ನದಿಜೋಡಣೆ : ಒಂದು ಮೂರ್ಖ ಕನಸು
ನದಿಗಳನ್ನು ಜೋಡಿಸುವ ಮಹಾನ್ ಕೆಲಸದ ಬಗ್ಗೆ ನಮ್ಮ ರಾಜಕಾರಣಿಗಳಿಗೆ ಮತ್ತು ಹಲವು ಹಿರಿಯ ನಾಯಕರಿಗೆ ಎಲ್ಲಿಲ್ಲದ ಆಸಕ್ತಿ. ನಮ್ಮ ಹಿಂದಿನ ರಾಷ್ಟ್ರಪತಿ, ನಮ್ಮ ಹಿಂದಿನ ಪ್ರಧಾನಮಂತ್ರಿ, ನಮ್ಮ ಹಲವು ಯುವಪೀಳಿಗೆಯ ರಾಜಕಾರಣಿಗಳು, ಹಲವು ವಿಷಯತಜ್ಞರು, – ಎಲ್ಲರೂ ಭಾರತದ ನದಿಗಳನ್ನು ಜೋಡಿಸಿಬಿಡೋಣ ಎಂಬ ಹುಮ್ಮಸ್ಸಿನಲ್ಲೇ ಇದ್ದಾರೆ. ನಿಜ. ನಮ್ಮ ದೇಶದ ಹಲವು ಭಾಗಗಳಲ್ಲಿ ನೀರಿಲ್ಲ. ಹಲವೆಡೆ ಸರಿಯಾಗಿ ಮಳೆ ಆಗುವುದಿಲ್ಲ. ಹಲವೆಡೆ ನದಿಗಳೇ ಇಲ್ಲ. ಈ ಬಗ್ಗೆ ಹತ್ತು ವರ್ಷಗಳ ಹಿಂದಿನಿಂದಲೇ ಚರ್ಚೆ ಆರಂಭವಾಗಿದೆ.
ಇತ್ತೀಚೆಗೆ ಈ ಬಗ್ಗೆ ನನ್ನ ಹಿರಿಯ ಮಿತ್ರರೊಬ್ಬರು ಒಂದು ಪತ್ರವ್ಯವಹಾರ ಮಾಡಿದ್ದರು. ಈಮೈಲಿನಲ್ಲಿ ನಡೆದ ಈ ಸಂವಾದದಲ್ಲಿ ಸಿಂಗಾಪುರದಿಂದ ಬಂದ ಒಂದು ಪತ್ರ ನನ್ನ ಗಮನ ಸೆಳೆಯಿತು. ಅದನ್ನೇ ನಾನು ಇಲ್ಲಿ ಯಥಾವತ್ತಾಗಿ ನೀಡುತ್ತಿರುವೆ.
ಖರ್ಚು ಮತ್ತು ವರಮಾನದ ಬಗ್ಗೆ ಖಚಿತ ಮಾಹಿತಿ ಸಿಗುವವರೆಗೂ ನಾನು ನದಿಗಳ ಜೋಡಣೆಯ ಬಗ್ಗೆ ಯಾವುದೇ ಅಭಿಪ್ರಾಯವನ್ನೂ ಹೇಳಲಾರೆ ಎಂದು ಆರಂಭವಾಗುವ ಈ ಪತ್ರವನ್ನು ಬರೆದವರು ಏಶಿಯನ್ ವಾಟರ್ ಎಂಬ ಸಿಂಗಾಪುರದ ಪತ್ರಿಕೆಯ ಸಂಪಾದಕಿ ಸಹನಾ ಸಿಂಗ್. ಅವರೇನು ಹೇಳುತ್ತಾರೆ ಎನ್ನುವುದನ್ನು ಸಂಕ್ಷಿಪ್ತಗೊಳಿಸಿದ್ದೇನೆ:
ಹಲವು ಸರ್ಕಾರಗಳು ನದಿಜೋಡಣೆಯ ಬಗ್ಗೆ ಪಾರದರ್ಶಕವಾಗಿ ಮಾಹಿತಿಗಳನ್ನು ನಈಡುವುದಿಲ್ಲ ಮತ್ತು ವೈಜ್ಞಾನಿಕ ಚರ್ಚೆಯಾಗುವುದಕ್ಕೂ ಬಇಡುವುದಿಲ್ಲ.
ಸೋವಿಯೆತ್ ರಶ್ಯಾವು ಆರಲ್ ಸಮುದ್ರವನ್ನು ಸೇರುವ ನದಿಗಳ ದಿಕ್ಕನ್ನು ಬದಲಿಸಿದ್ದರಿಂದ ಕೇಂದ್ರ ಏಶ್ಯಾವು ಸಂಪೂರ್ಣ ವಿನಾಶಕ್ಕೆ ಒಳಗಾಯಿತು. ಆಮು ದರ್ಯಾ ಮತ್ತು ಸಿರ್ ದರ್ಯಾ ನದಿಗಳಿಗೆ ಅಣೆಕಟ್ಟು ಕಟ್ಟಿ ಅಕ್ಕಿ, ಕಲ್ಲಂಗಡಿ ಮುಂತಾದ ಕೃಷಿ ಮಾಡಲು ಮರುಭೂಮಿಯ ಜನರಿಗೆ ಆದೇಶ ನೀಡಲಾಯಿತು. ಆರಲ್ ಸಮುದ್ರದ ಕ್ಷೇತ್ರಫಲವು ೬೮ ಸಾವಿರ ಚದರ ಕಿಮೀಗಳಾಗಿದ್ದದ್ದು ಶೇ. ೬೦ರಷ್ಟು ಕುಸಿಯಿತು. ಹೀಗೆ ಹೊಸನೀರಿನ ಕೊರತೆಯಾಗಿ ಅಲ್ಲಿನ
&#
3242;್ರಾಣಿ-ಸಸ್ಯಸಂಕುಲವೇ ನಾಶವಾಗಿಹೋಯಿತು. ಇಡೀ ಬೆಸ್ತ ಸಮುದಾಯವೇ ವಿನಾಶವಾಯಿತು. ಮನುಷ್ಯನು ಮಾಡಿದ ಯೋಜನೆಗಳಲ್ಲೇ ಅತ್ಯಂತ ಪಾರಿಸರಿಕ ದುರಂತ ಎಂದು ಈ ಘಟನೆ ಕುಪ್ರಸಿದ್ಧವಾಗಿದೆ.
ಚೀನಾ ದೇಶವು ಈಗ ಯಾಂಗ್‌ತ್ಸೆ ನದಿಯನ್ನು ಉತ್ತರದ ಹಳದಿ ನದಿಗೆ ಮೂರು ದಾರಿಗಳಲ್ಲಿ ಜೋಡಿಸುವ ಯೋಜನೆಯನ್ನು ಜಾರಿ ಮಾಡುತ್ತಿದೆ. ಹಳದಿ ನದಿ ಈಗಾಗಲೇ ಬಹುತೇಕ ಒಣಗಿಹೋಗಿರುವ ನದಿ. ಮಿಲಿಯಗಟ್ಟಳೆ ಡಾಲರ್‌ಗಳನ್ನು ಈ ಯೋಜನೆಗೆ ಈಗಾಗಲೇ ಖರ್ಚು ಮಾಡಲಾಗಿದೆ. ಇನ್ನೂ ಮಿಲಯಗಟ್ಟಳೆ ಖರ್ಚಾಗಲಿಕ್ಕಿದೆ. ಈಗ ನದಿಜೋಡಣೆಯ ಭಾಗವಾಗಿ ಕಟ್ಟಿಸಿರುವ ನಾಲೆಗಳು ಅತ್ಯಂತ ಮಾಲಿನ್ಯಯುಕ್ತ ಪ್ರದೇಶಗಳನ್ನು ಹಾದುಹೋಗುತ್ತವೆ; ಇದರಿಂದಾಗಿ ಈ ನಾಲೆಗಳಲ್ಲೂ ಮಾಲಿನ್ಯವು ತುಂಬಿಕೊಂಡು ರವಾನೆಯಾಗುತ್ತದೆ. ಇಂಥ ಯೋಜನೆಗಾಗಿ ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ಹಿಂದೆ ಮಾಡಿದ ಅಣೆಕಟ್ಟು ಯೋಜನೆಗಳ ವೈಫಲ್ಯದ ಕಥೆಗಳನ್ನು ಚೀನಾ ದೇಶವು ಮುಚ್ಚಿಟ್ಟಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಮನುಷ್ಯರನ್ನು ಮತ್ತು ಯಂತ್ರಗಳನ್ನು ಯೋಜನಾ ಸ್ಥಳಕ್ಕೆ ರವಾನಿಸುವ ಖರ್ಚುಗಳನ್ನು ಚೀನಾ ದೇಶವು ಲೆಕ್ಕ ಹಾಕಿತ್ತೆ ಎಂಬುದು ನನಗೆ ಗೊತ್ತಿಲ್ಲ. ಈಗ ಭಾರತದ ನದಿಗಳ ಜೋಡಣೆಯ ಬಗ್ಗೆ ಮಾತನಾಡೋಣ:
ಗಂಗಾ ಮತ್ತು ಕಾವೇರಿ ನದಿಗಳನ್ನು ಜೋಡಿಸುವುದರಿಂದ ಉಂಟಾಗುತ್ತದೆ ಎನ್ನಲಾದ ರಾಷ್ಟ್ರೀಯ ಏಕತೆಯು ಈ ಯೋಜನೆಯ ಹಿಂದಿನ ವಿಜ್ಞಾನ ಮತ್ತು ಆರ್ಥಿಕತೆಗಿಂತ ಮೇಲೇನಲ್ಲ.
ಈ ನದಿಜೋಡಣೆಯಿಂದ ಬಂಗಾಳದ ಮುಖಜ ಪ್ರದೇಶದಲ್ಲಿ ಬೆಳೆಯುವ ಉಪ್ಪಟಿ (ಮ್ಯಾನ್‌ಗ್ರೋವ್) ವೃಕ್ಷಸಂಕುಲಕ್ಕೆ ಧಕ್ಕೆ ಒದಗುವುದಿಲ್ಲವೆ? ಈ ಸಸ್ಯಗಳೇ ಹಿಂದೆ ಭಾರತಕ್ಕೆ ತ್ಸುನಾಮಿ ಅಪ್ಪಳಿಸಿದಾಗ ಕೊಲ್ಲಿಯಲ್ಲಿ ಸಾಕಷ್ಟು ರಕ್ಷಣೆ ಒದಗಿಸಿದ್ದರು ಎಂಬುದು ಗಮನಾರ್ಹ. ಅಲ್ಲದೆ ಈ ಪ್ರದೇಶವು ಒಳ್ಳೆಯ ಮೀನುಗಾರಿಕೆಗೂ ಪ್ರಸಿದ್ಧ.
ಹಲವು ಅಣೆಕಟ್ಟುಗಳು ಕೊನೆಗೆ ಹೂಳು ತುಂಬಿಕೊಂಡು ವ್ಯರ್ಥವಾಗುತ್ತವೆ. ಅಣೆಕಟ್ಟಿನ ಸಾಮರ್ಥ್ಯವು ಕ್ರಮೇಣ ಕುಸಿಯುತ&
#327
7;ತ ಹೋಗುತ್ತದೆ. ಕೊನೆಗೆ ಭಾರೀ ವೆಚ್ಚ ಮಾಡಿ ಹೂಳನ್ನು ತೆಗೆಯಬೇಕಾಗುತ್ತದೆ. ಅಲ್ಲದೆ ನೀರು ಆವಿಯಾಗುವ ಪ್ರಮಾಣವನ್ನೂ ಲೆಕ್ಕ ಹಾಕಬೇಕು. ಹೀಗೆ ಖರ್ಚು ಮತ್ತು ಲಾಭದ ಅನುಪಾತವನ್ನು ಲೆಕ್ಕ ಹಾಕಲೇಬೇಕು. ಅಮೆರಿಕಾದಲ್ಲಿ ಅಣೆಕಟ್ಟುಗಳನ್ನು ವಿರೋಧಿಸುವ ಒಂದು ಸರ್ಕಾರೇತರ ಚಳವಳಿಯೇ ಇದೆ. ಅದರ ಕೆಲಸವೇ ಅಣೆಕಟ್ಟುಗಳನ್ನು ವಿರೋಧಿಸುವುದು. ಈಗಾಗಲೇ ಆ ದೇಶದಲ್ಲಿ ಹಲವು ಅಣೆಕಟ್ಟುಗಳನ್ನು ನಾಶ ಮಾಡಲಾಗಿದೆ.
ಅತಿಯಾದ ನೀರಾವರಿಯು ಭೂಮಿಯನ್ನು ಜವಳು ಮಾಡುತ್ತದೆ. ಮುಂದೊಮ್ಮೆ ಈ ಭೂಮಿಯೆಲ್ಲ ಕೃಷಿಗೆ ಆಯೋಗ್ಯವಾಗುತ್ತದೆ. ಆಸ್ಟ್ರೇಲಿಯಾ ಖಂಡದಲ್ಲಿ ನೀರು ಹೆಚ್ಚಾಗಿ ಜವಳು ಪ್ರದೇಶವೂ ಹೆಚ್ಚಾಗಿ ಜನರು ಕೃಷಿಭೂಮಿಯನ್ನು ಕಳೆದುಕೊಂಡಿದ್ದಾರೆ. ನೀರಾವರಿಯನ್ನು ಅತ್ಯಂತ ಗಂಭೀರವಾಗಿ ನಿಯಂತ್ರಿಸಬೇಕು. ಆದರೆ ಭಾರತದಂಥ ದೇಶದಲ್ಲಿ ಇಂಥ ನಿಯಂತ್ರಣ ಅಸಾಧ್ಯ. ಕೆಲವು ನಾಲೆಗಳಿಗೆ ಹೊಸದಾಗಿ ತೇಪೆ ಹಚ್ಚಬೇಕೆಂಬ ಚರ್ಚೆ ಕೂಡಾ ಈಗ ನಡೆಯುತ್ತಿದೆ. ಹಾಗೆ ಮಾಡುವುದರಿಂದ ನೀರು ಸೋರುವುನ್ನು ತಡೆಯಬಹುದು. ಆದರೆ ಅದೇ ವೇಳೆ ನೆಲಕ್ಕೆ ನೀರು ಇಂಗಿಸುವುದು ತಪ್ಪುತ್ತದೆ.
ಚೆಕ್‌ಡ್ಯಾಮುಗಳು ಮತ್ತು ಕೆರೆಗಳನ್ನು ಒಳಗೊಂಡ ಸಣ್ಣ ಪ್ರಮಾಣದ ನೀರಾವರಿ ಯೋಜನೆಗಳು ಭಾರತದಲ್ಲಿ ಯಶ ಸಾಧಿಸಿವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇಡೀ ಸಮುದಾಯವೇ ಭಾಗಿಯಾದ ಯೋಜನೆಗಳು ಲೋಕೋಪಯೋಗಿ ಇಲಾಖೆ ಕೆಲಸಕ್ಕಿಂತ ಒಳ್ಳೆಯದಾಗಿವೆ.
ದೊಡ್ಡ ದೊಡ್ಡ ಮತ್ತು ಬಹುಕಾಲದ ಕಾಮಗಾರಿಯನ್ನು ಬೇಡುವ ನೀರಿನ ಯೋಜನೆಗಳಿಗಿಂತ ಸ್ಥಳೀಯ ನೀರು ಸಮಸ್ಯೆ ಪರಿಹಾರ ಯತ್ನಗಳೇ ಮುಖ್ಯ ಮತ್ತು ಪ್ರಭಾವಿ.
ನೀರಿನ ಪೋಲಿನ ಬಗ್ಗೆ ಚಿಂತಿಸುವವರಾರು? ಈಗ ಭಾರತದಲ್ಲಿ ಕೊಳವೆಗಳಲ್ಲಿ ಸೋರಿಕೆಯಾಗುತ್ತಿರುವ ನೀರಿನ ಪ್ರಮಾಣ ಶೇ. ೩೦ರಿಂದ ೬೦ರವರೆಗೆ ಎಂದು ಒಂದು ಅಧ್ಯಯನ ಹೇಳುತ್ತದೆ. ಕೇವಲ ನೀರಿನ ಪೋಲನ್ನು ತಡೆಗಟ್ಟುವುದರಿಂದಲೇ ನೀರಿನ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ತಗ್ಗಿಸಬಹುದಾಗಿದೆ. ಈ ವಿಷಯಕ್ಕೆ ಹೆಚ್ಚಿನ ಆದ್ಯ&a
mp;#
3236;ೆಯನ್ನು ನೀಡಬೇಕಲ್ಲವೆ?
ದಕ್ಷಿಣ ಮತ್ತು ಉತ್ತರ ಭಾರತಗಳಲ್ಲಿ ಒಂದೇ ಸಲ ನೀರಿನ ಸಮಸ್ಯೆ ತಲೆದೋರಿದಾಗ ಏನಾಗುತ್ತದೆ ಎಂಬುದನ್ನು ಈಗಲೇ ಊಹಿಸಿ ಲೆಕ್ಕಾಚಾರ ಮಾಡಬೇಕಲ್ಲವೆ? ಒಂದೆಡೆ ವಿಪರೀತ ನೀರು ಮತ್ತು ಒಂದೆಡೆ ವಿಪರೀತ ಕೊರತೆ ಇದ್ದಾಗ ಮಾತ್ರವೇ ನದಿಜೋಡಣೆಗೆ ಅರ್ಥವಿದೆ.
ವಿಶ್ವವ್ಯಾಪಿಯಾಗಿ ಉಷ್ಣತೆ ಹೆಚ್ಚಿ (ಗ್ಲೋಬಲ್ ವಾರ್ಮಿಂಗ್)ಹಿಮಾಲಯದ ಪರ್ವತಗಳು ಕರಗಿ ನೀರು ಹೆಚ್ಚಾದಾಗ ಈ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಕೆಲಸವನ್ನೂ ನಾವು ಮಾಡಬೇಕಾಗುತ್ತದೆ. ಇದಕ್ಕಾಗಿ ಅಣೆಕಟ್ಟುಗಳನ್ನೂ ಕಟ್ಟಬೇಕಾಗಿ ಬರಬಹುದು. ಆದರೆ ಇದಕ್ಕೆ ಎಷ್ಟು ಜನ ಬೇಕು, ಇದರ ಆರ್ಥಿಕ ಲೆಕ್ಕಾಚಾರಗಳೇನು ಎಂಬುದನ್ನೂ ಮೊದಲೇ ಯೋಚಿಸಬೇಕು; ಬದಲಿಗೆ ಯೋಜನೆಗಿಂತ ಯೋಜನೆಗೆ ಬೇಕಾದ ಸಂಪನ್ಮೂಲಗಳ ಖರ್ಚು ಹೆಚ್ಚಾಗಬಾರದು ಅಲ್ಲವೆ?
ಇಂದು ಭಾರತದ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಬೇಕಾಗಿರುವುದು ತಾಂತ್ರಿಕ, ಸಾಂಸ್ಥಿಕ ಮತ್ತು ರಾಜಕೀಯ ಪರಿಹಾರ. ನೀರಿನ ನಷ್ಟವನ್ನು ತಗ್ಗಿಸುವುದು, ಸಂಗ್ರಹ ವ್ಯವಸ್ಥೆಯನ್ನು ಸುಧಾರಿಸುವುದು, ನೀರಿಗೆ ಸೂಕ್ತ ಬೆಲೆಯನ್ನು ನಿರ್ಧರಿಸುವುದು, ಕೃಷಿ ಸಾಧ್ಯತೆಗಳನ್ನು ವಿಸ್ತರಿಸುವುದು, ತ್ಯಾಜ್ಯ ನೀರಿನ ಮರುಬಳಕೆ ಮುಂತಾದ ಯೋಜನೆಗಳನ್ನು ಹಾಕಿಕೊಳ್ಳಬೇಕು. ಇದಕ್ಕೆಲ್ಲ ನದಿಜೋಡಣೆ ಎಂಬುದೊಂದೇ ಪರಿಹಾರ ಎಂದು ತಿಳಿಯುವುದು ಎಲ್ಲರಿಗೂ ಅಪಾಯಕಾರಿ.
ಸಹನಾ ಸಿಂಗ್ ಹೇಳುವುದರಲ್ಲಿ ಅರ್ಥವಿದೆ ಅಲ್ಲವೆ?