ಪುಸ್ತಕ ಭಂಡಾರಗಳು

ಪುಸ್ತಕಗಳು ಎಂದಕೂಡಲೇ ಪುಟ್ಟ ಮಕ್ಕಳು ಕಣ್ಣು ಹಾಯಿಸುತ್ತಾರೆ. ಮನೆಯ ಹೆಣ್ಣುಮಕ್ಕಳು ತಮಗೆ ಬೇಕಾದ ಮಾಹಿತಿ ಇದೆಯೆ ಎಂದು ಪುಟ ತಿರುಗಿಸುತ್ತಾರೆ. ಹಿರಿಯರು ಕಾಲಕ್ಷೇಪಕ್ಕೆಂದು ಹಲವು ಪುಸ್ತಕಗಳನ್ನು ಸಂಗ್ರಹಿಸುತ್ತಾರೆ. ಇಂಥ ನೂರಾರು, ಸಾವಿರಾರು ಪುಸ್ತಕಗಳು ಇದ್ದರೆ? ಹಾಗೆ ವಿವಿಧ ವಿಷಯಗಳ ಮೇಲೆ ನೂರಾರು ಪುಸ್ತಕಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗಾಗಿ ಮುಕ್ತವಾಗಿರುವ ವ್ಯವಸ್ಥೆಯ್ನೇ ಪುಸ್ತಕ ಭಂಡಾರ ಎಂದು ಕರೆಯುತ್ತಾರೆ.  ಪುಸ್ತಕ ಭಂಡಾರ ಎಂದರೆ eನದಭಂಡಾರವೇ ಎನ್ನಬಹುದು. ಒಂದೇ ಸ್ಥಳದಲ್ಲಿ ಕುಳಿತು ಜಗತ್ತಿನ ಯಾವುದೇ ಮೂಲೆಯ ಮಾಹಿತಿಯನ್ನು, ಕಥೆಯನ್ನು, ಸ್ಥಳವಿಶೇಷವನ್ನು ತಿಳಿದುಕೊಳ್ಳುವ, ಅನುಭವಿಸುವ ಸಾಧ್ಯತೆ ಇರುವುದು ಪುಸ್ತಕಗಳಿಂದ ಮಾತ್ರ. ಅಲ್ಲದೆ ಪುಸ್ತಕಗಳು ನಮ್ಮ ನಾಗರಿಕತೆಯ ಅತಿ ಮಹತ್ವದ ಶೋಧವಾಗಿದೆ. ಸಾವಿರಾರು ವರ್ಷಗಳಿಂದ ಪುಸ್ತಕಗಳು ಹಸಸ್ತಪ್ರತಿಯಲ್ಲಾಗಲೀ, ಮುದ್ರಣದ ಮೂಲಕವಾಗಲೀ ಪ್ರಕಟವಾಗುತ್ತ ಬಂದಿವೆ.  ಈ…

"ಪುಸ್ತಕ ಭಂಡಾರಗಳು"

ಅರ್ಥವಿಲ್ಲದ ಓದು ವ್ಯರ್ಥ

ವಿದ್ಯಾರ್ಥಿಗಳು ಪರೀಕ್ಷೆಗಾಗಿ ಓದುತ್ತಾರೆ. ಆದರೆ ಈ ಓದಿನಲ್ಲಿ ಎದುರಾಗುವ ನೂರಾರು ವಿಷಯಗಳನ್ನು ಅವರು ಅರ್ಥ ಮಾಡಿಕೊಂಡಿದ್ದಾರೆಯೇ ಎನ್ನುವುದು ಮುಖ್ಯ. ಗಣಿತದ ಒಂದು ಸಮೀಕರಣವನ್ನು ಅರ್ಥ ಮಾಡಿಕೊಳ್ಳದೇ ಹೋದರೆ  ಅದರ ಮೇಲೆ ಕೇಳುವ ಪ್ರಶ್ನೆಗಳಿಗೆ ಆರಾಮಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳು ಸಮಸ್ಯೆ ಹಾಗೂ ಪರಿಹಾರಗಳನ್ನು ಬಾಯಿಪಾಠ ಮಾಡಿಬೇಕಾಗುತ್ತದೆ. ಇದರಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಅರ್ಥ ಮಾಡಿಕೊಳ್ಳದೇ ಓದುವುದು ಯಾವ ಪ್ರಯೋಜನಕ್ಕೂ ಬಾರದು ಎನ್ನುವುದು ಈ ಗಾದೆ ಮಾತಿನ ತಾತ್ಪರ್ಯ.  ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಅರ್ಥ ಮಾಡಿಕೊಂಡರೆ ಅವರಿಗೆ ಮುಂದಿನ ವೃತ್ತಿಜೀವನದಲ್ಲಿ ಯಶಸ್ಸು ಸಿಗುತ್ತದೆ. ಬದುಕಿನಲ್ಲಿ ಬರುವ ಹಲವಾರು ಸಮಸ್ಯೆಗಳಿಗೆ ಪುಸ್ತಕಗಳಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ನಿಜ. ಕೇವಲ ವಿeನ, ತಂತ್ರeನವಷ್ಟೇ ಅಲ್ಲ, ಸಾಮಾಜಿಕ ಸಮಸ್ಯೆಗಳಿಗೆ, ಆರೋಗ್ಯದ…

"ಅರ್ಥವಿಲ್ಲದ ಓದು ವ್ಯರ್ಥ"

ಹಿತ್ತಲ ಗಿಡ ಮದ್ದಲ್ಲ

ಯಾವುದೋ ರೋಗಕ್ಕೆ ಕಂಡಕಂಡ ಗಿಡದ ರಸವಾಗಲೀ, ಬೇರಾಗಲೀ ಔಷಧವಾಗಲಾರದು ಎಂಬುದು ಈ ನಾಣ್ಣುಡಿಯ ಸ್ಥೂಲ ಅರ್ಥ. ಆದರೆ ಇದರ ಒಳಾರ್ಥವೇ ಬೇರೆ. ನಾವು ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ತುರ್ತು ಉಪಾಯಗಳನ್ನೇ ಹುಡುಕುತ್ತೇವೆ. ಉದಾಹರಣೆಗೆ  ಬಿದ್ದು ಗಾಯವಾದರೆ ಕೂಡಲೇ ಅದನ್ನು ತಣ್ಣೀರಿನಿಂದ ತೊಳೆದು ಅದಕ್ಕೆ ಪೌಡರ್ ಹಚ್ಚುತ್ತೇವೆ. ಆದರೆ ಹೀಗೆ ತಕ್ಷಣ ಕೈಗೆ ಸಿಕ್ಕಿದ ವಸ್ತುವನ್ನು ಬಳಸುವುದು ಕೆಲವೊಮ್ಮೆ ಅಪಾಯಕಾರಿಯಾಗುತ್ತದೆ. ಗಾಯಕ್ಕೆ ಸೂಕ್ತವಾಗ ಔಷಧವನ್ನು ಹಚ್ಚುವುದೇ ಸರಿಯಾದ ಮಾರ್ಗ.  ಹಾಗೆಯೇ ಬದುಕಿನಲ್ಲಿ ನಾವು ಎದುರಿಸುವ ಹಲವು ಸಮಸ್ಯೆಗಳಿಗೆ  ನಾವು ತಾತ್ಕಾಲಿಕ ಪರಿಹಾರವನ್ನು ಹುಡುಕುವುದು ಸರಿಯಲ್ಲ ಎಂಬುದೂ ಈ ಗಾದೆಯ ಅರ್ಥ. ಉದಾಹರಣೆಗೆ ಹಣದ ಸಮಸ್ಯೆ ಬಂದಾಗ ತಕ್ಷಣ ಸಾಲ ಮಾಡುವುದಕ್ಕೆ ಮುಂದಾಗುತ್ತಾರೆ. ಆದರೆ ದುಡಿದು ಸಂಪಾದಿಸುವುದೇ…

"ಹಿತ್ತಲ ಗಿಡ ಮದ್ದಲ್ಲ"

ಜಲ ಸಂರಕ್ಷಣೆ

ಇಂದು ಎಲ್ಲೆಡೆಯೂ ಜಲಸಂರಕ್ಷಣೆಯ ಮಾತು ಕೇಳಿಬರುತ್ತಿದೆ.  ಜಲಸಂರಕ್ಷಣೆ ಎಂದರೇನು? ಮುಂದಿನ ಪೀಳಿಗೆಗಳೂ ನಮ್ಮ ಹಾಗೆಯೇ ನೀರನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡುವುದೇ ಜಲಸಂರಕ್ಷಣೆ ಎಂದು ಸರಳವಾಗಿ ಹೇಳಬಹುದು. ಜಲಸಂರಕ್ಷಣೆ ಯಾಕೆ ಬೇಕು? ನಮ್ಮ ಬದುಕಿನಲ್ಲಿ ನೀರಿಲ್ಲದೆ ಏನನ್ನೂ ಮಾಡಲಾಗುವುದಿಲ್ಲ. ಇಂಥ ನೀರೇ ಸಿಗದೆ ಹೋದರೆ ಬದುಕು ಬರಡಾಗುತ್ತದೆ. ನೀರಿಗಾಗಿ ಇಂದು ಎಲ್ಲೆಡೆ ಹಾಹಾಕಾರ ಕೇಳಿಬರುತ್ತಿದ.  ನಗರಗಳಲ್ಲಿ ನೀರಿನ ಸರಬರಾಜು ಅಸ್ತವ್ಯಸ್ತವಾಗುತ್ತಿದೆ. ಹಳ್ಳಿಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಇನ್ನು ಹೊಲಗದ್ದೆಗಳಿಗೆ ಬೇಕಾದ ನೀರಂತೂ ಸಿಗುವುದೇ ಕಷ್ಟವಾಗಿದೆ.  ಹಾಗೆಂದು ನೀರು ಹೆಚ್ಚಾಗುತ್ತಲೂ ಇಲ್ಲ; ಕಡಿಮೆಯೂ ಆಗುವುದಿಲ್ಲ. ಭೂಮಿಯ ನೀರಿನ ಪ್ರಮಾಣ ಕಡಿಮೆಯಾಗದಿದ್ದರೂ, ನೀರು ಸಿಗದೆ ಹೋಗುತ್ತದೆ; ಬರಗಾಲ ಹೆಚ್ಚಾಗುತ್ತದೆ. ಆದ್ದರಿಂದಲೇ ಜಲಸಂರಕ್ಷಣೆಗೆ ಮಹತ್ವ ಬಂದಿದೆ.  ಜಲಸಂರಕ್ಷಣೆಯಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ…

"ಜಲ ಸಂರಕ್ಷಣೆ"

ದೇಶ ಸುತ್ತು, ಕೋಶ ಓದು

ದೇಶ ಸುತ್ತು ಕೋಶ ಓದು ಎನ್ನುವುದು ನಮ್ಮ ನಾಡಿನ ಹಿರಿಯರು ರೂಪಿಸಿದ ನಾಣ್ಣುಡಿ. ಈ ಮಾತು ನಮ್ಮ ದೇಶದ ಭವ್ಯ ಪರಂಪರೆಯನ್ನು  ಸೂಚಿಸುತ್ತದೆ. ಯಾಕೆಂದರೆ ದೇಶ ಸುತ್ತುವುದು ಎಂದರೆ ಪ್ರವಾಸ ಮಾಡುವುದು; ಕೋಶ ಓದು ಎಂದರೆ ಪುಸ್ತಕಗಳನ್ನು ಓದುವುದು.  ದೇಶ ಸುತ್ತಿ ಕೋಶ ಓದುವ ಬಗ್ಗೆ ನಮ್ಮ ಹಿರಿಯರು ತಮ್ಮ ಅನುಭವದಿಂದಲೇ ಬರೆದಿದ್ದಾರೆ. ಕೋಶ ಓದಿ ಅಪಾರ  eನವನ್ನು ಸಂಪಾದಿಸಿದ  ಶಂಕಾರಾಚಾರ್ಯರು ಭಾರತದ ನಾಲ್ಕೂ ಮೂಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಪೀಠಗಳನ್ನು ಸ್ಥಾಪಿಸಿದರು; ಹಾಗೆಯೇ ನಮ್ಮ ತಂದೆಯ ಊರಿನ ಒಬ್ಬರು ಸುಮಾರು ೬೦ ಸಲ ಕಾಶಿಗೆ ನಡೆದುಕೊಂಡೇ ಹೋಗಿ ಬಂದಿದ್ದರು; ಅವರ ಜೋಳಿಗೆಯಲ್ಲಿ ಯಾವಾಗಲೂ ಕನ್ನಡದ ಅತ್ಯುತ್ತಮ ಪುಸ್ತಕಗಳು ಇರುತ್ತಿದ್ದವು.  ಹೀಗೆ ನಮ್ಮ ಪರಂಪರೆಯಲ್ಲಿ ದೇಶ ಸುತ್ತುವ…

"ದೇಶ ಸುತ್ತು, ಕೋಶ ಓದು"

ಶಿಕ್ಷಕರ ದಿನಾಚರಣೆ ಮತ್ತು ಗಾಂಧಿ ಜಯಂತಿ

ಪ್ರತಿ ವರ್ಷದ ಸೆಪ್ಟೆಂಬರ್ ೫ರಂದು ನಾವು ಶಿಕ್ಷಕರ ದಿನವನ್ನು ಆಚರಿಸುತ್ತೇವೆ. ಅಂದು ನಾವೆಲ್ಲರೂ ನಮ್ಮ ಶಿಕ್ಷಕರಿಗೆ ನಮಿಸುತ್ತೇವೆ; ಶುಭಾಶಯ ಹೇಳುತ್ತೇವೆ.  ನಮ್ಮ ದೇಶದ ರಾಷ್ಟ್ರಪತಿಯಾಗಿದ್ದ ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವನ್ನೇ ಶಿಕ್ಷಕರ ದಿನ ಎಂದು ಆಚರಿಸುತ್ತೇವೆ. ಶಿಕ್ಷಕರ ದಿನ ಎಂದರೆ ಅಂದು ಶಿಕ್ಷಕರು ಸಮಾಜಕ್ಕೆ ನೀಡುತ್ತಿರುವ ಸೇವೆಯನ್ನು  ಗುರುತಿಸಿ ಗೌರವಿಸುವ ದಿನ.  ಅಂದು  ವಿದ್ಯಾರ್ಥಿಗಳು ಶಿಕ್ಷಕರಿಗೆ ಶುಭಾಶಯ ಹೇಳುತ್ತಾರೆ. ಹೂ ಗುಚ್ಛ ಕೊಟ್ಟು ನಮಸ್ಕರಿಸುತ್ತಾರೆ. ಈಗ ಹಲವು ಶಾಲೆಗಳಲ್ಲಿ ಶಿಕ್ಷಕರ ದಿನದಂದು ಮಕ್ಕಳು ಶಿಕ್ಷಕರಿಗಾಗಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಡುವುದೂ  ಇದೆ. ಒಟ್ಟಿನಲ್ಲಿ ಶಿಕ್ಷಕರನ್ನು ಅಂದು ವಿಶಿಷ್ಟವಾಗಿ ಗೌರವಿಸುತವೆ.  ಶಿಕ್ಷಕರು ವಿದ್ಯಾರ್ಥಿಗಳನ್ನು, ಅಂದರೆ ದೇಶದ ನಾಳೆಯ ಪ್ರಜೆಗಳನ್ನು ಬೆಳೆಸುತ್ತಾರೆ. ಅವರಲ್ಲಿ ಶೀಲ, ಸಚ್ಚಾರಿತ್ರ್ಯ,…

"ಶಿಕ್ಷಕರ ದಿನಾಚರಣೆ ಮತ್ತು ಗಾಂಧಿ ಜಯಂತಿ"

ಸುವರ್ಣ ಕರ್ನಾಟಕ

ಕನ್ನಡ ನಾಡಿಗೆ ಈಗ ಐವತ್ತರ ಸಂಭ್ರಮ. ಐವತ್ತು ವರ್ಷಗಳ ಹಿಂದೆ ನಮ್ಮ ಕನ್ನಡ ನಾಡು ಕರ್ನಾಟಕ ಎಂಬ ರೂಪು ತಳೆಯಿತು. ಕನ್ನಡಿಗರೇ ಇರುವ ಪ್ರದೇಶಗಳು ಕರ್ನಾಟಕದಲ್ಲಿ ಸೇರಿಕೊಂಡವು. ಅಂದಿನಿಂದ ಇಂದಿನವರೆಗೆ ಕನ್ನಡನಾಡಿನಲ್ಲಿ ಕನ್ನಡದ ಬೆಳವಣಿಗೆ ಏನಾಗಿದೆ? ನಿಜಕ್ಕೂ ಕನ್ನಡವು ಉಳಿದಿದೆಯೆ? ಬೆಳೆದಿದೆಯೆ? ಈ ಎಲ್ಲ ಪ್ರಶ್ನೆಗಳನ್ನು ಈ ಐವತ್ತರ ಶುಭಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳುವುದು ಅತ್ಯಂತ ಸಮಂಜಸವಾಗಿದೆ.  ಯಾಕೆಂದರೆ ಇಂದು ನಮ್ಮ ನಾಡಿನ ರಾಜಧಾನಿ ಬೆಂಗಳೂರು ಭಾರತದ ಸಿಲಿಕಾನ್ ಕಣಿವೆ ಎಂದೇ ಹೆಸರಾಗಿದೆ. ಮಾಹಿತಿ ತಂತ್ರeನಕ್ಕೆ ಕರ್ನಾಟಕವು ವಿಶ್ವಪ್ರಸಿದ್ಧವಾಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿಗಳಲ್ಲೂ ಮಾಹಿತಿ ತಂತ್ರeನದ ಸಂಸ್ಥೆಗಳಿವೆ. ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ವಿಷಯದಲ್ಲಿ ಕರ್ನಾಟಕವು ದೇಶದಲ್ಲೇ ಹೆಸರುವಾಸಿ. ಹೀಗಿದ್ದೂ ಸುವರ್ಣ  ಕರ್ನಾಟಕದ ಈ ಕ್ಷಣದಲ್ಲಿ ಒಂದು…

"ಸುವರ್ಣ ಕರ್ನಾಟಕ"