Facebook X (Twitter) Instagram
    Wednesday, November 29
    Facebook X (Twitter) Instagram Pinterest YouTube
    ಬೇಳೂರುಸುದರ್ಶನ
    • ಮುಖಪುಟ
    • ಲೇಖನಗಳು
    • ನನ್ನ ಪಯಣ
      • ನನ್ನ ಕಿರು ಪರಿಚಯ
    • ಕವನಗಳು
    • ಸುದ್ದಿ
    • ವಿಮರ್ಶೆ
    • ಸಣ್ಣ ಕಥೆಗಳು
    Subscribe
    ಬೇಳೂರುಸುದರ್ಶನ
    You are at:Home»ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ)»ಒಳಗಣ್ಣು: ‘ವಿಕಲಚೇತನ’ ಪದದ ಬಳಕೆ ಎಷ್ಟು ಸರಿ…..
    ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ)

    ಒಳಗಣ್ಣು: ‘ವಿಕಲಚೇತನ’ ಪದದ ಬಳಕೆ ಎಷ್ಟು ಸರಿ…..

    ಟಿ ಎಸ್‌ ಶ್ರೀಧರBy ಟಿ ಎಸ್‌ ಶ್ರೀಧರJune 6, 20125 Comments2 Mins Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಕೆಲ ದಿನಗಳ ಹಿಂದೆ ನನ್ನ ಪರೀಕ್ಷೆಗಳನ್ನು ಬರೆಯಲು ಮೈಸೂರಿಗೆ ಹೋಗಿದ್ದೆ. ಅಲ್ಲಿ ದೃಷ್ಟಿ ಸವಾಲುಳ್ಳ ನನ್ನ ಒಬ್ಬ ಸ್ನೇಹಿತರು ಕನ್ನಡ ಸ್ನಾತಕೋತ್ತರ ಪದವಿಯ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅವರೂ ಸಹಾ ಈಸ್ಪೀಕ್ ಕನ್ನಡ ತಂತ್ರಾಂಶವನ್ನು ದಿನ ನಿತ್ಯದ ಕೆಲಸಗಳಿಗೆ ಅಂದರೆ ಅವರ ಶೈಕ್ಷಣಿಕ ಹಾಗು ಜ್ಞಾನಾಭಿವೃದ್ಧಿಯಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರು ನನ್ನನ್ನು ಮೈಸೂರು ವಿಶ್ವವಿದ್ಯಾಲಯದ  ಕುವೆಂಪು ಕನ್ನಡ ಅಧ್ಯಯನ ಕೇಂದ್ರಕ್ಕೆ ಆಹ್ವಾನಿಸಿದ್ದರು.  ಅಲ್ಲಿ ನನಗೆ ಭಾಷಾವಿಜ್ಞಾನಿ ಡಾ|| ಪಂಡಿತಾರಾಧ್ಯ ಅವರನ್ನು ಬೇಟಿ ಮಾಡಿಸಿದರು. ಅವರೊಟ್ಟಿಗೆ ಕೆಲ ಹೊತ್ತು ಕಳೆಯುವ ಅವಕಾಶ ನನಗೆ ಸಿಕ್ಕಿತು. ಅವರೊಟ್ಟಿಗೆ ಕನ್ನಡದ ಕುರಿತು ಹಾಗೇ ಸುಮ್ಮನೆ ಮಾತನಾಡುತ್ತಿದ್ದೆ. ನಮ್ಮ ಮಾತುಗಳಲ್ಲಿ ಆಂಡ್ರಾಯ್‌ಡ್ ಟ್ಯಾಬ್ಲೆಟ್ಟಿನಿಂದ ಹಿಡಿದು ಇನ್ನು ಕೆಲವು ತಂತ್ರಜ್ಞಾನಗಳಲ್ಲಿ ಕನ್ನಡದ ಬಗೆಗೂ ಮಾತು-ಕಥೆಯಾಯಿತು. ಹಾಗೆಯೇ ಅವರು ಅಂಧರ ಹಾಗು ಅಂಗವಿಕಲರ ಬಗೆಗೂ ಮಾತನಾಡಿದರು. ಆ ಸಂದರ್ಭದಲ್ಲಿ ಅವರು ಹೇಳಿದ ಒಂದು ವಿಷಯ ನನ್ನಲ್ಲೂ ಪ್ರಶ್ನೆ ಹುಟ್ಟು ಹಾಕಿತು. ಅದನ್ನೇ ಇಲ್ಲಿ ನಾನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ.
    ಅವರು ಹೇಳಿದ್ದೇನೆಂದರೆ ‘ವಿಕಲಚೇತನ’ ಎಂಬ ಪದದ ಬಳಕೆ ಸರಿಯಲ್ಲ. ಏಕೆಂದರೆ ಅಂಗವಿಕಲರು ದೈಹಿಕವಾಗಿ ಯಾವುದಾದರೂ ಅಂಗದ ವಿಕಲತೆಯನ್ನು ಹೊಂದಿರುತ್ತಾರೆಯೇ ಹೊರತೂ ಅವರಿಗೆ ಚೈತನ್ಯವೇ ವಿಕಲವಾಗಿರುವುದಿಲ್ಲ! ಈ ಮಾತು ನನಗೂ ಸರಿಯೆನಿಸಿತು. ಇದಾದ ಮೇಲೆ ಈ ಬಗ್ಗೆ ನಾನು ತುಂಬ ಯೋಚಿಸಿದೆ. ಮತ್ತೆ ಕೆಲವರೊಂದಿಗೆ ಈ ವಿಚಾರವನ್ನು ಹಂಚಿಕೊಂಡೆ. ಆ ಬಳಿಕ ನನಗೆ ತೋಚಿದ ಕೆಲ ವಿಷಯಗಳನ್ನು ಈಗ ಹೇಳುತ್ತಿದ್ದೇನೆ / ಬರೆಯುತ್ತಿದ್ದೇನೆ!
    ‘ವಿಕಲತೆ’ ಎಂದರೆ ಇಲ್ಲದಿರುವುದು. ಇದು ಇಂಗ್ಲೀಷ್‌ನ ‘disability’ ಎಂಬ ಪದಕ್ಕೆ ಸರಿ ಸಮ. ‘ಅಂಗವಿಕಲ’ ಅಥವಾ ‘ವಿಕಲಾಂಗ’ ಎಂದರೆ ಯಾವುದೋ ಒಂದು ಅಂಗ ಇಲ್ಲದಿರುವುದು ಅಥವಾ ಯಾವುದೋ ನಿರ್ದಿಷ್ಟ ಅಂಗ ತನ್ನ ಕಾರ್ಯವನ್ನು ಭಾಗಶಹಾ ಅಥವಾ ಸಂಪೂರ್ಣವಾಗಿ ನಿರ್ವಹಿಸಲು ಅಸಮರ್ಥವಾಗಿರುವ ಸ್ಥಿತಿ. ಹಾಗಾದರೆ, ‘ವಿಕಲಚೇತನ’ ಎಂದರೇನು? ಏನಿಲ್ಲ,
    ವ್ಯಕ್ತಿಯಲ್ಲಿ ಚೈತನ್ಯ ಇಲ್ಲದಿರುವುದು! ಅಲ್ಲವೇ? ಇಷ್ಟು ವಿಷಧವಾಗಿ ಗೊತ್ತಾದ ಮೇಲೂ ನಾವು ಈ ಪದವನ್ನು ಬಳಕೆ ಮಾಡುವುದು ಸರಿಯೇ? ಬೇಳೂರು ಸುದರ್ಶನ ಅವರೊಂದಿಗೆ chatಇಸುತ್ತಿರುವಾಗ ಅವರು ‘ವಿಶಿಷ್ಟಚೇತನ’ ಎಂಬ ಪದವನ್ನು ಕೊಟ್ಟರು. ಆ ಪದ ನನಗೆ ಸೂಕ್ತ ಅನಿಸಿತು. ಅದು ಇಂಗ್ಲೀಷ್‌ನ ‘differently abled’ ಎಂಬ ಪದಕ್ಕೆ ಸರಿ ಸಮ!
    ಇದಲ್ಲದೇ ನಾವು ದೈಹಿಕ ಸವಾಲು ಹೊಂದಿರುವ ವ್ಯಕ್ತಿಗಳು ಅಂತಲೂ ಕರೆಯಬಹುದು. ಅಂಧರನ್ನು `ದೃಷ್ಟಿ ಸವಾಲುಳ್ಳವರು’ ಎಂದು ಕೆಲವು ಕಡೆ ಬಳಸುವುದನ್ನು ನಾವು ನೋಡಿದ್ದೇವೆ. ಇದೂ ಒಂದು ಸರಿಯಾದ ಬಳಕೆ ಅನ್ನಬಹುದು.
    ಇಂಗ್ಲೀಷ್‌ನಲ್ಲಿ ‘handicapped’ ಎಂದು ಬಳಸುವುದನ್ನು ಆಗಾಗ ನಾವು ನೋಡುತ್ತಿರುತ್ತೇವೆ. ಈ ಪದದ ಬಳಕೆಯೂ ತಪ್ಪು! ಹೀಗೆ ಹೇಳುವ ಮುನ್ನ ಈ ಪದದ ಮೂಲವನ್ನು ಕೊಂಚ ಗಮನಿಸೋಣ. ಕೆಲ ಶತಮಾನಗಳ ಹಿಂದೆ ಯುದ್ಧದಲ್ಲಿ ಅಂಗಾಂಗಗಳನ್ನು ಕಳೆದುಕೊಂಡ ಸೈನಿಕರು ಜನನಿಭಿಡ ಸ್ಥಳಗಳಲ್ಲಿ ತಮ್ಮ ಕೈಯಲ್ಲಿ ‘cap’ ಟೊಪ್ಪಿಯನ್ನು ಹಿಡಿದು ಭಿಕ್ಷೆ ಬೇಡುತ್ತಿದ್ದರು. ಅವರನ್ನು ‘handicapped’ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಎಲ್ಲಾ ಅಂಗವಿಕಲರನ್ನೂ ಅದೇ ಶಬ್ದದಿಂದ ಸಂಭೋದಿಸುವ ಪರಿಪಾಠ ಬೆಳೆದು ಬಂತು. ಆದ್ದರಿಂದ ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುವುದೇನೆಂದರೆ, ದಯವಿಟ್ಟು ‘ವಿಕಲಚೇತನ’, ’handicapped’ ಎಂಬಂಥ ಅವಹೇಳನಕಾರಿ ಪದಗಳನ್ನು ಬಳಸಬೇಡಿ.
    ಅಂಗವಿಕಲರಿಗೆ ಯಾವುದೋ ಒಂದು ಅಂಗದ ನ್ಯೂನತೆ ಇರುತ್ತದೆಯೇ ಹೊರತು ಅವರಿಗೆ ಚೈತನ್ಯದ ನ್ಯೂನತೆ ಇರುವುದಿಲ್ಲ ಎಂದು ಅನೇಕ ಅಂಗವಿಕಲರು ಈಗಾಗಲೇ ಸಾಧಿಸಿ ತೋರಿಸಿದ್ದಾರೆ. ನಾವು ಇನ್ನು ಮುಂದೆ ಇಂತಹಾ ಪದಗಳ ಬಳಕೆಯನ್ನು ನಿಲ್ಲಿಸೋಣ, ಅಲ್ಲವೇ?

    Share. Facebook Twitter Pinterest LinkedIn Tumblr Email
    Previous Articleಪಿ ಸಾಯಿನಾಥ್ ನೀಡುತ್ತಿರುವ ಕೌಂಟರ್ ಮೀಡಿಯಾ ಪ್ರಶಸ್ತಿಗೆ ಆಹ್ವಾನ
    Next Article Law abiding citizens and law disobeying Government
    ಟಿ ಎಸ್‌ ಶ್ರೀಧರ

    Related Posts

    ಒಡೆದ ಗುಟ್ಟಿನ ಗೂಡು…..

    October 1, 2016

    ಆಪ್ ಅಂದ್ರೆ ಲೈಫಲ್ಲ, ಗ್ಯಾಜೆಟ್ ಅಂದ್ರೆ ಗುರು ಅಲ್ಲ; ಫೇಸ್ಬುಕ್ ಅಂದ್ರೆ ಕ್ರಾಂತಿ ಅಲ್ಲ!

    September 17, 2015

    ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ

    January 21, 2015

    5 Comments

    1. Anupa koti on June 8, 2012 11:44 am

      Nice article… Many use the words without the prior implication of what the words mean really. Some words do have harsh meanings whose usage have been more than usual. Really a ‘ಕಣ್’ ತೆರೆಸುವ ಲೇಖನ

      Reply
    2. ಸಿಬಂತಿ ಪದ್ಮನಾಭ on June 15, 2012 10:53 pm

      ನಿಮ್ಮ ಮಾತು ಶೇ. 100 ನಿಜ. ಅಂಗವಿಕಲರನ್ನು ಉಲ್ಲೇಖಿಸುತ್ತಾ ಪತ್ರಿಕೆಗಳು ಟಿವಿಗಳು ‘ವಿಕಲಚೇತನ’ ಎಂಬ ಪದ ಬಳಕೆ ಮಾಡುವುದು ಓದಿದಾಗ/ಕೇಳಿದಾಗಲೆಲ್ಲ ಮನಸ್ಸಿಗೆ ಬಹಳೇ ಹಿಂಸೆಯಾಗುತ್ತದೆ. ‘ವಿಕಲ’ ಹಾಗೂ ‘ಚೇತನ’ ಎಂಬ ಎರಡು ಪದಗಳೂ ಅಷ್ಟೊಂದು ಸ್ಪಷ್ಟವಾಗಿರುವಾಗ, ಅದ್ಯಾರು ಈ ವಿಕಲಚೇತನ ಎಂಬ ಪದದ ಬಳಕೆಯನ್ನು ಆರಂಭಿಸಿದರೋ ಅರ್ಥವಾಗೋದಿಲ್ಲ. ನಮ್ಮ ಮಾಧ್ಯಮಗಳಲ್ಲಿ ಒಳ್ಳೇ ಕನ್ನಡ ಬಲ್ಲವರೂ ಸಾಕಷ್ಟು ಮಂದಿಯಿದ್ದಾರಲ್ಲ; ಆದ್ರೂ ಯಾಕೆ ಹೀಗೆ?

      Reply
    3. Girija on June 15, 2012 11:38 pm

      ನನಗೆ ತಿಳಿದ ಮಟ್ಟಿಗೆ ವಿಕಲ ಚೇತನ ಪದವು ಇತ್ತೀಚೆಗಿನ ವರ್ಷಗಳಲ್ಲಿ ಕೇಳಿದ ಅಂತ್ಯಂತ ಕೆಟ್ಟ ಪದ…

      Reply
    4. Tejaswini Hegde on June 16, 2012 2:23 pm

      ನಮಸ್ಕಾರ.
      ನಿಮ್ಮ ವಿವೇಚನೆ ತುಂಬಾ ಚೆನ್ನಾಗಿದೆ.. ನನ್ನದೂ ಸಂಪೂರ್ಣ ಒಪ್ಪಿಗೆ ಇದೆ.. ನನ್ನ ಪ್ರಕಾರ “ವಿಶೇಷ ಚೇತನ” ಪದದ ಬಳಕೆ ಅತಿ ಹೆಚ್ಚು ಸೂಕ್ತ!! ಯಾರೂ/ಯಾರ ಚೈತನ್ಯವೂ ವಿಕಲವಾಗಿರದು. ವಿಕಲತೆ ಇರೋದು ನೋಡುಗರ ನೋಟದಲ್ಲು… ಯೋಚಿಸುವ ಯೋಚನೆಯಲ್ಲಿ ಅಷ್ಟೇ..
      ನಾನೂ ಒರ್ವ ವಿಶೇಷ ಚೇತನ ವ್ಯಕ್ತಿ. ನನ್ನ ಅನುಭವಗಳನ್ನು.. ವಿಶೇಷ ಚೇತನರ ಸಮಸ್ಯೆಗಳನ್ನು ಆಗಾಗ ನನ್ನ ಬ್ಲಾಗ್ ನಲ್ಲಿ ಬರೆಯುತ್ತಿರುತ್ತೇನೆ. ಸಾಧ್ಯವಾದಾಗ… ಈ ಎರಡು ಲಿಂಕ್ಸ್ ನೋಡಿ.
      http://www.manasa-hegde.blogspot.in/2012/06/blog-post.html
      &
      http://www.manasa-hegde.blogspot.in/2008/12/blog-post.html

      Reply
    5. Geetha H on August 25, 2012 8:28 pm

      nimma anisike sampoorna sariyaagide!

      Reply

    Leave A Reply Cancel Reply

    ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ), ಮಾಹಿತಿ / ಲೇಖನ
    • ಒಡೆದ ಗುಟ್ಟಿನ ಗೂಡು…..
    • ಆಪ್ ಅಂದ್ರೆ ಲೈಫಲ್ಲ, ಗ್ಯಾಜೆಟ್ ಅಂದ್ರೆ ಗುರು ಅಲ್ಲ; ಫೇಸ್ಬುಕ್ ಅಂದ್ರೆ ಕ್ರಾಂತಿ ಅಲ್ಲ!
    • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
    • ಶುಕ್ರ ಸಂಕ್ರಮ: ಪುಸ್ತಕ ಓದಿ
    • Shankar Sharma: Feedback on National Electricity Plan on Generation – 12th & 13th Plan periods
    • Copyright Law Amendments: what it gives and what it does not give print impaired persons
    • ಒಳಗಣ್ಣು: ೨೦೧೧ ರ ನನ್ನ ಹಿನ್ನೋಟ
    • ಒಳಗಣ್ಣು: ಮಿತ್ರಮಾಧ್ಯಮದಲ್ಲಿ ಟಿ ಎಸ್‌ ಶ್ರೀಧರ್‌ ಅಂಕಣ ಆರಂಭ
    • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
    • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
    • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
    • ಕೂಡಿಗಿ ಕಲ್ಲಿದ್ದಲು ಶಾಖೋತ್ಪನ್ನ ವಿದ್ಯುತ್‌ ಸ್ಥಾವರದಿಂದ ಲಾಭವಿದೆಯೆ?
    • Where are farm hands when you need them?
    • An effective Climate Action Plan for Karnataka
    • Nothing Special about Special Economic Zones (SEZs)
    • SUPREME COURT BANS MINING IN BELLARY DISTRICT
    • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
    • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
    • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
    • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
    • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
    ಹುಡುಕಿ!
    ವಿಭಾಗಗಳು
    • FREE BOOK CULTURE (6)
    • News Flashes (25)
    • Reviews (15)
    • Uncategorized (4)
    • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
    • ಕಲಿ ಯುಗ (62)
    • ಕವನಗಳು (131)
    • ನನ್ನ ಮಾಧ್ಯಮಯಾನ (3)
    • ಮಕ್ಕಳ ಪ್ರಬಂಧಗಳು (7)
    • ಮಾಹಿತಿ / ಲೇಖನ (22)
    • ಲೇಖನಗಳು (240)
    • ವಿಮರ್ಶೆ (45)
    • ಶಂಕರ್ ಶರ್ಮ (22)
    • ಸಣ್ಣ ಕಥೆಗಳು (20)
    • ಸುದ್ದಿ (140)
    • ಹಿಮದೊಡಲ ತಳಮಳ (1)
    • ಹುಲ್ಲಿನ ಸಾರು (1)
    Archives
    © 2023 ಬೇಳೂರುಸುದರ್ಶನ.

    Type above and press Enter to search. Press Esc to cancel.