ದೇಶ ಸುತ್ತು, ಕೋಶ ಓದು

ದೇಶ ಸುತ್ತು ಕೋಶ ಓದು ಎನ್ನುವುದು ನಮ್ಮ ನಾಡಿನ ಹಿರಿಯರು ರೂಪಿಸಿದ ನಾಣ್ಣುಡಿ. ಈ ಮಾತು ನಮ್ಮ ದೇಶದ ಭವ್ಯ ಪರಂಪರೆಯನ್ನು  ಸೂಚಿಸುತ್ತದೆ. ಯಾಕೆಂದರೆ ದೇಶ ಸುತ್ತುವುದು ಎಂದರೆ ಪ್ರವಾಸ ಮಾಡುವುದು; ಕೋಶ ಓದು ಎಂದರೆ ಪುಸ್ತಕಗಳನ್ನು ಓದುವುದು. 

ದೇಶ ಸುತ್ತಿ ಕೋಶ ಓದುವ ಬಗ್ಗೆ ನಮ್ಮ ಹಿರಿಯರು ತಮ್ಮ ಅನುಭವದಿಂದಲೇ ಬರೆದಿದ್ದಾರೆ. ಕೋಶ ಓದಿ ಅಪಾರ  eನವನ್ನು ಸಂಪಾದಿಸಿದ  ಶಂಕಾರಾಚಾರ್ಯರು ಭಾರತದ ನಾಲ್ಕೂ ಮೂಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಪೀಠಗಳನ್ನು ಸ್ಥಾಪಿಸಿದರು; ಹಾಗೆಯೇ ನಮ್ಮ ತಂದೆಯ ಊರಿನ ಒಬ್ಬರು ಸುಮಾರು ೬೦ ಸಲ ಕಾಶಿಗೆ ನಡೆದುಕೊಂಡೇ ಹೋಗಿ ಬಂದಿದ್ದರು; ಅವರ ಜೋಳಿಗೆಯಲ್ಲಿ ಯಾವಾಗಲೂ ಕನ್ನಡದ ಅತ್ಯುತ್ತಮ ಪುಸ್ತಕಗಳು ಇರುತ್ತಿದ್ದವು.  ಹೀಗೆ ನಮ್ಮ ಪರಂಪರೆಯಲ್ಲಿ ದೇಶ ಸುತ್ತುವ ಮತ್ತು ಕೋಶ ಓದುವ ಕಾಯಕ ಎಂದಿನಿಂದಲೂ ನಡೆದುಕೊಂಡು ಬಂದಿದೆ. 

ಇಂದು ಪ್ರವಾಸ ಮಾಡುವುದು ಒಂದು ದೊಡ್ಡ ಹವ್ಯಾಸವಾಗಿದೆ.. ವಿದೇಶೀಯರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ  ಪ್ರವಾಸಕ್ಕೆ ಬರುತ್ತಿದ್ದಾರೆ. ಭಾರತೀಯರೂ ಈಗ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹೀಗೆ ಪ್ರವಾಸ ಮಾಡುವುದು ಅಂದರೆ ದೇಶ ಸುತ್ತುವುದರಿಂದ ನಮ್ಮ ಅನುಭವ ಹೆಚ್ಚುತ್ತದೆ, ತಿಳಿವಳಿಕೆ ವಿಸ್ತರಿಸುತ್ತದೆ. ಅದರಲ್ಲೂ ಯುವಕರು ಹೆಚ್ಚೆಚ್ಚು ದೇಶ ಸುತ್ತಿದರೆ ಅವರ ವೃತ್ತಿಜೀವನಕ್ಕೆ ತುಂಬಾ ಅನುಕೂಲ. 

ಹಾಗೆಯೇ ಕೋಶ ಓದುವುದೂ ನಮಗೆ ತುಂಬಾ ಅಗತ್ಯವಾದ ಹವ್ಯಾಸ. ಕೋಶ ಎಂದರೆ ಕೇವಲ ನಿಘಂಟುಗಳಲ್ಲ; ಬಗೆಬಗೆಯ ವಿಷಯಗಳ ಮೇಲೆ ಬಂದಿರುವ ಹಲವು ಪುಸ್ತಕಗಳನ್ನು ನಾವು ಓದಬೇಕು. ನಮಗೆ ಆಸಕ್ತಿ ಇರುವ ಪುಸ್ತಕಗಳನ್ನು ಓದುವುದು ಮಾತ್ರವಲ್ಲ; ಜಗತ್ತಿನಲ್ಲಿ ನಡೆಯುವ ಬೇರೆ ಬೇರೆ ವಿದ್ಯಮಾನಗಳ ಕುರಿತ ಹೊಸ ಪುಸ್ತಕಗಳನ್ನೂ ಹುಡುಕಿ ಓದಬೇಕು.  ಪುಸ್ತಕಗಳು ಮಾತ್ರವಲ್ಲ, ಮ್ಯಾಗಜಿನ್‌ಗಳು, ವೃತ್ತಪತ್ರಿಕೆಗಳು, ಕಾದಂಬರಿಗಳು, ಕಥಾಪುಸ್ತಕಗಳು, – ಎಲ್ಲವನ್ನೂ ನಾವು ಓದಿದರೆ ನಾವು ಈ ಜಗತ್ತು ಹೇಗಿತ್ತು, ಈಗ ಹೇಗಾಗಿದೆ ಎಂಬುದನ್ನು ವಾಸ್ತವವಾಗಿ ಕಲ್ಪಿಸಿಕೊಳ್ಳಬಹುದು. 

ಕೇವಲ ಪುಸ್ತಕಗಳನ್ನೇ ಓದಿದರೂ  ದೇಶ ಸುತ್ತಿದ ಅನುಭವ ಆಗುತ್ತದೆ ಎಂಬುದು  ಸ್ವಲ್ಪ ನಿಜ. ಆದರೆ ಪುಸ್ತಕ ಓದುವ ಹಾಗೂ ದೇಶ ಸುತ್ತುವ ಕೆಲಸಗಳನ್ನು ನಾವು ಯಾವಾಗಲೂ ಮಾಡುತ್ತಿರಬೇಕು. ಆಗಲೇ ನಾವು ನಮ್ಮ ಬದುಕನ್ನು ಸುಂದರವಾಗಿ ಇಟ್ಟುಕೊಳ್ಳಬಹುದು.

One thought on “ದೇಶ ಸುತ್ತು, ಕೋಶ ಓದು

Leave a Reply

Your email address will not be published. Required fields are marked *