ಹಿಮದೊಡಲ ತಳಮಳ: ೩೩ ವರ್ಷಗಳ ಚೀನೀ ಸೆರೆಮನೆವಾಸದ ಕಥನ ಉಚಿತವಾಗಿ ಓದಿ!

ತಳಮಳದ ಅರಿವಿನ ಹಿಂದೆ…. (ಅನುವಾದಕನ ಮಾತುಗಳು) ಒಂದು ದಿನ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಒಂದು ತುಂಡು ಹಾಳೆಯಲ್ಲಿ ಈ ಪುಸ್ತಕದ ವಿಮರ್ಶೆಯನ್ನು ಓದಿದೆ. ತುಂಬಾ ಪ್ರಯತ್ನಿಸಿ ಪುಸ್ತಕವನ್ನು ಖರೀದಿಸಿದೆ. ಓದಿದ ಮೇಲೆ ಇದನ್ನು ಕನ್ನಡಕ್ಕೆ ತರುವ ಮನಸ್ಸಾಯಿತು. ಆ ಕಾಲದಲ್ಲಿ ಈಮೈಲ್ ಶುರುವಾಗಿತ್ತಷ್ಟೆ. ನಾನು ಈ ಪುಸ್ತಕದ ಹಕ್ಕುಸ್ವಾಮ್ಯ ಹೊಂದಿರುವ ಪ್ರಕಾಶಕರನ್ನು ಸಂಪರ್ಕಿಸಿದೆ. ಎಂದಿನಂತೆ ಪಾಶ್ಚಾತ್ಯ ಪ್ರಕಾಶಕರ ಒರಟುತನ ಪ್ರಕಟವಾಯಿತು. ಕೊನೆಗೆ ಟಿಬೆಟನ್ ಸರ್ಕಾರದ ಬೆಂಗಳೂರು ಕಚೇರಿಯಲ್ಲಿ ಶೂಫೆಲ್ ತುಪ್ತೆನ್ ಎಂಬ ಅಧಿಕಾರಿಯ ಗೆಳೆತನ ಮಾಡಿ ಅವರ ಮೂಲಕ ಯತ್ನಗಳನ್ನು ಆರಂಭಿಸಿದೆ. ಅವರು ಲಂಡನ್ನಿನಲ್ಲಿರುವ ಟಿಬೆಟನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ನನಗೆ ಅನುವಾದದ ಮತ್ತು ಧಾರಾವಾಹಿ ಪ್ರಕಟಣೆಯ ಹಕ್ಕುಗಳನ್ನು ಅಧಿಕೃತವಾಗಿ ಕೊಡಿಸಿದರು. ಆ ಪತ್ರವು ಈಗಲೂ…

"ಹಿಮದೊಡಲ ತಳಮಳ: ೩೩ ವರ್ಷಗಳ ಚೀನೀ ಸೆರೆಮನೆವಾಸದ ಕಥನ ಉಚಿತವಾಗಿ ಓದಿ!"