ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ

ಮೇ ೧೫ ನನ್ನ ಪಾಲಿಗೆ ಅವಿಸ್ಮರಣೀಯ ದಿನ. ಅವತ್ತು ನಾನು ನನ್ನ ಎಸೆಸೆಲ್ಸಿ ಮ್ಯಾಥ್ಸ್ ಮೇಡಂ ಜಯಲಕ್ಷ್ಮಿಯವರನ್ನು ಅವರ ಮನೆಯಲ್ಲೇ ಭೇಟಿ ಮಾಡಿದೆ. ಬಾಗಿಲು ತೆರೆದವರೇ ಗುರುತಿದೆಯಾ ಮಾರಾಯಾ ಎಂದು ಅಚ್ಚರಿ ಮತ್ತು ಪ್ರೀತಿಯಿಂದ ವಿಚಾರಿಸಿಕೊಂಡರು. ಎಂದಿನಂತೆ ಪ್ರಾಕ್ಟಿಕಲ್ ಮಾತುಗಳು.  

"ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ"

ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು

ನಾನೇನೂ ಸಂಗೀತಗಾರನೂ ಅಲ್ಲ, ವಿಧೇಯ ಸಂಗೀತಾರ್ಥಿಯೂ ಅಲ್ಲ. ಆದರೆ ಆರು ವರ್ಷಗಳ ಹಿಂದೆ ಆರಂಭಿಸಿದ, ಎರಡು ವರ್ಷಗಳಿಂದ ತಡವರಿಸಿಕೊಂಡು ಬಂದ ಸಂಗೀತ ಕ್ಲಾಸಿನ ನಂತರದ ಕ್ಷಣಗಳಲ್ಲಿ ನನ್ನ ಜೊತೆಗೆ ಇದ್ದ, ಇರುವವರ ಬಗ್ಗೆ ಬರೆಯಬೇಕು ಅಂತ ಈ ಬೆಳಗ್ಗೆ ಅನ್ನಿಸಿ…… ನಿಮ್ಮೆದುರು ಆ ನೆನಪು ಹಂಚಿಕೊಳ್ಳಲು ಕೂತಿದ್ದೇನೆ.

"ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು"

ಪಾಕಿಸ್ತಾನಿ ಗಝಲ್‌ಗಳ ಖಜಾನೆ

ಪಾಕಿಸ್ತಾನಿ ಗಝಲ್‌ಗಳನ್ನು ಕೇಳುವುದು ನನಗೊಂದು ವಿಚಿತ್ರ ಹುಚ್ಚು. ಅದರಲ್ಲೂ ಪಠಾಣ್ ಖಾನ್‌ನಂಥ ಗಝಲ್ ಗಾಯಕರ ಚೀಸ್ ಸಿಕ್ಕರೆ ಮುಗಿದೇ ಹೋಯ್ತು…. ಎಷ್ಟೋ ವರ್ಷಗಳ ಹಿಂದೆ ನನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಪಾಕಿಸ್ತಾನಿ ಗಝಲ್‌ಗಳು ದೊರೆಯುವ ಕೆಲವು ಕೊಂಡಿಗಳನ್ನು ಪ್ರಕಟಿಸಿದ್ದೆ. ಈಗ ಕಾಲ ಬದಲಾಗಿದೆ.

"ಪಾಕಿಸ್ತಾನಿ ಗಝಲ್‌ಗಳ ಖಜಾನೆ"

ನನ್ನ ಮೇಡಂ ಜಯಲಕ್ಷ್ಮಿ

`ನನ್ನ ಮೇಡಂ ಜಯಲಕ್ಷ್ಮಿ ‘ಎಂಬ ಕವನವನ್ನು ಬರೆದು ಎಟೋ ವರ್ಷಗಳಾದ ಮೇಲೆ….. ಅವರನ್ನು ಖುದ್ದು ಕಾಣುವುದಕ್ಕೆ ಹರಸಾಹಸ ಮಾಡುತ್ತಿದ್ದೇನೆ. ನಿಮ್ಮ ಹರಕೆಯೂ ಸಏರಿಕೊಂಡರೆ ಖಂಡಿತ ಮೇ ತಿಂಗಳಲ್ಲಿ ಅವರನ್ನು ಕಾಣುವೆ. ನನ್ನ ಕವನ ಸಂಕಲನ `ವರ್ತಮಾನದ ಬಿಸಿಲುನಲ್ಲೂ ಈ ಕವನವನ್ನು ನೀವು ಕಾಣಬಹುದು. ಅಷ್ಟಮಟ್ಟಿಗೆ ಜಯಲಕ್ಷ್ಮಿ ಮೇಡಂ ನನ್ನ ಮೇಲೆ ಪ್ರಭಾವ ಬೀರಿದ್ದಾರೆ. ಅವರನ್ನು ನಾನು ಕಾಣದೇ ಸುಮಾರು ೨೬ ವರ್ಷಗಳಾದವು. ಅವರ ಪಾಠ ಕೇಳಿಯೇ ಇಪ್ಪತ್ತೊಂಬತ್ತು ವರ್ಷಗಳಾಗಿವೆ. ಆದರೆ ಈಗಲೂ ಅವರ ಮುಖ, ಅವರು ನನಗೆ ಹೇಳಿದ ಮಾತುಗಳು, ಬರೆದ ಪತ್ರಗಳು, ತರಗತಿಯೊಳಗೆ ಅವರು ನನ್ನನ್ನು ಪರಿಚಯ ಮಾಡಿಕೊಂಡ ಕ್ಷಣ  ಎಲ್ಲವೂ ಸ್ಪಷ್ಟವಾಗಿ ನೆನಪಿವೆ.

"ನನ್ನ ಮೇಡಂ ಜಯಲಕ್ಷ್ಮಿ"

ನನ್ನ ಪ್ರೀತಿಯ ದತ್ತಾಜಿ

ದತ್ತಾತ್ರೇಯ ಹೊಸಬಾಳೆ, – ನನ್ನ ಪ್ರೀತಿಯ ದತ್ತಾಜಿ – ಈಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರು. ಅವರಿಗೊಂದು ಪುಟ್ಟ ಅಭಿನಂದನೆ ಹೇಳಿ ಈ ಬ್ಲಾಗ್. ದತ್ತಾಜಿ ವಿದ್ಯಾರ್ಥಿ ಪರಿಷತ್ತಿನಿಂದಾಗಿ ನನಗೆ ೨೮ ವರ್ಷಗಳಿಂದ ಪರಿಚಿತರು; ಈವರೆಗೂ ಪ್ರತೀ ಭೇಟಿಯಲ್ಲೂ ನನ್ನನ್ನು ಬೆರಗಿಗೆ, ಅಚ್ಚರಿಗೆ ಮೆಲುವಾಗಿ ತಳ್ಳಿದವರು. ಮಧುರ ಸ್ನೇಹದಲ್ಲಿ ನನ್ನನ್ನು ಕಂಡವರು …

"ನನ್ನ ಪ್ರೀತಿಯ ದತ್ತಾಜಿ"

ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ

ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಸೇವಾ . org – ಕಾರ್ಯಕ್ರಮವು ಈ ಬಾರಿಯೂ ಡಿಸೆಂಬರ್ ೩೧ರಂದು ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಹೊಸ ಕ್ಯಾಲೆಂಡರ್ ವರ್ಷವನ್ನು ಸಂಕಲ್ಪದೊಂದಿಗೆ ಸ್ವಾಗತಿಸುವ ಜನಪ್ರಿಯ ಸಂಸ್ಕೃತಿ ಮೇಳವಾಗಿದೆ. ಅನ್ನ – ಅಕ್ಷರ – ಆರೋಗ್ಯ ಈ ಧ್ಯೇಯವಾಕ್ಯವನ್ನು ತನ್ನ ಸೇವಾಕಾರ್ಯಗಳ ಮೂಲಕ ಕಳೆದ ಹನ್ನೊಂದು ವರ್ಷಗಳಿಂದ ಪಾಲಿಸುತ್ತಿರುವ ಅದಮ್ಯ ಚೇತನದ ಈ ಸಾಂಸ್ಕೃತಿಕ ಮೇಳವನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಸಿದ್ಧತೆಗಳು ನಡೆದಿವೆ.

"ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ"

DNA: Delayed , No Analysis?

If you look at this screenshot of DNA newspaper’s Bangalore webpage (taken on the midnight of 15-16th December 2008) , you can be sure of one thing: DNA mostly stands for Delayed, No Analysis. Because the first news item (Hoax bomb call) itself is around 30 hours old. If you look at the right bottom, you can see the news of naxal attack and killing of a farmer, which is almost a week old. When…

"DNA: Delayed , No Analysis?"

ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !

ಅಬ್ಬಬ್ಬಬ್ಬಬ್ಬಬ್ಬ…. ಅಂತೂ ಈ ಸಲ ಬೆಂಗಳೂರಿನಲ್ಲಿ ಭಯೋತ್ಪಾದನೆ ಇಲ್ವಲ್ಲಪ್ಪ…. ಯಾಕಂದ್ರೆ ಈ ಬೆಂಗಳೂರು ಹಬ್ಬ ಅನ್ನೋ ಕಾಸ್ಮೋಭಯಂಕರ ವಿಕೃತಿಗೆ ಉಗ್ರಗಾಮಿಗಳ ಕಾಟ ಅಂತ ಸರ್ಕಾರವೇ ಹೇಳಿದೆ. ಅಂತೂ ಒಂದೇ ವಾರದಲ್ಲಿ ಎರಡೂವರೆ ಕೋಟಿ ರೂಪಾಯಿ ಪಂಗನಾಮ ಹಾಕೋ ಪ್ರಯತ್ನ ಎಂಥದ್ದೋ ಭಯದಿಂದ ನಿಂತೇ ಹೋಯ್ತು!  ಕನ್ನಡವೇ ಸತ್ಯ ಅಂತ ಕೂಗ್ತಿದ್ದ ಸಿ ಅಶ್ವಥ್‌ರಂಥವ್ರೇ ಈ ಹಬ್ಬ ಅನ್ನೋ ಗಬ್ಬು ಪ್ರಯತ್ನದ ವಿರುದ್ಧ ದನಿ ಎತ್ತಿದ್ದೇ ಇದಕ್ಕೆ ಕಾರಣವೆ? ಕನ್ನಡ ರಕ್ಷಣಾ ವೇದಿಕೆಯ ಅಬ್ಬರದ ಟೀಕೆಯೇ ಹಬ್ಬದ ಗಬ್ಬಕ್ಕೆ ಎರವಾಯ್ತೆ? ನಿಜಕ್ಕೂ ಭಯೋತ್ಪಾದಕರು ಫೋನ್ ಮಾಡಿ ಹಬ್ಬ ಹಾರಿಸ್ತೀವಿ ನಿಮ್ಮುನ್ನ ಅಂತ ಹೇಳಿದ್ರೆ? ಅಥವಾ ಹಬ್ಬ ಘೋಷಣೆಯಾದ ಮೇಲೇನೇ ಭಯ ಹುಟ್ಕೊಳ್ತೆ? ಅರೆರೆರೆರೆರೆ, ಈ ಹಬ್ಬಕ್ಕೆ ಇಂಥ…

"ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !"