Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಸುದ್ದಿ»ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ
ಸುದ್ದಿ

ಹಾಥಿ ಮೇರೆ ಸಾಥಿ : ಆನೆಗೂ ಬಂತು ಮಾನ

ಬೇಳೂರು ಸುದರ್ಶನBy ಬೇಳೂರು ಸುದರ್ಶನSeptember 1, 2010Updated:May 19, 2025No Comments4 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಆನೆಯನ್ನು ರಾಷ್ಟ್ರೀಯ ಪರಂಪರೆ ಪ್ರಾಣಿ ಎಂದು ಘೋಷಿಸಲಿದೆ ಎಂದು  ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವ ಜೈರಾಂ ರಮೇಶ್ ಪ್ರಕಟಿಸಿದ್ದಾರೆ. ಹುಲಿಗೆ ಸಿಕ್ಕ ಮಾನ – ಮರ್ಯಾದೆಯನ್ನೇ ಆನೆಗೂ ಕೊಡಲು ರಾಷ್ಟ್ರೀಯ ಆನೆ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಆನೆ ಕುರಿತ ಕಾರ್ಯಪಡೆಯ ವರದಿಯನ್ನು ಬಿಡುಗಡೆ ಮಾಡಿ ಅವರು ಈ ಪ್ರಕಟಣೆ ಹೊರಡಿಸಿದ್ದಾರೆ. ಕೊನೆಗೂ ಆನೆಗೂ ಕೊಂಚ ಹೆಚ್ಚಿನ ಸ್ಥಾನ – ಮಾನ – ಸಂರಕ್ಷಣೆ ಸಿಗೋ ಲಕ್ಷಣಗಳು ಕಾಣುತ್ತಿವೆ.


ತೀವ್ರ ಗಣಿಗಾರಿಕೆ, ವಿದ್ಯುತ್ ಮತ್ತು ನೀರಾವರಿ ಯೋಜನೆಗಳ ಹಿನ್ನೆಲೆಯಲ್ಲಿ ಆನೆಗಳ ರಕ್ಷಣೆಯ ಬಗ್ಗೆ ಕಾರ್ಯಪಡೆಯು ತನ್ನ ವರದಿಯಲ್ಲಿ ವಿವರವಾಗಿ ಚರ್ಚಿಸಿರೋದನ್ನು ಜೈರಾಂ ರಮೇಶ್ ಶ್ಲಾಘಿಸಿದ್ದಾರೆ. ೨೦೧೧ರಲ್ಲಿ ಅಂತಾರಾಷ್ಟ್ರೀಯ ಆನೆ ಸಮ್ಮೇಳನ (ಆನೆಗಳದ್ದಲ್ಲ, ಆನೆ ಕುರಿತು ಮಾನವರದ್ದು) ನಡೆಸುವ ಸಲಹೆಯನ್ನೂ ಅವರು ಸ್ವಾಗತಿಸಿದ್ದಾರೆ. ಆನೆಗಳ ಪ್ರಾಣಕ್ಕೆ ಸಂಚಕಾರ ತರುತ್ತಿರೋ ರೈಲ್ವೆ ಮತ್ತು ಪವರ್‌ಗ್ರಿಡ್ ನಿಗಮ – ಇವುಗಳ ಪಾತ್ರವು ಆನೆ ರಕ್ಷಣೆಯಲ್ಲಿ ತುಂಬಾ ಮುಖ್ಯ ಎಂದು ಸಮಿತಿಯು ಗುರುತಿಸಿರೋದನ್ನು ರಮೇಶ್ ಸಹಾ ಒತ್ತಿಹೇಳಿದ್ದಾರೆ.

ಡಾ. ಮಹೇಶ್ ರಂಗರಾಜನ್ ಅಧ್ಯಕ್ಷತೆಯ ಈ ಕಾರ್ಯಪಡೆಯಲ್ಲಿ ಅಜಯ್ ದೇಸಾಯಿ, ಡಾ. ಆರ್ ಸುಕುಮಾರ್, ಡಾ. ಪಿ ಎಸ್ ಈಸಾ, ವಿವೇಕ್ ಮೆನನ್, ಡಾ. ಎಸ್ ವಿನ್ಸೆಂಟ್, ಸುಪರ್ಣಾ ಗಂಗೂಲಿ, ಡಾ. ಬಿ ಕೆ ತಾಲೂಕ್‌ದಾರ್, ಬ್ರಿಜೇಂದ್ರ ಸಿಂಗ್, ಡಾ. ದಿವ್ಯಾ ಮುದ್ದಪ್ಪ, ಡಾ. ಸುಶಾಂತ್ ಚೌಧರಿ ಮತ್ತು ಎ ಎನ್ ಪ್ರಸಾದ್ ಸದಸ್ಯರಾಗಿದ್ದರು. ಈ ಕಾರ್ಯಪಡೆಯು ಇಂದು (೧.೯.೨೦೧೦) ತನ್ನ ೧೮೭ ಪುಟಗಳ ವರದಿಯನ್ನು ಸಚಿವರ ಮೂಲಕ ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ. ಈ ವರದಿಯನ್ನು ಸಾರ್ವಜನಿಕರು ಇಲ್ಲಿ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾರಾಂಶ ಬೇಕಾದವರು ಈ ಬ್ಲಾಗ್ ಓದುವುದನ್ನು ಮುಂದುವರೆಸಿರಿ!

ಈ ಕಾರ್ಯಪಡೆ ವರದಿಯ ಮುಖ್ಯಾಂಶಗಳು ಹೀಗಿವೆ:

  • ಭಾರತದ ಆನೆಯ ಸಂರಕ್ಷಣೆ, ಆರೈಕೆ – ಇದು ದೊಡ್ಡ ಸವಾಲು. ಈ ಕಾರ್ಯಸಾಧನೆಗೆ ನಮ್ಮೆಲ್ಲ ಸಮುದಾಯಗಳ ಅನುಭವ ಮತ್ತು ಆಡಳಿತ ದಕ್ಷತೆಯನ್ನು ತೋರಬೇಕಿದೆ. ಭಾರತವು ಖಂಡಿತವಾಗಿಯೂ ‘ಗಜ’ಭವಿಷ್ಯವನ್ನು ರಕ್ಷಿಸಬಹುದಾಗಿದೆ; ಅದರ ಕಾಡು ಮನೆಯನ್ನು ಉಳಿಸಿಕೊಳ್ಳಬಹುದು.
  • ಆನೆಯನ್ನು ರಾಷ್ಟ್ರೀಯ ಪರಂಪರೆಯ ವನ್ಯಜೀವಿ ಎಂದು ಘೋಷಿಸಬೇಕು. ಆನೆಗಳ ಬಗ್ಗೆ ಜಾಗೃತಿಗಾಗಿ ‘ಹಾಥಿ ಮೇರೆ ಸಾಥಿ’ ಎಂಬ ವಿನೂತನ ಕಾರ್ಯಕ್ರಮವನ್ನು ದೇಶದ ಶಾಲಾ ಕಾಲೇಜುಗಳಲ್ಲಿ, ಪ್ರಾದೇಶಿಕ ಭಾಷೆಗಳಲ್ಲಿ ಹಮ್ಮಿಕೊಳ್ಳಬೇಕು. ಪ್ರಾದೇಶಿಕ ಗಜಕೇಂದ್ರಗಳನ್ನು ಸ್ಥಾಪಿಸಬೇಕು.
  • ನಮ್ಮ ದೇಶದಲ್ಲಿ ರಾಷ್ಟ್ರೀಯ ಗಜ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಜೊತೆಗೇ ಕನ್ಸಾರ್ಶಿಯಂ ಆರ್ಫ ಎಲೆಫಂಟ್ ರಿಸರ್ಚ್ ಎಂಡ್ ಎಸ್ಟಿಮೇಶನ್ ಸಂಸ್ಥೆಯನ್ನೂ ಸ್ಥಾಪಿಸಬೇಕು.
    ಇನ್ನು ಮುಂದೆ ರಾಜ್ಯಗಳಲ್ಲಿರುವ ಆನೆ ವಲಯಗಳನ್ನು ಪುನಾರಚಿಸುವುದಲ್ಲದೆ, ಆನೆ ಭೂಪ್ರದೇಶ ಎಂದು ಹತ್ತು ಪ್ರದೇಶಗಳನ್ನು ಗುರುತಿಸಲಾಗುವುದು. ಅಲ್ಲದೆ ೩೨ ಆನೆ ಮೀಸಲು ಪ್ರದೇಶಗಳನ್ನು ಪ್ರಸ್ತಾಪಿಸಲಾಗಿದೆ. ಈಗ ಇರುವ ಆನೆ ಮೀಸಲು ಪ್ರದೇಶಗಳ ಶೇ. ೪೦ ಭಾಗವು ಸಂರಕ್ಷಿತ ಅಥವಾ ಸರ್ಕಾರಿ ಅರಣ್ಯದ ವ್ಯಾಪ್ತಿಯಲ್ಲಿ ಇಲ್ಲ.
  • ಪಾರಿಸರಿಕವಾಗಿ ಋಣಾತ್ಮಕ ಪರಿಣಾಮ ಬೀರುವ ಚಟುವಟಿಕೆಗಳನ್ನು ನಿಯಂತ್ರಿಸಲು ಈ ಪ್ರದೇಶಗಳಿಗೆ ಪಾರಿಸರಿಕ ಸೂಕ್ಷ್ಮ ಪ್ರದೇಶ ಎಂಬ ಸ್ಥಾನಮಾನವನ್ನು ನೀಡಬಹುದು.
    ಆನೆಗಳ ಸಂರಕ್ಷಣೆಗೆ ಆನೆ ಮೀಸಲು ಸಮಿತಿಗಳನ್ನು ರಚಿಸಬೇಕು. ಇದರಲ್ಲಿ ಸ್ಥಳೀಯರನ್ನು ಸೇರಿಸಿಕೊಳ್ಳಬೇಕು. ಅಲ್ಲದೆ ನಾಗರಿಕರ ಆನೆ ಕಲ್ಯಾಣ ಸಮಿತಿಗಳನ್ನೂ ರಚಿಸಬೇಕು. ಆನೆಗಳ ಕುರಿತ ಸಂಶೋಧನೆಗೆ, ನಿಗಾ ಕಾರ್ಯಾಚರಣೆಗೆ ೫೦ ಕೋಟಿ ರೂ.ಗಳನ್ನು ಮೀಸಲಿಡಬೇಕು.
  • ವನ್ಯಜೀವಿ ರಕ್ಷಣಾ ಕಾಯ್ದೆಗೆ ತಿದ್ದುಪಡಿ ತಂದು ಲೋಪದೋಷಗಳನ್ನು ಸರಿಪಡಿಸಬೇಕು.
  • ಆನೆ ದಂತ ಕಳವು ತಪ್ಪಿಸಲು ಉತ್ಸಾಹಿ ಸ್ಥಳೀಯ ಯುವಕರನ್ನು ನೇಮಿಸಿಕೊಳ್ಳಬೇಕು. ಮಾಹಿತಿ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಿ ವನ್ಯಜೀವಿ ವಿರೋಧಿ ಅಪರಾಧ ಪತ್ತೆಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಭಾರತೀಯ ಮತ್ತು ಅಂತಾರಾಷ್ಟ್ರೀಯ ದಂತ ಮಾರುಕಟ್ಟೆಗಳನ್ನು ಮುಚ್ಚಬೇಕು.
  • ಸೆರೆಯಲ್ಲಿರುವ / ಅಧೀನದಲ್ಲಿರುವ ೩೫೦೦ ಆನೆಗಳ ಕಲ್ಯಾಣ ಮಾನದಂಡಗಳನ್ನು ನಿಗದಿಪಡಿಸಬೇಕು. ಮಾವುತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು. ಆನೆಗಳಿಗಾಗಿ ಆಜೀವ ನಿಗಾ ಕೇಂದ್ರಗಳನ್ನು ಸ್ಥಾಪಿಸಬೇಕು.

ಗಜ ಮತ್ತು ಪ್ರಜಾ
ಗಜ ಮತ್ತು ಪ್ರಜಾ – ಇಬ್ಬರೂ ಜೊತೆಜೊತೆಯಾಗಿ ಹೆಜ್ಜೆ ಇಡಬೇಕು ಎಂಬುದು ಈ ಕಾರ್ಯಪಡೆಯ ಒಂದು ಘೋಷವಾಕ್ಯ. ಆನೆಗಳಿಂದ ಪ್ರತಿವರ್ಷ ೪೦೦ ಜನ ಸತ್ತರೆ, ಮನುಷ್ಯರಿಂದ ಪ್ರತಿವರ್ಷ ೧೦೦ ಆನೆಗಳು ಸಾಯುತ್ತವೆ.

ಹೊಸ ಗಜಪ್ರದೇಶಗಳು (ಎಲೆಫಂಟ್ ಲ್ಯಾಂಡ್‌ಸ್ಕೇಪ್‌ಗಳು) ಯಾವುವು?

  1. ಕಾಝಿರಂಗ – ಕಾರ್ಬಿ ಆಂಗ್‌ಲಾಂಗ್ – ಇಂತಾಂಕಿ
  2. ಕಾಮೆಂಗ್ – ಸೋನಿತ್‌ಪುರ್
  3. ಪೂರ್ವ – ಮಧ್ಯ
  4. ಉತ್ತರ – ಪಶ್ಚಿಮ
  5. ಬ್ರಹ್ಮಗಿರಿ – ನೀಲಗಿರಿ – ಪಶ್ಚಿಮ ಘಟ್ಟಗಳು
  6. ನೈಋತ್ಯ ತಟಾಕ
  7. ಉತ್ತರ ಬಂಗಾಳ – ಬೃಹತ್ ಮಾನಸ
  8. ಮೇಘಾಲಯ
  9. ಅಣ್ಣಾಮಲೈ – ನೆಲ್ಲಿಂಪಾಥಿ- ಉನ್ನತ ಶ್ರೇಣಿ
  10. ಪೆರಿಯಾರ್ – ಅಗಸ್ತ್ಯಮಲೈ

ಆನೆ ರಕ್ಷಣೆ, ಗಣಿಗಾರಿಕೆ ಇತ್ಯಾದಿ

೧೯೯೩ರಲ್ಲಿ ೨೫೬೦೪ ಆನೆಗಳಿದ್ದವು; ಆಮೇಲೆ ಈ ಸಂಖ್ಯೆ ೧೯೯೭ರಲ್ಲಿ ೨೫೮೭೭ಕ್ಕೆ ಇಳಿದು, ೨೦೦೨ರಲ್ಲಿ ೨೬೪೧೩ಕ್ಕೆ ಹೆಚ್ಚಿತು; ೨೦೦೭-೦೮ರಲ್ಲಿ ಈ ಸಂಖ್ಯೆ ೨೭೬೯೪ಕ್ಕೆ ಹೆಚ್ಚಿದೆ ಎಂದು ಗಣತಿ ಹೇಳಿದೆ.

ಭಾರತದಲ್ಲಿ ೧೯೮೦ರಿಂದ ೨೦೦೫ರ ಹದಿನೈದು ವರ್ಷಗಳ ಅವಧಿಯಲ್ಲಿ ೯೫ ಸಾವಿರ ಹೆಕ್ಟೇರುಗಳಷ್ಟು ಅರಣ್ಯವನ್ನು ಗಣಿಗಾರಿಕೆಗೆ ಹಸ್ತಾಂತರಿಸಲಾಗಿದೆ ಎಂಬ ಮಾಹಿತಿಯನ್ನು ಕಾರ್ಯಪಡೆಯ ವರದಿ ಹೇಳುತ್ತದೆ. ಗಣಿಗಾರಿಕೆಯು ಅರಣ್ಯೇತರ ಚಟುವಟಿಕೆ ಎಂದು ೧೯೮೦ರ ಅರಣ್ಯ ಸಂರಕ್ಷಣಾ ಕಾಯ್ದೆ ಹೇಳುತ್ತದೆ. ಆದ್ದರಿಂದ ಹೀಗೆ ಕಾಡನ್ನು ಗಣಿಗಾರಿಕೆಗೆ ಕೊಡುವಾಗ ಪರಿಸರದ ಮೇಲೆ ದುಷ್ಪರಿಣಾಮ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಇರುವ ಹಲವು ಕಾನೂನು ಪರಿಚ್ಛೇದಗಳನ್ನು ಪಟ್ಟಿ ಮಾಡಿರುವ ಕಾರ್ಯಪಡೆಯು ಕೊನೆಗೆ ಹೇಳಿದ್ದು ಹೀಗೆ:

  • ಗಣಿಗಾರಿಕೆ ಮಾಡುವಾಗ ಪಾರಿಸರಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಟ್ಟಿಲ್ಲ.
  • ಹಲವು ಪ್ರಕರಣಗಳಲ್ಲಿ ಪಾರಿಸರಿಕ ಪರಿಣಾಮ ವರದಿಗಳನ್ನು (ಇಐಎ)ಪ್ರಾಣಿಗಳ ವಲಸೆ ಮತ್ತಿತರ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳದೆಯೇ ರೂಪಿಸಲಾಗುತ್ತದೆ. ಅಲ್ಲದೆ ಇಐಎ ವರದಿ ತಯಾರಿಸುವ ಸಂಸ್ಥೆಗಳ ಗುಣಮಟ್ಟ, ಪ್ರಾಮಾಣಿಕತೆಯನ್ನು ಅಳೆದು ಪರವಾನಗಿ ನೀಡುವ ವ್ಯವಸ್ಥೆಯೇ ಇಲ್ಲ; ಇಐಎ ವರದಿ ತಯಾರಿಸುವ ಸಂಸ್ಥೆಗಳ ಮೇಲೆ ಯಾವ ಹೊಣೆಗಾರಿಕೆಯೂ ಇಲ್ಲ ಎಂದು ಕಾರ್ಯಪಡೆ ವಿಷಾದಿಸಿದೆ.
    ಇನ್ನುಮುಂದೆ ಆನೆ ಮೀಸಲು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮುನ್ನ ರಾಷ್ಟ್ರೀಯ ಗಜ ಸಂರಕ್ಷಣಾ ಪ್ರಾಧಿಕಾರದ (ಅದನ್ನು ಸ್ಥಾಪಿಸಬೇಕಿದೆ) ಅನುಮತಿ ಕಡ್ಡಾಯ ಮಾಡಬೇಕು.
  • ಈಗಾಗಲೇ ಆನೆ ಮೀಸಲು ಪ್ರದೇಶಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಗಳನ್ನು ಅಭ್ಯಸಿಸಿ ಅಗತ್ಯ ಬಿದ್ದರೆ ಅವುಗಳನ್ನು  ನಿಲ್ಲಿಸಬೇಕು. ಐದು ಹೆಕ್ಟೇರಿಗಿಂತ ಕಡಿಮೆ ಪ್ರದೇಶದಲ್ಲಿ ಗಣಿಗಾರಿಕೆ, ಕಲ್ಲುಗಣಿ ಉದ್ಯಮ ನಡೆಸುವುದು ಈಗ ಗಣಿ ಮತ್ತು ಖನಿಜ ಅಭಿವೃದ್ಧಿ ಕಾಯ್ದೆಯ ಅಡಿಯಲ್ಲಿ ಬರುತ್ತಿಲ್ಲ. ಆದರೆ ಇದರಿಂದ ಆನೆಗಳ ಮೇಲೆ ದುಷ್ಪರಿಣಾಮವಾಗುತ್ತಿದೆ.

ಶಿಫಾರಸುಗಳಷ್ಟೆ ಸಾಕೆ?

ಈ ಕಾರ್ಯಪಡೆಯು ಹತ್ತು ಹಲವು ಒಳ್ಳೆಯ ಶಿಫಾರಸುಗಳನ್ನೇನೋ ಮಾಡಿದೆ.  ಆದರೆ ಈ ಶಿಫಾರಸುಗಳು ಜಾರಿಯಾದರೆ ಏನೇನಾಗುತ್ತದೆ? ಹುಲಿ ರಕ್ಷಣೆಯು ಒಂದು ದೊಡ್ಡ ಆಂದೋಳನವಾಗಿದ್ದರೂ ಹಲವು ಲೋಪದೋಷಗಳನ್ನು ಹೊಂದಿದೆ ಎಂಬ ಮಾತು ಕೇಳಿ ಬಂದಿದೆ. ಹುಲಿ ರಕ್ಷಣೆಗಾಗಿ ಹಲವು ಅಂತಾರಾಷ್ಟ್ರೀಯ ನಿಧಿ ನೀಡಿಕೆ ಸಂಸ್ಥೆಗಳೇ ಇವೆ. ಆನೆಗಳ ವಿಷಯದಲ್ಲೂ ಇಂಥ ಅನುಮಾನ ಹುಟ್ಟಲೇಕೂಡದು ಅಲ್ಲವೆ? ಆದ್ದರಿಂದ ಜೈರಾಂ ರಮೇಶ್ ಮುಂದೆ ದೊಡ್ಡ ಸವಾಲೇ ಇದೆ. ಆನೆಗಳ ರಕ್ಷಣೆ ಭಾರತ ಸರ್ಕಾರದ ಹೊಣೆ ಮಾತ್ರವಲ್ಲ; ಸಮಾಜದ್ದೂ ಹೌದು.

ಏನೇ ಇರಲಿ, ಇಂಥ ಒಂದು ವರದಿಯನ್ನು ಸಿದ್ಧಪಡಿಸಲು ಮುಂದಾದ ಜೈರಾಂ ರಮೇಶ್‌ಗೆ ಅಭಿನಂದನೆಗಳು. ಅವರು ಇಂಥ ಘನ ಕಾರ್ಯಗಳನ್ನು ಗಜಗಂಭೀರವಾಗಿ ಮುನ್ನಡೆಸಿಕೊಂಡು ಹೋಗಲಿ. ಗಜಮುಖನು ಅವರಿಗೆ ಎಲ್ಲ ಬಗೆಯ ರಕ್ಷಣೆಯನ್ನೂ ನೀಡಲಿ ಎಂದು ಈ ಸಂದರ್ಭದಲ್ಲಿ ಆಶಿಸೋಣ.

ಆಫ್ರಿಕನ್ ಆನೆ ರಕ್ಷಣೆ ಹೇಗಿದೆ?

ಭಾರತದ ಆನೆಯಂತೇ ಆಫ್ರಿಕಾದ ಆನೆಗಳೂ ತುಂಬಾ ಮಹತ್ವದ ಜೀವಿಗಳು (ಮಕ್ಕಳಿಗೆ ಆಫ್ರಿಕಾದ ಆನೆ ಎಂದು ಕಣ್ಣು ಬಿಟ್ಟು ಚಿತ್ರ ತೋರಿಸಿ ಹೇಳಿದರೆ ಅವು ಹೇಗೆ ಭಯ ಬೀಳುತ್ತವೆ ನೋಡಿ!!). ಆಫ್ರಿಕನ್ ವೈಲ್ಡ್‌ಲೈಫ್ ಫೌಂಡೇಶನ್ ಎಂಬ ಸಂಸ್ಥೆಯು ಆಫ್ರಿಕಾದ ವನ್ಯಜೀವಿ ರಕ್ಷಣೆಯ ಕೆಲಸವನ್ನೇ ಮುಖ್ಯವಾಗಿ ಮಾಡುತ್ತಿದೆ. ಈ ಸಂಸ್ಥೆಯ ಇತಿಹಾಸ ಅಷ್ಟಾಗಿ ತಿಳಿಯುವುದಿಲ್ಲವಾದರೂ ಇದಕ್ಕೆ ಹಲವು ಕಾರ್ಪೋರೇಟ್ ಪ್ರಾಯೋಜಕರು ಇದ್ದಾರೆ ಎಂಬುದು ಗಮನಿಸಬೇಕಾದ ವಿಷಯ. ಭಾರತದಲ್ಲಿ ಸರ್ಕಾರಗಳು ಖಾಸಗಿ ಭಾಗಿತ್ವಕ್ಕೆ ಅವಕಾಶ ನೀಡಲೂಬಹುದು; ಆದರೆ ಇದೆಲ್ಲ ಕೇವಲ ಬೂಟಾಟಿಕೆಯ, ಪ್ರಚಾರದ ಸಾಧನಗಳಾಗಬಾರದು. ಈ ಬಗ್ಗೆ ಜೈರಾಂ ರಮೇಶ್ ಎಚ್ಚರಿಕೆ ವಹಿಸುವುದು ಒಳ್ಳೆಯದು.

ಹೆಚ್ಚುವರಿ ಮಾಹಿತಿಗೆ ಗೂಗಲ್ ಮಾಡೋ ಮೊದಲು ಸಮಯ ಉಳಿಸಲು ಈ ಕೊಂಡಿಗಳನ್ನು ಓದಿ:

  • www.elephantcare.org/conserve.htm
  • www.awf.org
  • www.savetheelephants.org/press-releases.html
  • www.worldwildlife.org/species/finder/elephants/elephants.html

 

beluru sudarshana elephant indian elephant mitramaadhyama MoEF
Share. Facebook Twitter Pinterest LinkedIn Tumblr Email
Previous Articleನಿಂದನೆಯ ಕವಲೊಡೆದ ಚರ್ಚೆಗೆ ನನ್ನ ಪ್ರತಿಕ್ರಿಯೆ
Next Article ತುಂಟ ಸಿದ್ಧಾರ್ಥನ ಕಲಾಕೃತಿಗಳು
ಬೇಳೂರು ಸುದರ್ಶನ
  • Website

Related Posts

ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!

July 18, 2024

ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!

July 18, 2024

ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!

June 5, 2024

Comments are closed.

ಸುದ್ದಿ
  • ಭಾರತದಲ್ಲಿ ಅನ್ನದಾನ : ಬೋಧನೆ ಮತ್ತು ಅಚರಣೆ – ಈ ಸಂಶೋಧನಾ ಪುಸ್ತಕವು ಒಂಬತ್ತು ಭಾಷೆಗಳಲ್ಲಿ ಪ್ರಕಟವಾಗುತ್ತಿದೆ!
  • ಕೇಂದ್ರ ಸರ್ಕಾರದಿಂದ ಉನ್ನತ ಶಿಕ್ಷಣ ತರಗತಿಗಳಿಗಾಗಿ ಭಾರತೀಯ ಭಾಷೆಗಳಲ್ಲಿ 22 ಸಾವಿರ ಪಠ್ಯಪುಸ್ತಕಗಳು ರಚನೆಯಾಗುತ್ತಿವೆ!
  • ವಿಶ್ವಬಂಧು ಭಾರತ (WHY BHARAT MATTERS): ಎಸ್ ಜೈಶಂಕರ್ ಪುಸ್ತಕದ ಕನ್ನಡ ಆವೃತ್ತಿ ಬರಲಿದೆ!
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್‌ ಯಡಿಯೂರಪ್ಪ ಇವರ ಇ – ಆಡಳಿತ ಸಲಹೆಗಾರನಾಗಿ ನಡೆಸಿದ ಒಟ್ಟು ಚಟುವಟಿಕೆಗಳ ಸಂಕ್ಷಿಪ್ತ ವರದಿ (೧ ನವೆಂಬರ್‌ ೨೦೧೯ – ೨೬ ಜುಲೈ ೨೦೨೧)
  • ಸ್ಥಳೀಯತೆಯ ಸೊಗಡು, ಡಿಜಿಟಲ್‌ ನೆರವಿನಲ್ಲಿ ಜನಪದ ಪರಂಪರೆಯ ಸಂರಕ್ಷಣೆ !
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನ ಮಾನದಂಡಗಳು , ಕಲಿಕಾ ಅಕಾಡೆಮಿ ಪೋರ್ಟಲ್, ಪದಕಣಜ – ದೇಸೀಕರಣ, ಇ – ಆಡಳಿತ ಪದಕೋಶ : ನಾಲ್ಕು ಪ್ರಮುಖ ಆದೇಶಗಳ ಪ್ರಕಟಣೆ
  • ರಾಮನಗರದ ಹೃದಯ
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಬದಲಾವಣೆ ಜಗದ ನಿಯಮ! ಉತ್ಕೃಷ್ಟತೆಯೇ ಬದುಕಿನ ಬಹುದೊಡ್ಡ ಸವಾಲು!!
  • ಯಕ್ಷ ಸಿಂಚನ ದಶಮಾನೋತ್ಸವ : ಒಂದು ಖುಷಿಯ ದಿನ
  • ಇ-ದಕ್ಷಿಣ್ ಡಾಟ್‌ಕಾಮ್‌ : ಮಿಸ್ ಕಾಲ್‌ಗೆ ಸಿಕ್ಕಿದ ಕೆಲಸ ಮೂರು ತಿಂಗಳೂ ಇರಲ್ಲ!
  • ನಿನ್ನೆ ನಾನು ಮುಟ್ಟಿದ್ದು ೧೮೭ ವರ್ಷಗಳ ಹಿಂದೆ ಪ್ರಕಟವಾದ ಪುಸ್ತಕ!
  • ಟೆಸೆರಾಕ್ಟ್‌ ಓಸಿಆರ್‌ಗೆ ಸುಲಭ ತಂತ್ರಾಂಶ ಬಂದಿದೆ… ಆರಾಮಾಗಿ ವಿಯೆಟ್‌ಓಸಿಆರ್‌ ಬಳಸಿ!
  • ಬ್ರೆಕಿಂಗ್ ನ್ಯೂಸ್‌: ಚುನಾವಣೆಗೆ ಮುನ್ನವೇ ಅವಿರೋಧವಾಗಿ ಸಂಸತ್ ಪ್ರವೇಶಿಸಿದ ಬೇಳೂರು ಸುದರ್ಶನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ಟೆಸೆರಾಕ್ಟ್‌ ಬಂತು ದಾರಿ ಬಿಡಿ; ಓಸಿಆರ್‌ ಮಾಡೋ ಚಿಂತೆ ಬಿಡಿ!
  • ಏಜೆಂಟನಾಗಿದ್ದ ನಾನು ಸಂಪಾದಕನಾಗಿಬಿಟ್ಟೆ!
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ಶಿರಸಿ-ಕುಮಟಾ ರಾಜ್ಯ ಹೆದ್ದಾರಿ ಅಗಲೀಕರಣ ಬೇಡ,ಪುನರ್‌ ನಿರ್ಮಾಣ ಸಾಕು: ಸರ್ಕಾರಕ್ಕೆ ಆಗ್ರಹ
  • ಕೊಡಗು ಮತ್ತು ಮಲೆನಾಡಿನ ಪ್ರದೇಶಗಳಲ್ಲಿ ಎರಗಿದ ನೆರೆ ಮತ್ತು ಭೂಕುಸಿತ: ಪಶ್ಚಿಮ ಘಟ್ಟಗಳ ನಿಸರ್ಗದತ್ತ ಸಂಪತ್ತನ್ನು ರಕ್ಷಿಸುವ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿಯವರಿಗೆ ಬಹಿರಂಗ ಪತ್ರಮನವಿ.
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • Pacific Marine Climate Change Report Card 2018
  • READ: THE PERSONAL DATA PROTECTION BILL, 2018
  • New study from CSE exposes massive environmental dumping of old and used vehicles in Africa and South Asia
  • ಆರ್‌ ಜಿ ಹಳ್ಳಿ ನಾಗರಾಜ್‌ ಎಂಬ ನಿತ್ಯನೂತನ, ಚಿರ ಪುರಾತನ, ಜನರ ನೋವಿಗೆ ಮಿಡಿವ ನೈಜ ಸಮಾಜವಾದಿ ಮಿತ್ರ!
  • ಭಾರತದಲ್ಲಿ ನಡೆಯೋ ವಿದೇಶೀ ದೇಣಿಗೆ ಜಾತ್ರೆಯ ಲೆಕ್ಕದ ಒಂದಂಶ ಇಲ್ಲಿದೆ!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ದಾವಣಗೆರೆಯ ಸೋದರಿ  ಸುಮನಾ: ೪೦ ವರ್ಷಗಳ ಈ ಬಂಧ!!  
  • “ವಿಜ್ಞಾನಕ್ಕೆ ಧರ್ಮ ಬೆರೆಸಲಿರುವ ಆರೆಸೆಸ್‌ “: ವರದಿಗಾರಿಕೆಯಲ್ಲೇ ಕಲಬೆರಕೆ!!
  • ಮುಕ್ತ ಮತ್ತು ಕೇವಲ ಯುನಿಕೋಡ್‌ಯುಕ್ತ ತಂತ್ರಾಂಶವಾಗಿ ನುಡಿ ೬.೦: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕಗಪ ವಾಗ್ದಾನ | `ಡಿಜಿಟಲ್‌ ಜಗಲಿ’ಸ್ಥಾಪನೆಗೆ ಎಸ್‌ ಜಿ ಸಿದ್ಧರಾಮಯ್ಯ ಒಲವು
  • ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಎಸ್‌ ಜಿ ಸಿದ್ದರಾಮಯ್ಯನವರಿಗೆ ಮಿತ್ರಮಾಧ್ಯಮವು ದಿನಾಂಕ ೬ ಜೂನ್‌ ೨೦೧೭ರಂದು ಸಲ್ಲಿಸಿದ ಬೇಡಿಕೆಗಳ ಪಟ್ಟಿ
  • ECODRIVEATHON-2017 : PARTICIPATE ! WIN CASH PRIZES! SUPPORT BIOFUEL CAMPAIGN!
  • ದೇಶದ ಮೊಟ್ಟಮೊದಲ ಎಕೋ ಡ್ರೈವಥಾನ್‌ನಲ್ಲಿ ಭಾಗವಹಿಸಿ! ಅಬ್ದುಲ್‌ ಕಲಾಂ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ, ನಗದು ಬಹುಮಾನ ಗೆಲ್ಲಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಐಟಿ ಸಾಧನಗಳಲ್ಲಿ, ಸಿದ್ಧ ಪೊಟ್ಟಣಗಳಲ್ಲಿ ಭಾರತೀಯ ಭಾಷಾ ಅಳವಳಡಿಕೆ ಕುರಿತ ಆನ್‌ಲೈನ್‌ ಅರ್ಜಿ : ಹಲವು ಕೇಂದ್ರ ಸಚಿವರಿಗೆ ಸಲ್ಲಿಕೆ
  • ಶಂಕರ ಶರ್ಮರು ನ್ಯೂಝಿಲೆಂಡ್‌ಗೆ – ಉನ್ನತ ಅಧ್ಯಯನಕ್ಕೆ – ಹೊರಟಿದ್ದಾರೆ, ಶುಭಾಶಯ ಹೇಳೋಣ!
  • Prashant Kishor : Disruptive, Harmful
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • ಕಂಪ್ಯೂಟರ್‌ ಮತ್ತು ಕನ್ನಡ: ಉಚಿತ ಪುಸ್ತಕ ಇಲ್ಲಿದೆ, ಓದಿ ಅಥವಾ ಡೌನ್‌ಲೋಡ್‌ ಮಾಡಿಕೊಳ್ಳಿ!
  • ಸೆ.೨೬ರ ಶುಕ್ರವಾರ : ಕಂಪ್ಯೂಟರ್‌ ಮತ್ತು ಕನ್ನಡ – ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ [ ಮಿತ್ರಮಾಧ್ಯಮದ ‘ಉಚಿತ ಪುಸ್ತಕ ಸಂಸ್ಕೃತಿ ಅಭಿಯಾನ’ದ ಮೊದಲ ಪುಸ್ತಕ]
  • ಮಾಹಿತಿ ಪಡೆಯುವ ಹಕ್ಕು ಕಾಯ್ದೆ ಮೂಲಕ ಮತದಾರ ಗುರುತಿನ ಚೀಟಿ ಪಡೆಯುವ ಸರಳ ವಿಧಾನ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಪರಿಹಾರ ಪಡೆಯುವುದು ಎಂಡೋಸಲ್ಫಾನ್‌ ಸಂತ್ರಸ್ತರ ಹಕ್ಕು, ಭಿಕ್ಷೆಯಲ್ಲ
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ಆರೋಗ್ಯ ಇಲಾಖೆಗೆ ಮಾನವಹಕ್ಕು ಆಯೋಗದ ಆದೇಶ : ಕೊನೆಗೂ ನ್ಯಾಯ ಪಡೆದ ಉಡುಪಿಯ ದಾದಿಯರು
  • ಉಡುಪಿಯ ಅಕ್ಕು -ಲೀಲಾ ಪ್ರಕರಣ: ಕೊನೆಗೂ ಸುಪ್ರೀಂಕೋರ್ಟಿಗೆ ಮಣಿದ ಕರ್ನಾಟಕ ಸರಕಾರ : ೪೨ ವರ್ಷಗಳ ನಂತರ ಸೇವೆ ಸಕ್ರಮಗೊಳಿಸಿ ಹೊರಟ ಸರಕಾರಿ ಆದೇಶ
  • SHANKAR SHARMA: CREATION OF A SUSTAINABLE URBAN ENERGY SYSTEM
  • National Green Tribunal Suspends Environmental Clearance for NTPC Thermal Power Plant in Karnataka (Kudigi UMPP Project, Bijapur District)
  • ಮಾರುತಿ ತಂತ್ರಾಂಶ ಅಭಿವೃದ್ಧಿ, ತೃತೀಯ ತಂಡದ ಪರಾಮರ್ಶೆ ಕುರಿತ ಪತ್ರವ್ಯವಹಾರಗಳು ಇಲ್ಲಿವೆ!
  • `ಬ್ಯಾಂಡ್‌ವಿಡ್ತ್‌ ಚಾಲೆಂಜಡ್‌’ ಡಾ|| ಪವನಜರಿಗೆ `ವಿಜುಯಲಿ ಚಾಲೆಂಜಡ್‌’ ಶ್ರೀನಿವಾಸಮೂರ್‍ತಿ ಪತ್ರ: ನಮ್ಮ ಬಗ್ಗೆ ತಿಳಿದಿದ್ದರೂ ನೀವು ಹೀಗೆ ಮಾಡಿದ್ದು ಸರಿಯೆ?
  • ಕರ್ನಾಟಕ ಸರ್ಕಾರದ ತಂತ್ರಾಂಶ ಅವಾಂತರ : ತಿಳಿವಳಿಕೆಗೆ ಕುರುಡು – ಪ್ರಜಾವಾಣಿಯಲ್ಲಿ ನನ್ನ ಲೇಖನ ಮತ್ತು ಇತರ ಬಳಕೆದಾರರ ಅತಿಮುಖ್ಯ ಅಭಿಪ್ರಾಯಗಳು
  • ಟಿ ಎಸ್‌ ಶ್ರೀಧರ ಅಭಿಪ್ರಾಯ: ಕರ್ನಾಟಕ ಸರ್ಕಾರದ ಕನ್ನಡ ಬ್ರೈಲ್‌ ತಂತ್ರಾಂಶ – ಸಂಪೂರ್ಣ ಕಾಲಬಾಹಿರ, ಅಂಧವಿರೋಧಿ ಮತ್ತು ಅಪ್ರಯೋಜಕ
  • Prayer for consideration in front of the Hon’ble High Court for the purpose of granting relief to the Endosulfan Victims
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Dattaji writes about his mother Meenakshi Amma
  • ಉಡುಪಿಯ ಅಕ್ಕು -ಲೀಲಾ ಪ್ರಕರಣ ನ್ಯಾಯಾಂಗ ನಿಂದನೆಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕರ್ನಾಟಕ ಸರಕಾರದ ಪರದಾಟ 42 ವರ್ಷಗಳ ಬದಲಿಗೆ ಕೇವಲ 5 ವರ್ಷಗಳ ವೇತನ ನೀಡುವ ಹುನ್ನಾರ
  • AKKU LEELA IMAGES FOR DOWNLOAD
  • ಕೊಡಗು-ಕಾಸರಗೋಡು ಮಡಗಾಸ್ಕರ್‌ಗೆ ಸೇರಿದ್ದು!
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • Future of solar energy seems bleak if sector reforms do not pull through
  • Climate Change Report Warns of Dramatically Warmer World This Century
  • ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ: ಪುಸ್ತಕ ಬಿಡುಗಡೆ ಛಾಯಾಚಿತ್ರಗಳು
  • ಅಕ್ಕು ಮತ್ತು ಲೀಲಾ : ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮನ್ನಣೆ ನೀಡಲು ಸಚಿವ ಕಾಗೇರಿಯವರಿಗೆ ಮಿತ್ರಮಾಧ್ಯಮ ಮನವಿ
  • 'ಇಂಟೆಗ್ರೇಟೆಡ್‌ ಪವರ್‌ ಪಾಲಿಸಿ' ಶಂಕರಶರ್ಮ ಪುಸ್ತಕ ಬಿಡುಗಡೆಗೆ ಬನ್ನಿ! (ಅಕ್ಟೋಬರ್‌ ೧೦)
  • Law abiding citizens and law disobeying Government
  • Bhoomi College offers One year Programme on Science and Management for Sustainable Living
  • ಹತ್ತನೆಯ ವರ್ಷಕ್ಕೆ ಕಾಲಿಟ್ಟ ಕನ್ನಡ ವಿಕಿಪೀಡಿಯಾ: ಶುಭಾಶಯ ಹೇಳಿ!
  • ಶುಕ್ರ ಸಂಕ್ರಮ: ಪುಸ್ತಕ ಓದಿ
  • THE COPYRIGHT (AMENDMENT) BILL, 2012
  • ಪ್ರಸರಣ ಸ್ಪರ್ಧೆಯ ತಿರುವಿನಲ್ಲಿ ಕನ್ನಡ ಪತ್ರಿಕೋದ್ಯಮ
  • SC upholds constitutional validity of Right to Education Act : Judgement FULL TEXT
  • ನನ್ನ ಹಿಡನ್‌ ಅಜೆಂಡಾ ಮತ್ತು ಇತರ ಕಥೆಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ಬಯೋಟೆಕ್ನಾಲಜಿ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ ವಿರೋಧಿಸಿ: ಮುಖ್ಯಮಂತ್ರಿಯವರಿಗೆ ಮಿತ್ರಮಾಧ್ಯಮ ಸಹಿತ ಹಲವು ಸಂಘಟನೆಗಳ ಮನವಿ
  • ಮಿತ್ರಮಾಧ್ಯಮ ಮ್ಯಾಗಜಿನ್‌ ಸಂಚಿಕೆ ೧ ಓದಿ
  • ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ
  • ‘ಇಜ್ಞಾನ’ ಸಂಚಿಕೆ ಓದಿ
  • ಸ್ಟೀವ್‌ ಜಾಬ್ಸ್‌ : ಪ್ರೊಪ್ರೈಟರಿ ತಂತ್ರಾಂಶ ಕ್ರಾಂತಿಕಾರನ ಅತ್ಯುತ್ತಮ ಭಾಷಣ ಕೇಳಿ!
  • ನಿಮ್ಮ ದೂರವಾಣಿಗೆ ವಾಣಿಜ್ಯ ಕರೆಗಳ ಕರಕರೆಯನ್ನು ತಪ್ಪಿಸಬೇಕೆ? ಹೀಗೆ ಮಾಡಿ!
  • SUPREME COURT BANS MINING IN BELLARY DISTRICT
  • ಹೊಂಗೆಯ ಬೆಳಸೋಣ: ಹಾಡನು ಹಾಡೋಣ!
  • BAN ENDOSULFAN PERMANENTLY, CONDUCT CENSUS OF VICTIMS, PROVIDE PERMANENT REHABILITATION
  • ಬನ್ನಿ, ಸಾಲುಮರದ ತಿಮ್ಮಕ್ಕಂಗೆ ನೆರವಾಗೋಣ
  • Feb 5,6: Millet Mela in Bangalore – Meet the Millet! Say hello to HEALTH
  • Scandalous Decision of Jairam Ramesh to OK POSCO project
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • Publish All the Radia Tapes
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಬೋರ್ಲಾಗ್‌ನ ಹಸಿರು ಕ್ರಾಂತಿಗೆ ಬೋರಲಾದ ಪಂಜಾಬ್: ೬೭ ಸಾವಿರ ಕೋಟಿ ರೂ. ಋಣ ಬಾಕಿ; ಕರ್ನಾಟಕವು ಪಾಠ ಕಲಿತೀತೆ?
  • “BT BRINJAL RECOMMENDATION BY TOP SCIENCE ACADEMIES BASED ON GM CROP DEVELOPER’S PLAGIARISED MATERIAL”
  • ಇಂಧನ ಬಡತನ: ಜಾಗತಿಕ ವರದಿ ಹೇಳಿದ್ದೇನು?
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ಜೀತವಿಮುಕ್ತಿ: ಬೆಂಗಳೂರಿನ ‘ಜೀವಿಕ’ ಸಂಸ್ಥೆಗೆ ಹ್ಯಾರಿಯೆಟ್ ಟಬ್‌ಮನ್ ಫ್ರೀಡಂ ಪ್ರಶಸ್ತಿ
  • ಭಾರತೀಯರಿಗೆ ಅಲಾಸ್ಕಾದ ನೀರು ಕುಡಿಸುವ ಯೋಜನೆ : ಎಸ್೨ಸಿ ಸಂಸ್ಥೆಯ ಈ ಕನಸಿಗೆ ತಳಬುಡವೇ ಇಲ್ಲ!
  • ವೇದಾಂತ : ಅಗೆದಷ್ಟೂ ಅವಾಂತರ
  • ಮುಗಿದಿಲ್ಲ ಬಿಟಿ ಬದನೆ ಚರ್ಚೆ: ಇಲ್ಲಿವೆ ಕೆಲವು ‘ಕೇಳೋ’ ಮಾತುಗಳು
  • Future Electricity Supply Options for India
  • How essential is the nuclear power option for India?
  • `ದೇಶಕಾಲ’ ವಿಶೇಷ ಸಂಚಿಕೆ ಬಿಡುಗಡೆ ಮಾಡಿದ ಜಾವೇದ್ ಆಖ್ತರ್ ಭಾಷಣ
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಬ್ಬೀಫಿಲ್: ‘ವಾಚೌಟ್ ಇನ್ವೆಸ್ಟರ್ಸ್‌’ ಪಟ್ಟಿಯಲ್ಲಿರುವ ಕಳಂಕಿತರ ಜೊತೆಗೇ ಮನೋಹರ ಮಸ್ಕಿ ಸಹವಾಸ !
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • ವಿದ್ಯುತ್ ಸಮಸ್ಯೆ: ಮುಖ್ಯಮಂತ್ರಿಯವರಿಗೆ ನಾಡಿನ ಗಣ್ಯರ ಬಹಿರಂಗ ಪತ್ರ
  • ಮಸ್ಕಿ ಹೇಳೋದೇನು, ವಾಸ್ತವವೇನು? ನೀವೇ ನಿರ್ಧರಿಸಿ!
  • ಕತ್ತಲೆ – ದಾರಿ ಹತ್ತಿರ: ವಿದ್ಯುತ್ ಸಮಸ್ಯೆ ನೀಗಿಸಲು ಮಿತ್ರಮಾಧ್ಯಮದಿಂದ ಮಾಹಿತಿಪೂರ್ಣ ಪುಸ್ತಕ
  • ಹೀಗಿದ್ದರು ನಾನಾಜಿ ದೇಶಮುಖ್
  • Media Fest Presentation by Beluru Sudarshana
  • January 23: Participate in the Public Consultation (Bangalore) on Bt Brinjal
  • ಡಿಸೆಂಬರ್ ೧೩ರಂದು ಮೈಸೂರಿನಲ್ಲಿ ಬದನೆ ಮೇಳ
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • Please visit www.mitramaadhyama.co.in
  • Shilpashree Investigative Report Award 2010
  • ಗತಕಾಲದ ಸ್ಮರಣೆ, ವಿಸ್ಮರಣೆ : ಆಡ್ವಾನಿಜಿಗೊಂದು ಪತ್ರ
  • ಕ್ಷುದ್ರ ಮನಸ್ಸಿನ ರಕ್ಕಸ ಬೆಂಗಳೂರಿನ ಬಗ್ಗೆ ಮೊದಲ ಮತ್ತು ಕೊನೇ ಬ್ಲಾಗ್
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಲಕ್ಷ್ಮಿ ಮೇಡಂ ಜೊತೆ ಒಂದು ಗಂಟೆ
  • Still nostalgic about Bharatiya Janasangh and old BJP? Read this !
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ನನ್ನ ಪ್ರೀತಿಯ ದತ್ತಾಜಿ
  • ಡಿಸೆಂಬರ್ ೩೧: ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಅದಮ್ಯ ಚೇತನದ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ
  • DNA: Delayed , No Analysis?
  • ಅಬ್ಬ, ಇಲ್ವಲ್ಲಪ್ಪ ಈ ಸಲ ಬೆಂಗಳೂರು ಹಬ್ಬ !
  • Bhairappa’s interview 2002
ಹುಡುಕಿ!
ವಿಭಾಗಗಳು
  • ಉಚಿತ ಪುಸ್ತಕ ಸಂಸ್ಕೃತಿ (7)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (2)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (264)
  • ವಿಮರ್ಶೆ (48)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.