ಕುರಿ ತಲೆ

ಟುಡೇ ಐ ವಿಲ್ ಪ್ರಿಪೇರ್ ಟೀ ಎಂದು ವಾಸುದೇವನ್ ಅಲ್ಯುಮಿನಿಯಂ ಟೀಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ನೀರು ಹಾಕಿದಾಗಲೇ ಸುಧಾಕರ ನಿಧಾನವಾಗಿ ರೂಮಿನ ಚಹರೆ ಹೀರತೊಡಗಿದ.

"ಕುರಿ ತಲೆ"

ರಾಮಣ್ಣ

ನನ್ನಂಥ ಕ್ರಿಯಾಶೀಲ ವ್ಯಕ್ತಿಗಳ ದಿನಚರಿ ಯಾಕೆ ಯಾವಾಗಲೂ ಬೆಳಗಿನಿಂದಲೇ ಆರಂಭವಾಗಬೇಕು ಎಂಬ ಹುಚ್ಚು ಆಲೋಚನೆ  ಬಂದಕೂಡಲೇ ನಮ್ಮ ರಾಮಣ್ಣ ಅವತ್ತು ಹಗಲಿಡೀ ಮಲಗೇ ಇದ್ದ. ಎಷ್ಟು  ಹೊತ್ತು ಅಂತ ಮಲಗ್ತಾನೆ..! ಅವನೇನು ರಾತ್ರಿ ಮನೆ ಕಾಯೋ ನಾಯಿ ಅಲ್ವಲ್ಲ!! ರಾತ್ರಿ ಎಂಟು ಗಂಟೆ ಆದಕೂಡಲೇ ಎದ್ದ. ಇನ್ನೂ ತಡರಾತ್ರಿ ಆದರೆ ದರ್ಶಿನಿಗಳಲ್ಲಿ ಇಡ್ಲೀನೂ ಸಿಗಲ್ಲ ಅನ್ನೋದು ಅವನಿಗೆ  ಯಾವಾಗಲೇ ಖಾತ್ರಿ ಆಗಿದೆ. ಎದ್ದ ಕೂಡಲೇ ಹಲ್ಲುಜ್ಜಿದ. ಹೇಗೂ ಸೋಲಾರ್ ಹೀಟರ್ ಇದ್ದದ್ದರಿಂದ ನೀರು ಕಾಯಿಸಬೇಕಿರ್‍ಲಿಲ್ಲ. ಆರಾಮಾಗಿ ಶವರ್ ಬಾತ್ ಮಾಡಿದ. ಎಂಟೂ ಮುಕ್ಕಾಲಿಗೆ ಸರಿಯಾಗಿ ಕನ್ನಡಿ ಮುಂದೆ ನಿಂತ.

"ರಾಮಣ್ಣ"

ಒಂದು ಆರ್ಡಿನರಿ ಲವ್‌ಸ್ಟೋರಿ

ಸೀಟಿಲ್ವಾ ಎಂದು ಆವಳು ನನ್ನ ಕೇಳುವ ಹೊತ್ತಿಗಾಗಲೇ ನಾನು ಆ ಬಸ್ಸಿನ ಡ್ರೈವರ್ ಬಾಗಿಲಿನ ಮೂಲಕ ಒಳಗೆ ಬಂದು ಇಂಜಿನ್ ಬಳಿ ಇದ್ದ ಖಾಲಿ ಸೀಟಿನಲ್ಲಿ  ಬ್ಯಾಗು ಬಿಸಾಕಿದ್ದೆ. ಬಳ್ಳಾರಿಯ ಆ ತಣ್ಣನೆ ರಾತ್ರಿಯಲ್ಲಿ ಜನ ಪುತುಪುತು ಬಸ್ಸಿನೊಳಗೆ ಹೊರಗೆ ಅಡ್ಡಾಡುತ್ತ ಗಾಳಿಯನ್ನು ಬಿಸಿ ಮಾಡುತ್ತಿದ್ದರು. ಇಲ್ಲಿ ಅವಳು ತನ್ನೊಳಗೇ ಏನೋ ಯೋಚಿಸುತ್ತ ವಿಮನಸ್ಕಳಾಗಿ ನಿಂತಿದ್ದಳು. ನಾನು ಅವಳ ಕೈ ಹಿಡಿದು ಒಳಗೆ ಎಳೆದುಕೊಂಡೆ. ಇಡೀ ದಿನ ಅತ್ತು ಅತ್ತು ಅವಳ ಕಣ್ಣುಗಳು ಊದಿಕೊಂಡಿದ್ದರೂ ಎಷ್ಟೆಲ್ಲ ಛಂದ ಇದ್ದಾಳಲ್ಲ ಎಂದೆನ್ನಿಸಿ ನನಗೆ ಅವಳನ್ನು ಅಲ್ಲೇ ಭುಜಕ್ಕೆ ಒರಗಿಸಿಕೊಳ್ಳಬೇಕು ಎನಿಸಿತು. ಆದರೆ ಕೊಳಕು ಕಾಡ್ರಾ ಧರಿಸಿ ಅಂಡಲೆಯುವ ನಾನು ಯಾರು, ಡಿಗ್ರಿ ಮುಗಿಸಿ ಇಲ್ಲಿ ಅವನನ್ನು ಪ್ರೀತಿಸುತ್ತ…

"ಒಂದು ಆರ್ಡಿನರಿ ಲವ್‌ಸ್ಟೋರಿ"

ಕ್ಯಾಪ್ಸಿಕಂ ಮಸಾಲಾ

This short story won third prize (along with Shri Gopalakrishna Pai) in Vijaya Karnataka – Ankita Pustaka Yugadi Short story competition 2003. Shri Yashvanta Chittala gave away the prize. But unfortunately I am yet to get a copy of that picture, which I think is an important event in my life. This story revolves around the incidents which actually are part of my real life experience. You may say the fiction should be a creation,…

"ಕ್ಯಾಪ್ಸಿಕಂ ಮಸಾಲಾ"

ಕಿಟಕಿ

Short story published in Hosadigantha  Yugadi Special issue 2006 ನನಗೆ ಕಚೇರಿಯಲ್ಲಿ ಅಪರಾತ್ರಿಯಲ್ಲೂ ಇರುವ ಕೆಟ್ಟ ಚಟ. ಹಗಲು ಲೇಟು. ರಾತ್ರಿಯೂ ಲೇಟು. ಸುತ್ತೋಲೆ, ಪತ್ರ ವ್ಯವಹಾರ, ಆಡಳಿತ ಮಂಡಳಿ ಸಭೆಗೆ ತಯಾರಿ, ಯಾವುದೇ  ಇದ್ದರೂ ನಾನು ಕಚೇರಿಗೆ ಹೋಗುವುದು ಹನ್ನೆರಡರ ಮೇಲೆಯೇ. ಆಮೇಲೆ ಊಟದ ಹೊತ್ತಿಗೆ ಎಲ್ಲ ವ್ಯವಹಾರಗಳನ್ನೂ ಕಂಪ್ಯೂಟರಿನಲ್ಲಿ ಹಾಯಿಸಿ ರೆಡಿ ಮಾಡುತ್ತೇನೆ. ಇದ್ದಬದ್ದ ಇಂಟರ್‌ನೆಟ್ ಪಡಿತರವನ್ನೆಲ್ಲ ನಾನೇ ಖಾಲಿ ಮಾಡುತ್ತ ಕುಳಿತುಕೊಳ್ಳುತ್ತೇನೆ.  ತಿಂಗಳಿಗೆ ನಾಲ್ಕು ಗೈಗಾಬೈಟ್ ಎಂದರೆ ಸಾಮಾನ್ಯವಲ್ಲ. ಈಗ ನೋಡಿ, ಆಸ್ಕರ್ ಪಡೆದ ದಿ ಕಾನ್‌ಸ್ಟಂಟ್  ಗಾರ್ಡನರ್ ಸಿನೆಮಾವನ್ನೇ ಡೌನ್‌ಲೋಡ್ ಮಾಡಲು ಹೆಣಗುತ್ತಿದ್ದೇನೆ.

"ಕಿಟಕಿ"

ನಾಗವೇಣಿ

ನಾಗವೇಣಿ Short story   published in Karmaveera Deepavali Special issue 2006 ಅರೆ, ಎಂಟೂವರೆ ಆಗೋಯ್ತಲ್ಲ ಎಂದು ನಾಗವೇಣಿ ದಢಕ್ಕನೆ ಎದ್ದಳು. ಹೊರಗೆ ಮಳೆ ಜಿನುಗುತ್ತಿದೆ.. ಎಲ್ಲೆಲ್ಲೂ ಮಬ್ಬು ಆವರಿಸಿದೆ. ಕಂಪ್ಯೂಟರ್ ಟೇಬಲ್ ಈಗ ಕೊಂಚ ಬಿಳುಪಾಗಿ ಕಾಣಿಸುತ್ತಿದೆ. ನಿನ್ನೆಯಿಂದ ಯಾವುದೋ ಪುಸ್ತಕವನ್ನು ಕಳ್ಳರ ಥರ ಇನ್ನೊಂದು ಕಂಪ್ಯೂಟರಿನಿಂದ ಶೇರ್ ಆಝಾ ಸಾಫ್ಟ್‌ವೇರ್ ಮೂಲಕ ಡೌನ್‌ಲೋಡ್ ಮಾಡಲು ಇಟ್ಟಿದ್ದು ನೆನಪಾಗಿ  ಮಾನಿಟರ್ ಆನ್ ಮಾಡಿದರೆ….. ಅರೆ… ಬರೀ ಎಂಟು ಮೆಗಾಬೈಟ್‌ಗಳ ಪುಸ್ತಕ ಅಂತೂ ಇವತ್ತು ಪೂರ್ಣವಾಗಿದೆ. ಮೂರು ದಿನಗಳಿಂದ ಹಾಕಿದ ಶ್ರಮ ಸಾರ್ಥಕವಾಯ್ತು. ಈ ಪುಸ್ತಕಾನ ಆ ರಾಂಗ್‌ನಾಥ್‌ಗೆ ಒಪ್ಪಿಸಿದರೆ ಸೈ. ಇವತ್ತೇನೋ ಪಾರ್ಟಿಗೆ ಕರೆದಿದಾರೆ. ಯಾಕೆ?

"ನಾಗವೇಣಿ"

ಬಸಿಲ್ ಒಪ್ಪಂದ

This short story was published in Udayavani. There was mixed reaction to this story. I request you to read it and get me a critical feedback. ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು,  ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ ನಮ್ಮಿಬ್ಬರನ್ನೂ ಹೊತ್ತುಕೊಂಡ ಮಂಚ ಮಾತ್ರ ಸುಮ್ಮನೆ ಅಂಗಾತ ಮಲಗಿತ್ತು.

"ಬಸಿಲ್ ಒಪ್ಪಂದ"