Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
ಲೇಖನಗಳು

ಗೂಗಲ್+ : ಅಂತರಜಾಲದ +ಟಿವ್ ಚೇಂಜ್!

ಬೇಳೂರು ಸುದರ್ಶನBy ಬೇಳೂರು ಸುದರ್ಶನOctober 11, 2011Updated:May 19, 2025No Comments8 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email
ಬೆಂಗಳೂರಿನ ವಿದ್ಯಾನಿಯೊಬ್ಬಳು ತನ್ನ ಗೆಳೆಯನ ಫೇಸ್‌ಬುಕ್‌  ಕಂಡ ವಿದಾಯದ ಹೇಳಿಕೆಯನ್ನು ನೋಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲ ಸಮಾಜಪ್ರಿಯ ಮನಸ್ಸುಗಳನ್ನು ಕದಡಿದೆ. ಜಗತ್ತಿನಲ್ಲೆಡೆ ಪ್ರಸಿದ್ಧವಾದ ಸೋಶಿಯಲ್ ನೆಟ್ವರ್ಕ್ ನಾಡಿನ ಒಂದು ಜೀವಕ್ಕೇ ಎರವಾಯಿತಲ್ಲ! ಈ ಘಟನೆ ನಡೆದ ದಿನವೇ ಇರಬೇಕು… ಹುಡುಕಾಟದ ಜಾಲತಾಣವಾಗಿ ಇಡೀ ಜಗತ್ತನ್ನೆಲ್ಲ ಕುಣಿಸುತ್ತಿರುವ ಗೂಗಲ್ ಜಾಲತಾಣದ ಪುಟದಲ್ಲಿ ನಿಮ್ಮನ್ನು ಗುರುತಿಸುವ ಒಂದು ದೊಡ್ಡ ಬಾಣ ಕಾಣಿಸಿಕೊಂಡಿದೆ. ಇದೇನು ಕಾಕತಾಳೀಯ ಎಂದು ನಿಮಗನ್ನಿಸಬಹುದು…… ಅದೇ ದಿನವೇ ಫೇಸ್‌ಬುಕ್‌ ಕೂಡಾ ತನ್ನ ಸೇವೆಗಳನ್ನು ಸುಧಾರಿಸಿ ಪ್ರಕಟಣೆ ಹೊರಡಿಸಿದೆ.

ಅರೆ, ಅಂತರಜಾಲದ ಸಾಮಾಜಿಕ ಜಾಲತಾಣಗಳಿಗೆ ಒಂದು ಹೊಸ ದಿಕ್ಕು ದೊರೆತಿದೆಯೆ? ಅದೇನಾದರೂ ನಿಮ್ಮ ಬದುಕನ್ನು ಬದಲಿಸುತ್ತದೆಯೆ? – ಪ್ರಶ್ನೆ ಸಹಜವೇ. 

ನೀವೀಗ ಇಂಟರ್ನೆಟ್ ಸಂಪರ್ಕ ಹೊಂದಿದ್ದರೆ ಸುಮ್ಮನೆ ಗೂಗಲ್ ಪುಟಕ್ಕೆ ಬನ್ನಿ. ಇಷ್ಟು ದಿನ ಬಿಳಿಯಾಗಿ ಸಪಾಟಾಗಿದ್ದ ಈ ಟದಲ್ಲೀಗ ದೊಡ್ಡ ನೀಲಿ ಬಾಣವೊಂದು ನಿಮ್ಮ ನೋಟವನ್ನು ಎಡಮೂಲೆಗೆ ಒಯ್ಯುತ್ತದೆ. ಅಲ್ಲಿರುವುದು `+ಯು’ (`ಮತ್ತು ನೀವು’ ಎನ್ನಬಹುದೆ?) ಎಂಬ ಒಂದು ಪದ. ಅದನ್ನು ಕ್ಲಿಕ್ ಮಾಡಿ ಒಳಹೋದರೆ ನಿಮ್ಮ ದಿಕ್ಕು, ದೆಸೆ, ಚಿಂತನೆ, ಬರವಣಿಗೆ, ಗೆಳೆತನ, – ಎಲ್ಲವನ್ನೂ ಬದಲಿಸುವ ಹೊಸ ಲೋಕವೊಂದು ತೆರೆದುಕೊಳ್ಳುತ್ತದೆ.

ಅದೇ ಗೂಗಲ್+ ಎಂಬ ಹೊಸ ಅಂತರಜಾಲ ಸಾಮಾಜಿಕ ವೇದಿಕೆ. ಹದಿನಾರೇ ದಿನಗಳಲ್ಲಿ ಒಂದು ಕೋಟಿ ಜನ ಈ ದಿಕ್ಕಿನತ್ತ ಸಾಗಿದ್ದಾರೆ. ಇಂಥದ್ದೇ ಸಾಮಾಜಿಕ ಕೂಟವಾದ ಟ್ವಿಟರ್ಗೆ ಕೋಟಿ ಸದಸ್ಯರ ಗಡಿ ದಾಟಲು 780 ದಿನಗಳು ಬೇಕಾದವು; ಫೇಸ್‌ಬುಕ್‌ಗೆ? 852 ದಿನಗಳು.

`ಸೋಶಿಯಲ್ ನೆಟ್ವರ್ಕ್’ ಎಂಬ ಯುವಜನಾಂಗದ ಇಂಟರ್ನೆಟ್ ವ್ಯಸನದ ಆಕರ್ಷಣೆಗೆ ಗೂಗಲ್ ಎಂಬ ಹದಿಮೂರು ವರ್ಷ ವಯಸ್ಸಿನ ಜಾಲತಾಣವೂ ತುತ್ತಾಗಿರುವ ಈ ಕಥೆ ಈಗಿನ್ನೂ ಮೊದಲ ಅಧ್ಯಾಯವನ್ನಷ್ಟೇ ದಾಟಿದೆ. ಆದರೆ ಇದೊಂದೇ ಅಧ್ಯಾಯದಲ್ಲಿ ಏನೆಲ್ಲ ಚರ್ಚೆಗಳು ನಡೆದಿವೆ, ಎಷ್ಟೆಲ್ಲ ವೈವಿಧ್ಯದ ಸಂಗತಿಗಳು ಮೂಡಿವೆ, ಯಾವುದೆಲ್ಲ ಸಂಶೋಧನೆಗಳು ಆರಂಭವಾಗಿವೆ…… ನಮ್ಮ ಮಕ್ಕಳಿಗಾಗಿಯಾದರೂ ಇವನ್ನೆಲ್ಲ ತಿಳಿದುಕೊಳ್ಳಬೇಕಿದೆ.

ಅದೇ ಜಾಲತಾಣ; ಈಗ ಹರಟೆಯ ಕಟ್ಟೆ

`ಸೋಶಿಯಲ್ ನೆಟ್ವರ್ಕ್’ ಅರ್ಥಾತ್ ಸಾಮಾಜಿಕ ಜಾಲತಾಣ ಎಂದರೇನು? – ಈ ಪ್ರಶ್ನೆಗೆ ಮೊದಲು ಸರಳ ವಿವರಣೆ ಹುಡುಕದಿದ್ದರೆ ಗೂಗಲ್+ನ ಮಹತ್ವವೇ ನಮಗೆ ಗೊತ್ತಾಗುವುದಿಲ್ಲ. ವಿಶ್ವವ್ಯಾಪಿ ಜಾಲದಲ್ಲಿ ಮೊದಲು ಮಾಹಿತಿ ಜಾಲತಾಣಗಳಷ್ಟೆ ಇದ್ದವು ತಾನೆ? ಆಮೇಲೆ ಈಮೈಲ್ (ಮಿಂಚಂಚೆ) ನೀಡುವ ಜಾಲತಾಣಗಳು ಬಂದವು. ಅದಕ್ಕಿಂತ ಮುನ್ನ ಒಂದೇ ಜಾಲತಾಣದಲ್ಲಿ ಯಾವುದೇ ನೋದಾಯಿತ ಸದಸ್ಯರೂ ಯಾವುದಾದರೂ ವಿಷಯದ ಬಗ್ಗೆ ಚರ್ಚೆ ನಡೆಸಬಹುದಾದ ಗ್ರೂಪ್ (ಗುಂಪು)ಗಳೂ ಇದ್ದವು; ಈಗಲೂ ಇವೆ! ಅದಾದ ಮೇಲೆ ಬಂದಿದ್ದೇ ಬ್ಲಾಗುಗಳು ಎಂಬ ವೈಯಕ್ತಿಕ ಅಭಿವ್ಯಕ್ತಿಯ ಜಾಲತಾಣಗಳ ಕ್ರಾಂತಿ. ಇಂದು ಎಲ್ಲರೂ ಬ್ಲಾಗ್‌ಸ್ಪಾಟ್, ವರ್ಡ್‌ಪ್ರೆಸ್‌ ಎಂದು ಆಡಿಕೊಳ್ಳುತ್ತಿಲ್ಲವೆ…. ಅದೆಲ್ಲ ಬ್ಲಾಗುಗಳು.

ಬ್ಲಾಗುಗಳು ಅಂತರಜಾಲದ ಲೋಕದಲ್ಲಿ ಜನಪ್ರಿಯವಾಗುತ್ತಿದ್ದಂತೆ ಮೂಡಿದ್ದೇ ಸಾಮಾಜಿಕ ಜಾಲತಾಣಗಳು. ಇವೂ ಒಂದು ಲೆಕ್ಕದಲ್ಲಿ ಬ್ಲಾಗುಗಳೇ. ಪ್ರತೀ ವ್ಯಕ್ತಿಯೂ ಈ ತಾಣಗಳಲ್ಲಿ ನೋಂದಾವಣೆ ಮಾಡಿಕೊಂಡಾಗ ತನ್ನದೇ ಒಂದು ಟ ಪಡೆಯುತ್ತಾನೆ/ಳೆ. ತನ್ನಂತೆ ಪುಟ ಹೊಂದಿದ ಇತರರ ಜೊತೆಗೆ ಗೆಳೆತನಕ್ಕೆ ಕೈ ಚಾಚುತ್ತಾನೆ/ಳೆ. ಹೀಗೆ ಗೆಳೆಯರಾದವರೆಲ್ಲ ಕ್ಷಣಕ್ಷಣಕ್ಕೂ ಏನೆಲ್ಲ ಬರೆದುಕೊಂಡರು, ಚರ್ಚಿಸಿದರು, ಚಿತ್ರಗಳನ್ನು ಹಂಚಿಕೊಂಡರು, ಆಹ್ವಾನಗಳನ್ನು ಕೊಟ್ಟರು, ಅಭಿಪ್ರಾಯಗಳನ್ನು ಬರೆದರು – ಇವೆಲ್ಲವೂ ಅದೇ ಪಟದಲ್ಲಿ ಪ್ರಕಟವಾಗುತ್ತ ಹೋಗುತ್ತದೆ…. ಗೆಳೆಯರ ಜಗಳವೂ, ಸಮಾಜದ ಆಗುಹೋಗುಗಳ ವಾಗ್ವಾದವೂ, – ಎಲ್ಲವೂ ಇಲ್ಲಿ ಸುಮಾರಾಗಿ ಜಗಜ್ಜಾಹೀರು. ಕಳೆದ ಕೆಲವು ವರ್ಷಗಳಿಂದ ಯುವಸಮುದಾಯದ ಚಟವಾಗಿ ಪರಿಣಮಿಸಿದ ಫೇಸ್ಬುಕ್, ಆರ್ಕುಟ್‌ನಂಥ ಜಾಲತಾಣಗಳು ಬದುಕನ್ನು ಕೂಡಿಸಿವೆಯೋ, ಕಳೆದಿವೆಯೋ, – ಸಾಮಾಜಿಕ ಜಾಲತಾಣ ಎಂಬ ಹೆಸರನ್ನಂತೂ ಅಂಟಿಸಿಕೊಂಡಿವೆ.

ಹೀಗೆ ಅಂತರಜಾಲದ ಬಳಕೆದಾರರು ತಮ್ಮದೇ ಹರಟೆ ಕಟ್ಟೆ, ಜಗಲಿ, ನಡುಮನೆ, ಬಯಲು ರಂಗಮಂದಿರದಲ್ಲಿ ಒಟ್ಟೊಟ್ಟಿಗೆ ಅಭಿವ್ಯಕ್ತಿ ದಾಖಲಿಸುವ ಸಾಮಾಜಿಕ ಟಗಳನ್ನು ನೀಡುವ ಸೇವೆಯನ್ನೇ ಗೂಗಲ್+ ನೀಡಹೊರಟಿದೆ. ಆದರೆ ಈಗಿರುವ ಫೇಸ್ಬುಕ್, ಆರ್ಕುಟ್ನಂಥ ಜಾಲತಾಣಗಳಿಗೂ, ಗೂಗಲ್+ಗೂ ಹಲವಾರು ತಾತ್ವಿಕ ವಿಭಿನ್ನತೆಗಳಿವೆ. ಸಮಾಜದಲ್ಲಿ ಹೊಣೆಗಾರಿಕೆಯ ಸಂಟನೆ ಮಾಡಬೇಕೆನ್ನುವವರು ಗೂಗಲ್+ ಹೆಚ್ಚು ಒಳಿತು ಎನ್ನುವಷ್ಟರ ಮಟ್ಟಿಗೆ ಗೂಗಲ್+ನ ಸೇವೆಗಳು ರೂಗೊಂಡಿವೆ.

ಗೂಗಲ್+: ಸೇವೆಯ ಸರಣಿಯಲ್ಲಿ ಸದಾ ಮುಂದೆ

ಗೂಗಲ್+ ಸೇವೆಯ ವ್ಯಾಖ್ಯೆ ಸರಳವಾಗಿ ಹೀಗಿದೆ: ಗೂಗಲ್ ಜಾಲತಾಣದಲ್ಲಿ ಸದಸ್ಯರೆಲ್ಲರೂ ಇಲ್ಲಿ ಪರಸ್ಪರ ಸಮ್ಮತಿಯಿಂದ ವಿಚಾರ ವಿನಿಮಯ ಮಾಡಿಕೊಳ್ಳಬಹುದು. ಹೌದು! ಗೂಗಲ್+ ಸೇವೆ ಪಡೆಯಲು ನೀವು `ಗೂಗಲ್ನಲ್ಲೇ’ ನಿಮ್ಮದೊಂದು ಖಾತೆಯನ್ನು ನೋಂದಾಯಿಸಿಕೊಳ್ಳಬೇಕು. ನೀವು ಜಿಮೈಲ್, ಯುಟ್ಯೂಬ್, ಆರ್ಕುಟ್, – ಹೀಗೆ ಗೂಗಲ್ನ ಬೇರಾವುದೇ ಸೇವೆಯನ್ನು ಪಡೆಯಲು ಸದಸ್ಯರಾಗಿದ್ದರೆ, ಅದೇ ಹೆಸರು, ರಹಸ್ಯಪದವೇ ಇಲ್ಲೂ ಸಾಕು.

ಫೇಸ್ಬುಕ್ಗೂ, ಗೂಗಲ್+ಗೂ ಪ್ರಮುಖ ವ್ಯತ್ಯಾಸ ಗೊತ್ತಾಯಿತು ತಾನೆ? ಫೇಸ್ಬುಕ್ ಖಾತೆ ತೆರೆಯಲು ನೀವು ಯಾವುದೇ ಈ ಮೈಲ್ ಖಾತೆ ಬಳಸಬಹುದು. ಆದರೆ ಗೂಗಲ್+ಗೆ ನೀವು ಗೂಗಲ್ ಖಾತೆಯನ್ನೇ ಹೊಂದಿರಬೇಕು. ಇದು ಒಳ್ಳೆಯದೇ. ಯಾಕೆಂದರೆ ನಿಮಗೆ ಗೂಗಲ್+ ಸೇವೆಯ ಜೊತೆಗೆ ಜಗತ್ತಿನಲ್ಲೇ ಅತಿ ಸರಳ, ಬಹು ಅನುಕೂಲದ, ಏಳು ಗೈಗಾಬೈಟ್ಗಳ ಬೃಹತ್ ಗಾತ್ರದ ಜಿಮೈಲ್ ಖಾತೆ ಸಿಗುತ್ತದೆ! ಜೊತೆಗೇ ಪಿಕಾಸದಂತ ಫೋಟೋ ಆಲ್ಬಮ್ಗಳ ಖಾತೆ ನಿಮ್ಮದಾಗುತ್ತದೆ. ಯೂಟ್ಯೂಬ್ನಲ್ಲೂ ನೀವು ವಿಡಿಯೋಗಳನ್ನು ಏರಿಸಬಹುದು…

ಸರಿ, ಗೂಗಲ್+ ಖಾತೆ ತೆರೆದಿರಿ ಅಂದುಕೊಳ್ಳಿ. ಆಮೇಲೆ? ನೀವು ಹೊಸದಾಗಿ ನೋಂದಾವಣೆ ಮಾಡಿಕೊಂಡರೆ ಗೂಗಲ್ ಸಂಸ್ಥೆಯು ಇದುವರೆಗೆ ಗಣಕಯಂತ್ರಗಳ ಮೂಲಕ ಹುಡುಕಿಟ್ಟುಕೊಂಡ ಪ್ರಪಂಚದ ಪ್ರಖ್ಯಾತರ ಹೆಸರುಗಳನ್ನು ಶಿಫಾರಸು ಮಾಡುತ್ತದೆ. ನೀವು ಜಿಮೈಲಿನಲ್ಲಿ ಖಾತೆ ಹೊಂದಿದ್ದರೆ, ನಿಮ್ಮ ಸ್ನೇಹಿತರನ್ನೆಲ್ಲ ಪಟ್ಟಿ ಮಾಡಿ ಕೊಡುತ್ತದೆ. ಈ ವೃತ್ತಗಳು ಗೂಗಲ್+ನ ಅತ್ಯಂತ ಮಹತ್ವದ, ವಿಶಿಷ್ಟ ಸೇವೆ. ನಿಮ್ಮ ಸ್ನೇಹಿತರನ್ನು ಒಂದು ಅಥವಾ ಅದಕ್ಕಿಂತ ಹೆಚ್ಚು ವೃತ್ತಗಳಲ್ಲಿ ಸೇರಿಸುವ ಅವಕಾಶ ಇಲ್ಲಿದೆ. ಉದಾಹರಣೆಗೆ ನೀವು ಕವಿಯಾಗಿದ್ದರೆ, ನಿಮ್ಮ ಕವಿಮಿತ್ರರನ್ನೆಲ್ಲ, ಅಥವಾ ನಿಮ್ಮ ಅಭಿಮಾನಿಗಳನ್ನೆಲ್ಲ ಕಾವ್ಯದ ವೃತ್ತದಲ್ಲಿ ಸೇರಿಸಿ. ವಸ್ತುಶಃ ಈ ವ್ಯಕ್ತಿಗಳ ಅಂಚೆ ಗಾತ್ರದ ಚಿತ್ರಗಳನ್ನು ಮೌಸ್ ಮೂಲಕ ಎಳೆತಂದು ವೃತ್ತದೊಳಕ್ಕೆ ಬಿಡಬಹುದು! ನೆನಪಿಡಿ: ಈ ವೃತ್ತವನ್ನೂ, ಅಥವಾ ನಿಮಗೆ ಬೇಕಾದ ಇನ್ನಾವುದೇ ಹೆಸರಿನ ವೃತ್ತವನ್ನೂ ನೀವೇ ಹೊಸದಾಗಿ ರಚಿಸಬಹುದು.

ನೀವು ಹೀಗೆ ಗೆಳೆಯರನ್ನೆಲ್ಲ ಒಂದೊಂದೇ ವೃತ್ತದಲ್ಲಿ ಸೇರಿಸುತ್ತಿದ್ದಂತೆ, ಅತ್ತ ನಿಮ್ಮ ಸ್ನೇಹಿತರೂ ನಿಮ್ಮನ್ನು ಯಾವ್ಯಾವುದೋ ವೃತ್ತದಲ್ಲಿ ಸೇರಿಸುತ್ತಾ ಇರುತ್ತಾರೆ! ಜಗತ್ತಿನ ಯಾವ್ಯಾವುದೋ ಮೂಲೆಯಲ್ಲಿರುವ ಯಾವ್ಯಾವುದೋ ವೃತ್ತದಲ್ಲಿ ನಿಮ್ಮ ಹೆಸರು ಸೇರಿಕೊಳ್ಳಬಹುದು.

ಆಮೇಲೆ? ಇಲ್ಲಿಂದ ನಿಮ್ಮ ಗೂಗಲ್+ ಹೆಜ್ಜೆ ಆರಂಭ.

ಗೂಗಲ್+ನ ಪುಟಕ್ಕೇ `+ನೀವು’ ಎಂಬ ಹೆಸರಿಡಲಾಗಿದೆ. ಈ ಪುಟದಲ್ಲಿ ನೀವು ಇಷ್ಟ ಬಂದಿದ್ದನ್ನು ಬರೆದು ಹಂಚಿಕೊಳ್ಳಬಹುದು. ಒಂದು ನಿರ್ದಿಷ್ಟ ವೃತ್ತದ ಸದಸ್ಯರಿಗೆ, ಅಥವಾ ಒಂದಕ್ಕಿಂತ ಹೆಚ್ಚು ವೃತ್ತಗಳ ಸದಸ್ಯರಿಗೆ ಯಾವುದೋ ವಿಷಯವನ್ನು ಹೇಳಿಕೊಳ್ಳಲು ಅವಕಾಶ. ಅಥವಾ ಎಲ್ಲರಿಗೂ ಹೇಳಬೇಕೆಂದರೆ, ಪಬ್ಲಿಕ್ ಎಂದು ಸಾರ್ವಜನಿಕವಾಗಿ ಡಂಗುರ ಸಾರುವುದೂ ಸಾಧ್ಯ. ಕುಟುಂಬದ ಸದಸ್ಯರ ಹುಟ್ಟುಹಬ್ಬದ ಶುಭಾಶಯಗಳನ್ನು ಕುಟುಂಬದ ಸದಸ್ಯರು ಮಾತ್ರ ಇರುವ ವೃತ್ತದಲ್ಲಿ ಹೇಳಿ. ವರದಕ್ಷಿಣೆ ಸಾವಿನ ವಿರುದ್ಧದ ಆಕ್ರೋಶವನ್ನು ಸಾರ್ವಜನಿಕವಾಗಿ ಘೋಷಿಸಿ.

ನೀವು ಯಾವ ವಿಷಯವನ್ನು ಎಷ್ಟು ಹಿತಮಿತವಾಗಿ ಹೇಳಬೇಕು ಎಂದು ಮೊದಲೇ ನಿರ್ಧರಿಸುವ ಈ ಅವಕಾಶ ಗೂಗಲ್+ನ ನತೆ ಹೆಚ್ಚಿಸಿದೆ. ಈ ಅನುಕೂಲವನ್ನು ಕೊಡಲು ಈಗ ಫೇಸ್ಬುಕ್ ತಿಣುಕುತ್ತಿದೆ.

ಅದಿರಲಿ, ನೀವು ಆಸಕ್ತಿ ಹೊಂದಿರುವ ವಿಷಯಗಳನ್ನು ಸದಾ ಟ್ರಾಕ್ ಮಾಡುತ್ತ, ನಿಗಾವಹಿಸಿ ನೋಡಲು ಇಲ್ಲಿರುವ `ಸ್ಪಾರ್ಕ್’ ಅಥವಾ ಕಿಡಿಯ ಸೇವೆ ಬಳಸಿ. ಫುಕುಶಿಮಾ ಅಣುದುರಂತವೋ, ಭೌತಶಾಸ್ತ್ರದ ಸಂಗತಿಗಳೋ, ಮುಂಬಯಿ ಶೇರು ಮಾರುಕಟ್ಟೆಯ ವರ್ತಮಾನವೋ, ನೀವೇ ಆಯ್ದುಕೊಂಡ ವಿಷಯಗಳನ್ನು ಇಲ್ಲಿ ಪಟ್ಟಿ ಮಾಡಿ. ನೀವು ಈ ಪುಟಕ್ಕೆ ಬಂದಾಗಲೆಲ್ಲ ಈ ವಿಷಯಗಳ ಮೇಲಿನ ತಾಜಾ ವರ್ತಮಾನ ನಿಮಗೆ ದೊರಕುತ್ತದೆ. ಇದು ಈ ಹಿಂದೆಯೇ ಇದ್ದ `ಗೂಗಲ್ ಅಲರ್ಟ್’ ಸೇವೆಯ ಇನ್ನೊಂದು ರೂಪ.

ನಿಮ್ಮಲ್ಲಿ ವೆಬ್‌ಕ್ಯಾಮೆರಾ ಇದ್ದರೆ `ಹ್ಯಾಂಗ್ಔಟ್’ ಅನ್ನೋ ವಿಶಿಷ್ಟ ಸೇವೆಯನ್ನು ಬಳಸಿ, ನಿಮ್ಮ ಸ್ನೇಹಿತರೊಂದಿಗೆ, ಒಟ್ಟೊಟ್ಟಾಗಿ ಹರಟಬಹುದು. ಅಂದರೆ ಒಬ್ಬರಲ್ಲ, ಇಬ್ಬರಲ್ಲ, ಹಲವರ ಜೊತೆಗೆ ಏಕಕಾಲದಲ್ಲಿ ಚರ್ಚೆ ನಡೆಸಿ, ಕಚೇರಿಯ ವಿಡಿಯೋ ಮೀಟಿಂಗ್ ಮಾಡಿ!

ಮಾಡಲು ಬೇರೆ ಕೆಲಸ ಇಲ್ಲವೆಂದರೆ ನೀವು ಆಟವನ್ನೂ ಆಡಬಹುದೆಂದು ಗೂಗಲ್+ ಈಗಷ್ಟೆ ಕಂ್ಯಟರಿನಲ್ಲೇ ಆಡುವ ಆಟಗಳನ್ನು ಜೋಡಿಸಿದೆ. ನಿಮಗೆ ತುಂಬಾ ಬೋರ್ ಆಗಿದ್ದರೆ, ಅಥವಾ ಆಟವಾಡುವುದೇ ನಿಮ್ಮ ಜೀವನದ ಮಹತ್ವದ ಕೆಲಸವಾಗಿದ್ದರೆ, ಆಡೂ, ಆಟ ಆಡು ಎನ್ನಬಹುದಷ್ಟೆ!

ಇನ್ನು `ಗೂಗಲ್ ಚಾಟ್’ ಗೊತ್ತಿದ್ದವರು ಇಲ್ಲೂ ಅದೇ ಹರಟೆಯನ್ನು ಮುಂದುವರೆಸಿ. ಅಥವಾ ಹಡಲ್ ಅನ್ನೋ ಸೇವೆ ಬಳಸಿ ಮೂರ್ನಾಲ್ಕು ಜನ ಸೇರಿ ದೇಶದ ಸಮಸ್ಯೆಗಳಿಗೆ ಉತ್ತರ ಹುಡುಕಿ.

ಅದೆಲ್ಲ ಸರಿ, ಇಲ್ಲಿ ಫೇಸ್ಬುಕ್ಗಿಂತ ಇದು ಎಷ್ಟು ಅನುಕೂಲಕರ ಎಂದು ಫೇಸ್ಬುಕ್ ಪ್ರೇಮಿಗಳು ಕೇಳುತ್ತಾರೆ. ಅವರಿಗಾಗಿ ಇಷ್ಟು ಹೇಳಬಹುದು: ಯಾವಾಗಲೂ ಫೇಸ್ಬುಕ್ ತಾಣದಲ್ಲೇ ಕೂತು ಯಾರಿಗಾಗಿಯೋ ಕಾಯೋದಕ್ಕಿಂತ ಜಿಮೈಲಿನಲ್ಲಿ ಕಚೇರಿ ಕೆಲಸ ಮಾಡುತ್ತಲೋ, ಬೇರಾವುದೋ ಚಟುವಟಿಕೆಯಲ್ಲಿ ಮೈಮರೆಯುತ್ತಲೋ ಗೂಗಲ್+ನಲ್ಲಿ ಭಾಗವಹಿಸುವುದರಿಂದ ನಿಮ್ಮ ಉತ್ಪಾದಕತೆ ಹೆಚ್ಚುತ್ತದೆ. ಫೇಸ್ಬುಕ್ ಏನಿದ್ದರೂ ಈ ಮೈಲ್ ಸೇವೆಯನ್ನು ಕೊಟ್ಟಿಲ್ಲ. ಯೂಟ್ಯೂಬ್ನಂಥ ವಿಡಿಯೋ ಸೌಲಭ್ಯವೂ ಅದರಲ್ಲಿಲ್ಲ. ಒಂದೇ ವೇದಿಕೆಯಲ್ಲಿ ಎಲ್ಲ ಬಗೆಯ, ವೈವಿಧ್ಯಮಯ ಸೇವೆ ಪಡೆಯಲು ಗೂಗಲ್+ ಅತ್ಯುತ್ತಮ ತಾಣ.

ಎಲ್ಲಕ್ಕಿಂತ ಹೆಚ್ಚಾಗಿ ಕಂಡ ಕಂಡವರನ್ನು ನಾವು ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಫೇಸ್‌ಬುಕ್‌ನಲ್ಲಿದೆ. ಎಷ್ಟೋ ಜನಪ್ರಿಯ ವ್ಯಕ್ತಿಗಳು ಅಪರಿಚಿತರನ್ನು, ಅನಾಮಿಕ ವ್ಯಕ್ತಿಗಳನ್ನು ತಮ್ಮ ಫ್ಯಾನ್‌ಗಳೆಂದು ಸೇರಿಸಿಕೊಂಡಿದ್ದಾರೆ. ಗೂಗಲ್+ನಲ್ಲಿ ಬಹುತೇಕ ಹೀಗಾಗದು. ನಾವು ಯಾರ್ಯಾರನ್ನು ಹತ್ತಿರ ಸೇರಿಸಿಕೊಳ್ಳಬೇಕು ಎಂಬುದನ್ನು ಸಾಕಷ್ಟು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಆದರೆ ನಮ್ಮನ್ನು ಹಲವರು, ಅಥವಾ ಯಾರ್ಯಾರೋ ತಮ್ಮ ಗೂಗಲ್+ ವೃತ್ತಗಳಲ್ಲಿ ಸೇರಿಸಿಕೊಳ್ಳುತ್ತಾರೆ… ಅದನ್ನು ತಡೆಯುವುದು ಆಗದು. ಅಂಥವರ ಸಂದೇಶವನ್ನು ನೀವು ಯಾವಾಗಲೂ ನಿರ್ಲಕ್ಷಿಸಬಹುದು ಬಿಡಿ..

ಈಗಂತೂ ಗೂಗಲ್‌ನ ಜಿಮೈಲ್ ಖಾತೆ ಹೊಂದಲು ನೀವು ಮೊಬೈಲ್ ಸಂಖ್ಯೆಯನ್ನೂ ನೀಡಬೇಕಿದೆ.  ಆದ್ದರಿಂದ ಖೊಟ್ಟಿ ವ್ಯಕ್ತಿಗಳ ಹಾವಳಿ ಸಾಕಷ್ಟು ನಿಯಂತ್ರಣದಲ್ಲಿದೆ. ಖೊಟ್ಟಿ / ಬೇನಾಮಿ ಖಾತೆಗಳವರು ನಿಮ್ಮ ಸ್ನೇಹಿತರ ಪಟ್ಟಿಗೆ ಬರಲೇ ಹೆದರುವ ಸ್ಥಿತಿ ಇದೆ. ಫೇಸ್‌ಬುಕ್‌ನಲ್ಲಿ ಇದಕ್ಕೆಲ್ಲ ನಿಯಂತ್ರಣವಿಲ್ಲ.

ಗೂಗಲ್+ನ ಯಶಸ್ಸಿನ ಹಿನ್ನೆಲೆಯಲ್ಲಿ ವಿಫಲತೆಯ ಅಧ್ಯಾಯಗಳೂ ಇವೆ. ಈ ಹಿಂದೆ ವೇವ್ ಮತ್ತು ಬಜ್ ಎಂಬ ಸಾಮಾಜಿಕ / ಸಾರ್ವಜನಿಕ ಚಟುವಟಿಕೆಯ ಸಾಧನಗಳನ್ನು ಗೂಗಲ್ ಬಿಡುಗಡೆ ಮಾಡಿತ್ತು; ಅವೆರಡೂ ಯದ್ವಾತದ್ವಾ ಕಳಪೆ ಸೇವೆಯಿಂದಾಗಿ ಸೋತವು. ಆದರೆ ಗೂಗಲ್ನದೇ ಆದ ಯೂಟ್ಯೂಬ್ ಮತ್ತು ಆರ್ಕುಟ್ಗಳು ಈಗಲೂ ಜನಪ್ರಿಯ. ಆರ್ಕುಟ್ ಅಂತೂ ಫೇಸ್‌ಬುಕ್‌ನ ಅಪರಾವತಾರ; ಸಾಮಾಜಿಕ ಅಪಾಯಗಳಿಗೂ ದಾರಿಮಾಡಿಕೊಟ್ಟ ಸೋಶಿಯಲ್ ನೆಟ್ವರ್ಕ್.

ಈಗ ಫೇಸ್ಬುಕ್ನಂತೆ ಗೂಗಲ್ನಲ್ಲೂ ಕ್ರೀಡೆಗಳು ಇಣುಕಿವೆ. ಮುಂದಿನ ದಿನಗಳಲ್ಲಿ ಈ ಕ್ರೀಡೆಗಳೇ ಪ್ರಬಲವಾದ ಆಕರ್ಷಣೆ ಆಗಬಹುದು  ಎಂದು ಟೆಕ್ಕಿಗಳು ಊಹಿಸಿದ್ದಾರೆ. ಇದಕ್ಕೆ ಉತ್ತರವಾಗಿ ಫೇಸ್ಬುಕ್ ತನ್ನ ಜಾಲತಾಣದಲ್ಲಿ ಸಂಗೀತ, ಸಿನೆಮಾ – ಎಲ್ಲ ಮನರಂಜನೆಯನ್ನೂ ಒದಗಿಸುವುದಾಗಿ ಈ ಲೇಖನ ಬರೆಯುವ ಹೊತ್ತಿಗೆ ಘೋಷಿಸಿದೆ.

ಮುಂದಿನ ದಿನಗಳನ್ನು ಊಹಿಸುವುದು ತುಂಬ ಕಷ್ಟವೇನಲ್ಲ; ದೂರವಾಣಿ ಸಾಧನಗಳಾದ ಮೊಬೈಲ್ ಯಂತ್ರಗಳು ಕಿರುಕಂಪ್ಯೂಟರುಗಳಾಗುತ್ತವೆ; ಕಂಪ್ಯೂಟರುಗಳು ಚಿಕ್ಕದಾಗುತ್ತ ಪಿಸಿ ಟ್ಯಾಬ್ಲೆಟ್ಗಳಾಗಿವೆ ಸಂಗೀತ, ಸಿನೆಮಾ ಎಲ್ಲವೂ ಈ ಸಾಧನಗಳಲ್ಲಿ ಅದಾಗಲೇ ಸಿಗುತ್ತಿವೆ. ಬೇಕಾಗಿರೋದು ಈ ಬದುಕಿನ ಖುಷಿಯನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಒಂದು ವೇದಿಕೆ. `ಮೀಡಿಯಾ ಕಾನ್ವರ್ಜೆನ್ಸ್’  ಅರ್ಥಾತ್ ಮಾಧ್ಯಮ ಸಂಯೋಗದ ಹೊಸ ಯುಗವಿದು. ಬಹುಮಾಧ್ಯಮಗಳು, ಬಹುಸೇವೆಗಳು ಒಂದೆಡೆ ದೊರಕಬೇಕೆಂದು ಬಯಸುವ ತರಾತುರಿಯ ಬದುಕಿದು. ಗೂಗಲ್+ ಇದಕ್ಕೆಂದೇ ಹೇಳಿ ಮಾಡಿದಂತಿರುವ ಸಾಧನ! ಆಂಡ್ರಾಯ್ಡ್ ಆಪರೇಟಿಂಗ್ ತಂತ್ರಾಂಶದ ಮೂಲಕ ಮೊಬೈಲ್ ಮತ್ತು ಪಿ ಟ್ಯಾಬ್ಲೆಟ್ಗಳನ್ನು ಆಕ್ರಮಿಸಿ, ಮೊಟೋರೋಲಾ ಸಂಸ್ಥೆಯ ಮೊಬೈಲ್ ತಯಾರಿಕಾ ಘಟಕವನ್ನೇ ಖರೀದಿಸಿರುವ ಗೂಗಲ್ ಇಂಟರ್ನೆಟ್ ರಂಗದ ದೈತ್ಯ ಪಾತ್ರಧಾರಿಯಾಗುತ್ತ ಮುನ್ನಡೆದಿದೆ.

ಒಂದೇ ಜಾಲತಾಣದಲ್ಲಿ ಇವೆಲ್ಲ ಸೇವೆಗಳ ಜೊತೆಗೇ ಸುದ್ದಿ, ಈಮೈಲ್, ಚಾಟ್, ಕಡತ ವರ್ಗಾವಣೆ – ಎಲ್ಲವೂ ಸದ್ಯಕ್ಕಂತೂ ಹೇರಳವಾಗಿರುವ ಗೂಗಲ್+ ಈಗಿನ ಮಟ್ಟಿಗೆ ಹೆಚ್ಚು ಅನುಕೂಲದ, ಹೆಚ್ಚು ಸುರಕ್ಷತೆಯ ಸೋಶಿಯಲ್ ನೆಟ್ವರ್ಕ್. ನಾನ್-ಇಂಟ್ರೂಸಿವ್ (ನಮ್ಮ ವ್ಯವಹಾರಕ್ಕೆ ನೆರವು ನೀಡಿಯೂ ನಮ್ಮನ್ನು ಜಾಹೀರಾತುಗಳಿಂದ ಕಾಡದ, ಪದೇ ಪದೇ ವಿವಿಧ ಪ್ರಕಟಣೆಗಳಿಂದ ತಲೆ ತಿನ್ನದ ವರ್ತನೆ) ಗುಣವಿರುವ ಗೂಗಲ್+ ನನ್ನ ಅಲ್ಪ ಅನುಭವದ ಮಟ್ಟಿಗೆ ಒಳ್ಳೆಯ ಆಯ್ಕೆ. ತಾಜಾ ಸುದ್ದಿಗಳನ್ನು ಬೀರುವ ಗೂಗಲ್ ನ್ಯೂಸ್, ಭೂಮಿಯ ಅಂಗುಲಂಗುಲವನ್ನೂ ನಕಾಶೆಯಾಗಿಸಿದ ಗೂಗಲ್ ಮ್ಯಾಪ್ಸ್, ಹಣಕಾಸಿನ ಸಲಹೆ ನೀಡುವ ಗೂಗಲ್ ನಾನ್ಸ್, – ವಿವಿಧ ಸೇವೆಗಳ ಸಾಲು ಸಾಲು ಅನುಕೂಲಗಳನ್ನೆಲ್ಲ ಗೂಗಲ್+ನಲ್ಲೂ ಪಡೆಯಬಹುದು. ಇದಕ್ಕಿಂತ ಹೆಚ್ಚಿನ ಬಿಟ್ಟಿ ಅನುಕೂಲಗಳನ್ನು ನಿರೀಕ್ಷಿಸುವುದು ತ್ಪ. ಕೇವಲ ಸರ್ಚ್ ಇಂಜಿನ್ ಸೇವೆಯಿಂದಲೇ ಕಳೆದ ವರ್ಷ 29 ಬಿಲಿಯ ಡಾಲರ್ ವರಮಾನ ಗಳಿಸಿದ ಗೂಗಲ್ ಸಂಸ್ಥೆಗೆ ಈಗ ಉಚಿತ ಸೇವೆ ನೀಡುವುದು ಮಾರುಕಟ್ಟೆ ಸೂತ್ರವಾಗಿದೆ.

(ಗಮನಿಸಿ: ಇಂಟರ್ನೆಟ್ನಲ್ಲಿ ಎಲ್ಲವೂ ನಿಮ್ಮ ಆಯ್ಕೆ ಮತ್ತು ಬಳಕೆಯನ್ನು ಅವಲಂಬಿಸಿದೆ. ಸಮಾಜದ ಒಳ್ಳೆಯ ಸಂಗತಿಗಳನ್ನಷ್ಟೇ ನೀವು ಗಮನಿಸಿ ಅಂತೆಯೇ ಇಂಟರ್ನೆಟ್ ಬಳಸುತ್ತೀರಿ ಎಂಬ ವಿಶ್ವಾಸದಿಂದ ಇಲ್ಲಿ ಸಲಹೆಗಳನ್ನು ನೀಡಲಾಗಿದೆ. ಅಂತಿಮವಾಗಿ ಒಳಿತು – ಕೆಡುಕಿಗೆ ನೀವೇ ಜವಾಬ್ದಾರರು!)

————————-

ಗೂಗಲ್+ ಸೌಲಭ್ಯದ ಸದ್ಬಳಕೆ ಹೇಗೆ?

ಬಹುಶಃ ಫೇಸ್ಬುಕ್ಗಿಂತ ಭಿನ್ನವಾಗಿ ಚಟುವಟಿಕೆ ನಡೆಸಲು ಗೂಗಲ್+ ಅತ್ಯುತ್ತಮ ಅವಕಾಶ ಒದಗಿಸಿದೆ. ಇಲ್ಲಿ ಎಲ್ಲವೂ ಹೆಚ್ಚು ಪರಿಚಿತರ ನಡುವೆಯೇ ನಡೆಯುವ ಸಂವಹನ. ಆದರೆ ಸದ್ಬಳಕೆ – ದುರ್ಬಳಕೆ ಎಲ್ಲವೂ ಬಳಕೆದಾರರ ಮನಸ್ಥಿತಿಯನ್ನು ಅವಲಂಬಿಸಿದೆ. ಉದಾಹರಣೆಗೆ ಗೂಗಲ್+ನಲ್ಲಿ ನೀವು ಯಾವುದೋ ವಿಡಿಯೋವನ್ನು ಹರಿಬಿಡಬಹುದು. ಅದರ ಅಗತ್ಯವೇ ಹಲವರಿಗೆ ಇರುವುದಿಲ್ಲ. ಸುಮ್ಮನೆ ಕಾಲಹರಣ ಮಾಡುವ ಇಂಥ ಹಲವು ಚಟುವಟಿಕೆಗಳಿಂದ ಗಂಭೀರ ಬಳಕೆದಾರ ಸ್ನೇಹಿತರ ಸಂಗವನ್ನು ಕಡಿದುಕೊಳ್ಳುವುದೇ ಹೆಚ್ಚು. ಇಲ್ಲಿರೋ ಕೆಲವು ಕಿವಿಮಾತುಗಳನ್ನು ಗಮನಿಸಿ:

  • ನಿಮ್ಮ ಆಸಕ್ತಿ, ವೃತ್ತಿ, ಕುಟುಂಬ, ಸ್ನೇಹಿತವರ್ಗಕ್ಕೆ ಸಂಬಂಧಿಸಿದಂತೆ ಬಗೆಬಗೆಯ ವೃತ್ತಗಳನ್ನು ಮಾಡಿಕೊಳ್ಳಿ.  ಇವುಗಳಿಗೆ ನಿಮಗೆ ಪರಿಚಯ ಇರುವ ವ್ಯಕ್ತಿಗಳನ್ನಷ್ಟೇ ಸೇರಿಸಿಕೊಳ್ಳಿ. ಅಪರಿಚಿತ ವ್ಯಕ್ತಿಗಳು ನಿಮ್ಮನ್ನು ಆಹ್ವಾನಿಸಬಹುದು. ಆದರೆ ಅವರ ಪರಿಚಯವನ್ನು ಮಾಡಿಕೊಳ್ಳಿ. ಅದಕ್ಕಾಗೇ ಇರುವ ಆ ವ್ಯಕ್ತಿಯ `ಎಬೌಟ್’ ಅಧ್ಯಾಯವನ್ನು ಓದಿ. ಅದರಲ್ಲಿ ಏನೂ ಬರೆದಿರದಿದ್ದರೆ ಸ್ವಲ್ಪ ಕಾಯಿರಿ. ಅಥವಾ ಆ ವ್ಯಕ್ತಿಗೆ ಪರಿಚಯ ಮಾಡಿಕೊಳ್ಳಲು ತಿಳಿಸಿ.
  • ಸುಮ್ಮನೇ ಎಲ್ಲಿಂದಲೋ ಬಂದ ಈ ಮೈಲನ್ನು, ಯಾವುದೋ ಕ್ಷಣಿಕ ಮಜಾ ಕೊಡುವ ವಿಡಿಯೋವನ್ನೋ ಹಂಚಿಕೊಳ್ಳುವುದನ್ನು (ಶೇರ್) ಮಾಡಬೇಡಿ. ಬದಲಿಗೆ ನಿಮ್ಮ ಆ ದಿನದ ಅನಿಸಿಕೆಯನ್ನೇ ಬರೆಯಿರಿ. ಈಗಂತೂ ಯುನಿಕೋಡ್ ಕನ್ನಡದಲ್ಲಿ ಅಚ್ಚುಕಟ್ಟಾಗಿ ನಿಮ್ಮ ಅನಿಸಿಕೆಗಳನ್ನು ಬರೆಯಬಹುದು. ಗೊತ್ತಿರದ ಇಂಗ್ಲೀಷಿನಲ್ಲಿ ಬರೆಯವುದಕ್ಕಿಂತ ಕನ್ನಡದಲ್ಲೇ ವ್ಯಹರಿಸುವುದು ಸೂಕ್ತ.
  • ಯಾವುದೇ ವಿಷಯಗಳನ್ನು ಹಂಚಿಕೊಳ್ಳಬೇಕಾದರೂ ವಿನಯದಿಂದ ವರ್ತಿಸಿ; ಎಲ್ಲೂ ಒರಟು ಪದಗಳ ಬಳಕೆ ಬೇಡ. ನಿಮಗೆ ಇಷ್ಟವಾಗದ ಮಾಹಿತಿಗಳು ಬಂದರೆ ಜಗಳ ಆಡಬೇಕಿಲ್ಲ. ಒಂದೆರಡು ಪೋಸ್ಟ್‌ಗಳು ಬೇಡ ಎಂದಾದರೆ `ಮ್ಯೂಟ್ ದಿಸ್ ಪೋಸ್ಟ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ಅಥವಾ `ಬ್ಲಾಕ್ ದಿಸ್ ಪರ್ಸನ್’ ಎಂದೂ ಆರಿಸಿಕೊಂಡರೆ ಮುಂದೆ ಆ ವ್ಯಕ್ತಿಯಿಂದ ಯಾವ ಸಂದೇಶವೂ ನಿಮ್ಮ ಟಕ್ಕೆ ಬರುವುದಿಲ್ಲ!

————————-

ಹಾಗಾದರೆ ಸೋಶಿಯಲ್ ನೆಟ್‌ವರ್ಕ್‌ಗಳು ಒಳ್ಳೆಯವೆ?

  • ಮಕ್ಕಳು ಯಾವಾಗಲೂ ಫೇಸ್ಬುಕ್ ಆರ್ಕುಟ್ ಎಂದುಕೊಂಡಿದ್ದರೆ ಓದುವುದ್ಯಾವಾಗ ಎಂಬ ಪ್ರಶ್ನೆ ಪಾಲಕರದ್ದು. ನಿಜ. ಯಾವುದೇ ಅಭ್ಯಾಸವಾದರೂ ಅತಿಯಾದರೆ ಚಟವಾಗುತ್ತದೆ. ಇಲ್ಲೂ ಹಾಗೇ ಆಗಿರೋದು ವಾಸ್ತವ. ಆದರೆ ಪಾಲಕರು ಕೆಲವು ಸೂತ್ರಗಳನ್ನು ಪಾಲಿಸೋದ್ರಿಂದ ಇವನ್ನೆಲ್ಲ ನಿಯಂತ್ರಿಸಬಹುದು.
  • ಮಕ್ಕಳಿಗೆ ಯಾವುದಾದರೂ ಭೌತಿಕ ಚಟುವಟಿಕೆಯಲ್ಲಿ (ಸಂಗೀತ, ಕ್ರೀಡೆ, ಓದು, ಸಂಶೋಧನೆ, ಸಾಹಸ ಇತ್ಯಾದಿ) ಆಸಕ್ತಿ ಬರುವಂತೆ ಮೊದಲು ನಿರಂತರ ಯತ್ನಿಸಿ. ಆಗ ಇಂಟರ್ನೆಟ್ ಅತಿಬಳಕೆಯನ್ನು ತಡೆಯಬಹುದು.
  • ನೀವೂ ಕಂಪ್ಯೂಟರ್ ಕಲಿತು ಬಳಸಿ. ಇದರಿಂದ ನಿಮಗೆ ಮಕ್ಕಳ ಮೇಲೆ ಇರುವ ಅನುಮಾನಗಳು ಕಡಿಮೆಯಾಗುತ್ತವೆ; ಮಕ್ಕಳು ಏನು ಮಾಡುತ್ತಿದ್ದಾರೆ ಎಂದೂ ಗೊತ್ತಾಗುತ್ತದೆ.
  • ನಿಮ್ಮ ಮನೆಯ ಕಂಪ್ಯೂಟರನ್ನು ಆದಷ್ಟೂ ಮನೆಮಂದಿಯೆಲ್ಲ ಕಾಣುವ ಸ್ಥಳದಲ್ಲಿ ಇಡಿ. ಇದರಿಂದ ಅರ್ಧಕ್ಕರ್ಧ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕಂಪ್ಯೂಟರನ್ನು ಗುಪ್ತವಾಗಿಟ್ಟಷ್ಟೂ ಸಮಸ್ಯೆಗಳು ಹೆಚ್ಚು.

————————-

(ಕರ್ಮವೀರ ವಾರಪತ್ರಿಕೆಯಲ್ಲಿ ಇತ್ತೀಚೆಗೆ – ಅಕ್ಟೋಬರ್‌ ೨೦೧೧ – ಪ್ರಕಟಿತ ಲೇಖನ)

Share. Facebook Twitter Pinterest LinkedIn Tumblr Email
Previous Article‘ಇಜ್ಞಾನ’ ಸಂಚಿಕೆ ಓದಿ
Next Article ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.