ನಿಮ್ಮ ಕಿಸೆಯೊಳಗೆ ಇಂಟರ್ನೆಟ್ ಹೆಬ್ಬಾಗಿಲು
ಸರಿಯಾಗಿ ಒಂಬತ್ತು ವರ್ಷಗಳ ಹಿಂದೆ ನಾನು ಇಂಥದ್ದೇ ಒಂದು ಕಂಪ್ಯೂಟರಿನ ಮುಂದೆ ಕುಳಿತು ಇಂಟರ್ನೆಟ್ ಸಂಪರ್ಕ ಕಲ್ಪಿಸಿಕೊಳ್ಳಲು ಹೊರಟಿದ್ದೆ. ಆಗಿನ್ನೂ ಇಂಟರ್ನೆಟ್ ಭಾರತದಲ್ಲಿ ಹೊಸ್ತಿಲು ದಾಟಿತ್ತಷ್ಟೆ. ಕಂಪ್ಯೂಟರನ್ನು ಮಾರುವವರಿಗೂ ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಬಗೆಯೇ ಗೊತ್ತಿರಲಿಲ್ಲ. ಕೊನೆಗೆ ನಾನೇ ಪಟ್ಟುಬಿದ್ದು ಇಂಟರ್ನೆಟ್ ಜಗತ್ತನ್ನು ನನ್ನ ಗಣಕಕ್ಕೆ ತರಿಸಿಕೊಂಡೆ. ಆ ಕ್ಷಣವನ್ನು ಈಗ ವರ್ಣಿಸಲಾಗದು! ಡಯಲ್ ಅಪ್ ಯುಗದ ಆ ದಿನಗಳಲ್ಲಿ ಸಂಪರ್ಕ ಇರುವುದಕ್ಕಿಂತ ಇಲ್ಲದಿರುವುದೇ ಹೆಚ್ಚಾಗಿದ್ದವು! ಕುಯ್ಯೋ ಮರ್ರೋ ಎಂದು ಕಿರುಚುವ ಮೋಡೆಮ್ನ್ನು ನೋಡುವುದೇ ಒಂದು ಸಂತಸದ ಸಂಗತಿ.
ಈಗ ಬ್ರಾಡ್ಬ್ಯಾಂಡ್ ಎಂಬ ಇಂಟರ್ನೆಟ್ ಹೆದ್ದಾರಿ ಬಂದು ವರ್ಷಗಳಾಗಿವೆ. (ಡಯಲ್ ಅಪ್ ಎಂದರೆ ದೂರವಾಣಿ ಹಾದಿಯಲ್ಲೇ ಕಡಿಮೆ ವೇಗದಲ್ಲಿ ಮಾಹಿತಿ ಹರಿಯುವ ಇಂಟರ್ನೆಟ್ ಸಂಪರ್ಕ. ಬ್ರಾಡ್ಬ್ಯಾಂಡ್ ಎಂದರೆ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಲೇ ಹೆಚ್ಚು ವೇಗದಲ್ಲಿ ಇಂಟರ್ನೆಟ್ ಸಂಪರ್ಕ ಪಡೆಯುವುದು ಎಂದಷ್ಟೆ ತಿಳಿದುಕೊಂಡರೆ ಸಾಕು). ಆದರೆ ರಾಜ್ಯದ ಎಲ್ಲ ಊರುಗಳಲ್ಲಿ ಈ ಸೌಲಭ್ಯ ಇಲ್ಲ. ಬೆಂಗಳೂರಿನಲ್ಲೂ ಸರ್ಕಾರಿ ಒಡೆತನದ ಬಿ ಎಸ್ ಎನ್ ಎಲ್ ನ ಡಾಟಾಒನ್ ಎಂಬ ಬ್ರಾಡ್ಬ್ಯಾಂಡ್ ಸೇವೆಯನ್ನು ಬಿಟ್ಟರೆ ಉಳಿದ ಖಾಸಗಿ ಸಂಸ್ಥೆಗಳ ಸೇವೆ ಕೇವಲ ಉಳ್ಳವರ ಕಚೇರಿಗಳೇ ಹೆಚ್ಚಾಗಿರುವ ಕೋರಮಂಗಲದಂಥ ಪ್ರದೇಶಗಳಲ್ಲಿ ಮಾತ್ರ.
ಅದಾದ ಮೇಲೆ ಬಂದ ವೈ ಫೈ ಎಂಬ ವೈರ್ಲೆಸ್ ಇಂಟರ್ನೆಟ್ ಸಂಪರ್ಕವೂ ತಾರಾ ಹೋಟೆಲುಗಳಿಗೆ ಮಾತ್ರವೇ ಸೀಮಿತವಾಗಿತ್ತು. ಕಳೆದ ವರ್ಷದಿಂದ ಸುದ್ದಿ ಮಾಡಿದ ವೈಮ್ಯಾಕ್ಸ್ ಇಂಟರ್ನೆಟ್ ಸಂಪರ್ಕವು ಬಹು ದುಬಾರಿ ಹೂಡಿಕೆಯದಾಗಿತ್ತು. ಅದಕ್ಕೇ ಅದು ಇನ್ನೂ ಬೆಂಗಳೂರಿನಂಥ ಸಿಲಿಕಾನ್ ಸಿಟಿಯಲ್ಲೂ ಕಾಲೂರುವುದು ತಡವಾಗುತ್ತಿದೆ. ಬ್ರಾಡ್ಬ್ಯಾಂಡ್ಗಿಂತ ಹೆಚ್ಚಿನ ವೇಗದಲ್ಲಿ ಮಾಹಿತಿಯನ್ನು ರವಾನಿ
&#
3256;ುವ ವೈಮ್ಯಾಕ್ಸ್ ಇನ್ನಷ್ಟು ವರ್ಷಗಳ ಕಾಲದ ನಂತರವೇ ಮಧ್ಯಮವರ್ಗದವರಿಗೆ ಎಟುಕುವಂತಾಗುತ್ತಿತ್ತೇನೋ.
ಯಾಕೆ ಇಷ್ಟೆಲ್ಲ ಪುರಾಣ ? ಹತ್ತು ವರ್ಷಗಳಲ್ಲಿ ಇಂಟರ್ನೆಟ್ ಇಷ್ಟೆಲ್ಲ ಬದಲಾಗಿದ್ದನ್ನು ನೀವು ಗಮನಿಸದಿದ್ದರೆ ಮುಂದೆ ನಡೆಯುವ ಬದಲಾವಣೆಗಳನ್ನು ಊಹಿಸುವುದೇ ಕಷ್ಟವಾಗುತ್ತದೆ. ಯಾಕೆಂದರೆ ಈಗ ಇವೆಲ್ಲವನ್ನೂ ಮೀರಿಸುವ ವೇಗದ ವೈರ್ಲೆಸ್ ಇಂಟರ್ನೆಟ್ ಸಂಪರ್ಕ ಜಾಲ ಸದ್ದಿಲ್ಲದೆ ತಳ ಊರುತ್ತಿದೆ. ವೈಮ್ಯಾಕ್ಸ್ನಷ್ಟು ಖರ್ಚಿಲ್ಲದ ಸಾಂಸ್ಥಿಕ ಹೂಡಿಕೆ. ಬ್ರಾಡ್ಬ್ಯಾಂಡ್ಗಿಂತ ಹೆಚ್ಚಿನ ವೇಗದ ಮಾಹಿತಿ ಹರಿವು. ಆರಂಭದಲ್ಲೇ ಪರವಾಗಿಲ್ಲ ಎಂಬ ದರಪಟ್ಟಿ.
ಇದರ ಹೆಸರು ಇ ವಿ ಡಿ ಓ ಎಂದು. ಅಂದರೆ ಎವೊಲುಶನ್ ಡಾಟಾ ಆಪ್ಟಿಮೈಸ್ಡ್ ಎಂಬುದರ ಸಂಕ್ಷಿಪ್ತ ರೂಪ. ಖ್ವಾಲ್ಕಾಮ್ ಎ ಂಬ ೨೧ ವರ್ಷಗಳಷ್ಟೆ ಯುವ ವಯಸ್ಸಿನ ಸಂಸ್ಥೆಯ ಸಂಶೋಧನೆ. ನಿಮಗೆ ಸಿ ಡಿ ಎಂ ಎ ( ಕೋಡ್ ಡಿವಿಜನ್ ಮಲ್ಟಿಪಲ್ ಆಕ್ಸೆಸ್) ಎಂಬ ಮೊಬೈಲ್ ತರಂಗಗಳು ಗೊತ್ತಿವೆಯಲ್ಲ? ಅದೇರೀ, ನಿಮ್ಮ ಸಿ ಡಿ ಎಂ ಎ ಮೊಬೈಲ್ ತಂತ್ರeನ…. ಅದನ್ನೂ ಖ್ವಾಲ್ ಕಾಮ್ ಸಂಸ್ಥೆಯೇ ಆಚರಣೆಗೆ ತಂದಿದ್ದು. ಅದರ ವಿಕಾಸವೇ ಈ ಎವೊಲುಶನ್.
ಸೆಕೆಂಡಿಗೆ ೨.೪ ಮೆಗಾಬೈಟ್ಗಳಷ್ಟು ಮಾಹಿತಿಯನ್ನು ಹರಿಸುವ ದೈತ್ಯ ಸಾಮರ್ಥ್ಯ (ಈ ಹೊತ್ತಿಗೆ ಎಂದುಕೊಳ್ಳಿ…. ಮುಂದಿನ ವರ್ಷ ಇನ್ನೇನು ಕಾದಿದೆಯೋ ನನಗಂತೂ ಗೊತ್ತಿಲ್ಲ!) ಇದಕ್ಕಿದೆ. ಅಲ್ಲದೆ ಇದನ್ನು ಚಲಿಸುವಾಗಲೂ ಬಳಸಬಹುದು. ಅಂದರೆ ಲ್ಯಾಪ್ಟಾಪ್ಗೆ ಇದು ಸದ್ಯಕ್ಕಂತೂ ಹೇಳಿ ಮಾಡಿಸಿದ ಇಂಟರ್ನೆಟ್ ಸಂಪರ್ಕ. ಗಂಟೆಗೆ ೯೬ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿರುವ ಕಾರಿನ ಮೂಲಕ ದೂರದ ಊರಿನಲ್ಲಿ ಇರುವವರ ಜೊತೆಗೆ ಸಲೀಸಾಗಿ ವಿಡಿಯೋ ಕಾನ್ಫರೆನ್ಸ್ ಮಾಡಲಾಗಿದೆ; ಗಂಟೆಗೆ ೨೪೦ ಕಿಲೋಮೀಟರ್ ವೇಗದಲ್ಲಿ ಓಡುವ ಬುಲೆಟ್ ಟ್ರೈನಿನಲ್ಲಿ ಈ ತಂತ್ರeನದ ದೂರವಾಣಿ ಸಾಧನವನ್ನು ಇಟ್ಟು ಬೇಕಾದವರ ಜೊತೆಗೆ ಯಾವ ತೊಡಕೂ ಇಲ್ಲದೆ ಹರಟೆ ಕೊಚ್ಚಲಾಗಿದೆ.
ಈ ತಂತ್ರeನದ ತಿರುಳು ಇಷ್ಟೆ: ಮಾಹಿತಿಯನ್ನು ಚಿಕ್ಕ ಚಿಕ್ಕ ಪ್ಯಾಕೆ&a
mp;#
3231;್ಗಳಾಗಿ ಒಡೆಯುವುದು. ಪುಟ್ಟ ಪುಟ್ಟ ತುಂಡುಗಳು ಆರಾಮಾಗಿ ತರಂಗಗಳಾಗಿ ಚಲಿಸುತ್ತವೆ. ಇರುವೆಗಳು ತಮ್ಮ ಆಹಾರವನ್ನು ಕೊಚ್ಚಿ ಕೊಚ್ಚಿ ಗೂಡಿಗೆ ಸಾಗಿಸುವ ಹಾಗೆ. ಈ ತಂತ್ರeನವನ್ನು ಖ್ವಾಲ್ಕಾಮ್ ಇನ್ನಿಲ್ಲದಂತೆ ಅಭಿವೃದ್ಧಿಪಡಿಸಿದೆ. ಅಂದು ಕೇವಲ ಆರು ಜನರಿದ್ದ ಈ ಸಂಸಯಲ್ಲಿ ಈಗ ೮೦೦೦ ಸಿಬ್ಬಂದಿಗಳಿದ್ದಾರೆ.
ಈ ಹಿಂದೆ ಜನರಲ್ ಪ್ಯಾಕೆಟ್ ರೇಡಿಯೋ ಸರ್ವಿಸ್ ಎಂಬ (ಜಿ ಪಿ ಆರ್ ಎಸ್) ತಂತ್ರeನವೂ ಇದೇ ವಿಧಾನವನ್ನು ಅನುಸರಿಸಿತ್ತು. ಆದರೆ ಇಲ್ಲಿ ಒಂದು ಮೆಗಾಬೈಟ್ ಮಾಹಿತಿಯನ್ನು ರವಾನಿಸಲು ೨೭೫ ಸೆಕೆಂಡುಗಳು ಬೇಕಾಗಿದ್ದವು. ಆದರೆ ಈಗ ಇ ವಿ ಡಿ ಓ ಹಾದಿಯಲ್ಲಿ ಹೆಚ್ಚೆಂದರೆ ೧೦ ಸೆಕೆಂಡುಗಳಿಗೆ ಒಂದು ಮೆಗಾಬೈಟ್ ಹರಿಯುತ್ತದೆ.
ಅನುಕೂಲ ಎಂದರೆ ಈಗಾಗಲೇ ಮೊಬೈಲ್ ಸಂಸ್ಥೆಗಳು ಹಬ್ಬಿಸಿರುವ ತಂತ್ರeನದ ಮೂಲಕವೇ ಈ ಪ್ಯಾಕೆಟ್ಗಳನ್ನು ರವಾನಿಸಬಹುದು. ಅಂದರೆ ಇದಕ್ಕೆ ಹೆಚ್ಚಿನ ಬಂಡವಾಳ ಬೇಕಿಲ್ಲ. ಅಂದರೆ ಗೊತ್ತಾಯಿತಲ್ಲ, ನೀವು ಹೋದಲ್ಲೆಲ್ಲ ಬ್ರಾಆಆಆಆಆಡ್ಬ್ಯಾಂಡ್ ನಿಮ್ಮನ್ನು ಹಿಂಬಾಲಿಸುತ್ತದೆ, ವಿಧೇಯ ನಾಯಿಯಂತೆ.
ಸದ್ಯಕ್ಕೆ ಬಿ ಎಸ್ ಎನ್ ಎಲ್ ಸಂಸ್ಥೆಯು ಈ ತಂತ್ರeನದ ಮೊದಲ ಪೀಳಿಗೆಯ ಡಾಟಾಕಾರ್ಡ್ಗಳನ್ನು ಮಾರುತ್ತಿದೆ. ಇದನ್ನು ಕೊಳ್ಳಬಹುದು; ಅಥವಾ ಬಾಡಿಗೆಗೆ ಪಡೆಯಬಹುದು. ತಿಂಗಳಿಗೆ ಇಷ್ಟು ಎಂದು ಕೊಟ್ಟರೆ ಮುಗಿಯಿತು, ಅನಿರ್ಬಂಧಿತ ಇಂಟರ್ನೆಟ್ ನಿಮ್ಮದು. ನಿಮ್ಮ ಮನೆಯ ಡೆಸ್ಕ್ಟಾಪ್ ಗೋ, ಲ್ಯಾಪ್ಟಾಪ್ಗೋ ಇದನ್ನು ಸಿಕ್ಕಿಸಿಕೊಂಡು ಬಳಸಬಹುದು. ಬೇರೆ ಊರಿಗೆ ಹೋದಾಗ ಸ್ನೇಹಿತರ ಕಂಪ್ಯೂಟರ್ ಇದ್ದರೆ ಸಾಕು, ಸೈಬರ್ ಕೆಫೆ ಹುಡುಕಿಕೊಂಡು ಹೋಗಬೇಕಿಲ್ಲ. ಮುದ್ರಣ ಮಾಧ್ಯಮದ ಪತ್ರಕರ್ತರು ಕೂಡಾ ತಮ್ಮ ಕಚೇರಿಗೆ ಕಾರ್ಯಕ್ರಮದಲ್ಲಿ ಏನು ನಡೆಯುತ್ತಿದೆ ಎಂದು ತತ್ಕ್ಷಣವೇ ರವಾನಿಸಬಹುದು. ಒಟ್ಟಿನಲ್ಲಿ ನಾವು ಬ್ರಾಡ್ಬ್ಯಾಂಡಿನಲ್ಲಿ ಮಾಡುತ್ತಿರುವ ಎಲ್ಲ ಘನಂದಾರಿ ಕಾರ್ಯಗಳನ್ನೂ ಈಗ ಮೊಬೈಲ್ ರೂಪದಲ್ಲಿ ಮಾಡಬಹುದು. ಇದಕ್ಕಾಗಿ ವಿಶೇಷ ಕೈ ಸಾಧನಗಳೂ ಬಂದಿವೆ.
ಭಾರತದಲ್
ಲಿ ಈ ಸೇವೆಯನ್ನು ನೀಡುವುದಕ್ಕಾಗಿ ೩೦೦ ಸಂಸ್ಥೆಗಳು ಅರ್ಜಿ ಹಾಕಿವೆಯಂತೆ. ಅದಿರಲಿ, ವಿಶ್ವದಲ್ಲಿ ಈಗಾಗಲೇ ಒಂದೂವರೆ ಕೋಟಿ ಜನ ಇ ವಿ ಡಿ ಓ ಸಾಧನಗಳನ್ನು ಬಳಸುತ್ತಿದ್ದಾರೆಂದು ಖ್ವಾಲ್ಕಾಮ್ ಹೇಳುತ್ತದೆ.ಆಡಿಯೋವಾಕ್ಸ್, ಕ್ಯೋಸೆರಾ, ಸಿಯೆರಾ, ನೋವಾಟೆಲ್, ಮುಂತಾದ ಸಂಸ್ಥೆಗಳು ಈ ಸಾಧನಗಳನ್ನು ಈಗಾಗಲೇ ರೂಪಿಸಿ ಮಾರುಕಟ್ಟೆಗೆ ತಂದಿವೆ. ಒಂದುವೇಳೆ ಇದರ ಬೆಲೆ ಹೆಚ್ಚಾಗಿದ್ದರೂ ಸರಿಯೆ, ಗುಂಪು ಬಳಕೆಯಲ್ಲಿ ಈ ಖರ್ಚನ್ನು ತಗ್ಗಿಸಿಕೊಳ್ಳಬಹುದು.
ಎಲ್ಲಕ್ಕಿಂತ ಮುಖ್ಯವೆಂದರೆ ಈ ತಂತ್ರeನವು ಸರಸರನೆ ಹರಿಯುವ ಸಾಮರ್ಥ್ಯವನ್ನು ಹೊಂದಿರುವುದು. ನಮ್ಮ ಸರ್ಕಾರಗಳು, ಸಾರ್ವಜನಿಕ ಸೇವಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಈಗಲಾದರೂ ಇಂಟರ್ನೆಟ್ ಕ್ರಾಂತಿಯ ಸದುಪಯೋಗವನ್ನು ಪಡೆಯದಿದ್ದರೆ, ಖಂಡಿತ ನಾವು ಪ್ರಗತಿಯ ವೇಗವನ್ನು ಹೆಚ್ಚಿಸುವುದು ಅಸಾಧ್ಯ. ತಂತಿಗಳೇ ಇಲ್ಲದೆಡೆ ಇಂಟರ್ನೆಟ್ ಜಾಲವನ್ನು ಹರಡುವುದೇ ಕಷ್ಟವಾಗಿದ್ದ ಈ ಹೊತ್ತಿನಲ್ಲಿ ಈ ವಿ ಡಿ ಓ ಬಂದಿರುವುದನ್ನು ಸೂಕ್ತವಾಗಿ ಬಳಸಿಕೊಳ್ಳುವುದರಲ್ಲಿ ಜಾಣತನವಿದೆ. ವಿಶ್ವದ ಮಾಹಿತಿ ಹೆಬ್ಬಾಗಿಲೇ ಮನೆಯ ಮುಂದೆ ಬಂದಿರುವಾಗ ನಾವು ಬಾಗಿಲು ಕಿಟಕಿ ಮುಚ್ಚಿ ಕೂತಿರುವುದು ನನಗಂತೂ ಸರಿ ಕಾಣಿಸುವುದಿಲ್ಲ.
ಹೆಚ್ಚಿನ ಮಾಹಿತಿಗಳಿಗಾಗಿ ನೀವು www.qualcomm.come, www.evdoinfo.com ಈ ಜಾಲತಾಣಗಳಿಗೆ ಹೋಗಿ ಮಾಹಿತಿ ಪಡೆಯಬಹುದು.