ಕನಕ `ಬತ್ತಳಿಕೆ'ಯಲ್ಲಿ ಮೊಂಡಾದ ಬಾಣಗಳು
ಕನಕ `ಬತ್ತಳಿಕೆ'ಯಲ್ಲಿ ಮೊಂಡಾದ ಬಾಣಗಳು
ದೂರದ ಊರಿನಲ್ಲಿ ಇದ್ದು ಕನ್ನಡದ ಕೆಲಸ ಮಾಡುತ್ತಿರುವ ಹಾಲ್ಕೆರೆ ಮ.ಕನಕ ಇತ್ತೀಚೆಗೆ ತುಂಬಾ ಸುದ್ದಿ ಮಾಡಿದ್ದಾರೆ
ಜಾವೇದ್ ಅಖ್ತರ್‌ರ `ತರ್ಕಶ್' ಕವನ ಸಂಕಲನವನ್ನು ಕನ್ನಡಕ್ಕೆ `ಬತ್ತಳಿಕೆ' ಅನುವಾದಿಸಿದ್ದಾರೆ. ಪುಸ್ತಕದ
ಬಿಡುಗಡೆ ಸಮಾರಂಭ ಕಳೆದ ವರ್ಷ ಬೆಂಗಳೂರಿನಲ್ಲಿ ಸಡಗರದಿಂದಲೇ ನಡೆಯಿತು. ನಿಜಕ್ಕೂ ಕನಕರಿಗೆ ಕನ್ನಡಿಗರ
ವಂದನೆಗಳು. ಜಾವೇದ್ ಸ್ವತಃ ಬಂದು ಕವನಗಳನ್ನು ವಾಚಿಸಿದರು ಎಂದರೆ ಅದು ಕನ್ನಡಿಗರ ಅದೃಷ್ಟವೇ.
ನಾನು `ಬತ್ತಳಿಕೆ'ಯನ್ನು ಖರೀದಿಸಿ ಓದಿದೆ. ನಾನೇನೂ ಉರ್ದು ತಜ್ಞನಲ್ಲ. ಆದರೆ ಅನುವಾದದ ಪಕ್ಕದಲ್ಲೇ ಮೂಲ
ಕೃತಿಯನ್ನೂ ನೀಡಿದ್ದರಿಂದ ಅವುಗಳ ಮೇಲೂ ಕಣ್ಣು ಹಾಯಿಸಿದೆ. ಎಲ್ಲ ಓದಿದ ಮೇಲೆ ನನಗೆ ಕನಕ ಯಾಕೆ ಇಷ್ಟು
ಅವಸರ ಮಾಡಿದರು ಎಂದು ಅಚ್ಚರಿಯಾಯಿತು. ಯಾಕೆಂದರೆ
೧)ಅನೇಕ ಗಜಲ್‌ಗಳು ಜಾವೇದ್ ನೀಡುವ ಲಯ, ಗೇಯತೆಯನ್ನು ನೀಡುವುದೇ ಇಲ್ಲ.
೨) ಗಜಲ್‌ಗಳ ಪ್ರಾಸಕ್ಕಾಗಿ ಹೆಣಗುತ್ತ ಅವುಗಳ ಕಾವ್ಯಗುಣವನ್ನೇ ಕಳೆದುಹಾಕಿದ್ದಾರೆ.
೩) ಹಲವು ಕಡೆಗಳಲ್ಲಿ ಅರ್ಥ ವ್ಯತ್ಯಾಸವಾಗಿದೆ.
೪) ಕನ್ನಡ ಪದಗಳ ಬಳಕೆ ಕೆಲವು ಕಡೆ ಶಿಶುಪ್ರಾಸದ ರೂಪದಲ್ಲಿ ಕಾಣಿಸಿಕೊಂಡಿವೆ.
ನಾನೇನೂ ನನ್ನ ವಾದವೇ ಸರಿ ಎಂದು ಹೇಳುವುದಿಲ್ಲ. ಸಹೃದಯ ಓದುಗರು ತಮ್ಮ ತೀರ್ಮಾನವನ್ನು ತಾವೇ
ಕೈಗೊಳ್ಳುವುದು ಉಚಿತ. ಈ ಕೆಳಗೆ ಕೆಲವು ಉದಾಹರಣೆಗಳನ್ನು ಕೊಡುತ್ತಿದ್ದೇನೆ. ದಪ್ಪ ಅಕ್ಷರಗಳನ್ನು ಗಮನಿಸಿ.
ಅವುಗಳ ಬಳಕೆ ಸರಿಯೇ ಎಂದು ನೀವೇ ನಿರ್ಧರಿಸಿ.
ಜಹನ್ ಕೀ ಶಾಖೋ ಪರ್ ಅಶ ಆರ್ ಆ ಜಾತೆ ಹೈ
ಜಬ್ ತೇರೀ ಯಾದೋ ಕಾ ಮೌಸಮ್ ಹೋತಾ ಹೈ (೧೧೫)
ಮನದ ಕೊಂಬೆಯಲ್ಲಿ ಕವಿತೆಗಳು ಚಿಗುರುತ್ತವೆ
ನಿನ್ನ ನೆನಪಾಗಿ ಇರುತ್ತದೆ ಋತುಮಾನಾನೆ
ಲೋಗೋ ಸೆ ಸುನ್‌ತೇ ಹೈ ಮಹರಮ್ ಹೋತಾ ಹೈ
ಮಂದಿ ಹೇಳುವರು ಲೇಪ ಇದೆ ತಾನೆ?
ಕೇಳಿ ಜಗತ್ತು ಎಂಥದಿದೆ ನನ್ನನೆ
ಹಮ್ ತೋ ಬಚ್‌ಪನ್ ಮೇ ಭೀ ಅಕೇಲೇ ಥೆ
ಸಿರ್ಫ್ ದಿಲ್ ಕೀ &
amp;#3
223;ಲೀ ಮೇ ಖೆಲೇ ಥೆ (೩೧ )
ನಮ್ಮ ಬಾಲ್ಯದ ದಿನವೂ ಒಂಟಿಯಾಗಿತ್ತು
ಆಟ ಬರಿಯ ಮನದ ಬೀದಿಯಲ್ಲಿತ್ತು
ಅಂದು ಉದರ ಮಾತ್ರ ಉಪವಾಸವಿತ್ತು
ಸಬ್ ಕಾ ಖುಶೀ ಸೇ ಫಾಸ್‌ಲಾ ಏಕ್ ಕದಮ್ ಹೈ
ಹರ್ ಘರ್ ಮೇ ಏಕ್ ಹೀ ಕಮರಾ ಕಮ್ ಹೈ (೪೫ )
ಎಲ್ಲರ ಖುಷಿಗೆ ದೂರವಿದೆ ಇನ್ನೊಂದು ಹೆಜ್ಜೆ
ಪ್ರತಿ ಮನೆಯಲ್ಲೂ ಕಡಿಮೆಯಿದೆ ಕೋಣೆಯೊಂದು
(ಇಲ್ಲಿ ನನಗೆ `ಏಕ್ ಹೀ ಕಮರಾ' ಪದಗುಚ್ಛವನ್ನು ಕನಕ ಗಮನಿಸಿಲ್ಲ ಅನ್ನಿಸುತ್ತದೆ. ಕಡಿಮೆಯಿದೆ ಕೋಣೆಯೊಂದು
ಎನ್ನುವುದಕ್ಕೂ, ಒಂದೇ ಕೋಣೆ ಕಡಿಮೆ ಎನ್ನುವುದಕ್ಕೂ ವ್ಯತ್ಯಾಸ ಇಲ್ಲವೆ?)
ಇಸ್ ಶಹರ್ ಮೇ ಜೀನೇ ಕೆ ಅಂದಾಜ್ ನಿರಾಲೇ ಹೈ
ಹೋಟೋ ಪೆ ಲತೀಫೆ ಹೈ ಆವಾಜ್ ಮೆ ಛಾಲೇ ಹೈ (೬೧)
ಈ ನಗರದಲ್ಲಿ ಬದುಕುವ ಪರಿಯೇ ಬೇರೆ
ಮಧುರ ಮಾತಲ್ಲಿ ದನಿಯಾಳ ಮುಳ್ಳು
(ನನಗೆ ಇಲ್ಲಿ `ದನಿಯಾಳ ಮುಳ್ಳು' ಪದಬಳಕೆಯಲ್ಲಿ ಎಳ್ಳಷ್ಟೂ ಕಾವ್ಯದ ಅಂದ ಇಲ್ಲ ಅನ್ನಿಸಿದೆ. )
ಇಳಿದಂತಾತ ಈಕೆಯ ರಂಗೂ ಬದಲುತ್ತಿತ್ತು (೬೭ )
ಬಲ್ಲೆ ಮೌನದಲ್ಲೇ ಇದೆ ತಿಳುವಳಿಕೆ
ನೀನು ಅಚ್ಚು ಅಚ್ಚಾದವನು ನಾನು (೭೩)
ಬದಲಿಗೆ
`ಅಚ್ಚು ನೀನು ಅಚ್ಚಾದವನು ನಾನು' ಎಂದಿದ್ದರೆ?
ಇರುವುದು ದುಗುಡ ಅರಿವಿನ ಜೊತೆಗೆ
ಬೆಲೆ ಇರುವುದು ಜಗದಲಿ ಎಲ್ಲರಿಗೆ
ಅಡಿಗಡಿಗನ್ನುವಳಾಕೆ ಬರಿ ನನ್ನವಳೆಂದು
ಯಾಕನ್ನುವಳೋ ಅಚ್ಚರಿ ಅಡಿಗಡಿಗೆ
ಕಾಲವ ಕದ್ದು ಸೇರುತಲಿದ್ದೆವು
ಈಗ ಪುರುಸೊತ್ತಾದರೆ ಭೇಟಿಯಿದೆ (೭೬)
ಸ್ವಗತವು ಮಾತು ನನ್ನಯ ರೀತೀ (೧೨೩)
ಅಪನೀ ಮೆಹಬೂಬಾ ಮೆ ಅಪನೀ ಮಾ ದೇಖೇ
ಬಿನ್ ಮಾ ಕೆ ಲಡಕೋ ಕೀ ಫಿತರತ್ ಹೋತೀ ಹೈ
ಅಮ್ಮನ ಅಗಲಿದ ಹುಡುಗಗೆ ಅಮ್ಮನ
ಸಖಿಯಲಿ ಕಾಣುವ ಚಾಳಿಯಿದೆ
ನಿಜವಿರರು ಎಂದೂ ನಮ್ಮ ಪ್ರಿಯ ಮಂದಿ (೮೦)
ಯಾವುದೇ ತಾಣ ಬಲು ಉದ್ದ ತಲುಪಲು
ಅಂತಾ ದೂರವಲ್ಲ ಹಿಂದಿರುಗುವ ದಾರಿ
ಒಳ್ಳೆ ಭಾಗ ಎಲ್ಲಿರುವುದಾಗಿಲ್ಲಿ?
ಮರೆತು ಎಲ್ಲ ಹಗೆ ಎಲ್ಲರೂ ಒಂದೆಂಬರು
ಹೇಳಲೇ ನೆನಪಿರಬಹುದು ನಿಮಗೆ ಎಲ್ಲ
ನಾಲ್ಕೇ ಮಾತುಗಳಲ್ಲಿ ಹೇಳು ಅವಗೆ ಹೇಳುವುದ
ಸಮಯ ಎಲ್ಲಿದೆ ಪಿರ್ಯಾದಿ ಕೇಳಲು ಎಲ್ಲ (೯೯)
(ಇವೆಲ್ಲವೂ ಶಿಶುಕಾವ್ಯದ &#
3257
;ಾಗೆ ಕಾಣುತ್ತದೆ. )
ಏನಿದು ನನ್ನ ಅವಸ್ಥೆ
ಉತ್ತರ ಬೇಕಿದ್ದರೆ ಅದೆಂಥಾ ಪ್ರಶ್ನೆ
ನಿರುಪಾಯ ನಾ ಆರೋಪಿಸಲಿ ಯಾರನ್ನ
ನಿನ್ನೆ ಹೆಣೆದಿದ್ದೆ ನಾನೇ ಈ ಜಾಲ ನನ್ನದಿದೆ (೧೦೫ )
(ಗಜಲ್‌ನ ಲಯ ಪೂರಾ ಬಿಟ್ಟುಹೋಗಿದೆ)
ಮಿರೆ ವುಜೂದ್ ಸೆ ಯೂ ಬೇಖಬರ್ ಹೈ ವೋ ಜೈಸೆ
ವೋ ಏಕ್ ಧೂಪ್‌ಘಡೀ ಹೈ ಮೈ ರಾತ್ ಕಾ ಪಲ್ ಹೂ (೧೧೭ )
ನಾ ಇರುವುದ ಅರಿವೂ ಇಲ್ಲದವಳು ಅವಳು
ಆಕೆ ಬಿಸಿಲ ಕೋಲು ಇರುಳ ಕ್ಷಣ ನಾನು
(ಇಲ್ಲಿ ಹ್ಯಾಗೆಂದರೆ / ಅದರಂತೆ ಎಂಬ ವಿವರಣಾ ಪದವನ್ನು ಬಿಡಲಾಗಿದೆ.)
ಮುಝೆ ಭೀ ಯಾದ್ ನಹೀ ಔರ್ ಮೈ ಭೀ ಭೂಲ್ ಗಯಾ
ವೋ ಲಮ್ಹಾ ಕಿತ್‌ನಾ ಹಸೀ ಥಾ ಮಗರ್ ಫುಜೂಲ್ ಗಯಾ (೧೩೩ )
ನಿನಗೂ ನೆನಪಿಲ್ಲ ನಾನೂ ಮರೆತುಬಿಟ್ಟೆ
ಎಷ್ಟು ಸುಂದರವಿತ್ತು ಆ ಹೊತ್ತು ಆದರೆ ಸುಮ್ಮನೆ ಕಳೆದು ಹೋಯಿತು
ನಾ ಜೊತೆ ಈ ಅಲೆಮಾರಿತನ (೧೩೭ )
(ಅಂದವಿಲ್ಲದ ಪದಜೋಡಣೆ)
ಎಂದಿನಿಂದ ತಿರುಗುತ್ತಿದ್ದೇವೆ ಮನೆಮನೆ ಊರುಕೇರಿ
ನಾ ಜೊತೆ ಈ ಅಲೆಮಾರಿತನ
ಅಪರಿಚಿತ ಪ್ರತಿ ದಾರಿಹೋಕ ಸ್ನೇಹವಿಲ್ಲದ ಊಟ
ಹೋಗುವುದಾದರೂ ಎಲ್ಲಿಗೆ ನಾ ಜೊತೆ ಈ ಅಲೆಮಾರಿತನ
(ಹಮ್‌ಸಫರ್ ಪದದ ಸಮರ್ಥ ಬಳಕೆ ಆಗಿಲ್ಲ)
ನಾವು ಸ್ವಚ್ಛಂದರಿದ್ದೆವು ಕೆಟ್ಟಿರಲಿಲ್ಲ ಹೀಗೆ
ವಿಧಿಯ ವೈವಾಟವಿದು ಬರೀ ಕತ್ತಲು ಬರೀ ಕತ್ತಲು
ಅಹುದು ಅಮ್ಮ ಅಂದದ್ದೆಲ್ಲಾ ನಿಜ ಈಗ
ಚಂದ್ರನಲ್ಲಿ ಅಪ್ಸರೆಯರು ಇದ್ದರು ನನ್ನ ಬಾಲ್ಯದಾಗ (೧೭೦)
ವೋ ಸಾಪ್ ಛೋಡ್ ದೇ ಉಸ್‌ನಾ ಯೆ ಮೈ ಭೀ ಕಹತಾ ಹೂ
ಮಗರ್ ನ ಛೋಡೇಂಗೇ ಲೋಗ್ ಉಸ್‌ಕೋ ಗರ್ ನ ಫುಂಕಾರಾ (೧೦೦ )
ಕಚ್ಚುವುದ ಬಿಡಲಿ ನಾನೂ ಹೇಳುವೆನು ಕಾಳಿಂಗ
ಸುಮ್ಮನಿರರು ಈ ಮಂದಿ ಹೆಡೆ ಎತ್ತದಾಗ
ಮೈ ತುಮ್‌ಕೋ ಕುಛ್ ಖ್ವಾಬ್ ದಿಖಾವೂ
ತುಮ್ ಮುಝ್‌ಕೋ ಕುಛ್ ಖ್ವಾಬ್ ದಿಖಾವೋ (೧೪೭ )
ನನ್ನ ಕನಸುಗಳನ್ನು ನೀನು ಕಾಣು (ತಪ್ಪು ಭಾವಾರ್ಥ)
ಡೂಬ್‌ತೇ ವಕ್ತ್ ಜರ್ದ್ ಥಾ ಇತ್‌ನಾ
ಲೋಗ್ ಸಮಝೇ ಕಿ ಮರ್ ಗಯಾ ಸೂರಜ್ (೧೫೦ )
ಮುಳುಗುವ ಸಮಯ ಎಷ್ಟು ಪೇಲವ
ತಿಳಿದರು ಜನ ಸತ್ತನವ ಸೂರ್ಯ
ಮಾತಾಡುವಂತಾ (೧೭೯ )
ಬರೆಯಲೇನು ದಿಬ್ಬಣವೆಂದು ಶವಯಾತ್ರೆ ನೋಡಿದಲಿ
ಹಗಲನ್ನು &
#325
7;ಗಲೆಂದು ಬರೆದು ರಾತ್ರಿಗೆ ರಾತ್ರಿ ಹೇಳುವಲಿ (೧೮೨ )
ಈ ಕೆಳಗಿನ ಅನುವಾದವಂತೂ ಸೊಬಗಿನದು ಎಂದು ನನಗನ್ನಿಸಿಲ್ಲ.
ಆವೋ
ಚಲ್ ಕೆ ಸೂರಜ್ ಢೂಂಢೆ
ಔರ್ ನ ಮಿಲ್ ತೋ
ಕಿರಣ್ ಕಿರಣ್ ಫಿರ್ ಜಮಾ ಕರೇ ಹಮ್
ಔರ್ ಎಕ್ ಸೂರಜ್ ನಯಾ ಬನಾಯೇ
ಸೋಯೀ ಹೈ ಕಬ್ ಸೇ
ರೂಠ್ ಕೆ ಸಬ್‌ಸೇ
ಸುಬಹ್ ಕೀ ಗೋರೀ
ಉಸೇ ಜಗಾಯೆ
ಉಸೇ ಮನಾಯೆ (೧೮೫)
ಇರುಳ ಕಪ್ಪು ಕಂಬಳಿ ಹೊದ್ದು
ಮುಖ ಮುಚ್ಚಿ
ಮಲಗಿರುವಳು ಆಗಿನಿಂದ
ಮುನಿದು ಎಲ್ಲರೊಡನೆ
ಮುಂಜಾವ ಬೆಳ್ಳಿ ಬೆಡಗಿ
ರೆಪ್ಪೆ ಹೊಲಿದು
ತುಟಿ ಬಿಗಿದು
ಸೂರ್ಯ ಕಳವಾದಂದಿನಿಂದ
ಬನ್ನಿ ಹುಡುಕೋಣ ಸೂರ್ಯನನ್ನು
ಸಿಗಲಿಲ್ಲವೆಂದರೆ ಕಿರಣ ಕಿರಣಗಳನ್ನು
ಹೆಕ್ಕಿ ರಾಶಿ ಹಾಕಿ
ಇನ್ನೊಬ್ಬ ಸೂರ್ಯನನ್ನು ಮಾಡೋಣ
ಮಲಗಿರುವಳು ಆವಾಗಿನಿಂದ
ಮುನಿದು ಎಲ್ಲರೊಂದಿಗೆ
ಮುಂಜಾವಿನ ಬೆಳ್ಳಿ ಬೆಡಗಿ
ಎಬ್ಬಿಸೋಣ
ಆಕೆಯನ್ನು ರಮಿಸೋಣ
ಪಹಲೇ ಭೀ ಕುಛ್ ಲೋಗೋ ನೆ ಜೌ ಬೋ ಕರ್ ಗೇಹೂ ಚಾಹಾ ಥಾ
ಹಮ್ ಭೀ ಇಸ್ ಉಮ್ಮೀದ್ ಮೇ ಹೈ ಲೇಕಿನ್ ಕಬ್ ಐಸಾ ಹೋತಾ ಹೈ (೧೯೧ )
ಮೊದಲೂ ಕೆಲವು ಮಂದಿ ರಾಗಿ ಬಿತ್ತಿ ಕಾದಿದ್ದರು ಅಕ್ಕಿಗಾಗಿ
ನಾವೂ ಅದೇ ಕಾತರದಲ್ಲಿದ್ದೇವೆ ಎಂದು ಆದೀತು ಹಾಗೆ ಹೇಳಿ
ಹಿಲ್ ಸ್ಟೇಶನ್
ಬೆರೆತು ಇಲ್ಲಿ ಎಲ್ಲ ನೋಟ ಸಂಜೆ ಮಬ್ಬಾಯಿತು
ಬೆಳದಿಂಗಳ ಹೊದ್ದು ಎಲ್ಲ ಮಲೆಗಳೂ ಮಲಗಿತು (೨೦೪ )
ಮೇರೇ ಕುಛ್ ಪಲ್ ಮುಝ್‌ಕೋ ದೇ ದೋ ಬಾಕೀ ಸಾರೇ ದಿನ್ ಲೋಗೋ
ತುಮ್ ಜೈಸಾ ಜೈಸಾ ಕಹತೇ ಹೋ ಸಬ್ ವೈಸಾ ವೈಸಾ ಹೋಗಾ (೧೯೫)
ಕೆಲವು ಕ್ಷಣಗಳನ್ನು ಕೊಡಿ ನನಗೆ
ಕೇಳುವೆನು ಮತ್ತೆಲ್ಲ ನೀವು ಹೇಳಿದ ಹಾಗೆ
ನನ್ನ ಅನುವಾದ ಹೀಗಿದೆ:
ಕೊಡಿ ನನಗೆ ನನ್ನ ಕೆಲವು ಕ್ಷಣಗಳ ದಯಮಾಡಿ ಪ್ರಿಯರೆ
ಉಳಿದೆಲ್ಲ ದಿನ ನೀವು ಹೇಳಿದ ಹಾಗೆ ನಿಮ್ಮದೇ ಕೈಸೆರೆ.
`ಮತ್ತೆ ಮತ್ತೆ ತಿದ್ದಿದ್ದೇನೆ. ಇನ್ನೊಮ್ಮೆ ಕೂತರೆ ಬಹುಶಃ ಇನ್ನಷ್ಟು ತಿದ್ದುವೆನೇನೋ' ಎಂದು ಕನಕ ಮೊದಲೇ
ಹೇಳಿಬಿಟ್ಟಿದ್ದರಿಂದ ಅವರು ಈ ದೋಷಗಳಿಂದ ಮುಕ್ತರಾಗಲು ಪರವಾನಗಿ ಅಲ್ಲ. ಈ ಸಂಕಲನದ ಪ್ರಕಟಣೆಗೆ ಮುನ್ನ
ಕವನಗಳನ್ನು ಓದಿದವರಲ್ಲಿ ಜಯಂತ ಕಾಯ್&am
p;#3
221;ಿಣಿ, ರಷೀದ್, ಅತುಲ್, ಯು ಆರ್ ಅನಂತಮೂರ್ತಿ ಇದ್ದಾರೆ. ಡಾ||
ಅನಂತಮೂರ್ತಿಯವರಂತೂ ತಾಸುಗಟ್ಟಲೆ ಅನುವಾದಗಳನ್ನು ಕೇಳಿಸಿಕೊಂಡು ಅಲ್ಲಲ್ಲಿ ಸರಿಯಾದ ಪದಗಳನ್ನು ಕೂರಿಸಿ
ಗಟ್ಟಿಗೊಳಿಸಿದ್ದಾರಂತೆ!
ಯಶವಂತ ಚಿತ್ತಾಲ, ಕೆ ವಿ ತಿರುಮಲೇಶ್, ತುಳಸಿ, ಮಿತ್ರ, ಪ್ರತಿಭಾ ನಂದಕುಮಾರ್, ವಿವೇಕ, ಮಮತಾ
ಸಾಗರ, ಮುಕುಂದ ಜೋಶಿ ಇವರೆಲ್ಲ ಓದಿದ್ದು ದಂಡ ಎಂದು ನಾನು ಹೇಳುತ್ತಿಲ್ಲ. ಆದರೆ ಇಷ್ಟು ತಯಾರಿ, ತಿದ್ದುಪಡಿ,
ವಾಚನ, ಶ್ರವಣ ಎಲ್ಲವನ್ನೂ ಇಷ್ಟೆಲ್ಲ ತಪ್ಪುಗಳು ಹೇಗೆ ದಾಟಿ ಸಲೀಸಾಗಿ ಪ್ರಕಟಿತ ಕೃತಿಯಲ್ಲಿ ಬಂದು ಕೂತು ಕಡ್ಲೆಪುರಿ
ತಿನ್ನುತ್ತಿವೆ ಎನ್ನುವುದೇ ನನ್ನ ಪ್ರಶ್ನೆ.
ಏನೇ ಹೇಳಿ, `ಹೊಳೆಬಾಗಿಲು' ಓದಿ ಅದರೊಳಗಣ ಆರ್ದ್ರತೆಯನ್ನು ಆ ಊರುಕಡೆಯವನಾದ ನಾನು ಆಘ್ರಾಣಿಸಿ
ಅದಕ್ಕೆ ಕಾರಣವಾಗಿದ್ದ ಕನಕರನ್ನು ತುಂಬಾ ಮೆಚ್ಚಿದ್ದೆ. ಆದರೆ ಅವರ ಈ ಕೃತಿ ಮಾತ್ರ ನನಗೆ ತುಂಬಾ ಕಸಿವಿಸಿ,
ಬೇಸರ ಹುಟ್ಟಿದೆ.
ಇಂಥ ಅನುವಾದವನ್ನು ಪ್ರಕಟಿಸುವಾಗ ನಿಜಕ್ಕೂ ತೋರಬೇಕಾದ ಇತರೆ ಎಲ್ಲ ಎಚ್ಚರಿಕೆಗಳನ್ನೂ
ಬೋಳಂತಕೋಡಿಯವರು ತೆಗೆದುಕೊಂಡಿದ್ದಾರೆ. ಒಳ್ಳೆಯ ಕಾಗದ, ಮುದ್ರಣ, ಮುಖಪುಟ, ಮೂಲಕೃತಿಯೂ
ಬದಿಯಲ್ಲಿ ಲಭ್ಯ…ಹೀಗೆ. ಅವರಿಗೆ ಧನ್ಯವಾದಗಳು.
( ಈ ವಿಮರ್ಶೆಯು ಡಿ.ವಿ.ಪ್ರಹ್ಲಾದ್‌ರವರ "ಸಂಚಯ" ಪತ್ರಿಕೆಯಲ್ಲಿ ಪ್ರಕಟವಾಗಿತ್ತು)