ಕಳೆದ ೧೦ ವರ್ಷಗಳಿಂದ ಗಡದ್ದಾಗಿ, ಜಾಣ ಮೂರ್ಛೆ ತಪ್ಪಿದ್ದ ಎಫ್‌ಸಿಆರ್‌ಎ (ಫಾರಿನ್ ಕಾಂಟ್ರಿಬ್ಯೂಶನ್ ರೆಗ್ಯುಲೇಶನ್ ಆಕ್ಟ್ FCRA) ವೆಬ್‌ಸೈಟ್‌ಗೆ ಈಗ ಜೀವ ಬಂದಿದೆ. ವಿದೇಶಿ ದೇಣಿಗೆ ಪಡೆಯುತ್ತಿದ್ದ ಸಂಸ್ಥೆಗಳನ್ನು ಮೋದಿ ಸರ್ಕಾರ ಶೋಷಿಸುತ್ತಿದೆ ಎಂಬ ದೂರುಗಳನ್ನು ನೀವು ಓದಿರಬಹುದು. ಈ ತಾಣಕ್ಕೆ ಈಗ ನೀವು ಭೇಟಿ ಕೊಟ್ಟರೆ, ದೇಶದೊಳಕ್ಕೆ ಹರಿದು ಬರುತ್ತಿರುವ ವಿದೇಶಿ ದೇಣಿಗೆಯ ಲೆಕ್ಕ ಸಂಪೂರ್ಣವಾಗಿ ಸಿಗುತ್ತದೆ. ೭೦೭ ಜಿಲ್ಲೆಗಳಿಗೆ ಹರಿದು ಬರುತ್ತಿರುವ ಸಾವಿರಾರು ಕೋಟಿ ರೂ.ಗಳ ಲೆಕ್ಕ ಮೊದಲ ಸಲ ಸಾರ್ವಜನಿಕರಿಗೆ ಖಚಿತವಾಗಿ ಸಿಗುತ್ತಿದೆ.
ನಾನು ಈ ತಾಣದಿಂದ ಕೇವಲ ಬೆಂಗಳೂರು ನಗರ ಜಿಲ್ಲೆಯ ಲೆಕ್ಕವನ್ನು ಪಡೆದು ಒಂದಷ್ಟು ಮಾಹಿತಿ ಕಲೆ ಹಾಕಿದೆ. ಈ ಪ್ರಕಾರ, ೨೦೦೬-೨೦೧೭ರ ಅವಧಿಯಲ್ಲಿ. ಸರ್ಕಾರಕ್ಕೆ ಸಲ್ಲಿಸಲಾದ ಲೆಕ್ಕದ ಪ್ರಕಾರ (ಲೆಕ್ಕ ಸಲ್ಲಿಸದ ಸಂಸ್ಥೆಗಳು ನೂರಾರಿವೆ) ೯೧೬೫.೦೪ ಕೋಟಿ ರೂ. ಬೆಂಗಳೂರು ನಗರ ಜಿಲ್ಲೆಯಲ್ಲಿರುವ ಸಂಸ್ಥೆಗಳಿಗೆ ಬಂದಿದೆ. ಇವುಗಳಲ್ಲಿ ೯೦೪೩.೩೪ ಕೋಟಿ ರೂ.ಗಳು ಒಟ್ಟಾರೆಯಾಗಿ ಈ ಅವಧಿಯಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಕೋಟಿ ರೂ.ಗಳ ದೇಣಿಗೆ ಪಡೆದ ಸಂಸ್ಥೆಗಳಿಗೆ ಬಂದಿವೆ. ಒಟ್ಟು ೨೭ ಸಂಸ್ಥೆಗಳು ಈ ಕಾಲಾವಧಿಯಲ್ಲಿ ೫೦ ಕೋಟಿ ರೂ.ಗಳಿಗೂ ಹೆಚ್ಚಿನ ದೇಣಿಗೆ ಪಡೆದಿವೆ. ನಾನು ಈ ಎಲ್ಲ ಸಂಸ್ಥೆಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿಲ್ಲ; ಅದರ ತನಿಖೆ ಮಾಡುವಷ್ಟು ಸಮಯ ನನ್ನಲ್ಲಿಲ್ಲ. ಆದರೆ ಪಾರದರ್ಶಕತೆಯನ್ನು ಖಂಡಿತ ಪ್ರಶ್ನಿಸುತ್ತಿದ್ದೇನೆ.
ಇಷ್ಟು ಭಾರೀ ಪ್ರಮಾಣದ ಹಣವು ಮಾಹಿತಿ ಹಕ್ಕಿನ ಅಡಿಯಲ್ಲಿ ಬರುವುದಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಈ ಸಂಸ್ಥೆಗಳು ಇಷ್ಟು ದಿನ ಲೆಕ್ಕವನ್ನೆಲ್ಲ ಅಡಗಿಸಿಟ್ಟಿದ್ದವು. ಕೇವಲ ಬೆರಳೆಣಿಕೆಯ ಸಂಸ್ಥೆಗಳು ಮಾತ್ರ ವಾರ್ಷಿಕ ವರದಿ ಕೊಟ್ಟಿವೆ. ಕೆಲವೇ ಸಂಸ್ಥೆಗಳು ಲೆಕ್ಕಪರಿಶೋಧಕರ ವರದಿಗಳನ್ನು ಕೊಟ್ಟಿವೆ. ಕೆಲವೇ ಸಂಸ್ಥೆಗಳು ಮಾತ್ರ ಎಫ್‌ಸಿಆರ್‌ಎ ನಿಯಮದ ಪ್ರಕಾರ ತ್ರೈಮಾಸಿಕ ದೇಣಿಗೆ ಮಾಹಿತಿಗಳನ್ನು ಪ್ರಕಟಿಸಿವೆ.
ಎಫ್‌ಸಿಆರ್‌ಎ ಕಾನೂನು ಹೀಗೆ ನಿಯಮ ವಿಧಿಸಿದೆ:
Rule 13 (a): Earlier NGOs receiving more than Rs 1 crore were required to put up a summary of receipts & payments on their website, however the amended rule requires that all NGOs to display audited FCRA accounts including Balance Sheet, Income & Expenditure & Receipts & Payments account for a financial year within 9 months of the year-end. Considering 9 month period ended on 31st December and the rules have been amended effective 14th Dec 2015, there is a school of thought which states that NGOs should display their FCRA accounts on their website by 31st December 2015.
Quarterly donor receipts
Rule 13 (b): All NGOs receiving Foreign Contribution are required to disclose on quarterly basis following information:
Donor-wise details of FC amounts received in its Designated account as well as the date of receipt.
The above information is to be disclosed within 15 days of the quarter-end. Considering these rules were notified on 14th Dec 2015, this information is will become due for 31stDecember quarter and should be on the website by 15th January 2016.
ಈ ಸಂಸ್ಥೆಗಳೆಲ್ಲವೂ ಹೇಳಿ ಕೇಳಿ ಸಾಮಾಜಿಕ ಮತ್ತು ಶೈಕ್ಷಣಿಕ ಉದ್ದೇಶವನ್ನೇ ಹೊತ್ತಿವೆ!! ಹಲವು ಸಂಸ್ಥೆಗಳ ಕೆಲಸವೇ ಪಾರದರ್ಶಕತೆ, ಸಮಾನತೆ, ಶೋಷಣೆ ನಿವಾರಣೆ, ಕಾನೂನು ಹೋರಾಟ, ಸರ್ಕಾರದ ನೀತಿ ನಿಯಮಗಳ ಮೇಲೆ ವ್ಯಾಖ್ಯಾನ, ಅಧ್ಯಯನ, ಶಿಕ್ಷಣ ಇತ್ಯಾದಿ. ಹೀಗೆ ದೇಶಕ್ಕೆ, ಸರಕಾರಕ್ಕೆ ಉಪದೇಶ ಹೇಳುವ ಸಂಸ್ಥೆಗಳು, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕಾದ ಸಂಸ್ಥೆಗಳು ತಮ್ಮ ದೇಣಿಗೆಯ ವಿವರಗಳನ್ನು ಕೊಡಿ ಎಂದು ಕೇಳುವುದರಲ್ಲಿ ತಪ್ಪೇನೂ ಇಲ್ಲ. ಬದಲಿಗೆ ಈ ಸಂಸ್ಥೆಗಳು ಸರ್ಕಾರಕ್ಕಿಂತ ಹೆಚ್ಚು ಪಾರದರ್ಶಕವಾಗಿರಬೇಕು.
DETAILED SPREADSHEET: https://goo.gl/ZsDTTx
ಖಂಡಿತ ಈ ದೇಣಿಗೆಗಳು ಎಲ್ಲೆಲ್ಲಿಂದ ಬಂದವು, ಎಲ್ಲೆಲ್ಲಿಗೆ ಹೋಗುತ್ತಿವೆ ಎಂದೆಲ್ಲ ಅಧ್ಯಯನ ಮಾಡುವುದು ನನ್ನ ಮಿತಿಯಲ್ಲಿಲ್ಲ. ಮಂಜಿನ ಗುಡ್ಡದ ತುದಿಯನ್ನು ತೋರಿಸಲು ಯತ್ನಿಸಿದ್ದೇನೆ. ಗುಡ್ಡವನ್ನು ಅಗೆಯುವುದು ನಿಮಗೆ ಬಿಟ್ಟಿದ್ದು!!