Author: ಬೇಳೂರು ಸುದರ್ಶನ

ದಿ ಗಾರ್ಡಿಯನ್‌ ಪತ್ರಿಕೆಯು ಹವಾಗುಣ ಬದಲಾವಣೆ ಕುರಿತಂತೆ ಮುಂದಿನ ದಿನಗಳಲ್ಲಿ ಗರಿಷ್ಠ ಪ್ರಮಾಣದ ಸುದ್ದಿಗಳನ್ನು ಕೊಡಲಿದೆ ಎಂದು ಪ್ರಕಟಿಸಿದೆ. ಪತ್ರಿಕೆಯ ಸಂಪಾದಕ ಅಲೆನ್‌ ರಸ್‌ಬ್ರಿಡ್ಜರ್‌ ನಿನ್ನೆ (೬ ಮಾರ್ಚ್‌ ೨೦೧೫) ಒಂದು ದೀರ್ಘ ಲೇಖನ ಬರೆದು…

೨೦೧೫ರ ಮಾರ್ಚ್‌ ೩ರ ಮುಂಜಾನೆ ಎದ್ದರೆ ಹೊರಗೆಲ್ಲ ಮಳೆಯ ವಾತಾವರಣ. ಹಿಂದಿನ ದಿನದ ಮಧ್ಯರಾತ್ರಿಯೂ ಅತ್ಯಂತ ಒಣಹವೆಯಲ್ಲೇ ನಿದ್ದೆಗೆ ಜಾರಿದ್ದ ನನಗೆ ಅಚ್ಚರಿಯಾಯಿತು. ನಾನು ನನ್ನ ಇನ್‌ಬಾಕ್ಸ್‌ ನೋಡಿದರೆ ಯಮುನಾ ಜೀಯೇ ಅಭಿಯಾನದ ಮನೋಜ್‌ ಮಿಶ್ರಾರ…

ನನ್ನ ಕಥೆಯ ಕಥೆ ನಾನು ಕಥೆಗಾರನಾಗಿದ್ದು ೧೯೮೨ರಲ್ಲಿ. ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಓದುತ್ತಿದ್ದಾಗ ಕಾಲೇಜು ಕಥಾಸ್ಪರ್ಧೆಯಲ್ಲಿ ಡಿಗ್ರಿ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಪ್ರಥಮ ಬಹುಮಾನ ಪಡೆದ ಕಥೆ: ಪಲಾಯನ. ಎಲ್ಲ ನೆನಪುಗಳನ್ನೂ ಗಳಹಿದಂತೆ ಇದ್ದ…

ಒಂದು ಬದಿ ಕಡಲು – ಕನ್ನಡದಲ್ಲಿ ಇತ್ತೀಚೆಗೆ ಬಂದ ಶಿಸ್ತಿನ ಬರವಣಿಗೆಯ ಕಾದಂಬರಿಯ ನಂತರ ಶ್ರೀ ವಿವೇಕ ಶಾನಭಾಗರು `ಊರು ಭಂಗ’ದ ಮೂಲಕ ತೆಂಕಣಕೇರಿಯ ಎಫೆಕ್ಟ್‌ನ್ನು ಹಬ್ಬಿಸುವ ಮೂಲಕ ಹಾಜರಾಗಿದ್ದಾರೆ. ಕಾದಂಬರಿಯ ರಚನಾ ತಂತ್ರದಲ್ಲೂ ಪ್ರಯೋಗ…

ಸೆನ್ಸಾರ್‌ ಬೋರ್ಡ್‌ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್‍ಯವನ್ನು ಬಲಿಹಾಕಲು ಇರುವ ಸಂಸ್ಥೆ ಎಂದೇ ಎಲ್ಲರ ಸಾಮಾನ್ಯ ಅಭಿಪ್ರಾಯ. ಮುಕ್ತ ಮುಕ್ತ ಸಮಾಜತಾಣಗಳು, ಬ್ಲಾಗುಗಳು ಇರುವ ಈ ಹೊತ್ತಿನಲ್ಲೂ ಸೆನ್ಸಾರ್‌ ಬೋರ್ಡ್‌ ಬೇಕೇ ಎಂಬ ಪ್ರಶ್ನೆ ಮೂಡುವುದೂ ಸಹಜವೇ.…

ಇಂಟರ್‌ನೆಟ್‌.ORG ಎಂದರೆ ನಿಮಗೆ ಏನನ್ಸುತ್ತೆ? ನನಗೆ ಇಂಟರ್‌ನೆಟ್‌ ಕುರಿತ ಒಂದು ವಿಶ್ವವ್ಯಾಪಿ ಸಾಮಾಜಿಕ ಸಂಘಟನೆ ಅನ್ಸುತ್ತೆ. ಅದು ತಪ್ಪು. ಈ ಜಾಲತಾಣವೀಗ ಫೇಸ್‌ಬುಕ್‌ನ ಆಸ್ತಿ. ೧೯೯೩ರಿಂದ (ಆಗ ಮಾರ್ಕ್‌ ಝುಕರ್‌ಬರ್ಗ್‌ ವಯಸ್ಸು ೯) ಮೈಕೇಲ್‌ ಬಾಯರ್‌…

ಇಂದು (ಫೆಬ್ರುವರಿ ೭, ಶನಿವಾರ) ನಯನ ಸಭಾಂಗಣದಲ್ಲಿ ನಡೆದ ಕನ್ನಡ ಓಸಿಆರ್‍ ಪ್ರಾತ್ಯಕ್ಷಿಕೆ ಸಭೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕನ್ನಡ ಐಟಿ ತಜ್ಞರು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಗೊಳಿಸಿದ್ದಾರೆ. ಅವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ…

ತಳಮಳದ ಅರಿವಿನ ಹಿಂದೆ…. (ಅನುವಾದಕನ ಮಾತುಗಳು) ಒಂದು ದಿನ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಒಂದು ತುಂಡು ಹಾಳೆಯಲ್ಲಿ ಈ ಪುಸ್ತಕದ ವಿಮರ್ಶೆಯನ್ನು ಓದಿದೆ. ತುಂಬಾ ಪ್ರಯತ್ನಿಸಿ ಪುಸ್ತಕವನ್ನು ಖರೀದಿಸಿದೆ. ಓದಿದ ಮೇಲೆ ಇದನ್ನು ಕನ್ನಡಕ್ಕೆ ತರುವ…

ಹೆಗ್ಗಡದೇವನಕೋಟೆಯಡೀ ಬಕಾಸುರನಂತೆ ತಿಂದ ಆ ಕತ್ತಲಿನಲ್ಲಿ ಗೆಸ್ಟ್‌ಹೌಸ್‌ನ ಕಿರುದಾರಿಯನ್ನು ಹುಡುಕುವುದು ಕಷ್ಟವೇನಲ್ಲ. ಎಲ್ಲರ ಹತ್ರಾನೂ ಮೊಬೈಲ್ ಇದೆಯಲ್ಲ! ರಮೇಶನ ನೋಕಿಯಾ ಮೊಬೈಲಿಂದ ಸೂಸಿದ ಬೆಳಕಿನಲ್ಲಿ ಮಣ್ಣುಹಾದಿ ಸ್ಪಷ್ಟವಾಗಿ ಗೋಚರವಾಗುತ್ತಿದ್ದಂತೆ ನಮ್ಮ ಕಾಟೇಜೂ ಬಂತು ಎಂದು ರಮೇಶ…