Browsing: ಲೇಖನಗಳು

ನೀವು `ತಂಬಾಕು ವಿರೋಧಿ ದಿನ’ ಎಂದು ಆರೂವರೆ ಸೆಕೆಂಡುಗಳಲ್ಲಿ ಓದುತ್ತೀರಿ ಎಂದುಕೊಳ್ಳೋಣ. ಅಷ್ಟುಹೊತ್ತಿಗೆ ಅದೇ ತಂಬಾಕಿನಿಂದ ವಿಶ್ವದ ಯಾವುದೋ ಮೂಲೆಯಲ್ಲಿ ಒಬ್ಬರು ತಂಬಾಕಿನ ಸೇವನೆಯಿಂದಲೇ ಸತ್ತಿರುತ್ತಾರೆ. ಈ ಮಾಹಿತಿಪತ್ರವನ್ನು ಕೈಯಲ್ಲಿ ಹಿಡಿದು ಓದುತ್ತಿರುವ ನಿಮಗೆ ಅಭಿನಂದನೆಗಳು. 

ಮಲೆನಾಡಿನ ಜಡಿಮಳೆಯ ಮುಂಜಾನೆ. ಮುಂಜಾನೆಯ ಒಂದೇ ಗಂಟೆಯಲ್ಲಿ ೨೬ ಸಾವಿರ ಜೈವಿಕ ಇಂಧನ ಸಸಿಗಳ ನಾಟಿ. ಇಂಥದ್ದೊಂದು ದಾಖಲೆ ಸಾಧಿಸಿದ ಕೀರ್ತಿ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ತಟ್ಟಿಹಳ್ಳ ಟಿಬೆಟನ್ ಸೆಟಲ್‌ಮೆಂಟ್‌ನ ಲಾಮಾಗಳದ್ದು.

‘ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಸಂಕುಚಿತಗೊಂಡ ಇಡೀ ಜಗತ್ತು ಈಗ ಒಂದು ಹಳ್ಳಿಯಂತಾಗುತ್ತಿದೆ. ಹಠಾತ್ ಒಳಸ್ಫೋಟದ ಮೂಲಕ ನಮ್ಮೆಲ್ಲ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ಒಂದೆಡೆಗೆ ತರುತ್ತಿರುವ ಈ ವಿದ್ಯುತ್‌ವೇಗವು ಮನುಷ್ಯನ ಹೊಣೆಗಾರಿಕೆಯ ಅರಿವನ್ನು ತೀವ್ರ ಪ್ರಮಾಣದಲ್ಲಿ…

ಬಿಜಾಪುರ ಜಿಲ್ಲೆಯ ಯತ್ನಾಳ ಗ್ರಾಮ. ರಾತ್ರಿ ಹನ್ನೊಂದು ಗಂಟೆಗೆ ಶಿಕ್ಷಕ ರಾಮಣ್ಣ ಹಡಗಲಿಯವರು ತಮ್ಮ ಮನೆಯಲ್ಲಿದ್ದ ರೇಡಿಯೋ ಆನ್ ಮಾಡಿದರು. ಬಿಜಾಪುರ ಎಫ್‌ಎಂ ಕೇಂದ್ರವನ್ನು ಹಚ್ಚಿದರು. ಅಲ್ಲಿಂದ ವಾರ್ತೆಗಳ ಮುಖ್ಯಾಂಶ ಪ್ರಸಾರವಾಗುತ್ತಿತ್ತು. ಅದು ಮುಗಿದ ಮೇಲೆ…

ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ ಇಲ್ಲಿದೆ. ಸ್ಥಾವರಗಳ ಕುರಿತ ಈ ಸಂಚಿಕೆ ನಿಮಗೆ ಇಷ್ಟವಾಗಬಹುದು ಎಂದು ನಂಬಿರುವೆ. ಪ್ರತಿಕ್ರಿಯೆಗೆ ಸ್ವಾಗತ. ಇಶ್ಯೂ ಸಂಚಿಕೆಯು ನೋಡಲು ಮುದ್ದಾಗಿ ಕಾಣಿಸುತ್ತದೆಯಾದರೂ, ದೃಷ್ಟಿಸವಾಲಿನವರು ಓದಲಾಗದು. ಆದ್ದರಿಂದ  ಇಶ್ಯೂ ಸಂಚಿಕೆಯ ಕೊಂಡಿಯ…

ಪ್ರಿಯರೆ, ನಾನು ಆಗಾಗ ಬರೆಯುವ ವಿಜ್ಞಾನದ ಲೇಖನಗಳನ್ನು ಇಲ್ಲಿ ನಿಮಗಾಗಿ ಪುಸ್ತಕರೂಪದಲ್ಲಿ ಕೊಡಲು ಬಯಸಿದ್ದೇನೆ. ವಿಶೇಷವಾಗಿ ಹೈಸ್ಕೂಲು ಮಟ್ಟದ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಸಂಚಿಕೆಯನ್ನು ರೂಪಿಸಲಾಗಿದೆ. ಕನ್ನಡದಲ್ಲಿ ವಿಜ್ಞಾನ ವಿಷಯದ ಬಗ್ಗೆ ಲೇಖನಗಳನ್ನು ಓದಿ,…

ನೂರು ವರ್ಷಗಳ ಹಿಂದೆ ಯಾವುದೋ ಹಿಮಗಡ್ಡೆಗೆ ಸಿಲುಕಿ ಮುಳುಗಿದ ಟೈಟಾನಿಕ್‌ ಹಡಗಿನ ಕಥೆ ಬರೆಯಲೆ? ಅದೇ ಟೈಟಾನಿಕ್‌ ಸಿನೆಮಾದ ತ್ರಿ-ಆಯಾಮದ ಆವೃತ್ತಿ ಥಿಯೇಟರುಗಳನ್ನು ಆವರಿಸಿದ ಬಗ್ಗೆ ಬರೆಯಲೆ? ಅಥವಾ ಜೇಮ್ಸ್‌ ಕೆಮರಾನ್‌ ಕಳೆದ ತಿಂಗಳಷ್ಟೆ ಸಮುದ್ರದ…

ನೀವು ಕನ್ನಡದಲ್ಲಿ ಮಾತನಾಡುತ್ತೀರಿ. ಕಂಪ್ಯೂಟರ್‌, ನಿಮ್ಮದೇ ಧ್ವನಿಯಲ್ಲಿ ನೀವು ಮಾತಾಡಿದ್ದನ್ನು ಗ್ರೀಕ್‌ ಭಾಷೆಯಲ್ಲಿ ಅಥವಾ ಇನ್ನಾವುದೇ ಭಾಷೆಯಲ್ಲಿ,  ವಾಕ್ಯದಲ್ಲಿ ಇರಬೇಕಾದ ಎಲ್ಲ ಏರಿಳಿತಗಳೊಂದಿಗೆ ಅನುವಾದಿಸಿ ಉಲಿಯುತ್ತದೆ! ಇಂಥದ್ದೊಂದು ಮಹತ್ತರ ಸಂಶೋಧನೆಯನ್ನು ಮೈಕ್ರೋಸಾಫ್ಟ್‌ ಸಂಸ್ಥೆಯು ಸಾಕಾರಗೊಳಿಸುತ್ತಿದೆ. ಮೈಕ್ರೋಸಾಫ್ಟನ್ನು…

ವಿದ್ವಾನ್‌ ಎನ್‌ ರಂಗನಾಥ ಶರ್ಮಾ ನನಗೆ ರಂಗನಾಥಜ್ಜ ಆಗಬೇಕು. ಹತ್ತು ವರ್ಷಗಳ ಹಿಂದೆ ಅವರನ್ನು `ನೂತನ’ ಕಚೇರಿಯಲ್ಲಿ ಭೇಟಿಯಾಗಿದ್ದೆ. ಇವತ್ತು ಅವರ ಮನೆಗೆ ಹೋಗಿ ಅವರ ಜೊತೆ ಹತ್ತು ನಿಮಿಷ ಮಾತನಾಡಿ ಬಂದೆ.  ಅವರನ್ನು ನಾನು…

ಸಂಗೀತ, ಸಿನೆಮಾದಲ್ಲೇ ಮುಳುಗಿಹೋಗಿದ್ದ ದಿನ. ಒಂದು ಎಸ್ ಎಂ ಎಸ್ ಬಂತು. ಸಚಿವ ವಿ ಎಸ್ ಆಚಾರ್ಯರವರು ಮೈಸೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸ್ತಾ ಇದಾರೆ.  ಕಾರ್ಯಕ್ರಮವನ್ನು ಸಂಘಟಿಸಿದವರು ಬೇರಾರೂ ಅಲ್ಲ, ನಾನು ಮತ್ತು ನನ್ನ ಗೆಳೆಯರು…