Author: ಬೇಳೂರು ಸುದರ್ಶನ

ಮಿತ್ರಮಾಧ್ಯಮದಲ್ಲಿ ಬಂದ ನನ್ನ ಲೇಖನಗಳನ್ನು ಆಗಾಗ ಮ್ಯಾಗಜಿನ್‌ ರೂಪದಲ್ಲಿ ಪ್ರಕಟಿಸುವ ಉಮೇದಿನಿಂದ ಈ ಮ್ಯಾಗಜಿನ್‌ ಪ್ರಕಟವಾಗಿದೆ. ಮುಂದಿನ ದಿನಗಳಲ್ಲಿ ಇದನ್ನೊಂದು ಪುಟ್ಟ, ವೈವಿಧ್ಯಮಯ ಮ್ಯಾಗಜಿನ್‌ ಮಾಡುವುದಕ್ಕೆ ಪ್ರಯತ್ನಿಸಲಾಗುವುದು. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.

ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಂಚಯ ಸಾಹಿತ್ಯ ಪತ್ರಿಕೆಯು ಈ ವರ್ಷವೂ ಕನ್ನಡದ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಿದೆ. ವಿವರಗಳಿಗೆ ಕೆಳಗಿನ ಚಿತ್ರವನ್ನು ಓದಿ!

ಬೆಂಗಳೂರಿನ ವಿದ್ಯಾನಿಯೊಬ್ಬಳು ತನ್ನ ಗೆಳೆಯನ ಫೇಸ್‌ಬುಕ್‌  ಕಂಡ ವಿದಾಯದ ಹೇಳಿಕೆಯನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲ ಸಮಾಜಪ್ರಿಯ ಮನಸ್ಸುಗಳನ್ನು ಕದಡಿದೆ. ಜಗತ್ತಿನಲ್ಲೆಡೆ ಪ್ರಸಿದ್ಧವಾದ ಸೋಶಿಯಲ್ ನೆಟ್ವರ್ಕ್ ನಾಡಿನ ಒಂದು ಜೀವಕ್ಕೇ ಎರವಾಯಿತಲ್ಲ! ಈ ಘಟನೆ…

ಗೆಳೆಯ ಟಿ ಜಿ ಶ್ರೀನಿಧಿಯ ಉತ್ಸಾಹಕ್ಕೆ ಸಮ ನಿಲ್ಲುವರಾರು? ಅವರು ಈಗ ತಂದಿರೋ ಇಜ್ಞಾನ ಸಂಚಿಕೆ ಓದಿ! ಅಜ್ಞಾನದ ನಿವಾರಣೆಗಾಗಿ ಶ್ರೀನಿಧಿ ಮಾಡ್ತಾ ಇರೋ ಪ್ರಯತ್ನವನ್ನು ಬೆಂಬಲಿಸಿ.

ನನ್ನ ಮಿತ್ರ ವೆಂಕಟೇಶ ಕಣ್ಣನ್‌ ಕಳೆದ ವರ್ಷದಿಂದ ನೈಟ್‌ ಇಂಟರ್‌ನ್ಯಾಶನಲ್‌ ಜರ್ನಲಿಸಂ ಫೆಲೋ ಆಗಿದ್ದಾರೆ. ಅವರೊಂದಿಗೆ ನಾನೂ ಮಾಹಿತಿ ಹಕ್ಕು ಮತ್ತು ಮಾಧ್ಯಮ ಕುರಿತಂತೆ ಹಲವು ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇನೆ. ಈಗ ಅವರು ಮಾಧ್ಯಮ ಮಿತ್ರರಿಗಾಗಿ ರೂಪಿಸಿದ…

“ಮೂರ್ಖರನ್ನು ಅವರಿಗಿದ್ದ ಸ್ವಾತಂತ್ರ್ಯದಿಂದ ಬೇರ್ಪಡಿಸಿದ ,  ಕಂಪ್ಯೂಟರನ್ನು ತಣ್ಣನೆಯ ಬಂದೀಖಾನೆಯಾಗಿ ಮಾಡಿದ,  ಮುಂಚೂಣಿ ನಾಯಕ ಸ್ಟೀವ್‌ ಜಾಬ್ಸ್‌ ತೀರಿಕೊಂಡಿದ್ದಾರೆ. ಭ್ರಷ್ಟ ಮೇಯರ್‌ ಡೇಲಿ ತೀರಿಕೊಂಡಾಗ, ಶಿಕಾಗೋದ ಮೇಯರ್‌ ಹೆರಾಲ್ಡ್‌ ವಾಶಿಂಗ್ಟನ್‌ `ಅವರು ತೀರಿಕೊಂಡಿದ್ದಾರೆ ಎಂದು ನನಗೆ…

ಇವತ್ತು ಬೆಳಗ್ಗೆ ಪತ್ರಿಕೆ ಬರಲ್ವಲ್ಲ ಎಂದು ಮಂಚದ ಬಳಿ ಇಟ್ಟುಕೊಂಡಿದ್ದ ಐಪ್ಯಾಡ್‌ನ್ನು ತೆರೆದು ಗೂಗಲ್‌ ನ್ಯೂಸ್‌ ಪುಟಕ್ಕೆ ಹೋದರೆ, ಮೊದಲ ಸಾಲೇ ಸ್ಟೀವ್‌ ಜಾಬ್ಸ್‌ ಇನ್ನಿಲ್ಲ ಎಂಬ ಸುದ್ದಿ. ಅಘಾತವೇ ಆಯಿತು. ೫೬ರ ಹರೆಯದಲ್ಲಿ ಏನೆಲ್ಲ…

[ನಾನು ಬರೆದ ಎರಡನೇ ಕಥೆ ಇದು!  ಮೊದಲನೇ ಕಥೆಯನ್ನು ಸೆಕೆಂಡ್ ಪಿಯುಸಿಯಲ್ಲಿ ಇದ್ದಾಗ ಬರೆದಿದ್ದೆ. ಆ ಸುದೀರ್ಘ ಕಥೆಯು 1984ರಲ್ಲಿ ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು!!  ಇಂದಷ್ಟೇ  – ೩೦.೯.೨೦೧೧- ಹಿಂದೊಮ್ಮೆ ನನ್ನ ಆತ್ಮೀಯನಾಗಿದ್ದ ಗೆಳೆಯನೊಬ್ಬ ಈ  ಎರಡನೆಯ…

ಈಗ ನೀವು ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್‌ ಪ್ರಾಂತದ ಪಾರ್ಕಿಸ್‌ ನಗರದ ಹೊರವಲಯದ ವಿಶಾಲ ಹಸಿರು ಹಾಸಿನ ನಡುವೆ ಎದ್ದಿರುವ ದೈತ್ಯಾಕಾರದ ರೇಡಿಯೋ ಟೆಲಿಸ್ಕೋಪನ್ನು ಗೂಗಲ್‌ ನಕಾಶೆಯಲ್ಲಿ ಆಕಾಶದ ಕೋನದಿಂದ ನಿಂತಂತೆ ನೋಡುತ್ತಿದ್ದೀರಿ. ವಾಸ್ತವವಾಗಿ ಈ…

ಪುಟಾಣಿ ಮಕ್ಕಳಿಗೆ ಆಡಲು ನೂರಾರು ಗೇಮ್ಗಳು, ಹದಿಹರೆಯದವರಿಗೆ ಹರಟಲು ಹತ್ತಾರು ಸಾಮಾಜಿಕ ಜಾಲಗಳು, ಪತ್ರಕರ್ತರಿಗೆ ಓದಲು ನೂರಾರು ಪತ್ರಿಕೆಗಳು, ಹೆಣ್ಣುಮಕ್ಕಳಿಗೆ ನೂರಾರು ಪಾಕ ವಿಧಾನಗಳು, ಸೌಂದರ್ಯ ವರ್ಧನೆಯ ಕಿವಿಮಾತುಗಳು,  ಕಾಲೇಜು ವಿದ್ಯಾಗಳಿಗೆ  ಸೈಂಟಿಫಿಕ್  ಕ್ಯಾಲ್ಕುಲೇಟರ್, ಹಬ್ಬ…