ಹೀಗೆ
ಪುಟ್ಟು ಪುಟ್ಟಿ
ಜಗಳವಾಡ್ತಿರೋವಾಗ
ಅಪ್ಪ ಸಕ್ಕರೆಗೆ ಕ್ಯೂ ನಿಂತಿದ್ದರು.
ನಲ್ಲಿ ನೀರಿಗೆ
ನೀಲಾ, ಪಕ್ಕದ್ಮನೆ ಶೀಲಾ ಗುದ್ದಾಡುವಾಗ
ಕೇರಿಯಲ್ಲಿದ್ದ ಶಾಸಕರು
ಬರಗಾಲದ ಬಗ್ಗೆ ಠರಾವು ಮಂಡಿಸಲು
ಬೆಂಗಳೂರಿನಲ್ಲಿದ್ದರು.
ಕ್ಯಾಬಿನೆಟ್ಟಾಗಲು ಕಸರತ್ತು ಮಾಡುತ್ತಿದ್ದ
ಶಾಸಕದ್ವಯರು ಫೋನೆತ್ತಿದ್ದರೆ
ಮುಖ್ಯಮಂತ್ರಿ ಓವರ್‌ಡ್ರಾಫ್ಟ್‌ಗಾಗಿ
ದೆಹಲಿಗೆ ಹಾರಿದ್ದರು.
ಆದರೆ
ಶಾಂತಿಮಂತ್ರ ಪಠಣಕ್ಕಾಗಿ
ಪ್ರಧಾನಿಯವರು
ಲೆಬನಾನಿನಲ್ಲಿದ್ದರು.
ಹೀಗೆ ಸಮಾನತೆಯೆಂಬ ಕೂಸು
ಎಲ್ಲಾ ಕಡೆಯೂ ಹುಟ್ಟಿ
ದೇಶ ಸಮೃದ್ಧಿಯಾಗಿದೆ.
ಕೀಟಗಳ ಅಕಾಲಕ್ಕೆ ಮಳೆಯಾಗಿ
ತೀಟೆಗಳ ಸಕಾಲಕ್ಕೆ ಬಿಸಿಲಾಗಿ
ದೇಶ ಫಲಭರಿತವಾಗಿದೆ
ಹೀಗೆ