ಕನ್ನಡ ವಿಕಿಪೀಡಿಯಾವು ಒಂದು ಶ್ಲಾಘನೀಯ ಯತ್ನ. ವಿಶ್ವದ ಎಲ್ಲ ಜ್ಞಾನವನ್ನೂ ಕನ್ನಡದಲ್ಲಿ ನೀಡುವ ಈ ಯತ್ನಕ್ಕೀಗ ಒಂಬತ್ತು ದಾಟಿದೆ. ಈಗಲೂ ಹಲವು ಸ್ವಯಂಸೇವಕರು ಈ ಯೋಜನೆಯಲ್ಲಿ ಸಕ್ರಿಯರಾಗಿದ್ದಾರೆ. ಮೊದಲು ಮಾಹಿತಿ ತುಂಬಿದವರಿಗೆ, ಈಗ ಶ್ರಮ ಹಾಕುತ್ತಿರುವವರಿಗೆ, ಎಲ್ಲರಿಗೂ ಮಿತ್ರಮಾಧ್ಯಮದಿಂದ ಶುಭಾಶಯಗಳು.
ಹಾಗಂತ ಕನ್ನಡ ವಿಕಿಪೀಡಿಯಾವು ತುಂಬಾ ಕರಾರುವಾಕ್ಕಾಗಿದೆ ಎನ್ನಲಾಗದು. ಗೂಗಲ್ ಸಂಸ್ಥೆಯ ಒಂದು ತಪ್ಪು ಕಾರ್ಯತಂತ್ರದಿಂದಾಗಿ ಕನ್ನಡ ವಿಕಿಪೀಡಿಯಾದಲ್ಲಿ ಹಲವು ಕಳಪೆ ಗುಣಮಟ್ಟದ ಲೇಖನಗಳು ಸೇರಿಕೊಂಡಿವೆ. ಅವುಗಳನ್ನು ಪರಿಷ್ಕರಿಸುವ ಕೆಲಸವನ್ನೂ ಈಗಿನ ಸ್ವಯಂಸೇವಕರು ಮಾಡುತ್ತಿದ್ದಾರೆ ಎಂದು ಕೇಳಿದ್ದೇನೆ.
ಏನೇ ಹೇಳಲಿ, ಒಂದು ಸಾರ್ವಜನಿಕ, ಮುಕ್ತ ಮಾಹಿತಿಯ ಯತ್ನವಾದ ಕನ್ನಡ ವಿಕಿಪೀಡಿಯಾವನ್ನು ಅಭಿನಂದಿಸಲೇಬೇಕು. ಅದು ಮುಂದಿನ ದಿನಗಳಲ್ಲಿ ಇನ್ನೂ ಬೆಳೆಯಲಿ.