ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!

ನಾನು ಈ ಹಿಂದೆ ಬರೆದಿದ್ದ ಟೆಸೆರಾಕ್ಟ್‌ ಓಸಿಆರ್ ಬಳಕೆ ಕುರಿತ ಲೇಖನದ ಆಶಯವನ್ನೇ ರದ್ದು ಮಾಡುವಂತಹ ಒಂದು ತಂತ್ರಾಂಶವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ವಿಯೆಟ್‌ಓಸಿಆರ್‌ ಎಂಬ ಈ ತಂತ್ರಾಂಶವನ್ನು (ವಿಂಡೋಸ್‌ ೧೦ ರಲ್ಲೂ ಸ್ಥಾಪಿಸಬಹುದು) ಬಳಸಿ ಯಾರಾದರೂ ಸುಲಭವಾಗಿ, ಮೆನ್ಯು ಆಧಾರಿತ ಸೇವೆಗಳ ಮೂಲಕ ಭಾರತೀಯ ಭಾಷೆಗಳ ಪುಟಗಳನ್ನು ಅತಿ ಹೆಚ್ಚಿನ ನಿಖರತೆಯಿಂದ ಪಠ್ಯವಾಗಿ ಪರಿವರ್ತಿಸಬಹುದಾಗಿದೆ. ಇದರಿಂದಾಗಿ ನಾನು ಈ ಹಿಂದೆ ತಿಳಿಸಿದಂತಹ ಕಮ್ಯಾಂಡ್‌ಲೈನ್‌ ಆಪರೇಶನ್‌ ಈಗ ಅನಗತ್ಯವಾಗಿದೆ! ಇದೂ ಕೂಡ ಟೆಸೆರಾಕ್ಟ್‌ ೪.೦ ಆವೃತ್ತಿಯನ್ನೇ ಅವಲಂಬಿಸಿದ ತಂತ್ರಾಂಶವಾಗಿದ್ದು ಟೆಸೆರಾಕ್ಟ್‌ನ ಮಹತ್ವವನ್ನು ಇದರಿಂದ ತಿಳಿಯಬಹುದಾಗಿದೆ.     ಈ ತಂತ್ರಾಂಶವು ಇಲ್ಲಿ ಸಿಗುತ್ತದೆ: https://sourceforge.net/projects/vietocr/files/latest/download I am happy to…

"ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!"

ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!

ಇಲ್ಲಿದೆ ಸಾಕ್ಷಿ!! 

"ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!"

ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!

ಫೆಬ್ರುವರಿ ೧೫ರಿಂದ ೧೭ರ ವರೆಗೆ ಹೊಸದಿಲ್ಲಿಯ ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ `ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಗಳು- ತಂತ್ರಜ್ಞಾನ’ ಎಂಬ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕನ್ನಡ ಭಾಷಾ ಮಾಹಿತಿ ತಂತ್ರಜ್ಞಾನ ಸಾಧನಗಳ ಬಗ್ಗೆ ಮುಖ್ಯ ಲೇಖಕನಾಗಿ ಒಂದು ಶ್ವೇತಪತ್ರವನ್ನು ಮಂಡಿಸಿದ ಖುಷಿ ನನ್ನದಾಗಿದೆ. ಯಾವುದೇ ಪದವಿ ಇಲ್ಲದೆ ಹೀಗೆ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ  ಆಹ್ವಾನಿತನಾಗಿದ್ದು, ದೇಶ ವಿದೇಶಗಳ ಖ್ಯಾತ ಭಾಷಾ ಸಂಶೋಧಕರು, ಅಧಿಕಾರಿಗಳೊಂದಿಗೆ ನೇರ ಸಂವಾದ ನಡೆಸಿದ್ದು, ಮೂರೂ ದಿನಗಳ ಕಾಲ ಸಕ್ರಿಯವಾಗಿ ಭಾಗವಹಿಸಿದ್ದು ನನ್ನ ಜೀವನದ ಮುಖ್ಯ ಘಟನೆ ಎಂದು ಹೇಳಲು ನನಗೆ ತುಂಬಾ ಸಂತೋಷವಿದೆ. ಈ ಮರೆಯಲಾಗದ ಘಟನೆಗೆ ಕಾರಣರಾದ, ನನ್ನ ಅಲ್ಪ ತಿಳಿವಳಿಕೆಯನ್ನು ಗುರುತಿಸಿ ಆಹ್ವಾನಿಸಿದ ವಿವಿಯಲ್ಲಿ ಕಂಪ್ಯುಟೇಶನಲ್‌ ಲಿಂಗ್ವಿಸ್ಟಿಕ್ಸ್‌ನಲ್ಲಿ ಪ್ರಾಧ್ಯಾಪಕರಾದ ಮತ್ತು ಸ್ಕೂಲ್‌…

"ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!"

ಓ ಗುರುವೇ..

ಎದೆಶಿಥಿಲ ನಡೆಜಟಿಲ ಶ್ರುತಿಯೊಡೆದ ಬೆರಳು; ಸರಿದ ಬಾಗಿಲಿನಾಚೆ ಖಾಲಿ ನೆರಳು.ಶರಣು ಬಂದರೂ ನೀವು ಸಿಗಲಿಲ್ಲ ಕೊನೆಗೂ. ಕೈಚಾಚಿದಷ್ಟೂ ಕಪ್ಪುಹೊರಳು.ಬೆಳಕು ಹರಿಯುವ ಮುನ್ನ ಕರೆದು ಕೂರಿಸಿ ನನ್ನ ಬೇಗುದಿಯ ಕಳೆದವರು ನೀವು.ಮರೆಯಾದಿರೇಕೆ? ದನಿಹಗುರ ಸ್ವರಪದರ ಧ್ಯಾನಸ್ಥ ಜತಿನೋಟ; ಅನವರತ ನೀಡಿದಿರಿ ರಾಗದೀಕ್ಷೆ ರೂಕ್ಷನಗರವ ದಾಟಿ ತಲುಪಿದರೂ ದಕ್ಕಲಾರದೆ ಹೋಯ್ತು ನಿಮ್ಮ ರಕ್ಷೆ; ಹದಗತ್ತಲಿನ ಹೊದಿಕೆ ಸರಿಸಿ ನಡೆದಿರಿ ನೀವು ನಿಮ್ಮದೇ ಹಾದಿಯಲ್ಲಿ. ಕರೆಯಾದಿರೇಕೆ? ದಿನಹಗಲು ರಾತ್ರಿಗಳ ಕ್ಷಣಗಳೆಣಿಸದ ಬದುಕು; ನಾದಬಿಂದುಗಳಾಚೆ ನಿಮ್ಮ ಗಮನ.ಎದೆಗುದಿಯ ತಳಮಳವ ಕಳೆವ ಸಂತನ ಶಕ್ತಿ. ನಿಮ್ಮಡಿಗೆ ನನ್ನ ನಮನ. ಬಿರುಗಳಿಗೆ ಸುಡುಮಳೆಗೆ ಪಕ್ಕಾಗದಂತೇನೆ ನೆರಳು ಕೊಟ್ಟಿರಿ ನೀವು ಸ್ವರವಾದಿರೇಕೆ? ಓ ಗುರುವೇ..ನನ್ನೊಳಗೆ ನದಿಯಾದಿರೇಕೆ? ೭ ಫೆಬ್ರುವರಿ ೨೦೧೯

"ಓ ಗುರುವೇ.."

ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)

ಈ ಸಲವಾದರೂ ನನ್ನ ಪತ್ನಿ ವಿಮಲಾ ಜನ್ಮದಿನದಂದು (ಜನವರಿ 14) ಒಂದು ಖಾಸಗಿ ಕಾಲಂ ಬರೆಯಬೇಕೆಂದು ಹೊರಟೆ. ಅದೀಗ ಕೊಂಚ ತಡವಾಗಿ ಪ್ರಕಟವಾಗುತ್ತಿದೆ. ಈ ಬ್ಲಾಗ್‌ ಬರೆಯಲು  ಕಾರಣಗಳೂ ಇವೆ. ಬ್ಲಾಗ್ ಮತ್ತು ಫೇಸ್‌ಬುಕ್‌ ಗಳಲ್ಲಿ ಬರೆದು ಕೆಲವರಿಗಾದರೂ  ನಮ್ಮೊಳಗಿನ ವಿಷಯಗಳನ್ನು ಹೇಳಿಕೊಂಡ ಸಮಾಧಾನ ಇರುತ್ತದೆ. ಅಲ್ಲದೆ ಇದು ನನ್ನ ಹೊಣೆಗಾರಿಕೆಯೂ ಆಗಿದೆ.   ನನ್ನ ಹೆಂಡತಿ ವಿಮಲಾ ಜನ್ಮತಃ ಕಿವಿ ಕೇಳಿಸದ ಮತ್ತು ಆ ಕಾರಣಕ್ಕಾಗಿಯೇ ಮಾತನಾಡಲಾಗದವಳು (deaf and mute by birth). ಅವಳ ಬಗ್ಗೆ ನಾನು `ಸುಧಾ’ ವಾರಪತ್ರಿಕೆಯಲ್ಲಿ ಬರೆದಿದ್ದ ಒಂದು ಲೇಖನ ಇಲ್ಲಿದೆ.ಅವೆಲ್ಲವೂ ಮದುವೆಗೆ ಮುನ್ನಿನ ಅಂಶಗಳು. ಆಮೇಲೇನಾಯ್ತು ಎಂಬುದು ನನಗೇ ಹೆಚ್ಚು ಗೊತ್ತು! ಲೇಖನದಲ್ಲಿ `ಆಕೆಗೊಬ್ಬ ಜೀವನ ಸಂಗಾತಿ ಬೇಕು’…

"ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)"

ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ

ಪ್ರಣಯ್‌ ಲಾಲ್‌ ಬರೆದ ಈ ಮಹತ್ತರ ಪುಸ್ತಕ ಎಲ್ಲರ ಮನೆಯಲ್ಲೂ ಇರಬೇಕು.

"ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ"

Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)

Tesseract 4.0 version which supports 10+ Indic languages has been released and the results are awesome. There are many possibilities. I thought I must record these for posterity!! Read on:  Tesseract may be embedded into the scanning machines. Since Google has developed Tesseract and released it as a Free Software (under Apache 2.0 licence), I hope either Google to come out with new age scanners with OCR for Indic languages, or any other company like…

"Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)"

ಅನಂತಕುಮಾರ್‌: ಒಂದು ಖಾಸಗಿ ನಮನ

ಇಂದು ನಮ್ಮನ್ನು ಅಗಲಿದ ಅನಂತಕುಮಾರ್ ಅಂತಿಮ ದರ್ಶನ ಪಡೆದಾಗ ನನ್ನೊಂದಿಗೆ ಬಂದಿದ್ದು ಕಲಾವಿದ ಮಿತ್ರ ದೇವರಾಜ. ೧೯೮೬ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ರಾಜ್ಯದ ಶಿಕ್ಷಣ ಕ್ಷೇತ್ರದ ದುಸ್ಥಿತಿಯ ಬಗ್ಗೆ ಕರಾಳ ಪತ್ರ ರೂಪಿಸಿದವರು ಅನಂತಕುಮಾರ್. ಅವರಿಗೆ ಸಹಾಯಕನಾಗಿ ಲೇಖನಿ ಹಿಡಿದಿದ್ದು ನಾನು. ಕೊನೆಗೆ ಅದಕ್ಕೊಂದು ಅರ್ಥವತ್ತಾದ ಮುಖಪುಟ ಬಿಡಿಸಿದ್ದು ದೇವರಾಜ! ಇಂದು ಮಾತ್ರ ನಮ್ಮಿಬ್ಬರಿಗೂ ಹಿರಿಯ ಮಿತ್ರನೊಬ್ಬನನ್ನು ಕಳೆದುಕೊಂಡ ಕರಾಳ ದಿನದಂತೆ ಅನ್ನಿಸಿತ್ತು. ಆ ಕರಾಳ ಪತ್ರವನ್ನು ಪಿ.ಲಂಕೇಶರೇ ಲಂಕೇಶ್ ಪತ್ರಿಕೆಯಲ್ಲಿ ಅತ್ಯಂತ ಹೃತ್ಪೂರ್ವಕವಾಗಿ ಶ್ಲಾಘಿಸಿ, ಎಬಿವಿಪಿಯ ಒಂದು ಒಳ್ಳೆಯ ಕೆಲಸ ಎಂದು ಒಂದು ಪುಟ ವರದಿ ಮಾಡಿಸಿದ್ದರು. ಆ ದಿನಗಳಿಂದ ಈದಿನದವರೆಗೂ ಕರಾಳ ಪತ್ರದ ಮೊನಚು ಶೈಲಿಯನ್ನು ಯಾರೂ ಮರೆತಿಲ್ಲ. ಅದಕ್ಕೆಲ್ಲ ಕಾರಣ…

"ಅನಂತಕುಮಾರ್‌: ಒಂದು ಖಾಸಗಿ ನಮನ"

ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!

ದಶಕಗಳ ಹಿಂದಿನ ಅಚ್ಚುಗಳನ್ನು ಪೇರಿಸಿದ ಕೋಣೆ; ಅತಿಹಳೆಯ ಪತ್ರಿಕಾ ತುಣುಕುಗಳನ್ನೂ ಜತನದಿಂದ ಕಾಪಿಟ್ಟ ಕಪಾಟುಗಳು; ಹೊರಗೆ ಆವರಿಸಿಕೊಂಡ ಸಾಲುಮರಗಳು; ಒಳಗೆ ಕೊರೆಯುತ್ತಿದ್ದ ಥಂಡಿ ಛಳಿ; ರೆಡ್‌ಆಕ್ಸೈಡ್‌ನೆಲದ ಹಾಸಿನಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ ಹಳೆಯ ಮೇಜುಗಳು; ಅವುಗಳನ್ನು ದಶಕಗಳಿಂದ ಬಳಸುತ್ತಿದ್ದ ಶ್ರೀ ಎಂ. ಕೃಷ್ಣಪ್ಪ, ಶ್ರೀ ಕಾ.ರ. ಆಚಾರ್ಯರಂತಹ ಕಟು ಶಿಸ್ತಿನ ಬಳಗ; 44 ವರ್ಷಗಳಿಂದ ಒಂದು ವಾರವೂ ಬಿಡದೆ (ತುರ್ತುಸ್ಥಿತಿ ಹೊರತುಪಡಿಸಿ) ಬೆ.ಸು.ನಾ. ಮಲ್ಯ ಮಾಮರ ಘನತೆವೆತ್ತ ಸಂಪಾದಕತ್ವ! ಅವರ ಸ್ಥಾನಕ್ಕೆ ನಾನು ನಿಯುಕ್ತಿಯಾಗಿದ್ದು ನನ್ನ ಬದುಕನ್ನೇ ಬದಲಿಸಿದ್ದು ನಿಜ. ಎರಡು ವರ್ಷಗಳ ಕಾಲ ವಿಕ್ರಮದ ಸಂಪಾದಕನಾಗಿ ವೈಯಕ್ತಿಕವಾಗಿ ಮಾಡಿದ ಸಾಧನೆಯೇನೂ ಇಲ್ಲ; ಮಲ್ಯ ಮಾಮರ ಪತ್ರಿಕಾಧರ್ಮದ ಪರಂಪರೆಯನ್ನು ಜತನದಿಂದ ಕಾಯ್ದುಕೊಂಡೆ ಎಂಬ ವಿಶ್ವಾಸವೂ ನನ್ನದಲ್ಲ. ಆದರೂ,…

"ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!"

Sardar Patel Memorial Speech by Beluru Sudarshana

Dear fellow Indians, Namaskara. I am privileged to deliver a speech on this auspicious day of Sardar Patel’s Birth anniversary.  I am a freelance journalist in Kannada, and this is my first speech in English. I have learned English by practice. So, I have prepared a written speech and I will try to communicate my feelings to the most extent possible. I request you to kindly oblige. Today is a great day for India. For…

"Sardar Patel Memorial Speech by Beluru Sudarshana"