ಇಂದು ನಮ್ಮನ್ನು ಅಗಲಿದ ಅನಂತಕುಮಾರ್ ಅಂತಿಮ ದರ್ಶನ ಪಡೆದಾಗ ನನ್ನೊಂದಿಗೆ ಬಂದಿದ್ದು ಕಲಾವಿದ ಮಿತ್ರ ದೇವರಾಜ. ೧೯೮೬ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಿಂದ ರಾಜ್ಯದ ಶಿಕ್ಷಣ ಕ್ಷೇತ್ರದ ದುಸ್ಥಿತಿಯ ಬಗ್ಗೆ ಕರಾಳ ಪತ್ರ ರೂಪಿಸಿದವರು ಅನಂತಕುಮಾರ್. ಅವರಿಗೆ ಸಹಾಯಕನಾಗಿ ಲೇಖನಿ ಹಿಡಿದಿದ್ದು ನಾನು. ಕೊನೆಗೆ ಅದಕ್ಕೊಂದು ಅರ್ಥವತ್ತಾದ ಮುಖಪುಟ ಬಿಡಿಸಿದ್ದು ದೇವರಾಜ! ಇಂದು ಮಾತ್ರ ನಮ್ಮಿಬ್ಬರಿಗೂ ಹಿರಿಯ ಮಿತ್ರನೊಬ್ಬನನ್ನು ಕಳೆದುಕೊಂಡ ಕರಾಳ ದಿನದಂತೆ ಅನ್ನಿಸಿತ್ತು. ಆ ಕರಾಳ ಪತ್ರವನ್ನು ಪಿ.ಲಂಕೇಶರೇ ಲಂಕೇಶ್ ಪತ್ರಿಕೆಯಲ್ಲಿ ಅತ್ಯಂತ ಹೃತ್ಪೂರ್ವಕವಾಗಿ ಶ್ಲಾಘಿಸಿ, ಎಬಿವಿಪಿಯ ಒಂದು ಒಳ್ಳೆಯ ಕೆಲಸ ಎಂದು ಒಂದು ಪುಟ ವರದಿ ಮಾಡಿಸಿದ್ದರು. ಆ ದಿನಗಳಿಂದ ಈದಿನದವರೆಗೂ ಕರಾಳ ಪತ್ರದ ಮೊನಚು ಶೈಲಿಯನ್ನು ಯಾರೂ ಮರೆತಿಲ್ಲ. ಅದಕ್ಕೆಲ್ಲ ಕಾರಣ…
"ಅನಂತಕುಮಾರ್: ಒಂದು ಖಾಸಗಿ ನಮನ"Category: ಲೇಖನಗಳು
23 ಅಕ್ಟೋಬರ್ 2018 ಇವರಿಗೆ ಮಾನ್ಯ ಮುಖ್ಯಮಂತ್ರಿಯವರು ಮತ್ತು ಸಂಪುಟದ ಎಲ್ಲ ಸಚಿವರು ಕರ್ನಾಟಕ ಸರ್ಕಾರ ಬೆಂಗಳೂರು ಮಾನ್ಯರೇ ವಿಷಯ: ಕೊಡಗು ಮತ್ತು ಮಲೆನಾಡಿನ ಪ್ರದೇಶಗಳ ನೆರೆ ಮತ್ತು ಭೂಕುಸಿತದ ಹಿನ್ನೆಲೆಯಲ್ಲಿ ದೂರಗಾಮಿ, ಸುಸ್ಥಿರ ಕ್ರಿಯಾಯೋಜನೆ ರೂಪಿಸಲು ನಾಡಿನ ನಾಗರಿಕರ ಮನವಿ. 2018 ರ ಆಗಸ್ಟ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಲ್ಲಿ (ಮತ್ತು ನೆರೆಯ ಕೇರಳದಲ್ಲಿ) ಉಂಟಾದ ಪ್ರಕೃತಿ ವಿಕೋಪವು ಸಾವಿರಾರು ಕೋಟಿ ರೂ.ಗಳ ಮೌಲ್ಯದ ಆಸ್ತಿ ಹಾನಿಯನ್ನು ಉಂಟುಮಾಡಿದೆ. ಜನವಸತಿ, ರಸ್ತೆ, ಮುಂತಾದ ಮೂಲಸೌಕರ್ಯಗಳಲ್ಲಿ ಆದ ನಷ್ಟವನ್ನು ರೂಪಾಯಿ ಲೆಕ್ಕದಲ್ಲಿ ಅಂದಾಜು ಮಾಡಬಹುದಾದರೂ, ಸಾವಿರಾರು ವರ್ಷಗಳಿಂದ ಕೊಡಗಿನ, ಕರ್ನಾಟಕದ ಜೀವಸೆಲೆಯಾಗಿದ್ದ ದಟ್ಟ ಅರಣ್ಯ ಪ್ರದೇಶದ ನಷ್ಟವನ್ನು ಅಳೆಯಲೂ ಸಾಧ್ಯವಿಲ್ಲ. ಜೀವವೈವಿಧ್ಯದಿಂಧ ತುಂಬಿದ್ದ, ದಕ್ಷಿಣ ಕರ್ನಾಟಕ,…
"ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು ಮಿತ್ರಮಾಧ್ಯಮದ ಒತ್ತಾಯ"ಜೀವನದಲ್ಲಿ ನನಗೆ ಸಿಕ್ಕಿದ ಕೆಲವೇ ಅತ್ಯಂತ ಉತ್ತಮ ಮಿತ್ರರಲ್ಲಿ ಒಬ್ಬ- ನಾಡಿನ ಪ್ರಮುಖ ಕಲಾವಿದ ಬಿ. ದೇವರಾಜ್ (ಊರು: ಚನ್ನೇನಹಳ್ಳಿ ). ಅವನ ಮಗ ಸಿದ್ಧಾರ್ಥನು ಎರಡನೆಯ ತರಗತಿಯಲ್ಲಿ ಇದ್ದಾಗಲೇ ಅತ್ಯುತ್ತಮ ಕಲಾವಿದನಾಗಿದ್ದ. ಗೋಡೆಯ ಮೇಲೆ ಬರೆಯುವುದರಿಂದ ಹಿಡಿದು, ಕ್ಯಾನ್ವಾಸ್ ಮೇಲೆ ತನ್ನದೇ ಆದ ಬಣ್ಣದ ಸಂಯೋಜನೆಗಳನ್ನು ಮಾಡುವುದರಲ್ಲಿ ಪರಿಣತನಾಗಿದ್ದ. ಅದು 2010 ರ ದಿನಗಳು. ಆಗಲೇ ತನ್ನ ಕಲೆಯಲ್ಲೂ ವಿಜ್ಞಾನದ ಕೌತುಕಗಳನ್ನು ಬಿಂಬಿಸಲು ಯತ್ನಿಸುತ್ತಿದ್ದ. ಅವನ ಶಾಲೆಯಲ್ಲಿ ಏಕವ್ಯಕ್ತಿ ಕಲಾಪ್ರದರ್ಶನವೂ ನಡೆದಿತ್ತು! ಆಗ ನಾನು ಒಂದು ಪುಟ್ಟ ಬ್ಲಾಗ್ ಬರೆದಿದ್ದೆ (https://beluru.com/?p=2705)
"ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!"ಬೇಲೂರಿನ ಪೂರ್ಣಪ್ರಜ್ಞ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳೇ, ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಬೇಡ ಬೇಡವೆಂದರೂ ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದು ತಂದಿರುವುದರಿಂದ ನಾನು ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲೇಬೇಕಿದೆ. ಭಾಷಣವೆಂದರೆ ಭಯಪಡುವ ನಾನು ಎಲ್ಲಿಯಾದರೂ ತಪ್ಪಾಗಿ ಮಾತನಾಡಿದರೆ ಆಮೇಲೆ ತಿಳಿಸಿ! ನನ್ನ ಭಾಷಣವು ಹೆಚ್ಚಾಗಿ ಹೈಸ್ಕೂಲು ಮಕ್ಕಳನ್ನೇ ಉದ್ದೇಶಿಸಿದೆ. ಒಂದು ಕಾಲದಲ್ಲಿ ಕಾಗದದಲ್ಲಿ ಬರೆಯುವುದೇ ದಿನಚರಿಯಾಗಿದ್ದ ನನಗೀಗ ಗಣಕಯಂತ್ರವಿಲ್ಲದೆ ಬರೆಯುವುದೇ ಕಷ್ಟವಾಗಿ ಪರಿಣಮಿಸಿದೆ. ನಾನೀಗ ಸಂಚಾರಿ ದೂರವಾಣಿ (ಮೊಬೈಲ್), ಮಿಂಚಂಚೆ (ಈ-ಮೈಲ್), ದೂರದರ್ಶನ (ಟೆಲಿವಿಜನ್), ರೇಡಿಯೋ ಇಲ್ಲದೆ ಸಂಪರ್ಕವನ್ನು ಸಾಧಿಸುವುದೇ ಕಷ್ಟ ಎಂದೆನ್ನಿಸಿದೆ. ಸಹಸ್ರಾರು ವರ್ಷಗಳ ಹಿಂದೆ ಕೊಳೆತು ದ್ರವ್ಯವಾದ ಪೆಟ್ರೋಲನ್ನು ಇಂಧನವಾಗಿ ಬಳಸುವ ವಾಹನವಿಲ್ಲದೆ ನಾನು ನಗರದಲ್ಲಿ ಸಂಚರಿಸಲಾರೆ; ಊರೂರು ಸುತ್ತಲಾರೆ. ಯಂತ್ರಗಳು…
"ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು! "ನೀವು ಹಣ ಪಾವತಿಗೆ ಪೇಪಾಲ್ (paypal.com) ) ಬಳಸಿ; ಖರೀದಿಗೆ ಈಬೇ (ebay.com) ತಾಣವನ್ನು ಬಳಸಿ; ಸರ್ಕಾರಕ್ಕೆ ಯಾವುದೋ ಸಾಮಾಜಿಕ ಬೇಡಿಕೆಯೊಂದನ್ನು ಸಲ್ಲಿಸಲು ಚೇಂಜ್ ಡಾಟ್ ಆರ್ಗ್ (change.org) ತಾಣಕ್ಕೆ ಹೋಗಿ ಸಹಿ ಹಾಕಿ; ಸರ್ಕಾರದ ವಿರುದ್ಧ ಬರುವ ಹಲವು ಲೇಖನಗಳನ್ನು, ಹೊಸ ಜಾಲತಾಣಗಳಲ್ಲಿ ಬರುವ ತನಿಖಾ ವರದಿಗಳನ್ನು ಓದಿ; ಕ್ವಿಕ್ರ್ನಲ್ಲಿ (quikr.com) ನಿಮ್ಮ ಹಳೆಯ ವಸ್ತುವನ್ನು ಮಾರಿ; ಮೊಬೈಲ್ನಲ್ಲಿ ಭಾರತೀಯ ಭಾಷೆಗಳೇ ಇರಬೇಕೆಂದು ಹಟ ಹಿಡಿದು ಇಂಡಸ್ಓಎಸ್ (indusos.com) ಸ್ಮಾರ್ಟ್ಫೋನ್ ಖರೀದಿಸಿ; ರಾಜಕಾರಣಿಗಳ ಭ್ರಷ್ಟಾಚಾರ – ಅಕ್ರಮ ಸಂಪತ್ತು – ಅಪರಾಧಗಳ ಬಗ್ಗೆ ತಿಳಿಯಲು (adrindia.org) ಹೊರಡಿ; ಉದ್ಯಮ ಆರಂಭಿಸಿ ಸಾಲಕ್ಕಾಗಿ ಹುಡುಕಾಡಿ : – ನಿಮ್ಮ ಇಂದಿನ ಇಂಥ ಹಲವು ಚಟುವಟಿಕೆಗಳಲ್ಲಿ ಅಮೆರಿಕಾದ…
"ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ"India receives a huge sum of money through FCRA (Foreign Contribution Regulation Act) approved organizations. The FCRA portal was non-functional for more than 10 years, courtesy UPA 1 and 2. Now, the NDA government has made it functional by strictly implementing the rule book. It is true that many of its measures are questioned and termed as oppressive, but there is another truth: these organizations are always trying to hide their source of funds, their…
"Attention NGOs: Transparency and probity begins from you!"ಜೀವವೈವಿಧ್ಯ, ಭಾಷಾವೈವಿಧ್ಯ, ಸಂಸ್ಕೃತಿ–ಪರಂಪರೆ–ಆಚರಣೆಯ ವೈವಿಧ್ಯ, ಉಡುಗೆ ತೊಡುಗೆಗಳ ವೈವಿಧ್ಯ – ಹೀಗೆ ಹತ್ತಾರು ಆಯಾಮಗಳಲ್ಲಿ ಭಾರತವು ವೈವಿಧ್ಯದ ದೇಶವಾಗಿದೆ. ಇಂಥ ವಿಷಯ ಸಮೃದ್ಧ ನಾಡಿನಲ್ಲಿ ಸಾಂಪ್ರದಾಯಿಕ ಮುದ್ರಣ ಮಾಧ್ಯಮಗಳು ಮತ್ತು ಹೊಸ ಕಾಲದ ಅಂತರಜಾಲದ (ಆನ್ಲೈನ್) ಅಭಿವ್ಯಕ್ತಿ ವೇದಿಕೆಗಳು ಮುಕ್ತ ಜ್ಞಾನದ ವೇದಿಕೆಗಳಾಗಲು ಸಾಕಷ್ಟು ಅವಕಾಶಗಳಿವೆ.
"ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು"`Digital life’ demands a digital mindset. That does not mean you have to shed all your traditional thoughts and tools. This reasoning has resulted in many `thoughtful’ IT tools.
"Digital life : let us make it sustainable; minimise carbon footprints"ಹದಿನಾರು ವರ್ಷಗಳ ಹಿಂದಿನ ಮಾತು. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸಿಂಪ್ಯೂಟರ್ ಎಂಬ ಕೈಗಣಕವನ್ನು ರೂಪಿಸಿದ್ದರು. ಯಾರು ಬೇಕಾದರೂ ಪಡೆದು ತಯಾರಿಸಬಹುದಾದ ಹಕ್ಕುಸ್ವಾಮ್ಯವೇ ಇಲ್ಲದ ಯಂತ್ರಾಂಶ – ತಂತ್ರಾಂಶಗಳಿಂದ ರೂಪುಗೊಂಡಿದ್ದ ಸಿಂಪ್ಯೂಟರ್ (www.simputer.org)ಆ ಕಾಲಕ್ಕಿಂತ ಮುಂದಿತ್ತೇನೋ! ಅದರಲ್ಲಿ ಭಾರತೀಯ ಭಾಷೆಗಳಲ್ಲಿ ಕಡ್ಡಿಯಿಂದಲೇ ಬರೆಯಬಹುದಾಗಿತ್ತು; ಗೀಚಿದ ಅಕ್ಷರಗಳನ್ನು ಅದು ಗುರುತಿಸುತ್ತಿತ್ತು. ಟೊಮ್ಯಾಟೋ ಧಾರಣೆಯನ್ನು ಕನ್ನಡದಲ್ಲೇ ಘೋಷಿಸುತ್ತಿತ್ತು;ಅಪ್ಪಟ ಭಾರತೀಯವಾದ `ಇಂಡಿಯನ್ ಮಾರ್ಕ್ ಅಪ್ ಲಾಂಗ್ವೇಜ್ ‘ (IMLI-ಇಮ್ಲಿ) ನ್ನು ಅಳವಡಿಸಿಕೊಂಡಿತ್ತು. ಹದಿನೈದು ವರ್ಷಗಳ ಹಿಂದೆಯೇ ಸಿಂಪ್ಯೂಟರ್ ರೂಪಿಸಿದ ನಮ್ಮ ಗತಿ ಹೀಗಿದೆ! “ಆಪಲ್ನ ಟೈಟಾನಿಯಂ ಪವರ್ಬುಕ್, ಮೈಕ್ರೋಸಾಫ್ಟ್ನ ವಿಂಡೋಸ್ ಎಕ್ಸ್ಪಿಗಿಂತ ಮುಖ್ಯವಾದ ಸಂಶೋಧನೆ ಎಂದರೆ ಭಾರತೀಯ ವಿಜ್ಞಾನಿಗಳು ರೂಪಿಸಿದ ಸಿಂಪ್ಯೂಟರ್. ಇದು ತೃತೀಯ ಜಗತ್ತಿನಲ್ಲಿ ಕಂಪ್ಯೂಟರ್ ಕ್ರಾಂತಿಯನ್ನೇ ಮಾಡಲಿದೆ”…
"ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ"