ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ (ಸ್ಥಾಪನೆ: ಕ್ರಿಶ ೧೯೧೫) ಪ್ರಕಟಿಸಲು ಉದ್ದೇಶಿಸಿರುವ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ ೧೭ ಸಂಪುಟಗಳಲ್ಲಿ ೧೪ನೇ ಸಂಪುಟವೇ ಮೊಟ್ಟಮೊದಲನೆಯದಾಗಿ ಬಿಡುಗಡೆಯಾಗಿದೆ. ಇತ್ತೀಚೆಗೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾದ ಈ `ವಿಜ್ಞಾನ ತಂತ್ರಜ್ಞಾನ’ ಸಂಪುಟವು ಅತ್ಯಂತ ಹೊಣೆಗಾರಿಕೆಯಿಂದ ಪ್ರಕಟಿಸಿದ ಸಂಪಾದಿತ ಕೃತಿಯಾಗಿದೆ. ವಿಜ್ಞಾನ ತಂತ್ರಜ್ಞಾನ ಕುರಿತು ಕನ್ನಡದಲ್ಲಿ ನಡೆದ ಸಾಹಿತ್ಯಕ ಪ್ರಯತ್ನಗಳ ಸಮಗ್ರ ಚಿತ್ರಣವನ್ನು ಅಚ್ಚುಕಟ್ಟಾಗಿ ಮತ್ತು ಕೊನೇಕ್ಷಣದ ಬೆಳವಣಿಗೆಗಳನ್ನೂ ಸೇರಿಸಿ ಪ್ರಕಟಿಸಿರುವುದು ಅಭಿನಂದನೀಯ. ಸ್ವತಃ ವಿಜ್ಞಾನ ಲೇಖಕರಾಗಿ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ, ವಿವಿಧ ಸಂಪಾದಿತ ಕೃತಿಗಳಲ್ಲಿ ಹೊಣೆಗಾರಿಕೆ ಹೊತ್ತುಕೊಂಡು ಸಂಪೂರ್ಣಗೊಳಿಸಿರುವ ಹಿರಿಯರಾದ ಟಿ ಆರ್ ಅನಂತರಾಮು ಈ ಸಂಪುಟದಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ.…

"ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪ | ಈ ಮಹತ್ವದ ಕೃತಿಗಳು ಜಾಲತಾಣದಲ್ಲೂ ಮುಕ್ತವಾಗಿ ಪ್ರಕಟವಾಗಲಿ!"

ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ

ಒಂದು ಬದಿ ಕಡಲು – ಕನ್ನಡದಲ್ಲಿ ಇತ್ತೀಚೆಗೆ ಬಂದ ಶಿಸ್ತಿನ ಬರವಣಿಗೆಯ ಕಾದಂಬರಿಯ ನಂತರ ಶ್ರೀ ವಿವೇಕ ಶಾನಭಾಗರು `ಊರು ಭಂಗ’ದ ಮೂಲಕ ತೆಂಕಣಕೇರಿಯ ಎಫೆಕ್ಟ್‌ನ್ನು ಹಬ್ಬಿಸುವ ಮೂಲಕ ಹಾಜರಾಗಿದ್ದಾರೆ. ಕಾದಂಬರಿಯ ರಚನಾ ತಂತ್ರದಲ್ಲೂ ಪ್ರಯೋಗ ಮಾಡಿದ್ದಾರೆ. ಕ್ರಿಸ್ಟೋಫರ್‌ ನೋಲಾನ್‌ನ `ದ ಇನ್‌ಸೆಪ್‌ಶನ್‌’ ನೋಡಿದವರಿಗೆ ಒಂದೇ ಕಾಲದಲ್ಲಿ ಹಲವು ಕಾಲಗಳು ವಿವಿಧ ವೇಗದಲ್ಲಿ ಸರಿಯುವ ಕಥೆ ಗೊತ್ತಿದೆ. ಕನಸು ಮನಸುಗಳ ಒಳಗೆ ಕಳ್ಳತನ ಮಾಡುವ ವ್ಯಕ್ತಿಗಳ ಸಂಕೀರ್ಣ ಭಾವುಕ, ವೈಜ್ಞಾನಿಕ ಕಥೆ ಹೆಣೆದ ನೋಲಾನ್‌ ಪ್ರೇಕ್ಷಕರ ತಲೆಯನ್ನು ಸಿಕ್ಕಾಪಟ್ಟೆ ತಿನ್ನುತ್ತಾರೆ. ಯಾರು ಯಾವಾಗ ಏನು ಮಾಡಿದರು ಎಂದು ನೀವು ಸರಳವಾಗಿ ವಿವರಿಸಲು ಬರುವುದೇ ಇಲ್ಲ! ಅದೇ ಬಗೆಯ ಇನ್ನೊಂದು ತುದಿಗೆ ಹೋದ ನೋಲಾನ್‌ ಇತ್ತೀಚೆಗೆ ಮಾಡಿದ್ದು…

"ಅಂದು ಶಾಂತ ಕಡಲು, ಇಂದು ಹುಚ್ಚುಹೊಳೆ! : ವಿವೇಕ ಶಾನಭಾಗರ ಕಾದಂಬರಿ ‘ಊರುಭಂಗ’ದ ಇನ್‌ಸ್ಟಂಟ್‌ ವಿಮರ್ಶೆ"

Climate thriller without Kalashnikov [Book Review: The Sands of Sarasvati by Risto Isomaki]

Since the book under review is a bit old, I prefer to quote the snapshots of earlier reviews. “ The Sands of Sarasvati is an eco-thriller of apocalyptic proportions, which culminates in a giant flood. The book is both topical, and frighteningly believable. It is a lesson in how our melting of the polar ice sheets may trigger a tsunami that threatens the entire globe. Isomäki’s thought provoking and captivating thriller is flooded with cultural…

"Climate thriller without Kalashnikov [Book Review: The Sands of Sarasvati by Risto Isomaki]"

Sacred Plants of India: Marvellous lucidity of Puranic facts [book review]

It is a well known fact that our ancestors who lived thousands of years ago had studied botany in the most scientific manner. This knowledge of the flora and fauna of India is deeply embedded in our scriptures and rituals. Ayurveda is the applied science of plant medicine. Over the years, only rituals are being followed blindly without looking into the real principle behind worshipping the plants. The book, “Sacred Plants of India” by Nanditha…

"Sacred Plants of India: Marvellous lucidity of Puranic facts [book review]"

Business Sutra : Desi Sutras for Modern Business [Book review]

He is a leadership coach and mythologist. He is clearcut in his views. He is assertive in explanations. He will use only Indian words and phrases for puranic stories. He will illustrate all his theories himself in fine lines. He works for a major retail business company as Chief Belief Officer. 

"Business Sutra : Desi Sutras for Modern Business [Book review]"

ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!

ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರಿದ್ದೋ, ಪಾಕಿಸ್ತಾನಕ್ಕೆ ಸೇರಿದ್ದೋ ಅಥವಾ ಸ್ವತಂತ್ರ ದೇಶವೋ? `ಇಂತೆಖಾಮ್‌ನಿಂದ ಇಂತೆಖಾಮ್’ ಎಂದರೆ ಅದು ನಿಮ್ಮ ಚಿಕ್ಕಪ್ಪನ ಮೇಲೋ, ಸರ್ಕಾರದ ಮೇಲೋ? ಶೇಕ್ಸ್‌ಪಿಯರ್‌ನ ನಾಟಕಕ್ಕೂ, ಭಾರತ ವಿರೋಧಿ ಚಟುವಟಿಕೆಗಳಿಗೂ ಏನು ಸಂಬಂಧ? ಸೃಜನಶೀಲತೆ ಎಂದರೆ ವಸ್ತುನಿಷ್ಠವಾಗಿರುವುದೋ, ವ್ಯಕ್ತಿನಿಷ್ಠವಾಗಿರುವುದೋ?ಅಥವಾ ಸಮಾಜನಿಷ್ಠವಾಗಿರುವುದೋ? ಅಥವಾ ಕೇವಲ ಬಾಲಿವುಡ್ ನಿಷ್ಠ – ಮಾಲ್ ನಿಷ್ಠವಾಗಿರುವುದೋ? ಭಾರತದ ಸೇನೆ ಎಂದರೆ ಕೇವಲ ಮರ್ಮಾಂಗಕ್ಕೆ ಕರೆಂಟ್ ಕೊಡುವ, ಮನೆಗಳನ್ನು ಉಡಾಯಿಸುವ ಪುಂಡರ ಪಡೆಯೋ?

"ಹಲ್ಕಟ್‌ಗಿರಿ ಸ್ಟೋರಿಗೆ ಹೈದರ್‍ರೇ ಯೋಗ್ಯ!"

ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’

ಡಾಕ್ಯುಮೆಂಟರಿಗಳೆಂದರೆ ಒಂಥರ ಗೊಂದಲ ಹುಟ್ಟಿಸುತ್ತವೆ. ನೋಡಬೇಕೋ ಬೇಡವೋ ಎಂದು ನಿರ್ಧರಿಸುವಷ್ಟರಲ್ಲಿ ಆಸಕ್ತಿಯೇ ಹೊರಟು ಹೋಗಿರುತ್ತೆ. `ನಾಸ್ಟಾಲ್ಜಿಯಾ ಫಾರ್‌ ದ ಲೈಟ್‌’ ಎಂಬ ಡಾಕ್ಯುಮೆಂಟರಿಯನ್ನು ನೋಡುವ ಮೊದಲು ಆಗಿದ್ದೇ ಇದು! ಆದರೆ ನೋಡಿದ ಮೇಲೆ ಎಲ್ಲ ಗೊಂದಲಗಳೂ ಪರಿಹಾರವಾಗಿ ಇನ್ನುಮುಂದೆ ಫಿಕ್ಷನ್‌ ನೋಡೋದೇ ಬೇಡ ಅನ್ನೋ ಭಾವವೂ ಮೂಡಿಬಿಟ್ಟಿತ್ತು. ಕಾವ್ಯಾತ್ಮಕ, ಭಾವನಾತ್ಮಕ ಗುಣವುಳ್ಳವರು ಒಂದು ರಾತ್ರಿ ಏಕಾಂತದಲ್ಲಿ ಈ ಸಿನೆಮಾವನ್ನು ನೋಡಬೇಕು. ಆಮೇಲೆ ಖಂಡಿತ ನೀವು ಒಂದೆರಡು ದಿನ ಮಾತಾಡಲೂ ಹಿಂಜರಿಯುತ್ತೀರಿ. ನಾನೂ ಅದೇ ಬಗೆಯ ಮೌನಯುಗವನ್ನು ಅನುಭವಿಸಿ ಈಗಷ್ಟೇ ಬರೆಯುವ ಶಕ್ತಿ ಪಡೆದೆ.

"ಖಗೋಳ ವೀಕ್ಷಣೆಯ ನೀರವದಲ್ಲಿ ಭೂ-ಗತಕಾಲದ ಹುಡುಕಾಟ : ‘ನಾಸ್ಟಾಲ್ಜಿಯಾ ಫಾರ್ ದ ಲೈಟ್’"

ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!

ಮಿಂಚಂಚೆ ಅರ್ಥಾತ್‌ ಈಮೈಲ್  ಹುಟ್ಟಿದ್ದು ಯಾವಾಗ? ಅದನ್ನು ಕಂಡು ಹಿಡಿದವರು ಯಾರು? ಈ ಪ್ರಶ್ನೆಗಳನ್ನು ನಾನು ಈಗ ಕೇಳುತ್ತಿರೋದೇಕೆ, ಅಷ್ಟೂ ಗೊತ್ತಿಲ್ಲವೆ ಎಂದು ಮೂಗು ಮುರಿಯಬೇಡಿ. ನಾನೂ ನಿಮ್ಮಂತೆಯೇ  ರೇ ಟೋಮಿಲ್‌ಸನ್‌ ಎಂಬಾತನೇ ಈಮೈಲ್‌ ಜನಕ ಎಂದು ಭಾವಿಸಿದ್ದೆ ಮತ್ತು ೨೦೦೨ರಲ್ಲಿ ವಿಜಯ ಕರ್ನಾಟಕದಲ್ಲಿ ಇದ್ದಾಗ ಅಂಥದ್ದೊಂದು ಲೇಖನವನ್ನೂ ಪ್ರಕಟಿಸಿದ್ದೆ. ಆದರೆ `ದಿ ಈಮೈಲ್‌ ರೆವೊಲುಶನ್‌: ಅನ್‌ಲೀಶಿಂಗ್‌ ದಿ ಪವರ್‌ ಟು ಕನೆಕ್ಟ್‌’ ಎಂಬ ಪುಸ್ತಕವನ್ನು ಓದಿದ ಮೇಲೆ ನನ್ನ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ.  ಪುಸ್ತಕವನ್ನು ಓದಿದ ಮೇಲೆ ನನ್ನದೇ ಆಳ ಗೂಗಲಿಂಗ್‌ ನಡೆಸಿ, ಅಲ್ಲಲ್ಲಿ ವಿವಿಧ ಆಯಾಮಗಳ ಹೇಳಿಕೆಗಳನ್ನು ಗಮನಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ.

"ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!"

THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!

ಪ್ರಧಾನಮಂತ್ರಿ, ಮುಖ್ಯಮಂತ್ರಿಯವರ ಕಚೇರಿಗಳಲ್ಲಿ ಕೆಲಸ ಮಾಡುವವರು ಅತ್ಯಂತ ಗರಿಷ್ಠ ಪ್ರಮಾಣದ ಕರ್ತವ್ಯನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕು ಎನ್ನುವುದು, ನನ್ನ ಪುಟ್ಟ ಅನುಭವ. ಗೌಪ್ಯತೆಯ ಬಗ್ಗೆ ಬೇರೆ ಹೇಳಬೇಕೆ? ಇಂಥ ಸೇವೆಗಳಲ್ಲಿ ಇದ್ದಾಗ ವ್ಯಕ್ತಿಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿರುತ್ತದೆ. ಅದನ್ನೇ ನಮ್ಮ ಹೆಚ್ಚುಗಾರಿಕೆ ಎಂದು ತಿಳಿದುಕೊಳ್ಳುವುದು ಸರಿಯಲ್ಲ. ಹೀಗೆ ವ್ಯವಸ್ಥೆಯ ಮೇಲ್ಪದರದಲ್ಲಿ ಇರುವ ಉದ್ಯೋಗಿಗಳೂ ಗೌಪ್ಯತೆಗೆ ಬದ್ಧರು.

"THE ACCIDENTAL PRIME MINISTER : ಪುಸ್ತಕ ವಿಮರ್ಶೆ: `ಶಾಣ್ಯಾ’ ಸಂಜಯ ಬಾರು; `ಭೋಳ್ಯಾ’ ಡಾ||ಸಿಂಗ್‌!"

`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ

ಉಳಿದವರು ಕಂಡಂತೆ ಎಂಬ ಸಿನೆಮಾ ಬಂದಿದೆ, ಚೆನ್ನಾಗಿದೆಯಂತೆ ಎಂದು ಮಾತು ಕೇಳಿಬಂದಾಗ ಹೇಳಿದಾಗ ಹೌದೆ ಎಂದು ನನ್ನ ಮಗನನ್ನು ಕೇಳಿದೆ. `ನಾನು ಕಾಮಾಖ್ಯದಲ್ಲಿ ನೋಡಿದೆ. ಚೆನ್ನಾಗಿದೆ. ನೀನೂ ನೋಡು’ ಎನ್ನಬೇಕೆ? ಎಲಾ ಇವನ, ಕನ್ನಡ ಸಿನೆಮಾ ಎಂದರೆ ಮೂಗು ಮುರೀತಿದ್ದವನಿಗೆ ಇದು ಹೇಗೆ ಸಾಧ್ಯವಾಯ್ತು ಎಂದು ಅಚ್ಚರಿಪಟ್ಟೆ. ಆದರೆ ಈ ಹಿಂದೆ `ಲೂಸಿಯಾ’ ಸಿನೆಮಾವನ್ನೂ ಅವನೇ ಮೊದಲು ನೋಡಿ ನನಗೆ ಒತ್ತಾಯಿಸಿದ್ದು ನೆನಪಾಯಿತು. ಲೂಸಿಯಾ ನಿರ್ದೇಶಕ ಪವನ್‌ ಕುಮಾರರೇ ನನ್ನ ಮಗನನ್ನು ಮಹಾ ಅಭಿಮಾನಿ ಎಂದು ಫೇಸ್‌ಬುಕ್ಕಿನಲ್ಲಿ ಕೊಂಡಾಡಿದ್ದನ್ನೂ ನಾನು ಓದಿದ್ದೆ. ಆದ್ದರಿಂದ `ಉಳಿದವರು ಕಂಡಂತೆ’ ನೋಡುವಾ ಎಂದು ತೀರ್ಮಾನಿಸಿ ನಿನ್ನೆ ನೋಡಿದೆ. ರಾತ್ರಿಯೇ ಸಿನೆಮಾದ ಬಗ್ಗೆ  ಗೂಗಲ್‌ ಮಾಡಿದೆ. ಕನ್ನಡ ಪತ್ರಿಕೆಗಳಲ್ಲಿ (ಉದಯವಾಣಿ ಹೊರತುಪಡಿಸಿ)…

"`ಉಳಿದವರು ಕಂಡಂತೆ’ : ವೃತ್ತಿಪರ, ದಕ್ಷ ಮತ್ತು ಸಮಾಜ-ಸನ್ನಿವೇಶದ ಹೊಣೆಯರಿತ ನಿರ್ಮಾಣ"