ದಶಕದ ಹಿಂದಿನ ಡಿಜಿಟಲ್ ಕಾವ್ಯ

ನಾನು ಎಂದೋ ಬರೆದ ಕವನಗಳಿವು. `ಗೂಗಲ್ ಎಂಬ ಸರ್ಚ್ ಇಂಜಿನ್ ಕವನ `ಭಾವನಾ’ದ ವಿಶೇಷಾಂಕದ ಪ್ರಕಟವಾಗಿತ್ತು. ಈ ಕವನ ಎಲ್ಲಿದೆ ಎಂದು ಆನ್‌ಲೈನ್‌ನಲ್ಲಿ ಯಾರೋ ಹುಡುಕುತ್ತಿದ್ದರು ಎಂದೂ ಇತ್ತೀಚೆಗೆ ಗಮನಿಸಿದೆ. ಇಂಟರ್‌ನೆಟ್ ಅದೇ ತಾನೆ ನಮ್ಮ ದೇಹವನ್ನೆಲ್ಲ ಆವರಿಸಿಕೊಳ್ಳುತ್ತಿದ್ದ ಸಮಯ. ಆಗ ಬರೆದ ಈ ಕವನಗಳನ್ನು ಈಗ ನೋಡಿದರೆ ತಮಾಷೆ ಎನಿಸುತ್ತದೆಯೇನೋ. ಹೊಸಬಗೆಯ ಕಾವ್ಯವನ್ನು ಕೆತ್ತಿಬಿಡಬೇಕೆಂಬ ಧಾವಂತವೂ ಅಲ್ಲಿತ್ತು.

ಸುಮ್ಮನೆ, ತಮಾಷೆಗೆ ಇಲ್ಲಿ ಪ್ರಕಟಿಸುತ್ತಿದ್ದೇನೆ.

ಯಾಹೂ ಮೆಸೆಂಜರಿನಲ್ಲಿ ಯಾರೊಬ್ಬರನ್ನೂ ಕಾಣದ,
ವರ್ಲ್ಡ್‌ಸ್ಪೇಸ್ ಕೇವಲ ಡಬ್ಬವಾಗಿ ಹೋದ,
ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿರದ
ಫ್ಲೈಓವರ್‌ಗಳು ಬೈಪಾಸ್ ಪದಕ್ಕೇ ಸಂಚಕಾರ ತಂದ,
ಗೋಬಿ ಮಂಚೂರಿಯ ಬದಲಿಗೆ ೯೯ ದೋಸೆಗಳ ಅಂಗಡಿಗಳು ಹಣಕಿಕ್ಕಿದ ಈ ಹೊತ್ತಿನಲ್ಲಿ

ಇವೆಲ್ಲ ತಮಾಷೆಯೇ.

ಈ ಕವನಗಳು ಕಳೆದೇ ಹೋಗಿವೆ ಎಂದು ಮರೆತಿದ್ದ ಕಾಲದಲ್ಲಿ ಗೆಳತಿ ಎಂ ಆರ್ ಭಗವತಿ ಹಠಾತ್ತನೆ ಕಚೇರಿಗೆ ಬಂದು ಕವನಗಳ ಹಾಳೆಗಳನ್ನು ಎದುರಿಗಿಟ್ಟಾಗ ಅಚ್ಚರಿಯಾಯ್ತು. ನನ್ನ ಸಹೋದ್ಯೋಗಿ ಸುಷ್ಮಾ ಮೂಡಬಿದ್ರಿ ಇವನ್ನೆಲ್ಲ `ಡಿಜಿಟಲೀಕರಿಸಿ’ ಕೊಟ್ಟಿದ್ದಾರೆ. ಇಬ್ಬರಿಗೂ ತುಂಬುಹೃದಯದ ವಂದನೆಗಳು.

ಡಿಜಿಟಲೀಕರಣವು ನಮ್ಮನ್ನು, ಸಮಾಜವನ್ನು ನಖಶಿಖಾಂತ ಆವರಿಸಿಕೊಳ್ಳದೇ ಇರಲಿ ಎಂಬುದೊಂದೇ ನಾನು ಈ ಹೊತ್ತಿನಲ್ಲಿ ಗಂಭೀರವಾಗಿ ಹೇಳಬಹುದಾದ ವಿಷಯ!
ಬೇಳೂರು ಸುದರ್ಶನ
www.beluru.com
೦೧ ಜನವರಿ ೨೦೧೫

Leave a Reply

Your email address will not be published. Required fields are marked *