ನಡೆದದ್ದು
೨೫-೫-೮೬
ಬೆಂಗಳೂರು
ತೇನ್ ಸಿಂಗ್ ಸತ್ತ
ಹಿಲೇರಿ ಅತ್ತ
ಮಾರ್ಕೋಸ್ ಪರಾರಿಯಾಗಿ
ಅರಮನೆ ಭಿಕಾರಿಯಾಯ್ತು
ಚೆರ್ನೋಬೈಲ್ ಸುಟ್ಟು
ಗೊರ್ಬಚೆವ್ ಕೆಟ್ಟ
ರೇಗನ್ ಒದ್ದರೆ
ಗಢಾಫಿ ಬಿದ್ದ
ಊರಿನ ಬರಕ್ಕೆ
ಹೆಗಡೆಗೆ ಜ್ವರ ಬಂತು
ರಾಜೀವ್ ಮೂಗು ತುರಿಸಿದರೆ
ಬರ್ನಾಲ ಬೂಟೊರೆಸಿದ
ಕೊನೆಗೆ…
ಅವಳು ಕೈಕೊಟ್ಟಳು
ಆದರೂ ನಾನು ಕಾಲಿನಿಂದ ನಡೆದೆ
ನಂಬಿದರೆ ನಂಬಿ
ಇವೆಲ್ಲ ನಡೆದದ್ದು
ಮನಸ್ಸಿಗೆ ಹಿಡಿದದ್ದು