗೆ ನಾನು ತಕ್ಷಣವೇ ಕಳಿಸಿದ್ದರೂ, ನಿಮಗೆ ಸಿಕ್ಕ ಮಾಹಿತಿಯನ್ನು ನನಗೆ ಕಳಿಸಿಕೊಡುವ ಸೌಜನ್ಯವನ್ನು ವು ತೋರಿಸಿಲ್ಲ. ದಯವಿಟ್ಟು ಈ ಬಗ್ಗೆ ಸ್ಪಷ್ಟನೆಯನ್ನು ಪತ್ರಿಕೆಯಲ್ಲಿ ನೀಡಿ.
ಆಕೆಯಿಂದ ಮತ್ತೆ ಉತ್ತರ : ಹೌದು. ನನಗೆ ಈ ತೀರ್ಪು ೧೯೮೯ರಲ್ಲಿ ಬಂದಿದೆ ಎಂದು ಗೊತ್ತಾಗಿದೆ. ನಿಜಕ್ಕೂ ಇದು ದೊಡ್ಡ ತಪ್ಪೇ. ಮಗೆ ಬೇಕಿದ್ದರೆ ವು ಸಂಪಾದಕೀಯ ವಿಭಾಗಕ್ಕೆ ದೂರು ಕೊಡಿ.
ನಾನು ಕೊನೆಯದಾಗಿ ಬರೆದೆ: ನೋಡಿ, ನೀವೇ ಮಾಡಿದ ತಪ್ಪಿಗೆ ನೀವೇ ತಿದ್ದುಪಡಿ ಹಾಕಬೇಕೆಂದು ಅಪೇಕ್ಷಿಸುವುದು ನನ್ನಂಥ ಕ್ಷುದ್ರ ಓದುಗರ ನಿರೀಕ್ಷೆ. ಈಗ ನಿಮಗೇ ತಿದ್ದುಪಡಿ ಹಾಕುವುದಕ್ಕೆ ಸಾಧ್ಯವಿಲ್ಲ ಎಂದಾದರೆ ನನ್ನಂಥ ಪಾಮರ ಓದುಗರ ಬೇಡಿಕೆಯನ್ನು ನಿಮ್ಮ ಪತ್ರಿಕೆ ಮನ್ನಿಸುತ್ತದೆ ಎಂದು ನನಗನ್ನಿಸುತ್ತಿಲ್ಲ. ಇಷ್ಟಕ್ಕೂ ತಿದ್ದುಪಡಿ ಹಾಕುವ, ಬಿಡುವ ನಿರ್ಧಾರವನ್ನು ನಿಮಗೆ, ನಿಮ್ಮ ಪತ್ರಿಕೆಯ ನಿಲುವಿಗೆ ಮತ್ತು ನಿಮ್ಮ ಆತ್ಮಸಾಕ್ಷಿಗೆ ಬಿಟ್ಟಿದ್ದೇನೆ.
ಅದರ ನಂತರ ಆಕೆಯಿಂದ ಯಾವುದೇ ಉತ್ತರ ಬಂದಿಲ್ಲ; ಪತ್ರಿಕೆಯಲ್ಲೂ ಈ ತಿದ್ದುಪಡಿ ಪ್ರಕಟವಾದ ಬಗ್ಗೆ ಕಂಡುಬಂದಿಲ್ಲ.
ಪತ್ರಿಕೆಗಳಲ್ಲಿ ತಪ್ಪು ಸುದ್ದಿ, ಮಾಹಿತಿ ಪ್ರಕಟವಾಗುವುದು ಸಹಜ. ಅದನ್&#
3240
;ು ತಿದ್ದಿಕೊಳ್ಳುವುದರಲ್ಲಿ ಯಾವುದೇ ಅವಮಾನವೂ ಇಲ್ಲ. ಯಾಕೆಂದರೆ ಒಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ಲಕ್ಷಾಂತರ ಜನ ಓದಿರುತ್ತಾರೆ. ಮುದ್ರಿತ ಮಾಹಿತಿಯೆಲ್ಲವೂ ನಿಜವೇ ಎಂಬ ಅಚಲ ಶ್ರದ್ಧೆ ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಕೂತಿದೆ. ಕೆಲವು ಪೀತ ಪತ್ರಿಕೋದ್ಯಮಿಗಳಿಂದಾಗಿ ಈ ಮಾತಿಗೆ ಕುಂದು ಬಂದಿದೆ, ನಿಜ. ಆದರೆ ಈ ಪತ್ರಿಕೆಗಳನ್ನು ಓದುವರೂ ಗಾಸಿಪ್ ಓದುಗರೇ; ಹೀಗಾಗಿ ಅವುಗಳಲ್ಲಿ ತಿದ್ದುಪಡಿ ಬರಬೇಕಾದ ಅಗತ್ಯವೂ ಹೆಚ್ಚಾಗಿ ಕಾಣಿಸುವುದಿಲ್ಲ. ಆದರೆ ದಿನಪತ್ರಿಕೆಗಳಲ್ಲಿ, ಮಾಹಿತಿಗಾಗಿ ಪ್ರಕಟವಾಗುವ ಸುದ್ದಿಗಳಲ್ಲಿ ಸರ್ವೋಚ್ಚ ನ್ಯಾಯಾಲಯವನ್ನೇ ತಪ್ಪಾಗಿ ಉಲ್ಲೇಖಿಸಿದ ಸುದ್ದಿಯ ಬಗ್ಗೆ ಯಾವುದೇ ತಿದ್ದುಪಡಿಯನ್ನು ಹಾಕುವುದಿಲ್ಲ ಎಂಬ ಈ ಪತ್ರಕರ್ತೆಯ ನಿಲುವು ನನಗೆ ಅರ್ಥವಾಗಲೇ ಇಲ್ಲ.
ಈ ಘಟನೆಯನ್ನು ನಾನು ಖಡಾಖಂಡಿತವಾಗಿ ಹಲವರಿಗೆ ವಿವರಿಸುತ್ತೇನೆ, ಮ್ಮ ಪತ್ರಿಕೆಯ ಮುಖ್ಯಸ್ಥರಿಗೂ ತಿಳಿಸುತ್ತೇನೆ ಎಂದು ಆಕೆಗೆ ನಯವಾಗಿ ಬೆದರಿಕೆ ಹಾಕಿದ್ದೆ. ಯಾಕೆಂದರೆ ನನ್ನ ಮಾಹಿತಿ ಖಚಿತವಾಗಿತ್ತು. ಅಲ್ಲದೆ ಆ ಪತ್ರಿಕೆಯನ್ನು ಲಕ್ಷಗಟ್ಟಳೆ ಜನ ಖರೀದಿಸುತ್ತಿದ್ದಾರೆ; ಬಂದಿರುವ ಸುದ್ದಿಯ ಮೂಲ ಸರ್ವೋಚ್ಚ ನ್ಯಾಯಾಲಯ ಎಂದು ಬರೆದಿದ್ದಂತೂ ದೊಡ್ಡ ಪ್ರಮಾದವೇ. ಯಾವುದೋ ಅಪಘಾತದ ಸಂದರ್ಭದಲ್ಲಿ ಯಾವುದೋ ಓದುಗ ಈ ತಪ್ಪುಮಾಹಿತಿಯನ್ನೇ ಉಲ್ಲೇಖಿಸಿಹೋಗಿ ಬೆಪ್ಪುತಕ್ಕಡಿಯಾಗುವುದಿಲ್ಲವೆ? – ಇವು ನನ್ನ ಬೆದರಿಕೆಯ ಹಿಂದಿನ ವಾದಗಳಾಗಿದ್ದವು.
ನಾನು, ನನ್ನ ಮಾಹಿತಿ, ನನ್ನ ನಿಲುವು ಎಂದು ಈ ಅಂಕಣದಲ್ಲಿ ಮತ್ತೆ ಬರೆದಿದ್ದಕ್ಕೆ ಮಸಿ; ಈ ಘಟನೆ ನನ್ನಿಂದಲೇ ನಡೆಸಲ್ಪಟ್ಟಿದ್ದರಿಂದ ಹೀಗೆ ಬರೆಯಬೇಕಾಯಿತು.
ಕೆಲವು ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದೆ. ಎಂಬತ್ತೈದರ ಹರೆಯದ ಅಡ್ಡೂರು ಶಿವಶಂಕರರಾಯರು ತಮ್ಮ ಮಗ ಕೃಷ್ಣನ (ಅಡ್ಡೂರು ಕೃಷ್ಣರಾವ್) ಮನೆಯಲ್ಲಿದ್ದರು. ದಿನಕ್ಕೆ ಹತ್ತು ತಾಸಿಗೆ ಕಡಿಮೆಯಿಲ್ಲದಂತೆ ಓದುವ ಅವರು ಯಾವುದೋ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಕ&a
mp;#
3274;ನೆಗೆ ಅವರೇ ಹೇಳಿದರು: ಪತ್ರಿಕೆಯಲ್ಲಿ ಬಂದಿದ್ದನ್ನು ಬರೆಯದೇ ಹೋದರೆ ಮರೆತುಹೋಗುತ್ತದೆ. ಸಂಜೆ ಕಚೇರಿಯಿಂದ ಬಂದ ಕೃಷ್ಣ ಹೇಳಿದರು: ಅವರು ಹೀಗೆ ಬರೆದ ಪತ್ರಿಕಾ ಟಿಪ್ಪಣಿಗಳೇ ೨೦೦ ನೋಟ್ ಪುಸ್ತಕಗಳನ್ನು ದಾಟಿವೆ!
ಯಾಕೆಂದರೆ ಅಡ್ಡೂರು ಶಿವಶಂಕರರಾಯರಿಗೆ ಮುದ್ರಿತ ಮಾತೆಲ್ಲವೂ ಸತ್ಯ, ಅಲ್ಲಿ ಇರುವ ಮಾಹಿತಿಗಳೆಲ್ಲವೂ ವಾಸ್ತವ ಎಂಬ ಭದ್ರ ನಂಬಿಕೆಯಿದೆ. ಈ ನಂಬಿಕೆಯನ್ನು ಅವರು ಬಾಲ್ಯದಿಂದಲೂ ಬೆಳೆಸಿಕೊಂಡಿದ್ದಾರೆ.
ಯಾವುದೋ ತಪ್ಪು ಮಾಹಿತಿಯನ್ನು ಕೊಟ್ಟು, ಯಾವುದೇ ಎಗ್ಗಿಲ್ಲದೆ ಜೀರ್ಣಿಸಿಕೊಳ್ಳುವ ಪತ್ರಕರ್ತರಿಗೆ ಈ ನಂಬಿಕೆಯ ಹಿಂದಿನ ಸಂಸ್ಕೃತಿಯಾಗಲೀ, ನಂಬಿಕೆ ತರುವ ಅಪಾಯವಾಗಲೀ ಅರ್ಥವಾಗುವುದಿಲ್ಲ. ಸದಾ ಕಲಿಯುವ ಅಡ್ಡೂರು ಕೃಷ್ಣರಾಯರೋ, ಅಥವಾ ನಾವೋ, ನೀವೋ, ಹೀಗೆ ತಪ್ಪು ಮಾಹಿತಿಯಿಂದ ದಿಕ್ಕೆಡುವುದು ಎಷ್ಟು ಸರಿ?
ಈ ಕಲಿ-ಯುಗದಲ್ಲಿ ಮುದ್ರಿತ ವಾಕ್ಕುಗಳೆಲ್ಲವನ್ನೂ ಸತ್ಯ ಎಂದು ನಂಬುವಂತಿಲ್ಲ; ವಾದಗಳ ಉಲ್ಲೇಖಗಳು ಖಚಿತ ಎಂದು ತಿಳಿಯುವಂತಿಲ್ಲ ಎಂಬುದೇ ಈ ಅನುಭವದ ಪಾಠ!