Close Menu
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
Facebook X (Twitter) Instagram
Facebook X (Twitter) Instagram
ಬೇಳೂರುಸುದರ್ಶನ
Subscribe
  • ಮುಖಪುಟ
  • ಲೇಖನಗಳು
  • ಸಣ್ಣ ಕಥೆಗಳು
  • ವಿಮರ್ಶೆ
  • ಕವನಗಳು
  • ಸುದ್ದಿ
  • ನನ್ನ ಪಯಣ
    • ನನ್ನ ಕಿರು ಪರಿಚಯ
ಬೇಳೂರುಸುದರ್ಶನ
You are at:Home»ಲೇಖನಗಳು»ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!
ಲೇಖನಗಳು

ರಾಖಿಗಢಿ: ಸಿಂಧೂ ಕಣಿವೆಯ ಬೃಹತ್ ತಾಣ – ಇನ್ನಾದರೂ ನಿಜ ಇತಿಹಾಸ ಬರೆಯೋಣ!

ಬೇಳೂರು ಸುದರ್ಶನBy ಬೇಳೂರು ಸುದರ್ಶನAugust 7, 2016Updated:May 19, 2025No Comments7 Mins Read
Facebook Twitter Pinterest LinkedIn Tumblr Email
Share
Facebook Twitter LinkedIn Pinterest Email

‘ಮೊಹೆಂಜೋದಾರೋ’ ಸಿನೆಮಾ ಇನ್ನೇನು ಬಿಡುಗಡೆಯಾಗಲಿದೆ.  ಹೃತಿಕ್ ರೋಶನ್, ಪೂಜಾ ಹೆಗ್ಡೆಯವರದೇ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾದಲ್ಲಿ ಇರುವುದು ಹರಪ್ಪಾ ನಾಗರಿಕತೆಯ ದೃಶ್ಯಗಳ, ಆ ಕಾಲದ ಕಲ್ಪಿತ ಬದುಕಿನ ನಡುವೆ ಹೆಣೆದ ಪ್ರೇಮಕಥೆ. ಮೊಹೆಂಜೋದಾರೋ ನಗರಕ್ಕಿಂತ ಪ್ರಾಚೀನವಾದ ನಗರವೇನಾದರೂ ಇದ್ದಿದ್ದರೆ?

ಇದೆ: ರಾಖಿಗಢಿ.

ಹರ್‍ಯಾನಾ ರಾಜ್ಯದ ಹಿಸಾರ್ ಜಿಲ್ಲೆಯಲ್ಲಿರುವ ರಾಖಿಗಢಿಯ ಅವಶೇಷಗಳಲ್ಲಿ ಸಮಾಧಿಯಲ್ಲಿ ಇಬ್ಬರು ಪ್ರೌಢ ವಯಸ್ಕ ಪುರುಷರ, ಒಬ್ಬ ಮಹಿಳೆಯ ಮತ್ತು ಒಂದು ಮಗುವಿನ ಅಸ್ಥಿಪಂಜರಗಳು ಸಿಕ್ಕಿವೆ. ಅದೇನು ಪ್ರೇಮಕಥೆಯೋ, ದುರಂತವೋ ನಮಗೆ ಗೊತ್ತಿಲ್ಲ. ಆದರೆ ಹರಪ್ಪಾದ ಮನುಷ್ಯರ ಮೂಳೆಗಳು ಸುಸ್ಥಿತಿಯಲ್ಲಿ ಸಿಕ್ಕಿವೆ. ಕಥೆ ಹೆಣೆಯಬೇಕಿಲ್ಲ; ಈ ದೇಹಗಳ ಸುತ್ತಮುತ್ತ ಅನಾವರಣಗೊಂಡ ದೈತ್ಯ ನಗರವೇ ನೂರಾರು ದೃಶ್ಯಗಳನ್ನು ಕಟ್ಟಿಕೊಡುತ್ತದೆ. ೨೫ ಲಕ್ಷ ಚದರ ಕಿಲೋಮೀಟರ್‌ಗಳ ವಿಶಾಲ ಪ್ರದೇಶದಲ್ಲಿ ಹಬ್ಬಿದ್ದ ಹರಪ್ಪಾ ನಾಗರಿಕತೆಯ ಮೊದಲ ಅಧ್ಯಾಯ ಇಲ್ಲೇ ಆರಂಭವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಿದ್ದಾರೆ. ಮೆಸೊಪೊಟಾಮಿಯ ಮತ್ತು ಈಜಿಪ್ಟ್ ನಾಗರಿಕತೆಗಳಿಗಿಂತ ನಾಲ್ಕು ಪಟ್ಟು ವಿಶಾಲ!

rakhigarhi web image 1

ರಾಖಿಗಢಿಯು ತನ್ನ ವ್ಯಾಪ್ತಿಯಲ್ಲಿ ಹರಪ್ಪಾ – ಮೊಹೆಂಜೊದಾರೋ (ಹ-ಮೊ) ನಗರಗಳನ್ನು ಮೀರಿಸಿದ ವಿಶಾಲ ನಗರಿ; ದೃಶದ್ವತೀ ನದಿಬದಿಯ ಫಲವತ್ತಾದ ನೆಲೆ; ಅಚ್ಚುಕಟ್ಟಾದ ರಸ್ತೆಗಳು-ಚರಂಡಿಗಳು, ಸಮುದಾಯ ಬಳಕೆಯ ಧಾನ್ಯದ ಕಣಜಗಳು, ಶಿಲಾಸಾಧನಗಳು, ಯಜ್ಞಕುಂಡಗಳು, ತಾಮ್ರದ ವಸ್ತುಗಳು, ಗೌರವಯುತ ಸಮಾಧಿಗಳು, ಮಣಿ ತಯಾರಿಕಾ ಘಟಕಗಳು, ಸುಟ್ಟ ಇಟ್ಟಿಗೆಯ ಗಟ್ಟಿ ಗೋಡೆಗಳು, ಸಿಂಧೂ ಮುದ್ರಿಕೆಗಳಲ್ಲಿ ಕಂಡುಬರುವ ಚಿತ್ರಗಳು-ಸಂಕೇತಾಕ್ಷರಗಳು, ಟೆರ್ರಾಕೋಟಾದಿಂದ ಮಾಡಿದ ನೂರಾರು ಆಟಿಕೆಗಳು, ಗೊಂಬೆಗಳು, ಬಗೆಬಗೆಯ ವಸ್ತುಗಳು- ಸಿಂಧೂ ನಾಗರಿಕತೆಯ ಎಲ್ಲ ಹೆಜ್ಜೆಗುರುತುಗಳನ್ನೂ ಬಿಚ್ಚಿಡುವ ಬೀಡು. ಇದು ಎಂಟು ಸಾವಿರ ವರ್ಷಗಳ ಹಿಂದಿನ ದೃಶ್ಯ. ಭಾರತದ ಗಡಿಯೊಳಗೇ ಇರುವ ಧೋಲಾವೀರ, ಕಲಿಬಂಗನ್ ಮತ್ತು ಲೋಥಲ್ ತಾಣಗಳ ಮಾಲೆಯಲ್ಲಿ ರಾಖಿಗಢಿ ದೊಡ್ಡ ಪದಕಹಾರ!

ಈಗ? ಕಣ್ಣು ಹಾಯಿಸಿದಷ್ಟೂ ಬೆರಣಿ ಗುಡ್ಡೆಗಳು, ಗೋಧಿಯ ಹೊಲಗಳು, ಕಚ್ಚಾ ರಸ್ತೆಯೂ ಇಲ್ಲದ ಹಳ್ಳಿಗಳು; ಎಲ್ಲೆಂದರಲ್ಲಿ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಡ್ಡಾಡುವ ಎಮ್ಮೆಗಳು; ಪುರಾತತ್ವ ಇಲಾಖೆಯ ಬೋರ್ಡನ್ನೇ ಜೋಕಾಲಿ ಮಾಡಿ ಜೀಕುವ ಮಕ್ಕಳು. ತಾಣದ ಸುತ್ತಮುತ್ತ ಕಬ್ಬಿಣದ ಬೇಲಿಯೇನೋ ಕಾಣಿಸುತ್ತದೆ; ಅದೂ ಒಂದು ಕುರುಹಾಗುವ ಹಂತದಲ್ಲಿದೆ.

rakhigarhi web image 3

`ಸಿಂಧೂ ಕಣಿವೆಯ ಇತಿಹಾಸ ೫೫೦೦ ವರ್ಷಗಳದ್ದಲ್ಲ, ೮೦೦೦ ವರ್ಷಗಳದ್ದು’ ಎಂಬ ಸುದ್ದಿ  ಕೆಲವು ದಿನಗಳ ಹಿಂದೆ (೨೫ ಮೇ ೨೦೧೬) ಮಾಧ್ಯಮಗಳಲ್ಲಿ ಬಿತ್ತರವಾದಾಗ ರಾಖಿಗಢಿಗೆ ಮತ್ತೊಮ್ಮೆ ಪ್ರಸಿದ್ಧಿ ಬಂದಿದ್ದೇನೋ ನಿಜ. ೫೦ ವರ್ಷಗಳ ಹಿಂದೆಯೇ ಪತ್ತೆಯಾಗಿದ್ದರೂ ಬೆಳಕು ಕಾಣದ ಭವ್ಯ ಇತಿಹಾಸಕ್ಕೆ `ನೇಚರ್’ ಪತ್ರಿಕೆಯಲ್ಲಿ ಜಾಗ ದೊರೆತಾಗಲೇ ಗೌರವ! ನಮ್ಮ ಪಠ್ಯಪುಸ್ತಕಗಳಲ್ಲಿ `ರಾಖಿಗಢಿ’ ಉಲ್ಲೇಖವಾಗಲು ಇನ್ನೆಷ್ಟು ದಿನ ಕಾಯಬೇಕೋ? ಇತಿಹಾಸ ತಿರುಚಬಾರದು; ಆದರೆ ನಿಜ ಇತಿಹಾಸ ಬರೆಯಬಾರದೆ? `ಹರಪ್ಪಾ ನಾಗರಿಕತೆ’ ಶೀರ್ಷಿಕೆ ಬದಲಿಸಿ `ಸಿಂಧೂ- ಸರಸ್ವತೀ-ಘಗ್ಗರ್-ಹಕ್ರಾ-ದೃಶದ್ವತೀ ನಾಗರಿಕತೆ’ ಎಂಬ ಸತ್ಯವನ್ನು ನಮ್ಮ ಮಕ್ಕಳಿಗೆ ತಿಳಿಸಬಾರದೆ? ಕೊನೇಪಕ್ಷ `ಸಿಂಧೂ-ಸರಸ್ವತೀ ನಾಗರಿಕತೆ’ ಎಂದು ಘೋಷಿಸಬಾರದೆ?

ಹರಪ್ಪಾ ನಗರದ ವ್ಯಾಪ್ತಿ ೩೭೦ ಎಕರೆಗಳು. ಮೊಹೆಂಜೋದಾರೋ ನಗರದ ವ್ಯಾಪ್ತಿ ೬೨೦ ಎಕರೆಗಳು. ಏಳು ಬೃಹತ್ ದಿಬ್ಬಗಳಲ್ಲಿ ಹಬ್ಬಿರುವ ರಾಖಿಗಢಿಯ ವ್ಯಾಪ್ತಿ ೧೨೦೦ ಎಕರೆಗಳು! ಆದಿ ಹರಪ್ಪಾ, ಪ್ರೌಢ ಹರಪ್ಪಾ ನಾಗರಿಕತೆಯ ಒಟ್ಟು ಆರು ಹಂತದ ನಾಗರಿಕತೆಗಳ ಎಲ್ಲ ಕುರುಹುಗಳನ್ನೂ ರಾಖಿಗಢಿಯಲ್ಲಿ ಈಗಲೂ ಖಚಿತವಾಗಿ ನೋಡಬಹುದು. ಈಗಿರುವ ಹಳ್ಳಿಯ ನಡುವೆಯೇ ಈ ದಿಬ್ಬವಿದೆ. ಜಗತ್ತಿನ ಅತಿ ಪ್ರಾಚೀನ ಇತಿಹಾಸದ ಪದರಗಳು ಇಲ್ಲಿ ಬೀದಿ ಬದಿಯ ಗುಡ್ಡವಾಗಿವೆ.

`ಪ್ರಪಂಚದಲ್ಲೇ ಅತಿಪ್ರಾಚೀನ ನಗರವಾದ ರಾಖಿಗಢಿಯನ್ನು ಸಂಪೂರ್ಣವಾಗಿ ರಕ್ಷಿಸಬೇಕು. ಈ ಊರನ್ನೇ ಸ್ಥಳಾಂತರ ಮಾಡಿದರೂ ಪರವಾಗಿಲ್ಲ ಎಂದು ರಾಖಿಗಢಿಯಲ್ಲೇ ಹುಟ್ಟಿ ಬೆಳೆದ ವಜೀರ್ ಚಂದ್ ಸರೋಯೀ ಖಚಿತವಾಗಿ ಬೇಡಿಕೆ ಇಡುತ್ತಾರೆ. ಅವರೊಂದಿಗೆ ರಾಖಿಗಢಿಯ ಐತಿಹಾಸಿಕ ನಗರದ ಮೇಲಿನ ನಡಿಗೆಗೆ ಅವರ ಮಗ ಖ್ಯಾಲ್ ರಾಮ್ ಸರೋಯೀ ದನಿಗೂಡಿಸುತ್ತಾರೆ. ಇಬ್ಬರೂ ರಾಖಿಗಢಿಯ ಅಭಿವೃದ್ಧಿಗಾಗಿ ಸಾಕಷ್ಟು ಯತ್ನಿಸಿದ್ದಾರೆ; ಊರಿಗೆ ಬರುವ ಎಲ್ಲ ಪತ್ರಕರ್ತರು, ಸಂಶೋಧಕರಿಗೆ ನೆರವಾಗಿದ್ದಾರೆ;  ಅವಶೇಷಗಳ ಛಾಯಾಚಿತ್ರಗಳನ್ನು ಒದಗಿಸುತ್ತಾರೆ. ರಾಖಿಗಢಿಯ ಅನಿಭಿಷಿಕ್ತ ಮಾರ್ಗದರ್ಶಿಗಳು!

rakhigarhi web image 2

rakhigarhi web image 9

ಹರ್‍ಯಾನಾ ರಾಜ್ಯದ ಜಿಂದ್ ಜಿಲ್ಲೆಯಲ್ಲಿರುವ ರಾಖಿಗಢಿಯ ಉತ್ಖನನ ಆರಂಭವಾಗಿದ್ದು ೧೯೬೩-೬೪ರಲ್ಲಿ. ೧೯೬೯ರಲ್ಲಿ ಸೂರಜ್ ಭಾನು ಎಂಬ ಸಂಶೋಧಕರು ಈ ಪ್ರದೇಶವು ಅತಿಮುಖ್ಯ ಪ್ರೌಢ ಹರಪ್ಪಾ ಕ್ಷೇತ್ರ ಎಂದು ದಾಖಲಿಸಿದ್ದರು. ೧೯೯೭-೨೦೦೧ರ ಅವಧಿಯಲ್ಲಿ ನಡೆದ ಉತ್ಖನನದಲ್ಲಿ ಇದೊಂದು ಬೃಹತ್ ತಾಣ ಎಂಬ ಅರಿವು ಮೂಡಿತು.  ಈಗ ರಾಖಿಗಢಿ ಸಂಶೋಧನೆಯನ್ನು ರೋಚಕ ಹಂತಕ್ಕೆ ತಂದಿರುವವರು ಪುಣೆಯ ಡೆಕ್ಕನ್ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ವಸಂತ್ ಶಿವರಾಮ್ ಶಿಂಧೆ. ಇವರೊಂದಿಗೆ ಹರ್‍ಯಾನಾ ಪ್ರಾಚ್ಯವಸ್ತು ಇಲಾಖೆಯೂ ಕೈಜೋಡಿಸಿದೆ. ವಾಸ್ತವದಲ್ಲಿ ರಾಖಿಗಢಿ ತಾಣದಲ್ಲಿ ರಾಖಿ ಶಾಪುರ್ ಮತ್ತು ರಾಖಿ ಖಾಸ್ ಎಂಬ ಎರಡು ಹಳ್ಳಿಗಳಿವೆ. ಗುರುತಿಸಲು ಅನುಕೂಲವಾಗುವಂತೆ ಎರಡೂ ಹಳ್ಳಿಗಳನ್ನು ಜೋಡಿಸಿ ರಾಖಿಗಢಿ ಎಂದೇ ಕರೆಯಲಾಗಿದೆ.

ಕಂಚಿನ ಯುಗದ ಹರಪ್ಪಾ ನಾಗರಿಕತೆಯ ಪತನವನ್ನು ಆಮ್ಲಜನಕದ ಕಣಗಳ ಕಾಲನಿರ್ಣಯದ ಮೂಲಕ ವಿಶ್ಲೇಷಿಸಿದ್ದೇ `ನೇಚರ್ ಪತ್ರಿಕೆಯ ಸಂಶೋಧನಾ ಲೇಖನದ ಮುಖ್ಯ ಅಂಶ. ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೂಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ|| ಅನಿಂದ್ಯ ಸರ್ಕಾರ್, ಆರತಿ ದೇಶಪಾಂಡೆ ಮುಖರ್ಜಿ, ಎಂ ಕೆ ಬೇರಾ, ಬಿ ದಾಸ್, ನವೀನ್ ಜುಯಲ್, ಪಿ ಮೋರ್ತೆಕಾ, ಆರ್ ಡಿ ದೇಶಪಾಂಡೆ, ವಿ ಎಸ್ ಶಿಂಧೆ ಮತ್ತು ಎಲ್ ಎಸ್ ರಾವ್ – ಇವರೆಲ್ಲ ಸೇರಿ ಬರೆದ ಈ ಪ್ರೌಢ ಪ್ರಬಂಧದಲ್ಲಿ ಹರಪ್ಪಾ ನಾಗರಿಕತೆಯ ಪತನಕ್ಕೆ ಬೆಳೆಪದ್ಧತಿಯನ್ನು ಬದಲಿಸಿದ್ದೇ ಕಾರಣವೇ ಹೊರತು, ಹವಾಗುಣ ವೈಪರೀತ್ಯವಲ್ಲ ಎಂದು ಪ್ರತಿಪಾದಿಸಲಾಗಿದೆ. ಭಿರ್ರಾನಾದಲ್ಲಿ ದೊರೆತ ಹಲ್ಲು ಮತ್ತು ಮೂಳೆಗಳಲ್ಲಿ ಇರುವ ಆಮ್ಲಜನಕದ ಕಣಗಳನ್ನು ಸಂಶೋಧನೆಗೆ ಒಳಪಡಿಸಿದಾಗ, ಈ ಜನರ ಕಾಲಘಟ್ಟವು ಇಂದಿಗಿಂತ ೮೦೦೦ ವರ್ಷ ಹಳತು ಎಂಬ ಮಾಹಿತಿ ಸಿಕ್ಕಿತು!

`ಇಂದಿಗಿಂತ ೯೦೦೦-೭೦೦೦ ವರ್ಷಗಳ ಹಿಂದೆ ಮುಂಗಾರು ತುಂಬಾ ಬಲವಾಗಿತ್ತು. ಘಗ್ಗರ್-ಹಕ್ರಾ ನದಿ ಸದಾ ತುಂಬಿ ಹರಿಯುತ್ತಿದ್ದವು. ಆದ್ದರಿಂದಲೇ ಹರಪ್ಪಾ ಪೂರ್ವದ ಜನರು ಈ ಪ್ರದೇಶದಲ್ಲಿ ವಾಸಿಸತೊಡಗಿದರು. ಈ ಎಲ್ಲಾ ಪ್ರದೇಶಗಳೂ ಈಗ ಕಣ್ಮರೆಯಾಗಿರುವ `ಸರಸ್ವತೀ’ ನದೀ ತೀರದಲ್ಲೇ ಇದ್ದವು ಎಂಬುದು ಗಮನಾರ್ಹ (ಘಗ್ಗರ್ – ಹಕ್ರಾ ನದಿಯೇ ಸರಸ್ವತೀ ಎಂಬ ಪುರಾವೆಗಳು ಸಿಗತೊಡಗಿವೆ). ನಮಗಂತೂ ೯೦೦೦ ಸಾವಿರ ವರ್ಷಗಳ ಹರಪ್ಪಾ ಪೂರ್ವ ಕಾಲಘಟ್ಟದಿಂದ ಹಿಡಿದು ೮೦೦೦ ವರ್ಷಗಳವರೆಗಿನ ಪ್ರೌಢ ಹರಪ್ಪಾವರೆಗೆ ಬಗೆಬಗೆಯ ಕುರುಹುಗಳು ದೊರೆತಿವೆ’ ಎಂದು ಅನಿಂದ್ಯ ಸರ್ಕಾರ್ ಹೇಳುತ್ತಾರೆ. ಮೊದಲು ಬಾರ್ಲಿ, ಗೋಧಿ ಬೆಳೆಯುತ್ತಿದ್ದ ಇವರೆಲ್ಲ ಆಮೇಲೆ ಭತ್ತ ಬೆಳೆಯತೊಡಗಿದರು. ಪ್ರೌಢ ಹರಪ್ಪಾ ಕಾಲದಲ್ಲಿ ಸಮುದಾಯ ಧಾನ್ಯದ ಕಣಜಗಳಿದ್ದವು; ಆದರೆ ಹವಾಗುಣ ಕುಸಿದಂತೆ, ಮುಂಗಾರು ದುರ್ಬಲವಾದಂತೆ ಈ ವಸತಿಗಳಲ್ಲಿ ಮನೆ ಆಧಾರಿತ ಧಾನ್ಯದ ಕಣಜಗಳ ಬಳಕೆ ಆರಂಭವಾಯಿತು’ ಎಂದು ಈ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

rakhigarhi web image 6

rakhigarhi web image 7

ರಾಖಿಗಡಿಯಲ್ಲಿ ಸಿಕ್ಕಿದ ವಸ್ತುಗಳನ್ನೇ ನೋಡಿದರೆ ಆಗಿನ ಬದುಕು ಎಷ್ಟು ವೈವಿಧ್ಯಮಯವಾಗಿತ್ತು ಎಂಬ ಅರಿವಾಗುತ್ತದೆ (ಛಾಯಾಚಿತ್ರಗಳ ಸಂಪುಟ ನೋಡಿ). ದನ, ಎತ್ತುಗಳ ಗೊಂಬೆಗಳು, ಆಭರಣಗಳು, ಮಣಿ ಸರಗಳು, ಮಣ್ಣಿನ ಆಟಿಕೆಗಳು, ಮುದ್ರಿಕೆಗಳು, – ಪಟ್ಟಿ ಬೆಳೆಯುತ್ತದೆ. ವಜೀರ್ ಚಂದ್ ಸರೋಯೀ ಜೊತೆಗೆ ರಾಖಿಗಢಿಯ ದಿಬ್ಬಗಳಲ್ಲಿ ಓಡಾಡಿದ ಈ ಲೇಖಕನಿಗೆ ಅಲ್ಲಿದ್ದ ಚಿಣ್ಣನೊಬ್ಬ ಎಲ್ಲಿಂದಲೋ ಒಂದಷ್ಟು ಮಣಿಗಳನ್ನು ತಂದು ತೋರಿಸಿದ. `ಇಲ್ಲಿನ ಹುಡುಗರು, ಹಳ್ಳಿಯವರು ಕೈಗೆ ಸಿಕ್ಕಿದ ಎಲ್ಲಾ ವಸ್ತುಗಳನ್ನೂ ಯಾರ್‍ಯಾರಿಗೋ ಮಾರಿಬಿಡುತ್ತಾರೆ. ಇದನ್ನಾದರೂ ನಾವು ತಡೆಯಬೇಕು’ ಎಂದು ವಜೀರ್ ಚಂದ್ ವಿಷಾದಿಸಿದರು. ವಾಸ್ತವವಾಗಿ ವಜೀರ್ ಚಂದ್ ಬಳಿ ಈ ಪ್ರದೇಶದ ನೂರಾರು ವಸ್ತುಗಳ ಸಂಗ್ರಹವಿತ್ತು. ಅದನ್ನೆಲ್ಲ ಅವರು ದಿಲ್ಲಿಯಲ್ಲಿರುವ ನ್ಯಾಶನಲ್ ಮ್ಯೂಸಿಯಂಗೆ ಕೊಟ್ಟಿದ್ದಾರೆ. ರಾಖಿಗಢಿಯ ಸಾಕ್ಷ್ಯಗಳನ್ನು ಸಂಗ್ರಹಿಸಿ ಮಾರುತ್ತಾರೆ ಎಂಬ ಆರೋಪವು ಅವರ ಮೇಲೂ ಬಂದಿತ್ತು; ಆದರೆ ನನಗಂತೂ ಅವರು ಅಂಥವರಲ್ಲ ಅನ್ನಿಸಿತು. ತಮ್ಮ ಮನೆಗೇ ಕರೆದುಕೊಂಡು ಹೋಗಿ ಎಲ್ಲ ಪತ್ರಿಕಾತುಣುಕುಗಳನ್ನು ತೋರಿಸಿ, ನೂರಾರು ಛಾಯಾಚಿತ್ರಗಳನ್ನು ಕೊಟ್ಟು ಕಳಿಸಿದ ವಜೀರ್ ಚಂದ್ ನಿಜಕ್ಕೂ ಇತಿಹಾಸದ ಕಾರ್ಯಕರ್ತರೇ ಸರಿ. ಅವರನ್ನು ಹರ್‍ಯಾನಾ ಸರ್ಕಾರವು ಚೆನ್ನಾಗಿ ಬಳಸಿಕೊಳ್ಳಬೇಕಿದೆ.

ರಾಖಿಗಢಿಯ ಶೇಕಡಾ ೭೫ರಷ್ಟು ತಾಣವು ಹಳ್ಳಿಯ ಮತ್ತು ಹೊಲದ ಕೆಳಗೇ ಇದೆ. ವಸಂತ್ ಶಿಂಧೆಯವರು ಹಳ್ಳಿಯ ಸರಪಂಚರನ್ನು ಭೇಟಿಯಾಗಿ ಅವರೆಲ್ಲರ ಸಹಕಾರದಿಂದಲೇ ಉತ್ಖನನ ಮತ್ತು ಸಂಶೋಧನೆಯನ್ನು ನಡೆಸಿದ್ದಾರೆ. ಆದರೆ ಸಂಶೋಧನೆ  ಮುಂದುವರಿಯಲು ಹಳ್ಳಿಯನ್ನು ಸ್ಥಳಾಂತರಿಸಲೇಬೇಕು. `ಸ್ಥಳಾಂತರಕ್ಕೆ ನಾವು ಸಿದ್ಧ’ ಎಂದು ವಜೀರ್ ಚಂದ್ ಈ ಲೇಖಕನಿಗೆ ತಿಳಿಸಿದರು. ರಾಖಿಗಢಿ ಮತ್ತು ಪಂಚಕುಲಾದಲ್ಲಿ ಎರಡು ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸುವ ಉದ್ದೇಶ ಹರ್‍ಯಾನಾ ಸರ್ಕಾರಕ್ಕೆ ಇದೆ.

ವಸಂತ್ ಶಿಂಧೆ ಹೇಳುವಂತೆ `ಹರಪ್ಪಾ ನಾಗರಿಕತೆಯ ಜನರು ಇಡೀ ಜಗತ್ತೇ ನಿಬ್ಬೆರಗಾಗುವಂಥ, ಪ್ರವಾಸಿಗರ ಆಕರ್ಷಣೆಗೆ ಒದಗುವಂಥ ಬೃಹತ್ ಕಟ್ಟಡಗಳನ್ನೇನೂ ಕಟ್ಟಲಿಲ್ಲ. ಆದರೆ ಸಾಮಾನ್ಯ ಬದುಕಿನ ವೃತ್ತಿಪರತೆಯನ್ನು ಅವರು ತೋರಿದ ರೀತಿಯೇ ಅನನ್ಯ. ಆಧುನಿಕ ಮತ್ತು ಸ್ವಚ್ಛ ನಗರಗಳನ್ನು ಕಟ್ಟುವ ಬಗೆಯನ್ನು ಅವರು ತಿಳಿಸಿಕೊಟ್ಟಿದ್ದಾರೆ; ಆಡಳಿತಕ್ಕಾಗಿ ಅವರು ಪಂಚಾಯತ್ ಮಾದರಿಯನ್ನು ಅನುಸರಿಸಿದ್ದರು; ಸಾವಿರಾರು ವರ್ಷಗಳ ಹಿಂದೆಯೇ ಪ್ರಜಾತಂತ್ರವನ್ನು ಕಾರ್ಯರೂಪಕ್ಕೆ ತಂದವರೇ ಹರಪ್ಪಾ ನಾಗರಿಕತೆಯ ಜನತೆ; ವೈಜ್ಞಾನಿಕ ಕಟ್ಟಡ ನಿರ್ಮಾಣವನ್ನು, ಇಂಗ್ಲಿಶ್ ಬಾಂಡ್ ನಿರ್ಮಾಣ ವಿಧಾನ’ವನ್ನು ಅವರೇ ಜಗತ್ತಿಗೆ ಮೊದಲ ಬಾರಿ ತೋರಿಸಿಕೊಟ್ಟವರು; ಇದು ನಿಜವಾಗಿ ಹರಪ್ಪನ್ ಬಾಂಡ್ ಆಗಬೇಕಿತ್ತು! ಅವರು ಅತ್ಯುತ್ತಮವಾದ ಜಲನಿರ್ವಹಣೆಯನ್ನು ಹೊಂದಿದ್ದರು; ನೀರಿನ ಸಂರಕ್ಷಣೆಯನ್ನು ಬಲ್ಲವರಾಗಿದ್ದರು; ಲೋಥಲ್‌ನಲ್ಲಿರುವ ಬಂದರು ಇಡೀ ವಿಶ್ವದ ಅತಿ ಪ್ರಾಚೀನ `ನೌಕಾಂಗಣ’ (ಡಾಕ್ ಯಾರ್ಡ್) ಹೊಂದಿತ್ತು; ಕಲಿಬಂಗನ್, ಫರ್ಮಾನಾ ಮತ್ತು ರಾಖಿಗಢಿ ಪ್ರದೇಶಗಳು ಬೃಹತ್ ಪ್ರಮಾಣದ ಕುಶಲ ವಸ್ತುಗಳ ತಯಾರಿಕಾ ಘಟಕಗಳನ್ನು ಹೊಂದಿದ್ದವು’.

ಐಐಟಿ ಖರಗ್‌ಪುರ, ಪುಣೆಯ ಡೆಕ್ಕನ್ ಕಾಲೇಜು, ಅಹಮದಾಬಾದಿನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ, ಲಖ್ನೋದ ಬೀರಬಲ್ ಸಾಹ್ನಿ ಪ್ರಾಚ್ಯಸಸ್ಯ ಸಂಸ್ಥೆ, ಕೇಂದ್ರ ಸರ್ಕಾರದ  ಪ್ರಾಚ್ಯ ವಸ್ತು ನಿರ್ದೇಶನಾಲಯ – ಹೀಗೆ ಹಲವು ಸಂಸ್ಥೆಗಳು ಮಾಡಿದ ಎಲ್ಲ ಶೋಧಗಳೂ ರಾಖಿಗಢಿ, ಭಿರ್ರಾನಾದ ಪ್ರಾಚೀನತೆಯನ್ನು ಮತ್ತೆ ಮತ್ತೆ ಸಾಬೀತುಪಡಿಸಿವೆ. ಕಾರ್ಬನ್ ೧೪ ಪರೀಕ್ಷೆಯನ್ನು ಎರಡೆರಡು ಸಲ ಬೇರೆ ಬೇರೆ ಸಂಸ್ಥೆಗಳಲ್ಲಿ ಮಾಡಿ ದೃಢೀಕರಿಸಿಕೊಳ್ಳಲಾಗಿದೆ. ಅಂದಮೇಲೆ ನಮ್ಮ ಪ್ರಾಚೀನತೆಯನ್ನು ಸಾರುವ ಹೊಸ ಇತಿಹಾಸವನ್ನು ಬರೆಯಲು ಕಾಯಬೇಕೆ?

rakhigarhi web image 8

ರಾಖಿಗಢಿಯ ಟೆರ್ರಕೋಟಾ ವಸ್ತುಗಳನ್ನು ನೀವು ಒಮ್ಮೆ ಮುಟ್ಟಿ ನೋಡಬೇಕು, ಅಷ್ಟು ನಯ, ಅಷ್ಟು ನಿಖರ! ಚುಕ್ಕಿ, ತ್ರಿಕೋನ, ಚೌಕ, ರಂಧ್ರಗಳು, – ಹೀಗೆ ಹಲವು ಜ್ಯಾಮಿತಿ ಆಕಾರಗಳನ್ನು ಕರಾರುವಾಕ್ಕಾಗಿ ಬಳಸಿ ಮಾಡಿದ ಈ ವಸ್ತುಗಳು ನಮ್ಮ ನಾಗರಿಕತೆಯ ಅತ್ಯುಚ್ಚ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ. ಅದರಲ್ಲೂ ರಾಖಿಗಢಿಯಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳ ಗೊಂಬೆಗಳು ಸಿಕ್ಕಿವೆ. ನಾಯಿ, ಸಿಂಹ, ಚಿರತೆ, ಮೊಲ, ಕುದುರೆಗಳ ಗೊಂಬೆಗಳು ಇಲ್ಲಿ ಸಿಕ್ಕಿವೆ.  ಹರಪ್ಪನ್ನರು ದ್ರಾವಿಡರೆಂದೂ ಆರ್ಯರು ಬಂದಾಗಲೇ ಕುದುರೆಗಳ ಪ್ರವೇಶ ಆಯಿತೆಂಬುದೂ ಇತಿಹಾಸವನ್ನು ತಿರುಚಿದವರ ವಾದ. ಈ ಕಟ್ಟುಕಥೆಯ ಪ್ರಕಾರ ಆರ್ಯರು ಕುದುರೆ ಏರಿ ದಂಡೆತ್ತಿ ಬಂದರಷ್ಟೆ! ಆದರೆ ಕೇವಲ ರಾಖಿಗಢಿಯಷ್ಟೇ ಅಲ್ಲ, ಸುರ್ಕೋಟಾದಾ, ರಾಣಾ ಗುಂಢಾಯಿ, ಲೋಥಲ್, ಶಿಕಾರ್‌ಪುರ್, ಕುಂತಾಸಿ, ಕಾನ್‌ಮೇರ್, ಮಲ್ವನ್, ಮೊಹೆಂಜೋದಾರೋಗಳಲ್ಲೂ ಕುದುರೆಯ ಕುರುಹುಗಳಿವೆ.

ರಾಖಿಗಢಿಯಲ್ಲಿ ಮಣ್ಣಿನ ಬಂಡಿಗಳು, ಚೌಕಾಕಾರದ ತೂಕದ ಕಲ್ಲುಗಳೂ ಸಿಕ್ಕಿವೆ. ಅವುಗಳ ಅಳತೆಯೂ ೧,೨,೩,೧೦,೨೦,೪೦,೧೦೦,೨೦೦,೪೦೦,೫೦೦,೮೦೦ – ಹೀಗೆ  ಖಚಿತವಾಗಿದೆ. ಎಮ್ಮೆಗಳ ಮೂಳೆಗಳು ಹೇರಳವಾಗಿವೆ. ಈಗ ನೀವು ರಾಖಿಗಢಿಗೆ ಭೇಟಿ ಕೊಟ್ಟರೂ ಎಮ್ಮೆಗಳೇ ಮೊದಲು ಕಾಣಿಸುತ್ತವೆ! ಮಣ್ಣಿನ ಫಲಕಗಳು, ಸಿಂಧೂ ನಾಗರಿಕತೆಯ ಮುಖ್ಯ ಸಂಕೇತವಾಗಿ ಚಿಹ್ನೆಗಳನ್ನು ಹೊಂದಿದ ಮುದ್ರಿಕೆಗಳು ಇಲ್ಲಿಯೂ ಸಿಕ್ಕಿವೆ. ಮಹಿಳೆಯರು ಧರಿಸುತ್ತಿದ್ದ ಸರ, ಬಳೆ ಮತ್ತು ಇತರೆ ಅಲಂಕಾರಿಕ ವಸ್ತುಗಳಿಗೆ ಲೆಕ್ಕವಿಲ್ಲ. ರಾಖಿಗಢಿಯಲ್ಲಿ ಹಲವು ಆಕಾರಗಳ, ಗಾತ್ರಗಳ ಯಜ್ಞಕುಂಡಗಳು ಕಂಡುಬಂದಿವೆ.  ರಾಖೀಗಡಿಯ ಇಟ್ಟಿಗೆಗಳ ಗಾತ್ರ ಹೆಚ್ಚಾಗಿ ೭ಘಿ೧೫ಘಿ೩೧ ಸೆಂಟಿಮೀಟರ್. ಅಂದರೆ ೧:೨:೪ರ ಅನುಪಾತದಲ್ಲಿವೆ.

rakhigarhi web image 4

rakhigarhi web image 5

rakhigarhi web image 10

ಹೊಸ ಸಂಶೋಧನೆಗಳು

ರಾಜಸ್ಥಾನದ ಗಂಗಾನಗರ್ ಜಿಲ್ಲೆಯ ಅನೂಪ್‌ಗಢ ಎಂಬ ಪುಟ್ಟ ನಗರಕ್ಕೆ ೭ ಕಿಮೀ ದೂರದಲ್ಲಿ ೪ಎಂಎಸ್‌ಆರ್ ಎಂಬ ಊರಿದೆ. ಇದೀಗ ಹರಪ್ಪಾ ನಾಗರಿಕತೆಯ ಹೊಸ ಕುರುಹಾಗಿ ಪ್ರಸಿದ್ಧವಾಗುತ್ತಿದೆ. ಇಲ್ಲಿ ನೂರಾರು ವಸ್ತುಗಳ ಜೊತೆಗೇ ಸಿಂಧೂ ಮುದ್ರಿಕೆಗಳು, ರಂಧ್ರಭರಿತ ಮಡಿಕೆ, ಬೋಗುಣಿಗಳು, ಘನಾಕೃತಿಯ ತೂಕದ ಘಟ್ಟಿಗಳು ಸಿಕ್ಕಿವೆ; ಅಗ್ನಿಕುಂಡವೂ ಕಂಡಿದೆ. ಇದೂ ಘಗ್ಗರ್ ನದಿತಟದ ಪ್ರದೇಶ. ಇವೆಲ್ಲವೂ ಆದಿ ಹರಪ್ಪಾ ನಾಗರಿಕತೆಯ ಕುರುಹುಗಳು.

ರಾಖಿಗಢಿಯಲ್ಲಿ ಒಂದು ಮ್ಯೂಸಿಯಂ ಮಾತ್ರವಲ್ಲ, ಇನ್ನೂ ಹಲವು ಕೆಲಸಗಳು ಆಗಬೇಕಿವೆ:

  • ರಾಖಿಗಢಿಯ ಅವಶೇಷಗಳಲ್ಲಿ ಒಂದು ಪ್ರಮುಖ ಪ್ರದೇಶವನ್ನು ಸಂಪೂರ್ಣವಾಗಿ ಅಗೆದು, ಸಿಂಧೂ-ಸರಸ್ವತೀ ನಾಗರಿಕತೆಯನ್ನು ಬಿಂಬಿಸುವ ವಾಸ್ತವಿಕ ಥೀಮ್ ಪಾರ್ಕ್ ಮಾಡಬೇಕು. ಈ ಪ್ರದೇಶವನ್ನು ಗರಿಷ್ಠ ಪ್ರಮಾಣದ ಸುರಕ್ಷತೆಯಲ್ಲಿಟ್ಟೂ ಸಾರ್ವಜನಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅನುಕೂಲವಾಗುವಂತೆ ಅತ್ಯಾಧುನಿಕ, ಫೈಬರ್ ಗಾಜಿನ ಮೇಲುಸೇತುವೆ ನಿರ್ಮಿಸಬಹುದು.
  • ಸಿಂಧೂ-ಸರಸ್ವತೀ ನಾಗರಿಕತೆಯ ಅಧ್ಯಯನಕ್ಕೆ ವಿಶೇಷ ಪ್ರಾಚ್ಯ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಸರ್ಕಾರವು ವೃತ್ತಿಪರ ಮತ್ತು ಕ್ರಿಯಾಶೀಲ ತಂಡದ ನಿರ್ವಹಣೆಗೆ ಒಪ್ಪಿಸಬೇಕು (ಇಲ್ಲವಾದರೆ ಅದೂ ಒಂದು ನಿರಾಶ್ರಿತರ ತಾಣವಾಗುತ್ತದೆ). ಇಲ್ಲಿ ಖಾಸಗಿ ಸಂಸ್ಥೆಗಳ ಸಹಭಾಗಿತ್ವ, ನಿಧಿ ಹೂಡಿಕೆಯನ್ನೂ ಸ್ವಾಗತಿಸಿದರೆ ವೃತ್ತಿಪರತೆ ಹೆಚ್ಚಬಹುದು.
  • ಸಿಂಧೂ-ಸರಸ್ವತೀ ನಗರಗಳಾದ ರಾಖಿಗಢಿ, ಭಿರ್ರಾನಾ, ಕಲಿಬಂಗನ್, ಧೋಲಾವೀರ, ಲೋಥಲ್ – ಹೀಗೆ ಹಲವು ಸ್ಥಳಗಳಿಗೆ ಪ್ರವಾಸದ ಪ್ಯಾಕೇಜ್ ರೂಪಿಸಬಹುದು.
  • ಸಿಂಧೂ-ಸರಸ್ವತೀ ನಾಗರಿಕತೆಯ ಕುರಿತಾಗಿದ್ದ ಆರ್ಯರ ಆಕ್ರಮಣವನ್ನು ಎಡಪಂಥೀಯ ರೊಮಿಲಾ ಥಾಪರ್‌ರಂಥ ಇತಿಹಾಸಕಾರರೇ ಅಲ್ಲಗಳೆದು ಬಹುಶಃ ಆರ್ಯರು – ಹರಪ್ಪನ್ನರು ತುಂಬಾ ಸೌಹಾರ್ದಯುತವಾಗಿದ್ದರು ಎನ್ನತೊಡಗಿದ್ದಾರೆ! ಇದು ಒಳ್ಳೆಯ ಬೆಳವಣಿಗೆ. ಭಾರತ ಸರ್ಕಾರವು ಕೂಡಲೇ ಹೊಸ ಇತಿಹಾಸದ ಬಗ್ಗೆ ಅಂತಾರಾಷ್ಟ್ರೀಯ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಬೇಕು. ಅಲ್ಲಿ ಇತಿಹಾಸದ ವೈಜ್ಞಾನಿಕ ದಾಖಲೆಗಳನ್ನು ಮುಂದಿಟ್ಟುಕೊಂಡು ಸೂಕ್ತ ನಿರ್ಣಯಗಳನ್ನು ತಳೆಯಬೇಕು. 
  • ರಾಖಿಗಢಿ ಮತ್ತು ಇತರೆ ತಾಣಗಳ ಬಗ್ಗೆ ಕೂಡಲೇ ನಮ್ಮ ಎಲ್ಲ ಕೇಂದ್ರ – ರಾಜ್ಯಗಳ ಪಠ್ಯಪುಸ್ತಕಗಳಲ್ಲಿ ಛಾಯಾಚಿತ್ರ ಸಹಿತ ಪಾಠಗಳನ್ನು ಬರೆಯಬೇಕು. ಇದು ಇತಿಹಾಸ ತಿರುಚುವುದಲ್ಲ, ನೈಜ ಇತಿಹಾಸವನ್ನು ಬರೆಯುವುದು.

ಹರಪ್ಪಾ- ಮೊಹೆಂಜೋದಾರೋಗಳನ್ನು ನಾವು ಕಡೆಗಣಿಸಬೇಕು ಎಂಬುದು ನನ್ನ ವಾದವಲ್ಲ; ಆದರೆ ಭಾರತದ ಗಡಿಯೊಳಗೇ ಇರುವ, `ಹ-ಮೊ’ಗಿಂತಲೂ ಪ್ರಾಚೀನವಾದ ಸ್ಥಳಗಳನ್ನು ಕಡೆಗಣಿಸಬೇಕೇ ಎಂಬುದೇ ನನ್ನ ಪ್ರಶ್ನೆ.

ರಾಖಿಗಢಿಯ ಮೂಲಕ ನಮ್ಮ ಪೂರ್ವಜರ ಕಾಲದ  ಗಡಿಯನ್ನು ವಿಸ್ತರಿಸಿಕೊಳ್ಳುವ ಸುವರ್ಣ ಕ್ಷಣ ಒದಗಿದೆ.

ಸಿಂಧೂ ಕಣಿವೆ ನಾಗರಿಕತೆಯ ಕುರಿತು ಆನ್‌ಲೈನ್‌ನಲ್ಲಿ ಇರುವ ಈ ಸಚಿತ್ರ ಪಾಠವನ್ನು ವಿದ್ಯಾರ್ಥಿಗಳಿಗೆ ತೋರಿಸಿ: http://www.dkfindout.com/us/history/indus-valley-civilization/

Share. Facebook Twitter Pinterest LinkedIn Tumblr Email
Previous ArticlePrashant Kishor : Disruptive, Harmful
Next Article ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
ಬೇಳೂರು ಸುದರ್ಶನ
  • Website

Related Posts

ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  

May 27, 2024

ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ

October 27, 2020

www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ

July 17, 2020

Comments are closed.

ಲೇಖನಗಳು
  • ಬಿಟ್ಟ ಕೆಲಸಕ್ಕೊಂದು ಸ್ಮರಣಿಕೆ; ಅದೇ ಬದುಕಿನ ಹೆಜ್ಜೆಗಳ ಎಣಿಕೆ!  
  • ಮಾನ್ಯ ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರನಾಗಿ ಒಂದು ವರ್ಷ: ಚಟುವಟಿಕೆಗಳ ಸಂಕ್ಷಿಪ್ತ ವರದಿ
  • www.ಬೇಳೂರುಸುದರ್ಶನ.ಭಾರತ : ಕನ್ನಡ ಯು ಆರ್‌ ಎಲ್‌ ನ ಬ್ಲಾಗ್‌ ಗೆ ಸ್ವಾಗತ
  • ಕನ್ನಡ ಗ್ರಂಥ ಸಂಪಾದನೆ ಮತ್ತು ತಂತ್ರಜ್ಞಾನ
  • ಅನುವಾದ: ಹೊಸ ಆಯಾಮಗಳು, ಬದಲಾಗುತ್ತಿರುವ ವೃತ್ತಿ ಚಹರೆಗಳು – ಕೆಲವು ಟಿಪ್ಪಣಿಗಳು
  • ಕೊರೋನಾ ಕಾಲದಲ್ಲಿ ಪೋಲಿಯೋ ಕತೆ ಮತ್ತು ಬೆಳಂಬಾರ ಬೊಮ್ಮು ಶಿವು ಗೌಡರ ಯಶಸ್ವೀ ಸಸ್ಯಚಿಕಿತ್ಸೆ
  • ಪೆನ್‌ ಫ್ರೆಂಡ್‌: 32 ವರ್ಷಗಳ ಹಿಂದಿನ ಹುಚ್ಚು ಪ್ರಯತ್ನ
  • ಕನ್ನಡ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು
  • ದಣಿವರಿಯದ ಸಾಫ್ಟ್‌ವೇರ್‌ ಸಂಘಟಕ ಎಂಪಿ ಕುಮಾರ್‌ಗೆ ಇದು ವಿದಾಯವಲ್ಲ, ಹೊಸ ಆರಂಭ !!
  • ಪದಬ್ರಹ್ಮ ‘ನಾಣ’ ಮತ್ತು ಆಶುಕವನ!
  • ನಾನೂ ಜವಹರಲಾಲ್‌ ನೆಹರು ವಿವಿಯಲ್ಲಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದೆ!
  • ನನ್ನಲ್ಲೊಬ್ಬ ವಿಮಲಾ: ದಿಕ್ಕೆಟ್ಟ ಹುಡುಗನಿಗೆ ಬಾಳು ಕೊಟ್ಟವಳು! (ಖಾಸಗಿ ಬ್ಲಾಗ್‌)
  • ಭಾರತ ಭೂಖಂಡದ ಹುಟ್ಟು ಗುಟ್ಟು ಒಡೆದ ಅಪೂರ್ವ ಕಥಾನಕ: ಇಂಡಿಕ
  • Tesseract 4.0 OCR (Optical Character recognition Software) : A real game changer? (Also read a layman’s guide to use Tesseract!)
  • ಅನಂತಕುಮಾರ್‌: ಒಂದು ಖಾಸಗಿ ನಮನ
  • Sardar Patel Memorial Speech by Beluru Sudarshana
  • ಕೊಡಗು ನೆರೆ ದುರಂತದ ಹಿನ್ನೆಲೆಯಲ್ಲಿ ಸುಸ್ಥಿರ ಕ್ರಿಯಾಯೋಜನೆ ರೂಪಿಸಲು  ಮಿತ್ರಮಾಧ್ಯಮದ ಒತ್ತಾಯ
  • ತುಂಟ ಸಿದ್ಧಾರ್ಥ: 2ನೇ ಕ್ಲಾಸಲ್ಲಿ ಕಲಾವಿದ, ಎಸೆಸೆಲ್ಸೀಲಿ ವಿಜ್ಞಾನಿ!
  • Solar water pumps can help India surpass 100 GW target through Kisan Urja Suraksha Utthaan Maha Abhiyan
  • ಹವಾಗುಣ ಕುಸಿತದ ಬಗ್ಗೆ ಜನಜಾಗೃತಿಗೆ ವಿಶ್ವದಾಖಲೆಯ 23 ಸಾವಿರ ಕಿಮೀ ಸೈಕ್ಲಿಂಗ್‌!
  • ಸ್ಥಳೀಯತೆಯೇ ಬದುಕು, ಅದರಲಿ ತೃಪ್ತಿಯ ಹುಡುಕು!  
  • ಪಿಯೆರೆ ಒಮಿಡ್ಯಾರ್ ದಾನಪಾಶ: ಅಲಿಪ್ತ ಮಾಧ್ಯಮದ ಸರ್ವನಾಶ
  • Attention NGOs: Transparency and probity begins from you!
  • ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿಷ್ಟತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ (ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿದ ವರದಿ )
  • ಹಳೆ – ಹೊಸ ಮಾಧ್ಯಮಗಳಲ್ಲಿ ಮುಕ್ತ ಜ್ಞಾನದ ಸಾಧ್ಯತೆಗಳು
  • Digital life : let us make it sustainable; minimise carbon footprints
  • ಕನ್ನಡದ ಉಳಿವಿಗೆ ಒಂದೇ ಹಾದಿ: ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ
  • Requiem for the desktop PC? Not yet!
  • The heaven created by trinity of Hindustani music turns 50!
  • ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ! ಈಗಲಾದರೂ ಹಳೆ ಫಾಂಟ್‌, ತಂತ್ರಾಂಶಗಳನ್ನು ಕಿತ್ತೊಗೆದು ಹೊಸಕಾಲದ `ಡಿಜಿಟಲ್‌ ಜಗಲಿ’ ಕಟ್ಟೋಣ.
  • ಒಂದು ವರ್ಷದ ಹೊಸ್ತಿಲು ದಾಟಿದ `ಭಾರತವಾಣಿ’ : ಭಾರತೀಯ ಭಾಷೆಗಳ ಹಿರಿಮೆಗೆ ನನ್ನ ನಮನ!
  • ಸುಲ್ತಾನ್‌ ಖಾನ್‌ ಸಾರಂಗಿಯ ನಶೆ ಇಳಿಯುವುದಾದರೂ ಹೇಗೆ?!
  • ಮೈ ಚ ಜ : ಕಟುಮಧುರ ವಜ್ರಕಾಯ, ದಣಿವರಿಯದ ದೇಶಕಾರ್ಯ
  • ಸಂಸ್ಕೃತ ಸಂವರ್ಧನವೇ ನನ್ನ ಮುಂದಿನ ಹೆಜ್ಜೆ : `ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಶ್ರೀ ಚ ಮೂ ಕೃಷ್ಣಶಾಸ್ತ್ರಿ
  • `ಚಿತ್ರ-ಕವನ’ ಸ್ಪರ್ಧೆಯಲ್ಲಿ ಅಪ್ಪಟ ಸ್ನೇಹವೇ ಬಹುಮಾನ!
  • The Lefts I respect in my life
  • ನವ ಲಿಬರಲ್‌ಗಳ ನಕಲಿ ಬದುಕು!
  • ಪರಮಾಣು ಹುಣ್ಣಿನ ಫುಕುಶಿಮಾ ಹೇಗಿದೆ? ಬ್ಲಾಗ್‌ ಓದಿ, ಹೊಸ ಸಾಕ್ಷ್ಯಚಿತ್ರ ನೋಡಿ!
  • ನಿಮ್ಮ ರೋಗ ಚಿಕಿತ್ಸೆಗೆ ನೀತಿವಂತ ವೈದ್ಯರನ್ನು ಹುಡುಕಲು ಇಲ್ಲಿಗೆ ಬನ್ನಿ!
  • Are we above Supreme Court?
  • ಬೇಳೂರು ಬ್ಲಾಗ್‌ ವಿಶೇಷ: ಬ್ರಹ್ಮಾಂಡದ ಈಗಿನ ಸಿದ್ಧಾಂತವನ್ನು ಶ್ರೀನಿವಾಸ ರಾಮಾನುಜನ್‌ ಅಂದೇ ಗುರುತಿಸಿದ್ದರೆ?
  • ಆಲಿಯಾ ರಶೀದ್‌: ಪಾಕಿಸ್ತಾನದ ಪ್ರಥಮ – ಏಕೈಕ ಧ್ರುಪದ್‌ ಗಾಯಕಿ; ಒಳಗಣ್ಣಿನ ಅಧಿನಾಯಕಿ
  • `ಸಾರ’ ಯಂತ್ರಾನುವಾದ ಬಳಸಿ! ಸೆಕೆಂಡಿಗೆ ಲಕ್ಷ ವಾಕ್ಯ ಕನ್ನಡದಿಂದ-ತೆಲುಗಿಗೆ ಅನುವಾದಿಸಿ!
  • ಹೊಸನಗರದ `ಕಾನಿ’ನಲ್ಲಿ ಹೊಸಾ ಜೇಡ ! ಘಟ್ಟಸಾಲಿನಲ್ಲಿ ಜೀವಜಾಲ ನೋಡಾ!   
  • ಮಾತೃಭಾಷೆಯಲ್ಲಿ ಮುಕ್ತಜ್ಞಾನದ ಸಾಧ್ಯತೆಗಳು : ಬನ್ನಿ, `ಅರಿವಿನ ಗೋಮಾಳ’ದ ಚಳವಳಿಯತ್ತ ಮುನ್ನಡೆಯೋಣ!
  • My Bansuri Guru, friend, guide and philosopher
  • Kick-starting the linguistic revolution
  • ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!
  • ಒಡೆದ ಗುಟ್ಟಿನ ಗೂಡು…..
  • ಬೇಯರ್ – ಮೊನ್ಸಾಂಟೋ ವಿಲೀನ ವಿಚಾರ: ವಿಷಗುಡಾಣದಲ್ಲಿ ಬೀಜಬಿಡಾರ
  • ಬನ್ನಿ, ಬದುಕೋಣ!
  • ಬರಲಿವೆ ಕೀಟಖಾದ್ಯ!
  • ಐಟಿ ಸಾಧನಗಳಲ್ಲಿ ಭಾ಼ಷೆ, ಲಿಪಿ: ಭಿಕ್ಷೆಯಲ್ಲ, ಹಕ್ಕು
  • Prashant Kishor : Disruptive, Harmful
  • ಕರ್ನಾಟಕದಲ್ಲಿ ಪ್ಲಾಸ್ಟಿಕ್‌ ನಿಷೇಧ: ಶಾಸನ ಅರೆಬರೆ, ತಳಮಟ್ಟದ ಜನತೆಗೆ ಬರೆ
  • ರಾ.ಸ್ವ.ಸಂಘ: ೯೦ರ ಹಿರಿತನಕ್ಕೆ ಗೌರವಪೂರ್ವಕ ನಮನಗಳು, ಹಾರ್ದಿಕ ಶುಭಾಶಯಗಳು
  • `ನನ್ನ ದೇಹ ಗ್ಯಾರೇಜಿನಲ್ಲಿದೆ’ ಎಂದು ಬರೆದಿಡಲು ನಿನಗೆ ಸಾಧ್ಯ ಆಗಿದ್ದಾದರೂ ಹೇಗೆ ರಾಬಿನ್‌?
  • ನಾನು ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸುವುದಿಲ್ಲ; ಏಕೆಂದರೆ…
  • ಇಲಾನ್ ಮಸ್ಕ್ : ಮನುಕುಲ ಏಳಿಗೆಯ ಮಹಾನ್ ಕನಸುಗಾರ; ಹೈಟೆಕ್ ವಿಜ್ಞಾನಿ, ಹೂಡಿಕೆದಾರ; ಮುಕ್ತ ತಂತ್ರಜ್ಞಾನದ ಹರಿಕಾರ
  • ೪೭ ಮತ್ತು ೫೩ ಪ್ರೈಮ್‌ ಸಂಖ್ಯೆಗಳ ನಡುವೆ ೫೦ ಏನು ಮಹಾ?
  • ಅಗಣಿತ ತಾರಾಗಣಗಳ ನಡುವೆ ಕೇಸರ್‌ಬಾಯಿ ಕೇರ್‍ಕರ್‌ ಹಾಡಿನ ಅಲೆ
  • ನೀರು, ನೀರಾವರಿ: ಪರಂಪರೆಯಲ್ಲೇ ಪರಿಹಾರ ಇದೆ ಕಣ್ರೀ!
  • ರಾಜಕೀಯ ಪ್ರವೇಶಿಸಿದ ಎನ್‌ ರವಿಕುಮಾರ್‌ ಬೆಳೆದ ಕಥೆ ಇಲ್ಲಿದೆ!
  • ಖಾಸಗಿ ಕಾಲಂ: ನನ್ನ ಮಗನ ಕಲಿವ ತವಕ!
  • ಕೇಂದ್ರ ಸರ್ಕಾರದ ಹೊಸ ಜೈವಿಕ ಇಂಧನ ಕಾರ್ಯತಂಡದ ಅಧ್ಯಕ್ಷರಾಗಿ ವೈ ಬಿ ರಾಮಕೃಷ್ಣ ನೇಮಕ
  • ವಿಜ್ಞಾನ ವಿಷಯಗಳನ್ನು ವರದಿ ಮಾಡುವುದು ಹೇಗೆ?
  • ವಿಶ್ವ ಪರಿಸರ ದಿನ ೨೦೧೫: ಲಾಂಛನ ರೂಪಿಸಿದವರು ಕೇರಳದ ಶಿಬಿನ್‌; ಇಲ್ಲಿದೆ ಅವರ ವಿಶೇಷ ಸಂದರ್ಶನ!
  • ಭವಿಷ್ಯದ ಕಾರಿಗೆ ಭದ್ರ ಬೆಸುಗೆ
  • ಅರಾಸೇ ಇನ್ನಿಲ್ಲ! ನನ್ನ ಹತಾಶೆಯ ದಿನಗಳಲ್ಲಿ ಶಕ್ತಿ ನೀಡಿದ ಚೇತನಕ್ಕೆ ನಮೋನ್ನಮಃ 
  • ಪರಿಸರ ರಕ್ಷಣೆಗೆ ಮುಂದಾದ `ದಿ ಗಾರ್ಡಿಯನ್‌’ ನಮಗೆ ಮಾದರಿಯಾಗಲಿ
  • ಹವಾಗುಣ ವೈಪರೀತ್ಯದ ಪರಿಣಾಮ: ಭಾರತದಲ್ಲಿ ಬೇಸಗೆ ಮಳೆ ತಂದ ಕೃಷಿ ದುರಂತ
  • ಸೆನ್ಸಾರ್‌ ಬೋರ್ಡ್ ಬೇಕು ಕಣ್ರೀ: ಸಿಟಿಂಗ್‌ ಫೀ ಮುಕ್ಕಿದ ಮಾಜಿ ಸದಸ್ಯನ ನೀಚ ಹೇಳಿಕೆ
  • ಇಂಟರ್‌ನೆಟ್‌.ORG : ಬಹು ಬಹು ರಾಷ್ಟ್ರೀಯ ಸಂಸ್ಥೆಗಳ (MMNC) ಸಂಘಟಿತ ಮಾರುಕಟ್ಟೆ ಜಾಲ
  • ಕನ್ನಡ ಓಸಿಆರ್‌ ಸಭೆಯಲ್ಲಿ ನಾಲ್ಕು ತಂತ್ರಾಂಶಗಳ ಯಶಸ್ವೀ ಪ್ರಾತ್ಯಕ್ಷಿಕೆ
  • ಗಾಳಿ ಪಳಗಿಸಿದ ಬಾಲಕ: ಕನ್ನಡ ಪ್ರಕಾಶನ ಹಾದಿ ಬದಲಿಸುವ ರೋಚಕ ಪುಸ್ತಕ
  • ೧೯೮೭ರ `ಉತ್ಥಾನ’ದ ಲೇಖನ: ಬೇವು – ಕೃಷಿಕರ ಕಲ್ಪವೃಕ್ಷ
  • ಕನ್ನಡ ಓಸಿಆರ್‌ ಸಭೆಯಲ್ಲಿ ಭಾಗವಹಿಸಲು ಕನ್ನಡ ಐಟಿ ತಂತ್ರಜ್ಞರು, ಸಮುದಾಯ ಐಟಿ ಕಾರ್ಯಕರ್ತರಿಗೆ ಮುಕ್ತ ಆಹ್ವಾನ!
  • 1987ರ ಲೇಖನ: ಚಿರಂತನ ಶಕ್ತಿ
  • ನಿರುದ್ಯೋಗವೆಂಬ ಬೇತಾಳವನ್ನು ಇತ್ತೀಚೆಗೆ ಭೇಟಿ ಮಾಡಿದ ಒಂದು ಕ್ಷಣ
  • Mitramaadhyama Appeals To Ananthkumar To Release Kannada OCR Developed By Mile Lab, Iisc, Bengaluru To The Usage Of General Public As A Open Software Tool
  • ಶೌಚಾಲಯ ಕ್ರಾಂತಿ: ಡೆಡ್‌ಲೈನ್ ಮುಗಿದಿದೆ!
  • ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನ : ದುಂಡುಮೇಜಿನ ಸಭೆ ಕರೆದು ಚರ್ಚಿಸಿ, ಸಮುದಾಯ ಭಾಗಿತ್ವ ಆರಂಭಿಸಿ
  • IT revolution and Regional Newspapers: Let’s harness it!
  • ಕೌಶಲ್ಯ ಅಭಿವೃದ್ಧಿ: ಮಿತ್ರಮಾಧ್ಯಮ ಸಮೀಕ್ಷೆಯಲ್ಲಿ ಭಾಗವಹಿಸಿ! | PARTICIPATE IN SKILL DEVELOPMENT SURVEY!
  • ಎಲ್ಲ ಅಕ್ಷರಗಳನ್ನು ಪ್ರೀತಿಸೋಣ, ಎಲ್ಲ ಭಾಷೆಗಳನ್ನೂ ಪ್ರೀತಿಸೋಣ : ಕೆ ಪಿ ರಾವ್‌
  • ನನ್ನ ಮಾವ ಗೋವಿಂದರಾಯರು: ಒಂದು ಖಾಸಗಿ ನಮನ
  • ಗೋಪಿನಾಥ್‌ ಮುಂಧೆ: ಒಂದು ದಿನದ ಸ್ನೇಹಯಾನ
  • ರಾಷ್ಟ್ರೀಯ ಆಹ್ವಾನ ಸಿಕ್ಕಿದೆ: ಪಂಥಾಹ್ವಾನ ಮುಂದಿದೆ!
  • ನದೀಕಣಿವೆಯ `ಟೆಕ್’ ಸಂತನೊಂದಿಗೆ ಅರ್ಧ ದಿನ
  • ಹಸಿವಿನ ಈ ಮೂರು ನೆನಪುಗಳಲ್ಲಿ ತುಂಬಾ ಪೌಷ್ಟಿಕತೆ ಇದೆ!
  • ಈಮೈಲ್‌ ಜನಕ `ಶಿವ ಅಯ್ಯದೊರೈ’; ಇನ್ನುಮುಂದೆ `ರೇ ಟೋಮಿಲ್‌ಸನ್‌’ ಎನ್ನದಿರೈ!
  • ಬರಲಿವೆ ಜ್ಯೋತಿಸ್ತಂತುಗಳು ( ಆಪ್ಟಿಕಲ್‌ ಫೈಬರ್‌ ಬಗ್ಗೆ ೧೯೮೭ರಲ್ಲಿ ಬರೆದ ಲೇಖನ!)
  • ಮಿತ್ರಮಾಧ್ಯಮ ವಿಶೇಷ: ಫೋನ್‌ ಬ್ಲಾಕ್‌ ಕ್ರಾಂತಿಗೆ ಇನ್ನೆರಡೇ ವರ್ಷ!
  • Book Review: THE THIRD CURVE – The End of Growth as we know it: A Must Read for Energy Policy Makers
  • Dave’s Phone Blok – Invention takes digital world by storm
  • ನಾವೇಕೆ ವಿಷಮಯವಾಗಬೇಕು? ಮಾನವ ನಿರ್ಮಿತ ರಾಸಾಯನಿಕಗಳ ಬಗ್ಗೆ ಮುನ್ನೆಚ್ಚರಿಕೆಯ ಹೆಜ್ಜೆಗಳು [ಪುಸ್ತಕ]
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಆರು ಸೆಕೆಂಡಿಗೊಂದು ಸಾವು: ಕಟುಸೌಜನ್ಯ – ತಂಬಾಕು
  • ತಟ್ಟಿಹಳ್ಳ: ಜಡಿಮಳೆಗೂ ಸವಾಲೊಡ್ಡಿದ ಜೈವಿಕ ಇಂಧನ ಸಸಿನಾಟಿ ದಾಖಲೆ
  • ಬ್ಲಾಗಾಯತ : ಸುದ್ದಿ, ಬದುಕು, ಭಾವನೆಗೆ ಹೊಸ ಆಕಾರ
  • ಗಶ್‌ಶ್‌ಶ್‌ಶ್‌ಶ್!! ರೇಡಿಯೋದಲ್ಲಿ ಪಾಠದ ಪುಟ ಬರ್‍ತಾ ಇದೆ!
  • ಜಜಂತರ್‌ ಮಮಂತರ್‌ ಮ್ಯಾಗಜಿನ್‌ನ ೨ನೇ ಸಂಚಿಕೆ : ಸ್ಥಾವರಕ್ಕಳಿವುಂಟೆ?
  • ಜಂತರ್‌ ಮಂತರ್‌: ಮಿತ್ರಮಾಧ್ಯಮದ ವಿಜ್ಞಾನ ಸಂಚಿಕೆ ೧
  • ಮಾರಿಯಾನಾ ಜಲಕಮರಿಯಿಂದ ಕೇಳಿ ಬಂದ ದನಿಗಳು
  • ಒಂದೇ ಸಹಜ ಧ್ವನಿಯಲ್ಲಿ ರಿಯಲ್‌ ಟೈಮ್‌ ಭಾಷಾಂತರ: ಮೈಕ್ರೋಸಾಫ್ಟ್‌ ನ ಮಹತ್ವದ ಸಂಶೋಧನೆಯನ್ನು ಅಭಿನಂದಿಸೋಣ!
  • ರಂಗನಾಥಜ್ಜ ಮೈಸೂರಿಗೆ ಹೊರಟರು
  • ಡಾ. ಆಚಾರ್ಯರು ಈಗಷ್ಟೆ ಫೋನ್ ಕರೆಯನ್ನು ಅವರೇ ಸ್ವೀಕರಿಸುತ್ತಿಲ್ಲ
  • ಗೂಗಲ್+ : ಅಂತರಜಾಲದ +ಟಿವ್ ಚೇಂಜ್!
  • ‘ಇಜ್ಞಾನ’ ಸಂಚಿಕೆ ಓದಿ
  • ಮಾಧ್ಯಮ ಮಿತ್ರರಿಗೆ ಮಾಹಿತಿ ಹಕ್ಕು ಕೈಪಿಡಿ
  • ಸ್ಟೀವ್‌ ಜಾಬ್ಸ್‌ ಕಟ್ಟಿದ ಹಂಗಿನರಮನೆಯಲ್ಲೇ ಇರಬೇಕೆ?
  • ಸೂರ್ಯನ ತೂಕದ ಸಾಸಿವೆ ಕಾಳಿನ ಸುತ್ತ ವಜ್ರಕಾಯ ಗ್ರಹದ ಗಿರಿಗಿಟ್ಲೆ : ಒಂದಷ್ಟು ಚರ್ಚಿಸೋಣ ಬನ್ನಿ….
  • ಸ್ಲೇಟು-ಬಳಪದ ಹೊಸ ಯುಗಕ್ಕೆ ಸ್ವಾಗತ !
  • ಬಾಳೇಪುಣಿ : ಅಭ್ಯುದಯ ಪತ್ರಿಕೋದ್ಯಮದ ಕಣ್ಮಣಿ
  • ನಮ್ಮ ಜಸ್ಟಿನ್ ಈಗ್ಲೂ ಫಾಸ್ಟ್
  • ಎಸೆಸೆಲ್ಸಿಗೆ ಬರೆದ ರಸಾಯನ ಶಾಸ್ತ್ರದ ಹಳೆ ಪುಸ್ತಕ ಹೀಗಿದೆ!
  • THE ANONYMOUS : ಬಿ. ದೇವರಾಜ್ ಹೊಸ ಕಲಾಕೃತಿಗಳ ಸರಣಿ
  • ಏನ್ಮಾಡ್ತೀರಾ ತರಲೆ, ಬದುಕುಳಿಯೋದೇ ಜಿರಲೆ !
  • ಸಹಕಾರ ಚಳವಳಿ : ಒಂದು `ಹೊರ’ನೋಟ
  • ಎಸ್ ಎಂ ಪೆಜತಾಯ: ಎಂಡೋ ಸಲ್ಫಾನ್ ಅಂದು ನಮ್ಮ ಮುಖದ ಮೇಲೆ ಕೊಟ್ಟ ಒದೆಯ ನೆನಪು!
  • ಬಿಟಿ, ಕುಲಾಂತರಿ : ಹೋರಾಟ ಇನ್ನೂ ಇದೇರಿ! ಕರ್ನಾಟಕದಲ್ಲಿ ಮತ್ತೆ ವಕ್ಕರಿಸಿದೇರಿ!!
  • ವಿಷಕಾರಿ, ಇಂಧನಬಾಕ ಮನುಕುಲ ಇನ್ನೆಷ್ಟು ದಿನ? ಬಂದೀತೆ ಸರಳ ಬದುಕಿನ ಸುಂದರ ಕ್ಷಣ?
  • ಟೆಕ್ಸ್ ಗುರು ರಾಧಾಕೃಷ್ಣನ್ : ನದೀಕಣಿವೆಯ ಫ್ರೀ ಸಾಫ್ಟ್‌ವೇರ್ ಸಂತ
  • ಟೆಕ್ಸ್: ಡೊನಾಲ್ಡ್ ಕನೂಥ್‌ನ ಸಂಶೋಧನೆ, ರಾಧಾಕೃಷ್ಣನ್ ಬದುಕಿಗೇ ಮರುಚಾಲನೆ
  • ಉತ್ತರ ಕೊರಿಯಾ : ಸಂಗ್ ಕಂಡ ಉತ್ತರ ಕೊರಿಯಾ ಮತ್ತು ಅದರ ಸರ್ವಾಧಿಕಾರಿ
  • ಎಂಡೋಸಲ್ಫಾನ್ ನಿಷೇಧದ ಜಾಗತಿಕ ನಿರ್ಧಾರಕ್ಕೆ `ಉತ್ಪಾದಕ’ ಭಾರತದ್ದೇ ವಿರೋಧ
  • ಡರ್ಟಿ ನ್ಯೂಸ್: ಕೊಳಕು ಡಜನ್ ವಿಷಪಟ್ಟಿಗೆ ೯ ಹೊಸ ಅರಿಷ್ಟಗಳ ಸೇರ್ಪಡೆ
  • ಧರಂಪಾಲ್: ಬ್ರಿಟಿಶರಿಗೆ ಭಾರತವೇ ಮಾದರಿಯಾಗಿತ್ತು ಎಂಬ ಸತ್ಯವನ್ನು ಶೋಧಿಸಿದ ಗಾಂಧಿವಾದಿ
  • Devinder Sharma: Gutter Science: Inter-Academy Report On GM Crops
  • Devinder Sharma: Punjab middlemen get Rs 7,830 million a year for practically doing nothing
  • ಉಮರನ ಬದುಕಿನಲ್ಲಿ ಒಸಗೆಯಷ್ಟೇ ಅಲ್ಲ…
  • ಅಗಣಿತ ಮಹಿಮರಿಗೆ ನಮೋನ್ನಮಃ: ವಿಶೇಷ ವ್ಯಕ್ತಿತ್ವಗಳನ್ನು ಅರಿಯೋಣ ಬನ್ನಿ!
  • ಬಿಟಿ ಬದನೆ: ಆರು ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳು, ೯೦ ಜನ ವಿಜ್ಞಾನಿಗಳು ತಯಾರಿಸಿದ ನಕಲು ವರದಿಯ ಕಥೆ
  • ‘ಕವಲು’ ಮೂರನೇ ದರ್ಜೆ ಕಾದಂಬರಿ : ಸಾರಾ ಅಬೂಬಕರ್
  • ಉತ್ತರ ಕೊರಿಯಾ: ಅಣ್ವಸ್ತ್ರದ ಮಹಾಕೋಠಿ
  • ಉತ್ತರ ಕೊರಿಯಾ: ಸರ್ವಾಧಿಕಾರಿಗೆ ದುಡಿದು ಸಾಯುವ ಖೈದಿಗಳ ನರಕ
  • ಹಸಿದ ಹೊಟ್ಟೆಯ ಮೇಲೆ ೭೦೦೦ ಮರ್ಸಿಡಿಜ್ ಬೆಂಝ್‌ಗಳ ಸವಾರಿ
  • ಗಡ್ಕರಿ ರಶ್ಯಾ ಭೇಟಿಯಲ್ಲಿ ಏನಾಯ್ತು?
  • ವೇದಾಂತ : ಅಗೆದಷ್ಟೂ ಅವಾಂತರ
  • ಕಂಬಳಿಹುಳದ ಕಡಿತ: ಉರಿಗಿಲ್ಲ ರಿಯಾಯ್ತಿ !
  • ತುಂಟ ಸಿದ್ಧಾರ್ಥನ ಕಲಾಕೃತಿಗಳು
  • ಉಮೇಶ : ಜೀತ ವಿಮುಕ್ತಿ ಹೋರಾಟದ ಯುವ ಶಕ್ತಿ
  • ನಾವು ಹಾಲಿವುಡ್ ಸಿನೆಮಾ ಯಾಕೆ ನೋಡಬೇಕು?
  • ನಿರುದ್ಯೋಗ ಪರ್ವದ ಒಂದು ವರ್ಷ : ಶ್ರುತಿ ಸೇರದ ಜಾಡು
  • ಏನೋ ಮಸ್ಕಿ, ಸಹಕಾರ ಭಾರತಿ ಅಂದ್ರೆ ನಿಂಗೆ ಟಿಶ್ಯೂ ಪೇಪರ್ರಾ?
  • ಅಸಲಿಗೆ, ಈ ಸುಶೀಲ್ ಮಂತ್ರಿ ಯಾರು?
  • Shankar Sharma: Why Gundia Hydro Electric Project Is Not Needed
  • Impact of Electric Power Sector on Western Ghats : Issues and remedies
  • ತದಡಿಯಲ್ಲಿ ಅನಿಲ ಆಧಾರಿತ ವಿದ್ಯುತ್ ಯೋಜನೆ ಬೇಡ
  • ಮಿತ್ರಮಾಧ್ಯಮದಲ್ಲಿ ವಿದ್ಯುತ್ ತಜ್ಞ ಶಂಕರ್ ಶರ್ಮ ಅಂಕಣ
  • Media Fest Presentation by Beluru Sudarshana
  • ಬಿಟಿ ಶಾಂತಾರಾಮ್‌ರವರಿಗೆ ನಾಟಿ ನಮಸ್ಕಾರಗಳು!
  • ಶಾಂತಾರಾಂ, ಚಪ್ಪಲಿ ಎಲ್ಲಿ ಕಚ್ಚುತ್ತದೆ ಎಂದು ಹೇಳಬಾರದೆ?
  • ದೇವಿಂದರ್ ಶರ್ಮ : Call for a moratorium on GM Foods
  • ಮಿತ್ರಮಾಧ್ಯಮದಲ್ಲಿ ದೇವಿಂದರ್ ಶರ್ಮ ಲೇಖನಗಳ ಪ್ರಕಟಣೆ ಆರಂಭ
  • ಬಿಟಿ ಬದನೆ ರಗಳೆ, ಡಾ. ಶಾಂತಾರಾಂ ಬೊಗಳೆ!
  • ಇಂಟರ್‌ನೆಟ್ ಎಂಬ ನ್ಯೂ ಮೀಡಿಯಾ: ನನ್ನ ಹಳೇ ಸಂದರ್ಶನ ಇಲ್ಲಿದೆ!
  • ನನ್ನ ಒಂದ್ನೇ ಕ್ಲಾಸ್ ಶಾಲೆ : ಹೊಡಬಟ್ಟೆಯ ಮಧುರ ನೆನಪು
  • ಪ್ರವಾಸದಲ್ಲಿ ಕಂಡ ದತ್ತಾಜಿ ಅಮ್ಮ
  • ‘ದಿ ಮಿಶನ್’: ಜಲಪಾತ ಕಟ್ಟಿಕೊಡುವ ಅದ್ಭುತ ಕಥನ
  • ಓಮರ್ ಮುಖ್ತರ್ : ನೈಜ ಜೆಹಾದಿ ಅರಿಯಲು ಈ ಸಿನೆಮಾ ನೋಡಿ !
  • ಎಂಡೋಸಲ್ಪಾನ್ ರುದ್ರನರ್ತನಕ್ಕೆ ಭಾರತದ್ದೇ ಹಿಮ್ಮೇಳ
  • ವಿಶಿಷ್ಟ ಅನುಭವಕ್ಕೆ ಒಡ್ಡುವ `ಕಾಗದದ ದೋಣಿ’ಯ ಯಾನ
  • ಕಣ್ಮರೆಯಾದ ಖಾಸಗಿತನಕ್ಕೆ ಅಳೋರಾರು?
  • ‘ಹಸಿರು ಕ್ರಾಂತಿಗೆ ಭಾರೀ ಬೆಲೆ ತೆತ್ತಿದ್ದೇವೆ’
  • ಹಸಿರು ಕ್ರಾಂತಿಯ ಕೊಡುಗೆ: ಕ್ಯಾನ್ಸರ್ ಟ್ರೈನ್
  • ದಿ ಕಿಲ್ಲಿಂಗ್ ಫೀಲ್ಡ್ಸ್ : ಕಮ್ಯುನಿಸಂನ ಕರಾಳಮುಖಕ್ಕೆ ಹಿಡಿದ ಕನ್ನಡಿ
  • ಹಸಿರು ಕ್ರಾಂತಿ : ಬರೀ ಪೊಳ್ಳು, ಭ್ರಾಂತಿ !
  • ದಶಕದ ಗೇಮ್‌ಪ್ಲಾನ್‌ಗೆ ಚೀನಾ ಷಡ್ಯಂತ್ರ (ಸರಣಿ ಲೇಖನ ೪)
  • ಚೀನಾದಲ್ಲಿ ಮಾತ್ರ: ‘ಲಾಗೋಯ್’ – ೨೧ನೇ ಶತಮಾನದ ನರಕ (ಸರಣಿ ಲೇಖನ ೩)
  • ಚೀನಾ: ಸುಳ್ಳು, ಗೌಪ್ಯತೆಯೇ ಶಕ್ತಿ, ಯುಕ್ತಿ ( ಚೀನಾ ಸರಣಿ ಲೇಖನ ೨)
  • ಹಾಯ್ ಹಾಯ್ ಚೀನಾ ! (ಸರಣಿ ಲೇಖನ ೧)
  • ನೇಪಾಳ:ಪಶುಪತಿನಾಥ ಕೇವಲ ನಿಮಿತ್ತ ; ಮರುಕಳಿಸಲಿದೆಯೆ ರಕ್ತಪಾತ ?
  • ವಿಶ್ವ ಪರಂಪರೆ ತಾಣವಾಗಲಿದೆ ಪಶ್ಚಿಮ ಘಟ್ಟ. ಬೃಹತ್ ಯೋಜನೆಗಳನ್ನು ದಯವಿಟ್ಟು ಕೈಬಿಡಿ !
  • ತದಡಿ : ಆಗ ಪೆಡಂಭೂತ, ಈಗ ಬ್ರಹ್ಮಪಿಶಾಚಿ !
  • ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?
  • Three Cups of Tea : ಮನ ತಟ್ಟುವ ಸೇವಾ ಕಥನ
  • Please visit www.mitramaadhyama.co.in
  • Shilpashree Investigative Report Award 2010
  • “ನೋಯಿಂಗ್” : ನಿಕೋಲಾಸ್ ಕೇಜ್ ನ ಬತ್ತದ ಉತ್ಸಾಹ
  • ಜಯಚಿಕ್ಕಿ ಕೊಟ್ಟ ಮನೆಮದ್ದಿನ ಪುಸ್ತಕಗಳು : ನೀವೂ ಓದಿ
  • ದಿ ವಿನ್ನರ್ ಸ್ಟಾಂಡ್ಸ್ ಅಲೋನ್: ಪಾಲೋ ಕೊಯೆಲ್ಹೋನ ವೈಚಾರಿಕ ಥ್ರಿಲ್ಲರ್
  • ಒಂದು ಮುಷ್ಟಿ ನಕ್ಷತ್ರ: ರಾಜಲಕ್ಷ್ಮಿಯ ಖಾಸಾ ಅನುಭವದ ಕಥೆಗಳು
  • ಸಂಗೀತದ ಕ್ಲಾಸಿನ ನಂತರ ಚಾ ಕೊಟ್ಟ ಜೀವಗಳು
  • ಪಾಕಿಸ್ತಾನಿ ಗಝಲ್‌ಗಳ ಖಜಾನೆ
  • ನನ್ನ ಮೇಡಂ ಜಯಲಕ್ಷ್ಮಿ
  • ಹನುಮನಹಳ್ಳಿಯ ಸುಗಂಧ
  • ಮನೋಹರ ಮಸ್ಕಿ, ಅರೆ ಇಸ್ಕಿ! ಸಂವಿಧಾನ ಶಿಲ್ಪಿಗೇ ಅವಮಾನ ಮಾಡ್ತೀಯ?
  • ನನ್ನ ಪ್ರೀತಿಯ ದತ್ತಾಜಿ
  • ಮನೋಹರ ಮಸ್ಕಿ: ಖತರ್‌ನಾಕ್ ಸ್ಕೀಮ್‌ಗಳ ಸರದಾರ !
  • ಮನೋಹರ ಮಸ್ಕಿಯೂ… ೮೦ ಲಕ್ಷ ರೂ.ಗಳ ಸ್ಕೀಮೂ……
  • ರಂಗನಾಥರ ಬಹುಮುಖೀ ಬದುಕು
  • ಮಲ್ಲೇಶ್ವರದಲ್ಲಿ ಕಂಡ ರಂಗನಾಥ್: ಈಗ ಬರಿ ನೆನಪು
  • ನನ್ನ ಪ್ರಿಯ ಕೋಮಾರನಪುರ ರಂಗನಾಥ, ನಿಮ್ಮನ್ನೆ ನೆನಪಿಸಿಕೊಂಡು…..
  • ಪಬ್ ಮೇಲೆ ದಾಳಿ ಮಾಡಿ ಹುಡುಗೀರ್‍ಗೆ ಹೊಡೆದದ್ದು ತಪ್ಪು ತಪ್ಪು!
  • ನೋಡೋಸಮ್ ಷಣ್ಮುಖನಿಗೆ ನಮೋನ್ನಮಃ
  • ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್‌ಗಳು ಮತ್ತು ‘ಸ್ಲಮ್‌ಡಾಗ್’
  • ಸಾಜ್ ಮತ್ತು ಏಕ್ ನಯಾ ಸಾಜ್
  • Victory for hawkers, DNA bends its unique policy
  • DNA publishes a story against BENGALURU name
  • DNA says CM Yeddyurappa is a smoker and drinker
  • Double subscription: DNA executives go on record
  • DNA Bangalore Complaints – Subscribed news paper not delivered
  • Media support for fight against DNA
  • DNA executives cheat hawkers, try selling papers!!
  • An appeal from poor paper hawkers to the readers of DNA
  • DNA: Delayed , No Analysis?
  • ಟಿಬೆಟನ್ನು ಅಹಿಂಸೆಯ ನೆಲೆವೀಡಾಗಿಸಿ
  • ನಕ್ಸಲರು: ಸಾವಿನ ಸರದಾರನ ಕುರುಡು ಬಂಟರು
  • ಟಿಬೆಟ್: ಡಿಸೆಂಬರ್ ೧೦ರಂದು ವಿಶೇಷ ಲೇಖನ
  • ಮಾನನಷ್ಟ ಮೊಕದ್ದಮೆಯೂ, ಮುಳಬಾಗಿಲಿನ ಮುಖಗಳೂ…
  • DNA Bangalore : Double subscription attempts, no paper yet!!
  • ಸಿಲಿಕಾನ್ ಸಿಟಿಯೆಂಬ ಬುಡುಬುಡಿಕೆ ಬಿಡಿ
  • China: Latest Military Report
  • My new service: Downloadable files and softwares
  • My new service: Downloadable files and softwares
  • ಕಂದಿಹೋದ ಸಾಂಕೇತಿಕತೆಯ ಸಂಕೇತ: ಶಿಖರಸೂರ್ಯ
  • `ಗಂಡ ಹೆಂಡಿರ ನಡುವೆ’ : ಕೆಲವು ಉಪಯುಕ್ತ ಮಾಹಿತಿಗಾಗಿ ಓದಿ
  • ಒಂದು ಬದಿ ಕಡಲು: ಕಡಲು ಕಡೆದು ಬದುಕಿನ ಕೆನೆ ತೆಗೆದ ಕಥೆ
  • ಮಾಯಾಲೋಕಕ್ಕೆ `ತೇಜಸ್ವೀ’ ಪಯಣ
  • ಕೆ ಬ್ಲಾಕ್ ಅಂದ್ರೆ ಕೇತಮಾರನಹಳ್ಳಿ
  • ಭೈರಪ್ಪನವರ `ಆವರಣ’ ಬ್ಯಾನ್ ಆಗುತ್ತಂತೆ?
  • ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ
  • Develop Technology, Kill language, Government Style
  • Energy alternative from America
  • Privacy of Britons in America’s hand
  • The pain & Agony of Tibet
  • Kannada DiMdiMa
  • A request to mainstream papers
  • Raag Madhuvanti
  • Artist B. Devaraj: Bangalore’s heart spot
  • Mayaloka 1: Instant view
  • How to get unconditional apology letters from prestigious Banks
  • Vikranta Karnataka, a curtain raiser
  • Sopan, a STEP in right direction
  • World Bank comment on India
  • Cosmetics for life: Venkatesh from Botswana
  • Narayana Hegde Arasikeri, 83 still young
  • Hampi University’s new ventures
  • America’s draconian Space Policy
  • Chapter 1: Under the rainbow
  • Women who changed lives
  • Chandrashekhar Kambara: an interview
  • Twin cities of Bay of Cambay
  • Sex: Common habba of internet
  • Gimbel’s Hampi
  • ಕೆಲಸ ಬಿಟ್ರಾ , ವರಿ ಮಾಡ್ಕೋಬೇಡಿ | ಅಥ್ವಾ ಕೆಲ್ಸ ಬಿಡಿ ಖುಷಿ ಪಡಿ
  • Our Justin is very fast
  • Bisilu Kolu: A review
  • Why Sahitya Sammelana?
  • Early stories of Raghavendra Patil : A review
  • Battalike: A review
  • Anubhavave nudichitra
  • ಸಾಮರಸ್ಯದ ನೇಕಾರ : ಸಂತ ಕಬೀರ
  • ಕಲಿವ ತವಕ
  • Basics of Brindavani Saarang
  • Rhodes, Girish Karnad and Aparthied | `ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’  ಸ್ಕಾಲರ್ ‌ಶಿಪ್ ಗೆದ್ದವರು
  • Free Software movement
  • Kannada SaapthahikagaLu: A speech text
  • Pluto OK, Bose illa yaake?
  • Booker and some sweat
ಹುಡುಕಿ!
ವಿಭಾಗಗಳು
  • Uncategorized (2)
  • ಉಚಿತ ಪುಸ್ತಕ ಸಂಸ್ಕೃತಿ (6)
  • ಒಳಗಣ್ಣು (ಟಿ ಎಸ್‌ ಶ್ರೀಧರ ಅಂಕಣ) (4)
  • ಕಲಿ ಯುಗ (62)
  • ಕವನಗಳು (131)
  • ನನ್ನ ಮಾಧ್ಯಮಯಾನ (3)
  • ಫ್ಲಿಪ್ ಪುಸ್ತಕಗಳು (1)
  • ಮಕ್ಕಳ ಪ್ರಬಂಧಗಳು (7)
  • ಮಾಹಿತಿ / ಲೇಖನ (22)
  • ಲೇಖನಗಳು (262)
  • ವಿಮರ್ಶೆ (49)
  • ಶಂಕರ್ ಶರ್ಮ (22)
  • ಸಣ್ಣ ಕಥೆಗಳು (20)
  • ಸುದ್ದಿ (152)
  • ಹಿಮದೊಡಲ ತಳಮಳ (1)
  • ಹುಲ್ಲಿನ ಸಾರು (1)
Archives
© 2025 ಬೇಳೂರುಸುದರ್ಶನ.

Type above and press Enter to search. Press Esc to cancel.