ವೀ witheraway
೨-೧೧-೮೮
ಬೆಂಗಳೂರು
ಚಾ ಪ್ರಿಯಾ
ಅಶಾಂತ ಹೃದಯಾ
ಬಾಳಿಗೊದಗಿದೆಯಾ?
ಬಾ ಮನಸಿಗೆ
ಎದೆಯ ಕನಸಿಗೆ
ಮಮತೆ ತೋರುವೆಯಾ?
ಓ ದಯಾ
ಮಯಾ ದೇವಾ
ಪ್ರೀತಿ ಕೊಡಿಸುವೆಯಾ?
ಹಾ! ಗಯಾ
ಅರೆ ಆಯಾ ಮಾತು
ಭಯವಿನ್ನೂ ಇದೆಯಾ?
ಛೇ ಜಯಾ
ಮನ್ನಿಸುವೆಯಾ
ಕಣ್ಣು ತೆರೆಯುವೆಯಾ?
ಹೇ ಮಾಯಾ
ಜಿಂಕೆಯ ಬಿಟ್ಟು
ರಾಮಾಯಣವಿದೆಯಾ?
ನೀ ನಯಾ
ಗರಾ ನಾನಿಲ್ಲಿ
ನಿನ್ನ ಜತೆಗಾರ
ಈ ಕ್ಷಯಾ
ಸಂವತ್ಸರದಲ್ಲಿ
ಹೊಸ ಹಾಡುಗಾರ
ಧೋ ಸುರಿವೆಯಾ
ಹಾ ಹರಿವೆಯಾ
ಹೋ ಹೊರಟೆಯಾ ಯಾ
ವಾಗ ಬರುವಿಯಾ
ಆಗ ತರುವೆಯಾ
ನೆನಪಿನೊಂದು ಹನಿಯ?
ವೀ witheraway
ಆ ಅಧರವೇ
ಅದರದೊಂದು ಗುರುತೆ;
oಟ ಸೋದರಿ
ನಮ್ಮ ಮಾದರಿ
ಒಂದು ಪುಟ್ಟ ಹಣತೆ
ಚಾ ಪ್ರಿಯಾ
ವಿಮುಕ್ತ ಹೃದಯಾ
ಬಾನಿನೊಳಗಿದೆಯಾ?
ಬರಿಯ ಮನಸಿಗೆ
ಹದಿಗನಸಿಗೆ
ಸುರಿಸಬೇಡ ಮಳೆಯ.