ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)

ನಾನು ಹೂವಿನ ಹಡಗಲಿಯಲ್ಲಿ 1980-81 ರಲ್ಲಿ ಜಿಬಿಆರ್‌ ಕಾಲೇಜಿನಲ್ಲಿ ಮೊದಲ ಪಿಯು ಓದುತ್ತಿದ್ದಾಗ ಎಬಿವಿಪಿಗಿಂತ ಎಸ್‌ಎಫ್‌ಐ ವಾಸಿ ಎಂಬ ಅಭಿಪ್ರಾಯಕ್ಕೆ ಬಂದಿದ್ದೆ. ಆಗ ಅಲ್ಲಿ ಎಸ್‌ ಎಸ್‌ ಹಿರೇಮಠರು ನನ್ನ ಕನ್ನಡ ಅಧ್ಯಾಪಕರಾಗಿದ್ದರು. ಅಲ್ಲಿನ ಎಸ್‌ಎಫ್‌ಐ ಮಿತ್ರರಿಂದ ನಾನು ಹಲವು ಕ್ರಾಂತಿಗೀತೆಗಳನ್ನು ಕಲಿತು ಹಾಡುತ್ತಿದ್ದೆ. ಅವುಗಳಲ್ಲಿ ಮುಖ್ಯವಾಗಿ ನನಗೆ ಈಗಲೂ ಗುನುಗಲು ನೆನಪಿರುವುದು ಕವಿ ಸಿದ್ದಲಿಂಗಯ್ಯ ಅವರ ನಾಡ ನಡುವಿನಿಂದ ಸಿಡಿದ, ನೋವಿನ ಕೂಗೇ.. ಹಾಡು. ಅದು ಹೀಗಿದೆ.

"ಇನ್ನು ಬಯಲಾಗಬೇಕಿರೋದು : ಮುಚ್ಚಿಟ್ಟ ಅಂಬೇಡ್ಕರ್ ಚರಿತ್ರೆ! ( “ಮುಚ್ಚಿಟ್ಟ ದಲಿತ ಚರಿತ್ರೆ: ಪುಸ್ತಕದ ಒಂದು ದಿಢೀರ್‌ ವಿಮರ್ಶೆ)"

ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      

ಮೇ 28: ಸಾವರ್‌ಕರ್‌ ಜನ್ಮದಿನ. ಅವರಿಗೆ ನನ್ನ ನಮನ. ಸಾವರ್‌ಕರ್‌ ಜನ್ಮದಿನ. ಅವರಿಗೆ ನನ್ನ ನಮನ. ವೈಭವ್‌ ಪುರಂಧರೆ ಬರೆದ ಸಾವರ್‌ಕರ್‌: ದ ಟ್ರೂ ಸ್ಟೋರಿ ಆಫ್‌ ದ ಫಾದರ್‌ ಆಫ್‌ ಹಿಂದುತ್ವ ಪುಸ್ತಕವನ್ನು (SAVARKAR: THE TRUE STORY OF THE FATHER OF HINDUTVA : VAIBHAV PURANDHARE / Juggernaut, 2019) ಇವತ್ತಷ್ಟೇ ಓದಿ ಮುಗಿಸಿದೆ. ಸ್ವತಃ ಮರಾಠಿ ಬಲ್ಲ ಪುರಂಧರೆ ಅವರು ಮರಾಠಿ ಭಾಷೆಯಲ್ಲಿದ್ದ ಆಕರಗಳನ್ನೂ ಹುಡುಕಿ, ಸಂಶೋಧಿಸಿ ಈ ಪುಸ್ತಕ ಬರೆದಿದ್ದಾರೆ. ಆದ್ದರಿಂದಲೇ ನನ್ನ ಮಟ್ಟಿಗೆ ಇದು ಸಾವರ್‌ಕರ್‌ ಅವರ ಕುರಿತ ಅಧಿಕೃತ ಪುಸ್ತಕ.   ಈ ಪುಸ್ತಕದಲ್ಲಿ ಇರುವ ಕೆಲವು ಮಾಹಿತಿಗಳನ್ನು ನನ್ನ ಅಭಿಪ್ರಾಯಗಳೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

"ಸಾವರ್‌ಕರ್‌ :  ಸ್ವಾತಂತ್ರ್ಯವೀರನಷ್ಟೇ ಅಲ್ಲ, ಖಚಿತ ವಿಚಾರಗಳ ಸ್ವತಂತ್ರ ಜೀವಿ      "

`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ

`ಜೋಕರ್‌’ (೨೦೧೯) ಸಿನೆಮಾದ ಬಗ್ಗೆ ದ ಗಾರ್ಡಿಯನ್‌, ನ್ಯೂಯಾರ್ಕ್‌ ಟೈಮ್ಸ್‌ನಂತಹ ದೊಡ್ಡ ಪತ್ರಿಕೆಗಳೇ `ಚೆನ್ನಾಗಿಲ್ಲ’ ಎಂದು ಬರೆದ ಮೇಲೆ, ಹಾಲಿವುಡ್‌ ರಂಗದಲ್ಲೇ ಹಲವು ತಿಂಗಳುಗಳ ನಂತರ ಸುದ್ದಿ ಮಾಡಿದ ಈ ಒಂದಾದರೂ ಹಾಲಿವುಡ್‌ ಸಿನೆಮಾನ ನೋಡಬೇಕೇ ಬೇಡವೇ ಎಂಬ ಗೊಂದಲಕ್ಕೆ ಬಿದ್ದಿದ್ದೆ. ಇವತ್ತು ನೋಡಿದ ಮೇಲೆ, ಈ ಕೂಡಲೇ ನನ್ನ ಇನ್‌ಸ್ಟಂಟ್‌ ವಿಮರ್ಶೆ ಬರೆಯಲೇಬೇಕು ಅನ್ನಿಸಿ… (ಸಿನೆಮಾವು A ಪ್ರಮಾಣಪತ್ರ ಹೊಂದಿದೆ) `ಕೆಟ್ಟವರು’  ಎಂಬ ಹಣೆಪಟ್ಟಿ ಅಂಟಿಸಿಕೊಂಡವರು ಎಲ್ಲೆಲ್ಲೂ ಯಾವ ಕಾಲದಲ್ಲೂ ಇರುತ್ತಾರೆ. ಅವರು ಹುಟ್ಟಿದಾಗ ಕೆಟ್ಟವರೇನೂ ಆಗಿರುವುದಿಲ್ಲ; ಮುಗ್ಧ ಮಗುವೇ ಆಗಿರುತ್ತಾರೆ. ಅಂತಹ ಹೂವಿನ ಮನಸ್ಸಿನ ವ್ಯಕ್ತಿಗಳೂ ಹೇಗೆ ಕೆಟ್ಟವರಾಗುತ್ತಾರೆ ಎಂಬ ಒಂದು ಉದಾಹರಣೆಯನ್ನು `ಜೋಕರ್‍’ ಸಿನೆಮಾ ಅದ್ಭುತ / ಭೀಕರ ದೃಶ್ಯ, ಎದೆ…

"`ಜೋಕರ್’ಗೆ ಇನ್ನುಮುಂದೆ ಬದುಕು ಕಾಮೆಡಿ"

‘After I die, cut out my heart and eat it’ (Book Review: Tombstone)

Yang Jisheng is a Chienese Communist Party worker and a senior journalist. He silently toured all over China and meticulously documented the Great Famine of 1959-61, which is known as the largest man-made disaster. Mainly attributed to Mao Zedong, this famine also took Yang’s father. The famine resulted in the death of more than 36 million people. In `TOMBSTONE’, (Tombstone: The Untold Story of Mao’s Great Famine, by Yang Jisheng, translated by Stacy Mosher and…

"‘After I die, cut out my heart and eat it’ (Book Review: Tombstone)"

`ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ

ಸುಮಾರು ೨೭೦೦ ವರ್ಷಗಳ ಹಿಂದೆ `ನಿರುಕ್ತ’ ಬರೆದ ಸಂಸ್ಕೃತ ನಿಘಂಟುಕಾರ ಯಾಸ್ಕರಿಗೂ, ೨೪೦೦ ವರ್ಷಗಳ ಹಿಂದೆ ಅಣುಸಿದ್ಧಾಂತವನ್ನು ಬೋಧಿಸಿದ ಗ್ರೀಕ್ ತತ್ವಜ್ಞಾನಿ ಎಪಿಕ್ಯೂರಸ್‌ಗೂ, ೨೦೦೦ ವರ್ಷಗಳ ಹಿಂದೆ ‘ಡಿ ರೆರಮ್ ನೇಚುರಾ (ಸರಳಗನ್ನಡದಲ್ಲಿ `ವಸ್ತುಗಳ ಗುಣಗಳ ಕುರಿತು’ ಎನ್ನಬಹುದೇನೋ..) ಕಾವ್ಯವನ್ನು ಬರೆದ ಲ್ಯೂಕ್ರಿಶಿಯಸ್‌ಗೂ, ಐನೂರು ವರ್ಷಗಳ ಹಿಂದೆ ಬಾಳಿದ ಪೋಗ್ಗಿಯೋ ಬ್ರಾಶಿಯೋಲಿನಿಗೂ … ಯುರೋಪಿನ ನವೋದಯಕ್ಕೂ (ರಿನೈಸಾನ್ಸ್)…

"`ದ ಸ್ವರ್ವ್’: ಆಧುನಿಕ ಯುರೋಪಿಗೆ ಮುನ್ನುಡಿಯಾದ ಕಾವ್ಯದ ಶೋಧ"

`ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!

ಎದೆಗಪ್ಪಳಿಸೋ ದೃಶ್ಯಗಳು, ಬರಡು ಬದುಕಿನ ಕಥೆಗಳು ಎಲ್ಲೆಲ್ಲೂ ನೀರಿಲ್ಲ; ನೀರಿದ್ದವರೇ ಸಿರಿವಂತರು – ಉಳ್ಳವರು. ಕಣ್ಣು ಹಾಯಿಸಿದಷ್ಟೂ ಕೆಂಪು ಮಣ್ಣು; ಹಸಿರನ್ನೇ ಕಾಣದ ಅಕರಾಳ ವಿಕರಾಳ ಗುಡ್ಡಬೆಟ್ಟಗಳು, ಎದ್ದರೆ ಧೂಳಿನದೇ ತ್ಸುನಾಮಿ. ಬಿದ್ದರೆ ಅದೇ ವಿಷಪೂರಿತ ಜವುಗು ನೆಲ. ಇಂಥ ಪ್ರಪಂಚದಲ್ಲಿ ಚಲಿಸಲು ಇರುವ ಏಕೈಕ ವಿಧಾನ – ಅಳಿದುಳಿದ ಪೆಟ್ರೋಲ್‌ ಕಬಳಿಸುವ ವಾಹನಗಳು. ಕ್ಷಣಕ್ಷಣವೂ ರೋಮಾಂಚನ ಉಂಟುಮಾಡುವ ದೃಶ್ಯಗಳ  `ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’ ನೋಡುವಾಗ ಕಥೆಗೂ ಗಮನ ಹರಿಸಿದರೆ ಇದೆಂಥ ಕಾಲ್ಪನಿಕ ಜಗತ್ತು ಎಂಬ ಅಚ್ಚರಿಗೆ ನೀವು ಬಿದ್ದರೆ, ಕ್ಷಮಿಸಿ. ಇದು ವಾಸ್ತವಕ್ಕೆ  ತೀರ ಹತ್ತಿರವಾದ ಕಥೆ-ವ್ಯಥೆ.

"`ಮ್ಯಾಡ್‌ ಮ್ಯಾಕ್ಸ್‌: ಫ್ಯೂರಿ ರೋಡ್‌’: ಶತಮಾನದ ಸಿನೆಮಾ!"

`ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? 

(ಸೂಚನೆ: ಇದು ವಯಸ್ಕ ಸಿನೆಮಾದ ವಿಮರ್ಶೆ)  `ರೇಪ್‌’ – ಲೈಂಗಿಕ ಅತ್ಯಾಚಾರವನ್ನು ವೈಭವೀಕರಿಸುವುದು ಸರ್ವಥಾ ತರವಲ್ಲ. ಭಾರತದಲ್ಲಿರಲಿ, ವಿದೇಶಗಳಲ್ಲಿರಲಿ, ಹಲವು ಸಲ `ರೇಪ್‌’ನ್ನು ವರ್ಣಿಸುವ ಕೃತ್ಯಗಳೂ ಹಲವು ಜನಪ್ರಿಯರೆನ್ನಲಾದ ವ್ಯಕ್ತಿಗಳಿಂದಲೇ ನಡೆಯುತ್ತಿರುತ್ತದೆ. ಹಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಪಾಲ್‌ ವೀರೋವೆನ್‌ `ಎಲ್ಲೆ’ ಸಿನೆಮಾದಲ್ಲಿ ಇಂಥ ವಿಷಯವೊಂದನ್ನು ಎತ್ತಿಕೊಂಡು ತನ್ನ ನಿರ್ಭೀತ ಚಿತ್ರಕಥೆ-ದೃಶ್ಯಗಳಿಂದ ಶಾಕ್‌ ಕೊಟ್ಟಿದ್ದಾರೆ. ನಾನು ನೋಡಿದ ವಯಸ್ಕರ ಸಿನೆಮಾಗಳಲ್ಲೇ ಇದು ಅತ್ಯಂತ ಗಂಭೀರವಾದ ಮತ್ತು ಹಾಲಿವುಡ್‌ ನಿರ್ಮಾಣದಲ್ಲಿ ತುಂಬಾ ಆಳವಾದ ಬಹುಸ್ತರದ ಸಿನೆಮಾ ಆಗಿದೆ. `ಬೇಸಿಕ್‌ ಇನ್‌ಸ್ಟಿಂಕ್ಟ್‌’ ಎಂಬ ಇಂಥದ್ದೇ ಸಿನೆಮಾವನ್ನೂ ಪಾಲ್‌ ವೀರೋವೆನ್‌ ನಿರ್ದೇಶಿಸಿದ್ದಾರಾದರೂ, ಈ ಕಾಲದಲ್ಲಿ ರೇಪ್‌ ಕುರಿತ ಇಂಥದ್ದೊಂದು ಚಿತ್ರವನ್ನು ನಿರ್ಮಿಸುವುದು ಬಹುದೊಡ್ಡ ಸವಾಲಿನ ವಿಷಯ. ಅದನ್ನೂ ಪಾಲ್‌ ವೀರೋವೆನ್‌ `ಸಮರ್ಥವಾಗಿ’…

"`ELLE’ : ಬಾಳಿಗೊಂದು ಎಲ್ಲೆ ಎಲ್ಲಿದೆ? ನಿನ್ನಾಸೆಗೆಲ್ಲಿ ಕೊನೆಯಿದೆ? "

ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ

ಘಟನೆ ಒಂದು `ಇತ್ತೀಚೆಗೆ ಒಬ್ಬ ಔಷಧ ಸಂಸ್ಥೆಯ ಮಾರಾಟ ಪ್ರತಿನಿಧಿ (ಮೆಡಿಕಲ್ ರೆಪ್ರೆಸೆಂಟೆಟಿವ್) ನನ್ನ ಬಳಿ ಬಂದು ಒಂದು ಲಕ್ಷ ರೂಪಾಯಿ ಬೆಲೆಬಾಳುವ ಸರವೊಂದನ್ನು ಉಡುಗೊರೆಯಾಗಿ ಕೊಡಲು ಮುಂದಾದ. `ಇದೇನು?’ ಎಂದು  ಕೇಳಿದೆ. `ಡೈಮಂಡ್ ನೆಕ್‌ಲೇಸ್‌ ಸರ್‍’ ಎಂದ. `ಯಾರಿಗೆ?’ ಎಂದು ಕೇಳಿದೆ. `ನಿಮ್ಮ ಪತ್ನಿಗೆ’ ಎಂದ. ನನ್ನ ಸಿಟ್ಟನ್ನು ಹತ್ತಿಕ್ಕಿಕೊಂಡು`ನನ್ನ ಹೆಂಡತಿಯ ಕುತ್ತಿಗೆಗೆ ಸರ ಹಾಕಲು ನಿನಗೆಷ್ಟು ಧೈರ್ಯ ?’ ಎಂದು ಕೇಳಿದೆ. `ಅಲ್ಲ ಸರ್‍… ಅದು …. ಅದು…. ನೀವೇ ನಿಮ್ಮ ಹೆಂಡತಿಯ ಕುತ್ತಿಗೆಗೆ ಸರ ಹಾಕ್ತೀರಿ ಸರ್‍’ ಎಂದ.  ಆ ಸರವನ್ನು ಅವನಿಗೇ ವಾಪಸ್‌ ಕೊಡುತ್ತ `ಹಾಗಿದ್ದಮೇಲೆ,  ಆ ಸರವನ್ನು ನಾನು ಸಂಪಾದಿಸಿದ ಹಣದಲ್ಲೇ ಖರೀದಿಸ್ತೇನೆ. ಇಷ್ಟಕ್ಕೂ ಅವಳು ಸರಕ್ಕಾಗಿ ಆಶೆ…

"ಡಿಸೆಂಟಿಂಗ್ ಡಯಾಗ್ನಸಿಸ್‌: ವೈದ್ಯಕೀಯ ರಂಗದ ದುರಾಚಾರ ರೋಗಕ್ಕೆ ವೈದ್ಯರದೇ ಚಿಕಿತ್ಸೆ"

ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!

ಕೊನೆಗೂ ಬಾಲಿವುಡ್‌ ಪ್ರಾಯಶ್ಚಿತ್ತಕ್ಕೆ ಮನಸ್ಸು ಮಾಡಿದೆ! ಎಂಟು ದಶಕಗಳ ಕಾಲ ಹೆಣ್ಣನ್ನು ಮಾಂಸದ ಮುದ್ದೆಯಂತೆ, ಭೋಗದ ವಸ್ತುವಿನಂತೆ ತೋರಿಸಿ ಮೂರ್ನಾಲ್ಕು ಪೀಳಿಗೆಗಳ ಯುವ ಸಮುದಾಯವನ್ನು ಹಾದಿ ತಪ್ಪಿಸಿದ / ತಪ್ಪಿಸುತ್ತಿರುವ ಬಾಲಿವುಡ್-ಸ್ಯಾಂಡಲ್‌ವುಡ್- ಇತ್ಯಾದಿ ಸಿನೆಮಾ ಕಾರ್ಖಾನೆಗಳು ಅಂತೂ ಇಂತೂ ವಾಸ್ತವತೆಗೆ ಕಣ್ಣು ತೆರೆಯುತ್ತಿವೆ; ಅಥವಾ ತೆರೆದಂತೆ ಕಾಣಿಸುತ್ತಿವೆ. ಅನಿರುದ್ಧ ರಾಯ್‌ ಚೌಧರಿ ನಿರ್ದೇಶನದ `ಪಿಂಕ್’ ಸಿನೆಮಾವನ್ನು ನೋಡಿದರೆ ಹೀಗೆ ಅನ್ನಿಸುವುದು ಸಹಜ.

"ಪಿಂಕ್: ಬಾಲಿವುಡ್ ಪಾಪಕರ್ಮಗಳಿಗೆ ಪುಟ್ಟ, ಅಸಂಪೂರ್ಣ ಪ್ರಾಯಶ್ಚಿತ್ತ!"

ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!

ಇತ್ತೀಚೆಗಷ್ಟೆ ಆನ್‌ಲೈನ್ ಸಂವಹನದ ಮೂಲಕ ಪರಿಚಯವಾಗಿರುವ ಪತ್ರಕರ್ತ ಮತ್ತು ಬೈಸಿಕಲ್ ಅಭಿಯಾನಿ ಶ್ರೀ ಸಿ ಎಸ್ ಚರಣ್‌ರ ಈ ಕಥಾ ಸಂಕಲನಕ್ಕೆ ನಾನೇ ಮುನ್ನುಡಿ ಬರೆಯಬೇಕೆಂದು ಅವರು ನಿರ್ಧರಿಸಿದ್ದು ನನ್ನ ಡಿಜಿಟಲ್ ಫುಟ್‌ಪ್ರಿಂಟ್‌ಗಳನ್ನು ಗಮನಿಸಿ ಎಂಬುದು ಅಚ್ಚರಿಯ ಮತ್ತು ಅಪರೂಪದ ವಿಷಯ.

"ಪತ್ರಕರ್ತ ಸಿ ಎಸ್‌ ಚರಣ್‌ರ ಕಥಾಸಂಕಲನ `ಆಂಟಿ ಕ್ಲಾಕ್‌’ಗೆ ಬರೆದಿದ್ದೇನೆ ನನ್ನ ಮೊದಲ ಮುನ್ನುಡಿ!"