Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಕಲಿ ಯುಗ»Ayahuasca: Your future was known much ealrier!
ಕಲಿ ಯುಗ

Ayahuasca: Your future was known much ealrier!

ಬೇಳೂರು ಸುದರ್ಶನBy ಬೇಳೂರು ಸುದರ್ಶನJuly 26, 2008Updated:May 19, 2025No Comments3 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

ಅಯಾಹುವಾಸ್ಕಾ: ನಿಮ್ಮ ಭವಿಷ್ಯ ಎಂದೋ ಗೊತ್ತಿತ್ತು! 

ಈ ಅಂಕಣದಲ್ಲಿ ಕೆಲವು ತಿಂಗಳುಗಳ ಹಿಂದೆ ಒಂದು ವಿಷಯವನ್ನು ಪ್ರಸ್ತಾಪಿಸಿದ್ದೆ: ಗ್ರಹಾಮ್ ಹ್ಯಾಂಕಾಕ್ ಎಂಬ ಪತ್ರಕರ್ತ ಅಯಾಹುವಾಸ್ಕ ಎಂಬ ಮಾದಕ ಸಸ್ಯದ ರಸವನ್ನು ಕುಡಿದು ಕೆಲವು ಪ್ರಾಗೈತಿಹಾಸಿಕ ವಿಷಯಗಳ ಸಂಶೋಧನೆ ನಡೆಸಿದ್ದ ಎಂದು. ಸಾವಿರಾರು ವರ್ಷಗಳ ಹಿಂದೆ ವಿಶ್ವದಾದ್ಯಂತದ ಗುಹೆಗಳಲ್ಲಿ  ಒಂದೇ ಬಗೆಯ ಚಿತ್ರಗಳನ್ನು ನಮ್ಮ ಆದಿಮಾನವರು ಬರೆದಿದ್ದರಲ್ಲಿ ಏನೋ ಸಾಮ್ಯವಿದೆ ಎಂಬ ಹ್ಯಾಂಕಾಕ್‌ನ ಹುಡುಕಾಟ ಅವನ `ಸೂಪರ್‌ನ್ಯಾಚುರಲ್ಸ್' ಪುಸ್ತಕದಲ್ಲಿ ವಿವರವಾಗಿ ದಾಖಲಾಗಿದೆ.

ಈ ಪುಸ್ತಕದ ಗುಂಗಿನಲ್ಲೇ ಮತ್ತಷ್ಟು ಸಂಶೋಧನೆ (ಅಂದರೆ ಇಂಟರ್‌ನೆಟ್ ಹುಡುಕಾಟ) ನಡೆಸಿದಾಗ ಇನ್ನಷ್ಟು ಮಾಹಿತಿಗಳು ದೊರಕಿದವು. ಬಹುಶಃ ನಮ್ಮ ಬದಲಾಗುತ್ತಿರುವ ಬದುಕಿನ ಮಗ್ಗುಲುಗಳನ್ನು ಈ ಮಾಹಿತಿಗಳು ಬಿಚ್ಚಿಡುತ್ತವೆ.

ಅಯಾಹುವಾಸ್ಕಾ ಸಸ್ಯದ ರಸವನ್ನು ಕುಡಿದು ಒಂದು ಬಗೆಯ ಪ್ರಜ್ಞೆಯಲ್ಲಿದ್ದಾಗಲೇ ಇನ್ನೊಂದು  ಜಗತ್ತಿನ, ಚಿತ್ರವಿಚಿತ್ರ ಜೀವಿಗಳ ದೃಶ್ಯಗಳನ್ನು ಕಣ್ಣಾರೆ ಅನುಭವಿಸುವ ಬಗ್ಗೆ ಇನ್ನೂ ಹಲವು ಪತ್ರಕರ್ತರು ಗ್ರಹಾಮ್ ಹ್ಯಾಂಕಾಕ್‌ನಿಗಿಂತ ಮುಂಚೆಯೇ ಸ್ವಾನುಭವಕ್ಕೆ ಒಳಗಾಗಿ ಡಾಕ್ಯುಮೆಂಟರಿಗಳನ್ನು ನಿರ್ಮಿಸಿದ್ದಾರೆ. ಅಯಾಹುವಾಸ್ಕಾದ ಬಗ್ಗೆಯೇ ಹಲವರು ಸಂಶೋಧನೆಗಳನ್ನು ಕೈಗೊಂಡು ಪುಸ್ತಕಗಳನ್ನು ಬರೆದಿದ್ದಾರೆ.

ಹಿಂದಿನ ಅಂಕಣ ಓದದವರಿಗೆ ಪುಟ್ಟ ಮಾಹಿತಿ: ಆಯಾಹುವಾಸ್ಕಾ  ಎನ್ನುವುದು ಒಂದು ಸಸ್ಯದ ಹೆಸರು. ಈ ಸಸ್ಯದ ರಸವನ್ನು ಕುಡಿದರೆ ನಿಮಗೆ ಕಾಣುವ ದೃಶ್ಯಗಳನ್ನು ನೀವು ಅಲ್ಲಗಳೆಯಲಾಗುವುದಿಲ್ಲ. ವಿಚಿತ್ರ ಎಂದರೆ ಹತ್ತಾರು ಸಾವಿರ ವರ್ಷಗಳಿಂದ ಈ ರಸವನ್ನು ಕುಡಿಯುತ್ತ ಬಂದ ಎಲ್ಲರಿಗೂ ಒಂದೇ ಬಗೆಯ ಚಿತ್ರಗಳು ಕಾಣಿಸುತ್ತವೆ. ಅಂದರೆ ಗೊತ್ತಾಯಿತಲ್ಲ, ಮಾನವನ ನಾಗರಿಕತೆಯ ಬೆಳವಣಿಗೆಗಳೆಲ್ಲ ಮನುಷ್ಯನ ಬುದ್ಧಿ ಬಎ ಳೆದ ಹಾಗೆ ನಡೆದಂಥವು ಎಂಬ ಮಾತನ್ನು ಈ ಅನುಭವಗಳು ಪ್ರಶ್ನಿಸುತ್ತವೆ. ಈ ಜ&a
mp;#32
23;ತ್ತಿನಲ್ಲಿ ಎಲ್ಲರಿಗೂ ಎಲ್ಲಾ ಕಾಲದಲ್ಲೂ ಕಾಣಿಸುವ ಸತ್ಯವು ಒಂದೇ ತೆರನಾಗಿರುತ್ತದೆ ಎಂಬುದಕ್ಕೆ ಅಯಾಹುವಾಸ್ಕಾ ಸಾಕ್ಷಿಗಳನ್ನು ಒದಗಿಸುತ್ತದೆ.

ಅಯಾಹುವಾಸ್ಕಾದಲ್ಲಿ ಇರುವ ಪ್ರಮುಖ ರಾಸಾಯನಿಕದ ಹೆಸರು : ಡೈಮೀಥೈಲ್‌ಟ್ರೈಪ್ಟಾಮೈನ್ (ಡಿಎಂಟಿ). ಆಯಾಹುವಾಸ್ಕಾವನ್ನು ಕಾಪಿ (ಕಾಫಿ ಅಲ್ಲ, ಬ್ಯಾನಿಸ್ಟಿರಿಯೋಪ್ಸಿಸ್ ಕಾಪಿ ಎಂಬ ಸಸ್ಯ) ಗಿಡದ ಜೊತೆಗೆ ಕುದಿಸಿ, ಕೆಲವು ವಿಶಿಷ್ಟ ಆಚರಣೆಗಳೊಂದಿಗೆ ಸೇವಿಸುತ್ತಾರೆ, ಪೆರು ಮತ್ತು ಈಕ್ವೆಡಾರ್‌ನ ಶಮಾನ್‌ಗಳು ಎಂದು ಕರೆಯುವ ಧಾರ್ಮಿಕ ಮುಂದಾಳುಗಳು. ಅವರೇನು, ಈ ಪಂಥವನ್ನು ಅನುಸರಿಸುವ ಎಲ್ಲ ಕುಟುಂಬಗಳ ಎಲ್ಲ ಸದಸ್ಯರೂ ಈ ದ್ರವವನ್ನು ಅತ್ಯಂತ ಭಕ್ತಿಯಿಂದ ಸೇವಿಸಿ ಮನುಕುಲದ ಅನಾದಿಕಾಲದ ದೃಶ್ಯವೈಭವವನ್ನು ಕಾಣುತ್ತಾರೆ. ಅವರ ಪ್ರಕಾರ ಅದುವೇ ಜಗತ್ತಿನ ಭೂತ, ವರ್ತಮಾನ ಮತ್ತು ಭವಿಷ್ಯ.  ಅಯಾಹುವಾಸ್ಕಾವನ್ನು ಸೇವಿಸಿದವರು ಕುಟುಂಬಗಳ ನಡುವಣ ಜಗಳಗಳನ್ನು ಪರಿಹರಿಸುತ್ತಾರೆ; ಭವಿಷ್ಯವನ್ನು ಕಾಣುತ್ತಾರೆ; ಶತ್ರುಗಳ ಯೋಜನೆಯನ್ನು ಮುಂಚಿತವಾಗಿಯೇ ಅರಿಯುತ್ತಾರೆ. ಮಾಟವನ್ನು ತೆಗೆಯುತ್ತಾರೆ.

ಆದರೆ ಈ ಅನುಭವವೇ ಇಲ್ಲದ ಕೆಲವು ಮನುಷ್ಯರು ಸರ್ಕಾರ ರಚಿಸಿ ಅದರ ಮದದಲ್ಲಿಯೇ ಇರುವುದು ನಮಗೆ ಗೊತ್ತು! ಅವರು ಆಯಾಹುವಾಸ್ಕಾ ಎನ್ನುವುದು ಒಂದು ಮಾದಕ ಸಸ್ಯ, ಅದರ ರಸಸೇವನೆ ಮಾದಕದ್ರವ್ಯ ಸೇವನೆಗೆ ಸಮ ಎಂದು ಕಾನೂನು ಮಾಡಿದ್ದಾರೆ. ಎಲ್ಲ ದೇಶಗಳಲ್ಲೂ ಈ ದ್ರವ ನಿಷೇಧಿತವಾಗಿದೆ. ಕೆಲವು ದೇಶಗಳಲ್ಲಿ ಈ ಬಗ್ಗೆ ಹೋರಾಟ ನಡೆದು ನಿರ್ಬಂಧ ರದ್ದಾಗಿದೆ.

ರಿಕ್ ಸ್ಟ್ರಾಸ್‌ಮನ್ ಎಂಬಾತ : ಡಿ ಎಂ ಟಿ : ದಿ ಸ್ಪಿರಿಟ್ ಮಾಲಿಕ್ಯೂಲ್ ಎಂಬ ಪುಸ್ತಕವನ್ನು ಬರೆದು ಅದರಲ್ಲಿ ಈ ದ್ರವದ ಬಗ್ಗೆ ತಾನು ನಡೆಸಿದ ಪ್ರಯೋಗಗಳನ್ನು ವಿವರಿಸಿದ್ದಾನೆ. ಟೆರೆನ್ಸ್ ಮೆಕೆನ್ನಾ ಎಂಬಾತ `ದಿ ಫುಡ್  ಆಫ್ ಗಾಡ್ಸ್' ಎಂಬ ಪುಸ್ತಕವನ್ನು ಬರೆದು ಅದರಲ್ಲಿ ಜ್ಞಾನದ ಮುಖ್ಯ ವೃಕ್ಷದ ಸಂಶೋಧನೆ ನಡೆಸಿದ್ದಾನೆ. ಟಾಡ್ ಮ್ಯಾಕ್‌ಆರ್ಮಿಕ್ ಎಂಬಾತ `ಹೌ ಟು ಗ್ರೋ ಮೆಡಿಸಿನಲ್ ಮಾರಿಜು&#
3240
;ಾ' ಎಂಬ  ಮಾರ್ಗದರ್ಶಿ ಸೂತ್ರಗಳ ಪುಸ್ತಕವನ್ನೇ ಬರೆದಿದ್ದಾನೆ. ಕೆಲವು ಅಪರೂಪದ ಅನುಭವ ಕೊಡುವ ವಿಶ್ವದ ವಿವಿಧ ಸಸ್ಯಗಳ ಬಗ್ಗೆ ಈತ ಕೊಟ್ಟ ಮಾಹಿತಿ ಅದ್ಭುತ ಎನ್ನಿಸುವಷ್ಟು ವೈವಿಧ್ಯಮಯವಾಗಿದೆ. ಸಾಲ್ವಿಯಾ ಡಿವಿನೋರಮ್ ಎಂಬ ಸಸ್ಯದ ಬಗ್ಗೆ ಡಿ ಎಂ ಟರ್ನರ್ ಎಂಬಾತ ಪುಟ್ಟ ಪುಸ್ತಕವನ್ನು ಬರೆದಿದ್ದಾನೆ. ಮನರಂಜನೆಗೆ ಮತ್ತು ವೈದ್ಯಕೀಯ ನೆರವಿಗಾಗಿ ಮಾರಿಜುನಾವನ್ನು ಹೇಗೆ ಬೆಳೆಯಬೇಕು ಎಂದು ಗ್ರೆಗ್ ಗ್ರೀನ್ ಎಂಬಾತ `ದಿ ಕ್ಯಾನಬೀಸ್ ಗ್ರೋ ಬೈಬಲ್' ಎಂಬ ೪೪೯ ಪುಸ್ತಕವನ್ನು ಬರೆದಿದ್ದಾನೆ. ಆಯಾಹುವಾಸ್ಕಾವನ್ನು ಬಾಲ್ಯದಿಂದಲೂ ಸೇವಿಸುತ್ತ ಬಂದಿರುವ ಪಾಬ್ಲೋ ಅಮರಿಂಗೋನ ದೃಶ್ಯಕಲ್ಪನೆಗಳ ಚಿತ್ರಗಳಿರುವ "ಅಯಾಹುವಾಸ್ಕಾ ವಿಜನ್' ಪುಸ್ತಕವೂ ಇಲ್ಲಿ ಗಮನಾರ್ಹ. ಯಾಕೆಂದರೆ ತಾನು ಕಂಡ ದೃಶ್ಯರೂಪಕ್ಕೆ ತಂದಿರುವ ಪಾಬ್ಲೋ ಅಮರಿಂಗೋ ಒಂದು ಬಗೆಯಲ್ಲಿ ಈ ಸಂಸ್ಕೃತಿಯ ವಕ್ತಾರ.

ಅದಿರಲಿ,  ಆಯಾಹುವಾಸ್ಕಾ ಬಳಸುವ ಅಮೆಝಾನ್ ಪ್ರದೇಶದಲ್ಲೇ ತೈಲ ನಿಕ್ಷೇಪಗಳು ಪತ್ತೆಯಾಗಿವೆ. ಈಗ ಅಲ್ಲಿ `ನಾಗರಿಕತೆ' ಮತ್ತು `ಸಂಸ್ಕೃತಿ'ಗಳ ನಡುವೆ ಸಮರ ಶುರುವಾಗಿದೆ.  ಅಯಾಹುವಾಸ್ಕಾ ಬಳಸುವವರ ಪ್ರಕಾರ ತೈಲ ಗಣಿಗಳು ಮುಂದೆ ಜಗತ್ತಿಗೇ ಮುಳುವಾಗಲಿವೆ.

ಒಂದು ಗಿಡದ ಬಗ್ಗೆ ಏನೆಲ್ಲ ಸಂಶೋಧನೆ ನಡೆದಿದೆ, ಎಷ್ಟೆಲ್ಲ ಚರ್ಚೆ ನಡೆದಿದೆ…… ಎಂಥ ಪರಿಣಾಮಗಳು ಉಂಟಾಗುತ್ತಿವೆ…….

ಗಿಡಮರಗಳ ಬಗ್ಗೆ ನಮಗಿರುವ ಪ್ರೀತಿ ಕಡಿಮೆಯಾಗುತ್ತ ಹೋದರೆ ಅಯಾಹುವಾಸ್ಕಾ ಕೂಡಾ ನಮ್ಮ ಕೈ ಬಿಡುತ್ತದೆ.  ಆಮೇಲೆ ಭವಿಷ್ಯವನ್ನು ಹೇಳಲು ಶಮಾನ್‌ಗಳೂ ಇರುವುದಿಲ್ಲ.

ನಮಗಂತೂ ಏನೂ ಗೊತ್ತಿರುವುದಿಲ್ಲ.

ಅಯಾಹುವಾಸ್ಕಾ ಗಿಡದ ಬಗ್ಗೆ  ಹೆಚ್ಚು ತಿಳಿದುಕೊಳ್ಳಲು  ಈ ಜಾಲತಾಣವನ್ನು ಸಂಪರ್ಕಿಸಿ:

http://www.ayahuasca.com/

Share. Facebook Twitter Pinterest LinkedIn Tumblr Email
Previous ArticleNew dimensions of the media
Next Article Internet: The more u search, the more u get
ಬೇಳೂರು ಸುದರ್ಶನ
  • Website

Related Posts

Try these essential Desktop tools!

April 20, 2017

ಬ್ಯಾಲಾಳು ಮತ್ತು ಬಿಳಲು

December 1, 2008

ನಾರುಟೋ ಉಝಿಮಾಕಿ, ದತ್ತೆಬಯೋ!

November 24, 2008

Comments are closed.

ಕಲಿ ಯುಗ
  • Try these essential Desktop tools!
  • ಬ್ಯಾಲಾಳು ಮತ್ತು ಬಿಳಲು
  • ನಾರುಟೋ ಉಝಿಮಾಕಿ, ದತ್ತೆಬಯೋ!
  • ಮೀನಿನ ಹೆಜ್ಜೆಯಲ್ಲಿ ಪಾದರಸದ ಮುದ್ರೆ
  • ಗದಗಿನ ಪವನದ ಸದ್ಬಳಕೆಗೆ ಎಚ್ ಕೆ ಪಾಟೀಲರ ಕನಸು
  • ವಿಶ್ವನಾಥನ್ ಆನಂದ್ ನೆನಪಿಸಿದ್ದು ನಡಹಳ್ಳಿ ಅನಂತಜ್ಜನನ್ನು!
  • ಕ್ಯಾಸನೂರು ಕಾಡಿನಲ್ಲಿ ಮಲಗಿರುವ ಕೂಸಿಗೆ
  • ತದಡಿ: ಸರ್ಕಾರ, ಜನ, ನಾಯಕರು ಮಾಡಬೇಕಾದ್ದೇನು? ಇಲ್ಲಿದೆ ಕಾರ್ಯಸೂಚಿ
  • ತದಡಿಗೆ ಬರುತ್ತಿದ್ದಾರೆ: ವಸುಂಧರೆಯ ಒಡಲಿಗೇ ಬಹುಬಾಂಬ್ ಇಡುವವರು!
  • ವರ್ತಮಾನದ ಹೊಸ ವಾರ್ತೆಗಳು
  • ರಿಸೆಶನ್ ಬಂದಿದೆ, ಎಚ್ಚರವಿರಲಿ!
  • ಒಲಿಂಪಿಕ್ಸ್ ಮೋಜಿಗೆ ಮುನ್ನ ಒಂದು ಕ್ಷಣ
  • ಮನುಕುಲದ ಏಳಿಗೆಯಾಗಲಿ, ಕದಿಯಲು ಬಿಡಿ!
  • ನಾವಿನ್ನೂ ವಿಕಿರಣ ಕಸಕ್ಕೆ ಸುರಿಹೊಂಡ ಹುಡುಕಿಲ್ಲ!
  • ಕದಿಯೋಣು ಬಾರಾ, ಕಲಿಯೋಣು ಬಾ !
  • ಪುಟವಿನ್ಯಾಸಕ್ಕೆ ಹಲವು ತಂತ್ರಾಂಶಗಳು; ಇಮ್ಯಾಜಿನೇಶನ್ ಮಾತ್ರ ನಿಮ್ಮದೇ!
  • ರಸಗೊಬ್ಬರ: ಮಾಹಿತಿಯಲ್ಲೂ ಕೊರತೆ!
  • ಅಂತರಜಾಲ ಬಳಕೆ: ಇರಲಿ ಕೊಂಚ ಎಚ್ಚರಿಕೆ
  • ಮುಂಡುರುಕು ಮಕ್ಕಳ ಲೆಕ್ಕ ಮತ್ತು ನಮ್ಮ ಬ್ರಹ್ಮಾಂಡದ ಗಣಿತ
  • ತುಂಡು ಕ್ರಿಕೆಟಿಗೆ ಬೇಕೇ ಬೇಕು ತುಂಡುಲಂಗದ ಚೀರು ಚಿಂಗಾರಿಯರು
  • River Linking Project: A foolish Dream
  • Vote Karnataka, Vote!!
  • Internet: The more u search, the more u get
  • New dimensions of the media
  • This journalist disrespects even the Supreme Court
  • Blogging and hanging
  • Your PC and the virus that you let in
  • Sunday Supplements and development of Literature
  • Oscar awards and dreams of realistic cinema
  • Development and “million dollars” questions
  • Our rotten education system
  • Will there be a new era in Kannada Publication?
  • Three MUST READ Kannada Books
  • A slow Tsunami called civilization
  • Sankranti and the light
  • Arcosanti : Will the utopia survive?
  • Virgin comics : Sexually explicit content for children !
  • Virgin comics : Sexually explicit content for children !
  • Tubular sunlights
  • Kelsa Bidi Khushi Padi
  • Privacy? Forget it !
  • Solutions to my fans’ queries
  • Our Universities : What to do ?
  • Kelsa Beka Kelsa
  • Tips on computer usage
  • EVDO : Internet in your pocket
  • EVDO : Internet in your pocket
  • ಉಂಬರ್ಟೋ ಇಕೋ : ಐತಿಹಾಸಿಕ ಥ್ರಿಲ್ಲರ್‌ಗಳ ಹೊಸ ಕಥೆಗಾರ
  • Tips for new age journalists
  • C Ashwath Sir, forgive me for my audacity
  • William H Prescott: A beacon of knowledge
  • William Prescott : A beacon of light
  • Small step for Free Information
  • Youth : A lovely music
  • Ramesh and Maneesha
  • The story of Arthur Koestler
  • Sex Education: Teach life first
  • The story behind Narasimha Avtar
  • Amar Bose: Digital Kahani
  • Oh! Kawaguchi Ekai!!
  • The policy of my column
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.